Kaantha Box Office Day 6 : ಒಂದೇ ವಾರ, 'ಕಾಂತ' ಖೇಲ್ ಖತಂ ? 2 ವರ್ಷದ ನಂತರ ಸೋಲಿನ ಭೀತಿಯಲ್ಲಿ ದುಲ್ಕರ್ ಸಲ್ಮಾನ್
ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಅಂಗೈಯಲ್ಲಿಯೇ ಮನರಂಜನೆ ಇದೆ. ಜಗತ್ತಿನ ಹಲವು ಭಾಷೆಯ ಚಿತ್ರಗಳನ್ನು ಎಲ್ಲಿ ಬೇಕೋ ಅಲ್ಲಿ .. ಯಾವಾಗ ಅಂದ್ರೆ ಅವಾಗ ನೋಡುವ ಸೌಲಭ್ಯ ಇದೆ. ಚಿತ್ರಮಂದಿರಕ್ಕೆ ಈ ಓಟಿಟಿ ತೀವೃ ಸ್ಪರ್ಧೆಯನ್ನೊಡ್ಡುತ್ತಿದೆ. ಇನ್ನು ಮೊದಲಾದರೆ ಕೇವಲ ಒಂದು ಪೋಸ್ಟರ್ ಸಾಕಿತ್ತು. ಚಿತ್ರಮಂದಿರ ಪ್ರೇಕ್ಷಕರಿಂದ ತುಂಬಿ ತುಳುಕುತ್ತಿತ್ತು. ಆದರೆ ಈಗ..ಎಷ್ಟೇ ಪ್ರಚಾರ ಮಾಡಿದರು...
ಕೂಡ ಚಿತ್ರಮಂದಿರಕ್ಕೆ ಚಿತ್ರವೊಂದು ಬಂದಿದ್ದು ಹೋಗಿದ್ದು ಕೂಡ ಈಗೀಗ ಹಲವರಿಗೆ ಗೊತ್ತೇ ಆಗುವುದಿಲ್ಲ. ಎಷ್ಟೇ ಭಿನ್ನವಾದ ಆಲೋಚನೆ ಮಾಡಿದರು ಕೂಡ ಪ್ರೇಕ್ಷಕರನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಎಳೆದು ತರಲು ಕೂಡ ಸಾಧ್ಯವಾಗುತ್ತಿಲ್ಲ. ಗೆಲುವು ಮಾತ್ರ ಬಹುತೇಕರ ಕೈಗೆ ಸಿಗುತ್ತಿಲ್ಲ. ಉದಾಹರಣೆಗೆ ದುಲ್ಕರ್ ಸಲ್ಮಾನ್ ಅವರನ್ನೇ ತೆಗೆದುಕೊಳ್ಳಿ.

ಹೌದು, ದುಲ್ಕರ್ ಸಲ್ಮಾನ್. ಮಲಯಾಳಂ ಚಿತ್ರರಂಗದ ಸ್ಟಾರ್. ಎಲ್ಲರಿಗೆ ಗೊತ್ತಿರುವಂತೆ ಪ್ರೇಕ್ಷಕರ ನಾಡಿ ಮಿಡಿತ ಬಲ್ಲ ಕೆಲವೇ ಕೆಲ ಸ್ಟಾರ್‌ಗಳಲ್ಲಿ ದುಲ್ಕರ್ ಸಲ್ಮಾನ್ ಕೂಡ ಒಬ್ಬರು. ಸದಾ ಹೊಸತನದ ಬೆನ್ನತ್ತುವ ದುಲ್ಕರ್ ಆಯ್ಕೆ ಮಾಡಿಕೊಳ್ಳುವ ಕಥೆಗಳು ವಿಶೇಷವಾಗಿರುತ್ತವೆ. ವಿಶಿಷ್ಠವಾಗಿರುತ್ತವೆ.
ಈ ಹಿನ್ನೆಲೆ ಇವರ ಇತ್ತೀಚಿನ ''ಕಾಂತ'' ಮೇಲೆ ಎಲ್ಲರ ಕಣ್ಣಿತ್ತು. ಬಾಕ್ಸಾಫೀಸ್‌ನಲ್ಲಿ ಹಣದ ಹೊಳೆ ಹರಿಯುವ ನಿರೀಕ್ಷೆ ಇತ್ತು. ಆದರೆ ಸದ್ಯಕ್ಕೆ ಈ ನಿರೀಕ್ಷೆ ಹುಸಿಯಾಗಿದ್ದು ''ಕಾಂತ'' ಬಾಕ್ಸಾಫೀಸ್‌ನಲ್ಲಿ ತೆವಳುತ್ತಾ ಸಾಗುತ್ತಿದೆ. ಎರಡು ವರ್ಷದ ನಂತರ ದುಲ್ಕರ್ ಸಲ್ಮಾನ್ ಅವರಿಗೆ ಸೋಲಿನ ಚಿಂತೆ ಕಾಡುತ್ತಿದೆ.

ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಕಳೆದ ನವೆಂಬರ್ 14ರಂದು ತೆರೆಗೆ ಬಂದ '' ಕಾಂತ'' ಈ 6 ದಿನದಲ್ಲಿ ಕೇವಲ ₹ 19.10 ಕೋಟಿಯನ್ನಷ್ಟೇ ಗಳಿಸಿದೆ. ದುಲ್ಕರ್ ಸಲ್ಮಾನ್ ಅವರ ಸ್ಟಾರ್ ಪವರ್‌ಗೆ ಈ ಗಳಿಕೆ ತೀರಾ ಕಡಿಮೆ.
ಸ್ಯಾಕ್ನಿಲ್ ಪ್ರಕಾರ ''ಕಾಂತ'' ಚಿತ್ರದ 6 ದಿನದ ಗಳಿಕೆ ಈ ಕೆಳಗಿನಂತೆ ಇದೆ.
ಮೊದಲ ದಿನ (ಶುಕ್ರವಾರ) : ₹ 4.35 ಕೋಟಿ
ಎರಡನೇ ದಿನ (ಶನಿವಾರ) : ₹ 5 ಕೋಟಿ
ಮೂರನೇ ದಿನ (ಭಾನುವಾರ) : ₹4.5 ಕೋಟಿ
ನಾಲ್ಕನೇ ದಿನ (ಸೋಮವಾರ) : ₹1.8ಕೋಟಿ
ಐದನೇ ದಿನ (ಮಂಗಳವಾರ) : ₹1.85 ಕೋಟಿ
ಆರನೇ ದಿನ (ಬುಧವಾರ) : ₹1.60 ಕೋಟಿ * ಅಂದಾಜು
ಒಟ್ಟು ಗಳಿಕೆ - ₹ 19.10 ಕೋಟಿ
ಇನ್ನು ''ಕಾಂತ'' ಚಿತ್ರಕ್ಕೆ ದುಲ್ಕರ್ ಕೇವಲ ನಾಯಕ ಮಾತ್ರ ಅಲ್ಲ. ನಿರ್ಮಾಪಕ ಕೂಡ ಹೌದು. ''koimoi'' ವರದಿಯ ಪ್ರಕಾರ ಈ ಚಿತ್ರಕ್ಕೆ ₹40 ಕೋಟಿಯನ್ನು ದುಲ್ಕರ್ ಸಲ್ಮಾನ್ ಹೂಡಿದ್ದಾರೆ. ಈ 40 ಕೋಟಿಯಲ್ಲಿ ಸದ್ಯ ₹19.10 ಕೋಟಿ ಮರಳಿ ದುಲ್ಕರ್ ಸಲ್ಮಾನ್ ಕೈ ಸೇರಿದೆ. ಆದರೆ ಬಾಕಿ ಹಣ..? ಸದ್ಯದ ಪರಿಸ್ಥಿತಿಯಲ್ಲಿ ''ಕಾಂತ'' ₹25 ಕೋಟಿಯ ಗಡಿಯನ್ನು ಕೂಡ ತಲುಪುವುದು ಕಷ್ಟ ಎನ್ನುವ ಮಾತುಗಳು ಸದ್ಯ ತಮಿಳುನಾಡಿನಲ್ಲಿ ಕೇಳಿ ಬರುತ್ತಿವೆ.
ಇನ್ನು ನಾಳೆ (ನವೆಂಬರ್ 21) ಹಲವು ಚಿತ್ರಗಳು ತೆರೆಗೆ ಬರುತ್ತಿವೆ. ''ಕಾಂತ'' ಗಳಿಕೆಗೆ ಬ್ರೇಕ್ ಹಾಕಲಿವೆ. ಈ ಹಿನ್ನೆಲೆ ''ಕಿಂಗ್ ಆಫ್ ಕೋಟಾ'' ನಂತರ ಮತ್ತೊಮ್ಮೆ ದುಲ್ಕರ್ ಸಲ್ಮಾನ್‌ಗೆ ಸೋಲುವುದು ಖಚಿತ ಎನ್ನುವ ಭವಿಷ್ಯವಾಣಿ ಕೂಡ ಸದ್ಯ ಕೇಳಿ ಬರುತ್ತಿದೆ. ಈ ವಾರಾಂತ್ಯದಲ್ಲಿ ಏನಾದರೂ ಪವಾಡ ನಡೆಯುತ್ತಾ ? ಕಾದು ನೋಡಬೇಕಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











