ರಶ್ಮಿಕಾ 'ಥಮ್ಮ'ಗೆ 'ಗುಮ್ಮ'ನಂತೆ ಕಾಡಿದ ಹರ್ಷವರ್ಧನ್ ರಾಣೆ, ಅನ್ಯಾಯಕ್ಕೊಳಗಾದರೂ ಗೆದ್ದ ಏಕ್ ದಿವಾನೆ ಕಿ ದೀವಾನಿಯತ್
ಈ ವರ್ಷ ಚಿತ್ರರಂಗದಲ್ಲಿ ಹಲವಾರು ಪ್ರಯತ್ನಗಳಾಗಿವೆ. ಆದರೆ.. ಪ್ಯಾನ್ ಇಂಡಿಯಾದ ಈ ಕಾಲದಲ್ಲಿ ಈ ಪ್ರಯತ್ನಗಳಿಗೆ ಸಿಕ್ಕ ಬೆಲೆ ತುಂಬಾ ಕಡಿಮೆ. ಅಲ್ಲೊಂದು.. ಇಲ್ಲೊಂದು ಚಿತ್ರಗಳು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿವೆ. ಸದ್ದು ಮಾಡಿವೆ. ಗಮನವನ್ನು ಕೂಡ ಸೆಳೆದಿವೆ. ವಿಶೇಷ ಅಂದರೆ ಹೀಗೆ ಗೆದ್ದ ಸಿನಿಮಾದ ಮೇಲೆ ಅನೇಕರಿಗೆ ನಿರೀಕ್ಷೆಗಳೇ ಇರಲಿಲ್ಲ. ಹತ್ತರಲ್ಲಿ ಹನ್ನೊಂದನೇಯದ್ದು ಎಂದೇ ಎಲ್ಲರು ಅಂದುಕೊಂಡಿದ್ದರು.
ಆದರೆ.. ಕೆಲ ಸಿನಿಮಾಗಳೇ ಹಾಗೇ. ಯಾವ ನಿರೀಕ್ಷೆಯನ್ನೂ ಮೂಡಿಸದೇ ದಿಗ್ಗನೆ ಬಂದು ಆ ನಂತರ ಸದ್ದು ಮಾಡುತ್ತವೆ. ಹಣವನ್ನು ದೋಚುತ್ತಾವೆ. ''ಏಕ್ ದಿವಾನೆ ಕೀ ದೀವಾನಿಯತ್'' ಇದಕ್ಕೆ ಸದ್ಯದ ಉದಾಹರಣೆ.

ಹೌದು, ''ಏಕ್ ದಿವಾನೆ ಕೀ ದೀವಾನಿಯತ್''.. ಇತ್ತೀಚೆಗೆ ಮರು ಬಿಡುಗಡೆಗೊಂಡು ದಾಖಲೆ ಬರೆದ ಸನಮ್ ತೇರಿ ಕಸಮ್ ಚಿತ್ರದ ನಾಯಕ ಹರ್ಷವರ್ಧನ್ ರಾಣೆ ಅಭಿನಯದ ಚಿತ್ರ.
ಸೋನಮ್ ಬಜ್ವಾ ಈ ಚಿತ್ರದ ನಾಯಕಿ. ಮಿಲಾಪ್ ಝವೇರಿ ನಿರ್ದೇಶನದ ಈ ಚಿತ್ರ ಸದ್ಯ ರಶ್ಮಿಕಾ ಮಂದಣ್ಣ ಮತ್ತು ಆಯುಷ್ಮಾನ್ ಖುರಾನಾಗೆ ಶಾಕ್ ನೀಡಿದೆ. ದೀಪಾವಳಿ ಹಬ್ಬದ ಪ್ರಯುಕ್ತ ''ಥಮ್ಮ'' ಎದುರು ಬಿಡುಗಡೆಯಾದ ಈ ಚಿತ್ರ ನಿರೀಕ್ಷೆಗೂ ಮೀರಿ ಬಾಕ್ಸಾಫೀಸ್‌ನಲ್ಲಿ ಹಣವನ್ನು ದೋಚುತ್ತಿದೆ.
ನಿಜಾ.. ''ಥಮ್ಮ'' ಚಿತ್ರಕ್ಕೆ ಹೋಲಿಸಿದರೆ ''ಏಕ್ ದಿವಾನೆ ಕೀ ದೀವಾನಿಯತ್'' ಚಿತ್ರದ ಗಳಿಕೆ ಕಡಿಮೆ ಇದೆ. ಆದರೆ.. ನಿಮಗೆ ಗೊತ್ತಿರಲಿ ಬಿಡುಗಡೆಯ ವಿಚಾರದಲ್ಲಿ 'ಏಕ್ ದಿವಾನೆ ಕೀ ದೀವಾನಿಯತ್'' ಚಿತ್ರತಂಡಕ್ಕೆ ಅನ್ಯಾಯವಾಗಿದೆ. ಪಿವಿಆರ್ ಮತ್ತು ಐನಾಕ್ಸ್‌ನಲ್ಲಿ ''ಥಮ್ಮ'' ಚಿತ್ರಕ್ಕೆ ಮೊದಲ ಆದ್ಯತೆ ನೀಡಲಾಗಿದೆ. ಪ್ರೈಮ್ ಟೈಮ್‌ನ ಶೋಗಳೆಲ್ಲವೂ ''ಥಮ್ಮ'' ಚಿತ್ರದ ಪಾಲಾಗಿವೆ. ಸಿಂಗಲ್ ಸ್ಕ್ರೀನ್‌ಗಳಲ್ಲಿ ಕೂಡ ಹರ್ಷವರ್ಧನ್ ರಾಣೆಯ ಈ ಚಿತ್ರವನ್ನು ಹಿಸುಕಿ ಹಾಕುವ ಪ್ರಯತ್ನ ಕೂಡ ಮಾಡಲಾಗಿದೆ.
ಇಷ್ಟೆಲ್ಲಾ ಮಾಡಿದರು ಕೂಡ ಕೇವಲ 25 ಕೋಟಿಯಲ್ಲಿ ನಿರ್ಮಾಣವಾದ ''ಏಕ್ ದಿವಾನೆ ಕೀ ದೀವಾನಿಯತ್'' ಚಿತ್ರ ಮೂರು ದಿನದಲ್ಲಿ ₹ 22.75 ಕೋಟಿಯನ್ನು ಗಳಿಸಿದೆ. ''ಏಕ್ ದಿವಾನೆ ಕೀ ದೀವಾನಿಯತ್'' ಚಿತ್ರಕ್ಕಿಂತ ಮೂರು ಪಟ್ಟು ಹೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ 140 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ''ಥಮ್ಮ'' ಈ ಮೂರು ದಿನದಲ್ಲಿ ಕೇವಲ ₹ 55.33 ಕೋಟಿಯನ್ನು ಗಳಿಸಿದೆ.

ಇನ್ನೂ ವಿಶೇಷ ಅಂದರೆ ದಿನಗಳು ಉರುಳಿದಂತೆ ''ಥಮ್ಮ'' ಚಿತ್ರವನ್ನು ನೋಡುವ ಉತ್ಸಾಹ ಪ್ರೇಕ್ಷಕರಲ್ಲಿ ಕಡಿಮೆಯಾಗುತ್ತಿದೆ. ಮತ್ತೊಂದು ಕಡೆ ''ಏಕ್ ದಿವಾನೆ ಕೀ ದೀವಾನಿಯತ್'' ನೋಡುವ ಆಸೆ ಹೆಚ್ಚಾಗುತ್ತಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ''ಹಿಂದೂಸ್ತಾನ್ ಟೈಮ್ಸ್ '' ವರದಿಯ ಪ್ರಕಾರ ''ಥಮ್ಮ'' ಚಿತ್ರದ ಮೊದಲ ದಿನದ ಗಳಿಕೆ ಮತ್ತು ಮೂರನೇ ದಿನದ ಗಳಿಕೆಗೆ ಹೋಲಿಗೆ ಮಾಡಿದರೆ ಚಿತ್ರದ ಗಳಿಕೆಯಲ್ಲಿ 50 % ಕುಸಿತ ಕಂಡು ಬಂದಿದೆ.
ಆದರೆ ಮತ್ತೊಂದು ಕಡೆ ''ಏಕ್ ದಿವಾನೆ ಕಿ ದೀವಾನಿಯತ್'' ಚಿತ್ರದ ಮೂರು ದಿನದ ಗಳಿಕೆಯಲ್ಲಿ ಕೇವಲ 33% ಕುಸಿತ ಕಂಡು ಬಂದಿದೆ.
''ಸ್ಯಾಕ್ನಿಲ್ '' ಪ್ರಕಾರ ಏಕ್ ದಿವಾನೆ ಕಿ ದೀವಾನಿಯತ್ ಚಿತ್ರದ 3 ದಿನದ ಗಳಿಕೆ ಈ ಕೆಳಗಿನಂತೆ ಇದೆ.
ಮೊದಲ ದಿನ [ಮಂಗಳವಾರ] ₹ 9 ಕೋಟಿ
ಎರಡನೇ ದಿನ [ಬುಧವಾರ ] ₹7.75 ಕೋಟಿ
ಮೂರನೇ ದಿನ [ ಗುರುವಾರ] ₹6 ಕೋಟಿ * ಅಂದಾಜು
ಒಟ್ಟು ಗಳಿಕೆ - ₹22.75 ಕೋಟಿ
ಹೀಗೆ ಸದ್ಯ ಹಾಕಿದ ಬಂಡವಾಳದಲ್ಲಿ ಶೇಕಡಾ 70ರಷ್ಟು ಹಣವನ್ನು ಮರಳಿ ಪಡೆದ ''ಏಕ್ ದಿವಾನೆ ಕಿ ದೀವಾನಿಯತ್'' ಚಿತ್ರ ಸದ್ಯ ರಶ್ಮಿಕಾ ಮಂದಣ್ಣ ಮತ್ತು ಆಯುಷ್ಮಾನ್ ಖುರಾನ ಅವರ ''ಥಮ್ಮ'' ಚಿತ್ರಕ್ಕೆ ಗುಮ್ಮನಂತೆ ಬಾಕ್ಸಾಫೀಸ್‌ನಲ್ಲಿ ಕಾಡುತ್ತಿದೆ. ಮುಂಬರುವ ದಿನಗಳಲ್ಲಿ ''ಥಮ್ಮ'' ಬಾಕ್ಸಾಫೀಸ್‌ನಲ್ಲಿ ಚೇತರಿಸಿಕೊಳ್ಳುತ್ತಾ..? ''ಏಕ್ ದಿವಾನೆ ಕಿ ದೀವಾನಿಯತ್'' ಬಾಕ್ಸಾಫೀಸ್‌ನಲ್ಲಿ 50 ಕೋಟಿಯ ಗಡಿಯನ್ನು ದಾಟುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











