Kesari 2 Box Office Day 5 ; ಐದು ದಿನದಲ್ಲಿ ₹50 ಕೋಟಿಯ ಗಡಿಯನ್ನು ತಲುಪಿತಾ ಕೇಸರಿ 2 ?

ಕೆಲ ಚಿತ್ರಗಳೇ ಹಾಗೇ. ಭಾರೀ ನಿರೀಕ್ಷೆ ಮೂಡಿಸಿ ಆ ನಂತರ ನಿರಾಸೆ ಮಾಡುತ್ತವೆ. ಆದರೆ ಇನ್ನೂ ಕೆಲವು ಯಾವ ನಿರೀಕ್ಷೆಯನ್ನೂ ಮೂಡಿಸದೇ ದಿಗ್ಗನೆ ಬಂದು ಆ ನಂತರ ನಿಧಾನವಾಗಿ ಸದ್ದು ಮಾಡಲು ಶುರು ಮಾಡುತ್ತಾವೆ. ಪ್ರೇಕ್ಷಕರನ್ನು ಸೆಳೆಯಲು ಶುರು ಮಾಡುತ್ತಾವೆ. ಇದಕ್ಕೆ ಅಕ್ಷಯ್ ಕುಮಾರ್ ಅಭಿನಯದ ಕೇಸರಿ - ಚಾಪ್ಟರ್ 2 ಸದ್ಯದ ಉದಾಹರಣೆ.

ಹೌದು, ಇನ್ನೇನು ಅಕ್ಷಯ್ ಕುಮಾರ್ ಕಥೆ ಮುಕ್ತಾಯವಾಯ್ತು .. ಅಭಿನಯದಿಂದ ವಾಲೆಂಟರಿ ರಿಟೈರ್‌ಮೆಂಟ್ ತಗೊಂಡು .. ರಿಯಲ್ ಎಸ್ಟೇಟ್ ಬ್ಯುಸಿನೆಸ್‌ನಲ್ಲಿ ಫುಲ್ ಟೈಮ್ ತೋಡಗಿಸಿಕೊಳ್ಳುವುದು ಉತ್ತಮ .. ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿರುವ ಸಮಯದಲ್ಲಿ ಬಂದ ಕೇಸರಿ-2 ಗಳಿಕೆ ಸಾಧಾರಣವಾಗಿದೆ. ಆದರೆ ಸ್ಟಡಿಯಾಗಿದೆ. ತೀರಾ ನಿರಾಸೆಯನ್ನು ಮಾಡದೇ, ಬಾಲಿವುಡ್‌ನ ಭರವಸೆಯನ್ನು ಹೆಚ್ಚಿಸದೇ, ಕೇಸರಿ 2 ಸದ್ಯ ಚಿತ್ರಮಂದಿರಗಳಲ್ಲಿ ಪ್ರದರ್ಶನವನ್ನು ಕಾಣ್ತಿದೆ.

Akshay Kumar s Kesari Chapter 2 crosses 38 crore in 5 days with 40 crore within reach

ಹೌದು, ಚಿತ್ರಗಳ ಬಾಕ್ಸಾಫೀಸ್‌ ಗಳಿಕೆಯ ಲೆಕ್ಕಾಚಾರವನ್ನು ನೀಡುವ ಸ್ಯಾಕ್ನಿಲ್ಕ್ ವೆಬ್ ಸೈಟ್ ಪ್ರಕಾರ ಮೊದಲ ದಿನ ಭಾರತದಲ್ಲಿ ₹ 7.75 ಕೋಟಿ ಗಳಿಸಿದ್ದ ಚಿತ್ರ ಶನಿವಾರ ₹ 9.50 ಕೋಟಿಯನ್ನು ಗಳಿಸಿತ್ತು. ಈ ಮೂಲಕ ಎರಡು ದಿನದಲ್ಲಿ ₹ 17.25 ಕೋಟಿ ಹಣವನ್ನು ಕೇಸರಿ 2 ಚಿತ್ರ ಗಳಿಸಿತ್ತು.

ಇನ್ನು ಚಿತ್ರಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಕ್ಷಯ್ ಕುಮಾರ್, ಆರ್ ಮಾಧವನ್ ಮತ್ತು ಅನನ್ಯಾ ಪಾಂಡೆಯ ಅಭಿನಯದ ಬಗ್ಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಹೀಗಾಗಿಯೇ ಮೊದಲ ಎರಡು ದಿನಗಳಲ್ಲಿ ₹ 17.25 ಕೋಟಿ ಗಳಿಸಿದ್ದ ಕೇಸರಿ 2 ಚಿತ್ರ ಭಾನುವಾರ ₹12.25 ಕೋಟಿಯನ್ನು ಗಳಿಸಿತ್ತು. ಈ ಮೂಲಕ ಮೂರು ದಿನಗಳಲ್ಲಿ ಎರಡಂಕಿಯ ಗಡಿಯನ್ನು ಮೊದಲ ಬಾರಿ ಕೇಸರಿ 2 ದಾಟಿತ್ತು. ಚಿತ್ರದ ಗಳಿಕೆ ₹ 30 ಕೋಟಿಯ ಗಡಿಗೆ ಬಂದು ತಲುಪಿತ್ತು.

ಆ ನಂತರ ಸೋಮವಾರ ರಜಾದಿನ ಮುಕ್ತಾಯವಾದ ಹಿನ್ನೆಲೆ ಚಿತ್ರದ ಗಳಿಕೆಯಲ್ಲಿ ಕುಸಿತ ಕಂಡು ಬಂತು. ಚಿತ್ರ ₹ 4.5 ಕೋಟಿ ಹಣವನ್ನು ಗಳಿಸಿತ್ತು. ನಿನ್ನೆ ಮಂಗಳವಾರ ಚಿತ್ರದ ಗಳಿಕೆಯಲ್ಲಿ ಶೇಕಡಾ 11.11% ಏರಿಕೆ ಕಂಡು ಬಂದಿದೆ. ಐದನೇ ದಿನ ₹ 5 ಕೋಟಿ ಹಣವನ್ನು ಕೇಸರಿ 2 ಗಳಿಸಿದೆ ಎಂದು ಸ್ಯಾಕ್ನಿಲ್ ವೆಬ್ ಸೈಟ್ ವರದಿಯನ್ನು ಮಾಡಿದೆ. ಈ ಮೂಲಕ ಚಿತ್ರದ ಗಳಿಕೆ ಐದು ದಿನದಲ್ಲಿ ₹ 39.25 ಕೋಟಿ ಆಗಿದೆ.

ಬಾಕ್ಸಾಫೀಸ್‌ ಮೇಲೆ ಹದ್ದಿನ ಕಣ್ಣು ಇಡುವ, ಚಿತ್ರಗಳ ಗಳಿಕೆಯ ವಿವರಗಳನ್ನು ಹಂಚಿಕೊಳ್ಳುವ ಸ್ಯಾಕ್ನಿಲ್ಕ್ ವೆಬ್ ಸೈಟ್ ಪ್ರಕಾರ ಭಾರತದಲ್ಲಿ ಕೇಸರಿ 2 ಚಿತ್ರದ ಈ ಐದು ದಿನದ ಗಳಿಕೆ ಈ ಕೆಳಗಿನಂತೆ ಇದೆ

ಮೊದಲ ದಿನ : ₹ 7.75 ಕೋಟಿ

ಎರಡನೇ ದಿನ : ₹ 9.75 ಕೋಟಿ

ಮೂರನೇ ದಿನ : ₹ 12 ಕೋಟಿ

ನಾಲ್ಕನೇ ದಿನ : ₹ 4.5 ಕೋಟಿ

ಐದನೇ ದಿನ : ₹ 5 ಕೋಟಿ

ಒಟ್ಟು ಗಳಿಕೆ ; ₹39.25 ಕೋಟಿ

ಹೀಗೆ ನಿಧಾನವಾಗಿ ಬಾಕ್ಸಾಫೀಸ್‌ನಲ್ಲಿ ಹತ್ ಹತ್ರ ₹40 ಕೋಟಿ ಹಣವನ್ನು ಕೇಸರಿ 2 ಗಳಿಸಿದೆ. ಇನ್ನು ಈ ವಾರ ಹಿಂದಿಯಲ್ಲಿ ಯಾವುದೇ ದೊಡ್ಡ ಚಿತ್ರಗಳಿಲ್ಲ. ಈ ಅಂಶ ಕೇಸರಿ 2 ಚಿತ್ರಕ್ಕೆ ಸಹಕಾರಿಯಾದರು ಆಗಬಹುದು. ಈ ವಾರಾಂತ್ಯದಲ್ಲಿ ಕೇಸರಿ 2 ಚಿತ್ರದ ಗಳಿಕೆಯಲ್ಲಿ ಏರಿಕೆಯಾದರು ಆಗಬಹುದು. ಈ ವಾರಾಂತ್ಯಕ್ಕೆ ಚಿತ್ರದ ಗಳಿಕೆ ₹50 ಕೋಟಿಯ ಗಡಿಯನ್ನು ದಾಟಬಹುದು.

ಕೇಸರಿ 2 VS ದಿ ಡಿಪ್ಲೋಮ್ಯಾಟ್ ಮತ್ತು ದೇವಾ

ಇನ್ನು ಬಾಕ್ಸಾಫೀಸ್‌ನಲ್ಲಿ ಈಗಾಗಲೇ ಕಂಗನಾ ರಣಾವತ್ ಅಭಿನಯಿಸಿ ನಿರ್ದೇಶಿಸಿರುವ ಎಮರ್ಜೆನ್ಸಿ ಚಿತ್ರವನ್ನು ಅಕ್ಷಯ್ ಕುಮಾರ್ ಅಭಿನಯದ ಕೇಸರಿ 2 ಚಿತ್ರ ಹಿಂದಿಕ್ಕಿದೆ. ಈ ವರ್ಷದ ಆರಂಭದಲ್ಲಿ ತೆರೆಗೆ ಬಂದಿದ್ದ ಎಮರ್ಜೆನ್ಸಿ ಚಿತ್ರ ಚಿತ್ರಮಂದಿರದಿಂದ ಎತ್ತಂಗಡಿ ಯಾಗುವ ಮೊದಲು ₹ 25 ಕೋಟಿಯ ಗಡಿಯನ್ನು ಕೂಡ ತಲುಪಲು ಸಾಧ್ಯವಾಗರಲಿಲ್ಲ.

ಆದರೆ ಕೇಸರಿ 2 ಈ ಗಡಿಯನ್ನು ಎರಡು ದಿನದ ಹಿಂದೆ ದಾಟಿತ್ತು. ಮೂರು ದಿನದಲ್ಲಿ29.75 ಕೋಟಿ ಗಳಿಸಿತ್ತು. ಈ ಮೂಲಕ ಈ ವರ್ಷ ಅತೀ ಹೆಚ್ಚು ಹಣ ಗಳಿಸಿದ ಸಿನಿಮಾಗಳ ಸಾಲಿನಲ್ಲಿ ಕೇಸರಿ 2 ಏಳನೇ ಸ್ಥಾನದಲ್ಲಿ ಬಂದು ನಿಂತಿತ್ತು.

ಈಗ ಕೇಸರಿ 2 ಚಿತ್ರ ಜಾನ್ ಅಬ್ರಾಹಿಂ ಅಭಿನಯದ ದಿ ಡಿಪ್ಲೋಮ್ಯಾಟ್ ಮತ್ತು ಶಾಹಿದ್ ಕಪೂರ್ ಅಭಿನಯದ ದೇವಾ ಚಿತ್ರಗಳನ್ನು ಕೂಡ ಹಿಂದಿಕ್ಕಿದೆ. ಹೌದು, ಮಾರ್ಚ್ 14ರಂದು ಬಿಡುಗಡೆಯಾಗಿದ್ದ ಜಾನ್ ಅಬ್ರಾಹಿಂ ನಿರ್ಮಾಣ ಮಾಡಿ ನಟಿಸಿದ್ದ ದಿ ಡಿಪ್ಲೋಮ್ಯಾಟ್ ಚಿತ್ರ ಭಾರತದ ಬಾಕ್ಸಾಫೀಸ್‌ನಲ್ಲಿ ಐದು ವಾರಗಳಲ್ಲಿ ₹39 ಕೋಟಿಯನ್ನು ಗಳಿಸಿತ್ತು. ಕೇಸರಿ 2 ಈ ಹಣವನ್ನು ಕೇವಲ ಐದು ದಿನದಲ್ಲಿ ಗಳಿಸಿದೆ.

ಇನ್ನು ಶಾಹಿದ್ ಕಪೂರ್ ಅಭಿನಯದ ದೇವಾ ಜನವರಿ 31ರಂದು ತೆರೆಗೆ ಬಂದಿತ್ತು. 28 ದಿನಗಳ ಪ್ರದರ್ಶನವನ್ನು ಕಂಡಿತ್ತು. ಈ 28 ದಿನಗಳಲ್ಲಿ ದೇವಾ ₹32.07 ಕೋಟಿಯನ್ನು ಗಳಿಸಿತ್ತು. ಈ ದಾಖಲೆ ಕೂಡ ಮುರಿದು ಕೇಸರಿ 2 ಸದ್ಯ ಮುನ್ನುಗ್ಗುತ್ತಿದ್ದು ಈ ವರ್ಷ ಅತೀ ಹೆಚ್ಚು ಹಣ ಗಳಿಸಿದ ಸಿನಿಮಾಗಳ ಸಾಲಿನಲ್ಲಿ ಕೇಸರಿ 2 ಈಗ ಐದನೇ ಸ್ಥಾನದಲ್ಲಿ ಬಂದು ನಿಂತಿದೆ.

ಜಾಟ್ ದಾಖಲೆಯನ್ನು ಮುರಿಯುತ್ತಾ ಕೇಸರಿ 2 ?

ಸದ್ಯ ಕೇಸರಿ 2 ಚಿತ್ರದ ಎದುರು ಜಾಟ್ ಚಿತ್ರದ ಗಳಿಕೆಯನ್ನು ಹಿಂದಿಕ್ಕುವ ಸವಾಲು ಇದೆ. ಸನ್ನಿ ಡಿಯೋಲ್ ಅಭಿನಯದ ಜಾಟ್ ಚಿತ್ರ ₹79 ಕೋಟಿ ಹಣವನ್ನು ಭಾರತದ ಬಾಕ್ಸಾಫೀಸ್‌ನಲ್ಲಿ ಗಳಿಸಿದೆ. ಚಿತ್ರ ಇನ್ನು ಚಿತ್ರಮಂದಿರದಲ್ಲಿ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ. ವಿಶೇ‍ಷ ಅಂದರೆ ಕೇಸರಿ 2 ಚಿತ್ರ ತೆರೆಗೆ ಬಂದರು ಕೂಡ ಜಾಟ್ ಚಿತ್ರದ ಹವಾ ಇನ್ನು ಕೆಲ ಕಡೆ ಕಡಿಮೆಯಾಗಿಲ್ಲ. ಬಾಲಿವುಡ್‌ ಟ್ರೇಡ್ ಪಂಡಿತರ ಪ್ರಕಾರ ಕಳೆದ 14 ದಿನಗಳಿಂದ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಜಾಟ್ ಬಾಕ್ಸಾಫೀಸ್‌ನಲ್ಲಿ ₹100 ಕೋಟಿ ಹಣವನ್ನು ಅನಾಯಾಸವಾಗಿ ಗಳಿಸಲಿದೆ. ಸದ್ಯ ಕೇಸರಿ 2 ಐದು ದಿನದಲ್ಲಿ ₹39.25 ಕೋಟಿ ಗಳಿಸಿದ್ದು ಮುಂಬರುವ ದಿನಗಳಲ್ಲಿ ಜಾಟ್ ಚಿತ್ರದ ದಾಖಲೆಯನ್ನು ಕೇಸರಿ 2 ಮುರಿಯುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

2025 ಅಕ್ಕಿಗೆ ಲಕ್ಕಿ..!

ಸತತ ಸೋಲುಗಳಿಂದ ಕಂಗಾಲಾಗಿದ್ದ ಅಕ್ಷಯ್ ಕುಮಾರ್ ಈಗಾಗಲೇ ಈ ವರ್ಷ ಸ್ಕೈ ಫೋರ್ಸ್‌ ಚಿತ್ರದ ಮೂಲಕ ಗೆಲುವಿನ ನಗೆ ಬೀರಿದ್ದಾರೆ. ಜನವರಿ 26ರಂದು ತೆರೆಗೆ ಬಂದಿದ್ದ ಸ್ಕೈ ಫೋರ್ಸ್ ಭಾರತದ ಬಾಕ್ಸಾಫೀಸ್‌ನಲ್ಲಿ ₹131.44 ಕೋಟಿ ಹಣವನ್ನು ಗಳಿಸಿದೆ. ಈ ಮೂಲಕ ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಚಿತ್ರಗಳ ಸಾಲಿನಲ್ಲಿ ಮೂರನೇ ಸ್ಥಾನದಲ್ಲಿ ಈ ಚಿತ್ರ ಇದೆ. ಕೇಸರಿ 2 ಕೂಡ ₹100 ಕೋಟಿ ಗಡಿಯನ್ನು ದಾಟಿದರೆ ಅಕ್ಷಯ್ ಕುಮಾರ್ ಮತ್ತೆ ಗೆಲುವಿನ ಲಯಕ್ಕೆ ಮರಳಿದಂತಾಗುತ್ತೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ

More from Filmibeat

English summary
Kesari Chapter 2 Box Office Collection Day 5: Karan Singh Tyagi’s powerful courtroom-historical drama, Kesari Chapter 2, starring Akshay Kumar, R. Madhavan, and Ananya Panday, is holding strong at the box office. The film has sustained steady momentum through its first week, attracting audiences with its engaging storyline and impressive performances.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X