Landlord Day 3 Boxoffice: ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ 'ಲ್ಯಾಂಡ್‌ಲಾರ್ಡ್' ಹವಾ; 3 ದಿನದ ಕಲೆಕ್ಷನ್ ಎಷ್ಟು?
ಎಲ್ಲಾ ಸಿನಿಮಾಗಳಿಗೆ ದೊಡ್ಡದಾಗಿ ಓಪನಿಂಗ್ ಸಿಗಲ್ಲ. ಆದರೆ ನಿಧಾನವಾಗಿ ಪ್ರೇಕ್ಷಕರ ಸಂಖ್ಯೆ ಹೆಚ್ಚಿಸಿಕೊಂಡು ಗೆದ್ದ ಸಿನಿಮಾಗಳು ಇವೆ. ದುನಿಯಾ ವಿಜಯ್ ನಟನೆಯ 'ಲ್ಯಾಂಡ್‌ಲಾರ್ಡ್' ಸಿನಿಮಾ ಇದೇ ರೀತಿ ಭರವಸೆ ಮೂಡಿಸಿದೆ. ದಿನದಿಂದ ದಿನಕ್ಕೆ ಸಿನಿಮಾ ಸಖತ್ ಸದ್ದು ಮಾಡ್ತಿದೆ. ಶುಕ್ರವಾರ, ಶನಿವಾರಕ್ಕಿಂತ ಭಾನುವಾರ ಸಿನಿಮಾ ಕಲೆಕ್ಷನ್ ಜೋರಾಗಿದೆ.
ವಿಮರ್ಶಕರಿಂದ ಹಾಗೂ ಪ್ರೇಕ್ಷಕರಿಂದ 'ಲ್ಯಾಂಡ್‌ಲಾರ್ಡ್' ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ತಿದೆ. ಸಾಕಷ್ಟು ಜನ ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಬಗ್ಗೆ ಮೆಚ್ಚಿ ಬರೆಯುತ್ತಿದ್ದಾರೆ. ಮೌತ್ ಟಾಕ್ ಚೆನ್ನಾಗಿದ್ದು ಸಿನಿರಸಿಕರು ಸಿನಿಮಾ ನೋಡಲು ಮುಂದಾಗುತ್ತಿದ್ದಾರೆ. ಭಾನುವಾರ ಸಂಜೆ ಸಾಕಷ್ಟು ಕಡೆಗಳಲ್ಲಿ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಂಡಿದೆ. ಸೋಮವಾರ(ಜನವರಿ 26) ಗಣರಾಜ್ಯೋತ್ಸವದ ರಜೆ ಚಿತ್ರದ ಗಳಿಕೆಗೆ ಪ್ಲಸ್ ಆಗಲಿದೆ.

ಸಂವಿಧಾನದ ಬಗ್ಗೆ 'ಲ್ಯಾಂಡ್‌ಲಾರ್ಡ್' ಚಿತ್ರದಲ್ಲಿ ಚರ್ಚಿಸಿದ್ದು ಗಣರಾಜ್ಯೋತ್ಸವ ಸಂಭ್ರಮದಲ್ಲೇ ಸಿನಿಮಾ ತೆರೆಗೆ ಬಂದಿರುವುದು ವಿಶೇಷ. ಜಮೀನ್ದಾರಿಕೆ, ಜಾತಿವ್ಯವಸ್ಥೆ ಹಾಗೂ ಅನಿಷ್ಠ ಪದ್ಧತಿಗಳ ಬಗ್ಗೆ ಚಿತ್ರದಲ್ಲಿ ಸಾಕಷ್ಟು ವಿಚಾರಗಳನ್ನು ಹೇಳಲಾಗಿದೆ. 80-90 ದಶಕದಲ್ಲಿ ಹಳ್ಳಿಗಳಲ್ಲಿ ಕೆಳವರ್ಗದವರ ಮೇಲೆ ಮೇಲ್ವರ್ಗದವರ ದಬ್ಬಾಳಿಕೆ ಹೇಗಿತ್ತು ಎನ್ನುವ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಆ ಮೂಲಕ ಇತಿಹಾಸದ ಕಹಿ ಸತ್ಯಗಳನ್ನು ಕೆದಕಲಾಗಿದೆ.
ರೆಗ್ಯುಲರ್ ಕಮರ್ಷಿಯಲ್ ಸಿನಿಮಾಗಳಿಗಿಂತ ಬಹಳ ಭಿನ್ನವಾಗಿ 'ಲ್ಯಾಂಡ್‌ಲಾರ್ಡ್' ಸಿನಿಮಾ ತೆರೆಗೆ ತರಲಾಗಿದೆ. ಅದೇ ಕಾರಣಕ್ಕೆ ಭಾರೀ ಓಪನಿಂಗ್ ಸಿಗಲಿಲ್ಲ. ಆದರೆ ನಿಧಾನವಾಗಿ ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಜಡೇಶ್ ಕಲ್ಪನೆಯ ಕಥೆ, ಚಿತ್ರಕಥೆಗೆ ಕಲಾವಿದರು ಹಾಗೂ ತಂತ್ರಜ್ಞರ ಬಲ ಸಿಕ್ಕಿದೆ. ದುನಿಯಾ ವಿಜಯ್, ರಾಜ್ ಬಿ ಶೆಟ್ಟಿ, ರಚಿತಾ ರಾಮ್, ರಿತನ್ಯಾ, ಉಮಾಶ್ರೀ ಹೀಗೆ ಪ್ರತಿಯೊಬ್ಬರು ತಮ್ಮ ನಟನೆಯಿಂದಲೇ ಚಿತ್ರವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದ್ದಾರೆ.

ಬೆಂಗಳೂರು, ಮೈಸೂರಿಗಿಂತ ಬೇರೆ ಭಾಗಗಳಲ್ಲಿ 'ಲ್ಯಾಂಡ್‌ಲಾರ್ಡ್' ಚಿತ್ರಕ್ಕೆ ಪ್ರೇಕ್ಷಕರ ರೆಸ್ಪಾನ್ಸ್ ಚೆನ್ನಾಗಿದೆ. ಬುಕ್‌ಮೈ ಶೋನಲ್ಲಿ ಕೂಡ ಟಿಕೆಟ್ ಬುಕ್ಕಿಂಗ್ ಹೆಚ್ಚಾಗುತ್ತಿದೆ. ಇದು ಸಿನಿಮಾ ಪ್ರೇಕ್ಷಕರ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಿರುವುದಕ್ಕೆ ದಿಕ್ಸೂಚಿಯಾಗಿದೆ.
3 ದಿನದ ಕಲೆಕ್ಷನ್
'ಲ್ಯಾಂಡ್‌ಲಾರ್ಡ್' ಸಿನಿಮಾ ಕಲೆಕ್ಷನ್ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ಕೊಟ್ಟಿಲ್ಲ. sacnilk ವರದಿ ಪ್ರಕಾರ ಸಿನಿಮಾ ಮೊದಲ 3 ದಿನಕ್ಕೆ 2 ಕೋಟಿ ರೂ.ಗೂ ಹೆಚ್ಚು ನೆಟ್ ಕಲೆಕ್ಷನ್ ಮಾಡಿದೆ. ಶುಕ್ರವಾರ 52 ಲಕ್ಷ ರೂ, ಶನಿವಾರ 64 ಲಕ್ಷ ರೂ, ಹಾಗೂ ಭಾನುವಾರ 90 ಲಕ್ಷ ರೂ, ಗಳಿಕೆ ಕಂಡಿರುವುದಾಗಿ ವರದಿಯಾಗಿದೆ.
ಟಿಕೆಟ್ ಬುಕ್ಕಿಂಗ್
ಬುಕ್‌ಮೈ ಶೋನದಲ್ಲಿ 'ಲ್ಯಾಂಡ್‌ಲಾರ್ಡ್' ಚಿತ್ರದ ಟಿಕೆಟ್ ಬುಕ್ಕಿಂಗ್ ಲೆಕ್ಕ ಸಿಗುತ್ತಿದೆ. ಮೊದಲ ದಿನ 6 ಸಾವಿರ ಟಿಕೆಟ್ ಬುಕ್ ಆಗಿತ್ತು. 2ನೇ ದಿನ 8 ಸಾವಿರಕ್ಕೂ ಅಧಿಕ ಟಿಕೆಟ್‌ಗಳನ್ನು ಜನ ಕಾಯ್ದಿರಿಸಿದ್ದರು. 3ನೇ ದಿನ ಸಂಖ್ಯೆ 14 ಸಾವಿರ ದಾಟಿದೆ. ಸಾಕಷ್ಟು ಜನ ಥಿಯೇಟರ್‌ನಲ್ಲೇ ಟಿಕೆಟ್ ಖರೀದಿಸಿ ಸಿನಿಮಾ ವೀಕ್ಷಿಸುತ್ತಿದ್ದಾರೆ. 4ನೇ ದಿನವಾದ ಇಂದು(ಜನವರಿ 26) ಗಂಟೆಗೆ ಸಾವಿರ ಟಿಕೆಟ್‌ಗಳು ಬುಕ್ ಆಗ್ತಿದೆ. ಇದು ಸಹಜವಾಗಿಯೇ ಚಿತ್ರತಂಡದ ಸಂತಸಕ್ಕೆ ಕಾರಣವಾಗಿದೆ.
ಸಿಎಂ ಭರವಸೆ
ಇತ್ತೀಚೆಗೆ 'ಲ್ಯಾಂಡ್‌ಲಾರ್ಡ್' ಚಿತ್ರತಂಡ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿತ್ತು. ಸಿನಿಮಾ ವೀಕ್ಷಿಸುವಂತೆ ಕೇಳಿಕೊಂಡಿದ್ದರು. ಅದಕ್ಕೆ ಅವರು ಒಪ್ಪಿದ್ದಾರೆ. ಶೀಘ್ರದಲ್ಲೇ ಸಿಎಂ ಸಿದ್ಧರಾಮಯ್ಯ ಅವರಿಗೆ ಚಿತ್ರವನ್ನು ತೋರಿಸುವ ಕೆಲಸ ನಡೀತಿದೆ. ಶಿವರಾಜ್‌ಕುಮಾರ್, ಧ್ರುವ ಸರ್ಜಾ, ವಿನಯ್ ರಾಜ್‌ಕುಮಾರ್ ಸೇರಿ ತಾರೆಯರು ಚಿತ್ರಕ್ಕೆ ಶುಭ ಕೋರಿದ್ದಾರೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











