ಅಮರ ಮಧುರ ಪ್ರೇಮ ; ಕರಣ್ ಜೋಹರ್‌ಗೆ ಮತ್ತೊಂದು ಆಘಾತ- ವರುಣ್ ಧವನ್, ಜಾಹ್ನವಿ ಚಿತ್ರದ ಗಳಿಕೆ ಹಿಂದಿಕ್ಕಿದ ಹೊಸ ಹೀರೋ

ಪ್ರೀತಿಯಿಂದ .. ಪ್ರೀತಿಗಾಗಿ .. ಪ್ರೀತಿಗೋಸ್ಕರ .. ಪ್ರೀತಿ ಎಂಬ ಎರಡಕ್ಷರದ ಮಧುರ ಭಾವದ ಸುತ್ತ ಮುತ್ತ ಭಾರತೀಯ ಬೆಳ್ಳಿತೆರೆಯ ಮೇಲೆ ಇಲ್ಲಿಯವರೆಗೆ ಹಲವಾರು ಚಿತ್ರಗಳು ಅರಳಿವೆ. ಎಷ್ಟೇ ಬರೆದರೂ ಮುಗಿಯದ ಬಣ್ಣ ಬಣ್ಣದ ಭಾವನೆಗಳ ಈ ಸಾಗರದಿಂದ ಕ್ಯಾಂಪಸ್, ಕ್ಲಾಸ್ ರೂಮ್, ಲೈಬ್ರರಿ, ಕ್ಯಾಂಟೀನ್, ಬಸ್ಸು, ರೋಡು, ಪಾರ್ಕು, ಹೀಗೆ ಎಲ್ಲೆಲ್ಲೂ ಪ್ರೀತಿಸುವ ಹೃದಯಗಳ ಬಡಿತದ ಕಥೆಗಳನ್ನು ಹೆಕ್ಕಿ ಹೇಳಲಾಗಿದೆ.

ಆ ಪೈಕಿ ಕೆಲ ಚಿತ್ರಗಳು ಪ್ರೇಕ್ಷಕರ ಗಮನ ಸೆಳೆದಿವೆ. ಇನ್ನೂ ಕೆಲ ಚಿತ್ರಗಳು ಪ್ರೇಕ್ಷಕರ ಮನಸಿನಲ್ಲಿ ಶಾಶ್ವತವಾದ ಸ್ಥಾನವನ್ನು ಪಡೆದಿವೆ. ಇಷ್ಟೇ ಅಲ್ಲ ಬಾಕ್ಸಾಫೀಸ್‌ನಲ್ಲಿ ಅತ್ಯಮೋಘ.. ಅದ್ವೀತಿಯ ಗೆಲುವನ್ನು ಕೂಡ ಕಂಡಿವೆ. ಉದಾಹರಣೆಗೆ ''ಏಕ್ ದಿವಾನೆ ಕಿ ದೀವಾನಿಯತ್' '.

Ek Deewane Ki Deewaniyat 2025 s 3rd BIGGEST Romantic Grosser in 14 Days Beats Sunny Sanskari

ಹೌದು..''ಏಕ್ ದಿವಾನೆ ಕಿ ದೀವಾನಿಯತ್' '.. ನಿರ್ದೇಶಕ ಮಿಲಾಪ್ ಝವೇರಿಯ ಪ್ರೇಮ ಕಾವ್ಯ. ಚಿತ್ರ ಬಿಡುಗತಡೆಯಾಗಿ ಹದಿನಾಲ್ಕು ದಿನಗಳಾಗಿವೆ. ಆದರೂ ಈ ಚಿತ್ರದ ಅಲೆ ಇನ್ನೂ ಕಡಿಮೆಯಾಗಿಲ್ಲ. ಚಿತ್ರ ಬಿಡುಗಡೆಯಾಗಿ ಹದಿನಾಲ್ಕು ದಿನವಾದರೂ ಕೂಡ ನಿರ್ಮಾಪಕ ಅನ್ಶುಲ್ ಗರ್ಗ್ ಅವರ ಮೇಲೆ ಹಣದ ಮಳೆ ಬೀಳುತ್ತಲೇ ಇದೆ.

ವಿಶೇಷ ಅಂದರೆ ''ಏಕ್ ದಿವಾನೆ ಕಿ ದೀವಾನಿಯತ್' ' ಬಿಡುಗಡೆಯಾದಾಗ ''ಕಾಂತಾರ'' ಅಲೆ ಇತ್ತು. ದೀಪಾವಳಿ ಹಬ್ಬದಂದು ಈ ಚಿತ್ರದ ಎದುರು ಆಯುಷ್ಮಾನ್ ಖುರಾನ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ''ಥಮ್ಮ'' ಕೂಡ ಬಿಡುಗಡೆಯಾಗಿತ್ತು. ಆದರೂ ಕೂಡ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ''ಏಕ್ ದಿವಾನೆ ಕಿ ದಿವಾನಿಯತ್'' ಯಶಸ್ವಿಯಾಗಿದೆ. ಬಾಲಿವುಡ್‌ ಲಾಬಿಯಿಂದಾಗಿ ಈ ಚಿತ್ರಕ್ಕೆ ಕೆಲವೇ ಕೆಲ ಸ್ಕ್ರೀನ್‌ಗಳನ್ನು ನೀಡಲಾಗಿತ್ತಾದರೂ ಸಿಕ್ಕ ಅತ್ಯಲ್ಪ ಗ್ಯಾಪ್‌ನಲ್ಲಿ ಈ ಚಿತ್ರತಂಡ ಸಿಕ್ಸರ್ ಹೊಡೆದಿದೆ.

ಹೌದು, ಕೇವಲ 25 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ''ಏಕ್ ದಿವಾನೆ ಕಿ ದೀವಾನಿಯತ್' ' ಚಿತ್ರ ಈ ಹದಿನಾಲ್ಕು ದಿನದಲ್ಲಿ ಕೇವಲ ಭಾರತದಲ್ಲಿ ₹65.39 ಕೋಟಿಯನ್ನು ಗಳಿಸಿದೆ ಎಂದು ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ವರದಿ ಮಾಡಿದೆ.

ವಿಶೇಷ ಅಂದರೆ ₹65.39 ಗಳಿಸುವ ಮೂಲಕ ''ಕಾಂತಾರ 1'' ಅಬ್ಬರಕ್ಕೆ ತತ್ತರಿಸಿ ಹೋಗಿದ್ದ ಕರಣ್ ಜೋಹರ್ ನಿರ್ಮಾಣದ, ವರುಣ್ ಧವನ್ ಮತ್ತು ಜಾಹ್ನವಿ ಕಪೂರ್ ಅಭಿನಯದ ''ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ'' ಚಿತ್ರದ ಗಳಿಕೆ ( ₹61.25 )ಯನ್ನು ''ಏಕ್ ದಿವಾನೆ ಕಿ ದೀವಾನಿಯತ್'' ಚಿತ್ರ ಹಿಂದಿಕ್ಕಿದೆ. ಈ ವರ್ಷ ಅತೀ ಹೆಚ್ಚು ಹಣ ಗಳಿಸಿದ ರೊಮ್ಯಾಂಟಿಕ್ ಲವ್ ಸ್ಟೋರಿಗಳ ಪಟ್ಟಿಯಲ್ಲಿ ''ಏಕ್ ದಿವಾನೆ ಕಿ ದೀವಾನಿಯತ್' ' ಚಿತ್ರ ಮೂರನೇ ಸ್ಥಾನಕ್ಕೇರಿದೆ. ಈ ಮೂಲಕ ಕರಣ್ ಜೋಹರ್‌ ಮತ್ತು ತಂಡಕ್ಕೆ ಹೊಸ ಹೀರೋ ಮತ್ತು ತಂಡ ಆಘಾತವನ್ನು ನೀಡಿದೆ.

Ek Deewane Ki Deewaniyat 2025 s 3rd BIGGEST Romantic Grosser in 14 Days Beats Sunny Sanskari

koimoi.com ಪ್ರಕಾರ ಈ ವರ್ಷ ಭಾರತದಲ್ಲಿ ಅತೀ ಹೆಚ್ಚು ಹಣ ಗಳಿಸಿದ ಲವ್ ಸ್ಟೋರಿ ಚಿತ್ರಗಳ ಪಟ್ಟಿ ಈ ಕೆಳಗಿನಂತೆ ಇದೆ.

1.ಸೈಯಾರ : ₹337.69 ಕೋಟಿ
2.ಭೂಲ್ ಚುಕ್ ಮಾಫ್ - ₹74.81 ಕೋಟಿ
3.ಏಕ್ ದಿವಾನೆ ಕಿ ದೀವಾನಿಯತ್ - ₹58 ಕೋಟಿ *
4.ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ- ₹57.48 ಕೋಟಿ
5.ಮೆಟ್ರೋ ಇನ್ ದಿನೋ - ₹56.3 ಕೋಟಿ
6.ಪರಮ ಸುಂದರಿ - ₹54.85 ಕೋಟಿ
7.ಧಡಕ್ 2 - ₹24.24 ಕೋಟಿ
8.ಮೇರೆ ಹಸ್ಬೆಂಡ್ ಕಿ ಬೀವಿ - ₹12.25 ಕೋಟಿ
9.ಲವ್‌ಯಪ್ಪಾ - ₹7.69 ಕೋಟಿ
10. ಆಜಾದ್ - ₹7.61 ಕೋಟಿ

ಹೀಗೆ ಈ 14 ದಿನದಲ್ಲಿ 07 ಚಿತ್ರಗಳನ್ನು ಹಿಂದಿಕ್ಕಿ ಸದ್ಯ ಮೂರನೇ ಸ್ಥಾನ ತಲುಪಿರುವ ''ಏಕ್ ದಿವಾನೆ ಕಿ ದೀವಾನಿಯತ್' ' ಚಿತ್ರ ರಾಜ್ ಕುಮಾರ್ ರಾವ್ ಮತ್ತು ತೃಪ್ತಿ ದಿಮ್ರಿ ಅಭಿನಯದ ''ಭೂಲ್ ಚುಕ್ ಮಾಫ್'' ಚಿತ್ರದ ಗಳಿಕೆಯನ್ನು ಹಿಂದಿಕ್ಕುತ್ತಾ..? ಬಾಕ್ಸಾಫೀಸ್‌ನಲ್ಲಿ ನೂರು ಕೋಟಿಯನ್ನು ಗಳಿಸುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
The dark horse prevails! Find out how 'Ek Deewane Ki Deewaniyat' beat the odds and 'Sunny Sanskari' to secure its place as one of the Top 3 Romantic Hits of 2025.
Read more about: bollywood karan johar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X