Ekka Day 5 Collection: 5ನೇ ದಿನಕ್ಕೆ 'ಎಕ್ಕ' ಆಟ ಏನಾಯ್ತು? ಮುಂದೆ ಹೆಂಗೆ?

ಬಾಕ್ಸಾಫೀಸ್‌ನಲ್ಲಿ 3 ಹೊಸ ಸಿನಿಮಾಗಳ ಆರ್ಭಟ ಜೋರಾಗಿದೆ. ಬಾಲಿವುಡ್ ಸಿನಿಮಾ 'ಸಯಾರ' ಭರ್ಜರಿ ಪ್ರದರ್ಶನ ಕಾಣುತ್ತಿದ್ದು ಈಗಾಗಲೇ 100 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದೆ. ಇನ್ನು ಕನ್ನಡದ 'ಎಕ್ಕ' ಹಾಗೂ ತೆಲುಗು ಹಾಗೂ ಕನ್ನಡದಲ್ಲಿ ಬಂದಿರುವ 'ಜ್ಯೂನಿಯರ್' ಚಿತ್ರಗಳು ಗೆಲುವಿನ ನಾಗಾಲೋಟ ಮುಂದುವರೆಸಿವೆ.

ಯುವ ರಾಜ್‌ಕುಮಾರ್ ನಟನೆಯ ಆಕ್ಷನ್ ಥ್ರಿಲ್ಲರ್ 'ಎಕ್ಕ' ಸಿನಿಮಾ ಕನ್ನಡ ಸಿನಿರಸಿಕರ ಹಾರ್ಟ್ ಫೇವರಿಟ್ ಎನಿಸಿಕೊಂಡುಬಿಟ್ಟಿದೆ. 'ಜ್ಯೂನಿಯರ್' ಚಿತ್ರಕ್ಕೆ ಕರ್ನಾಟಕಕ್ಕಿಂತ ಆಂಧ್ರ, ತೆಲಂಗಾಣದಲ್ಲಿ ರೆಸ್ಪಾನ್ಸ್ ಚೆನ್ನಾಗಿದೆ. 'ಎಕ್ಕ' ಸಿನಿಮಾ ಕಲೆಕ್ಷನ್ ವಿಚಾರಕ್ಕೆ ಬಂದರೆ ಶೀಘ್ರದಲ್ಲೇ 10 ಕೋಟಿ ರೂ. ಗಡಿ ದಾಟುವ ಲೆಕ್ಕಾಚಾರ ಶುರುವಾಗಿದೆ. ಮಂಗಳವಾರ ಮಳೆಯನ್ನು ಲೆಕ್ಕಿಸದೇ ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಕಳೆದ ವರ್ಷ ಬಂದಿದ್ದ 'ಯುವ' ಚಿತ್ರಕ್ಕಿಂತಲೂ ಇದೀಗ 'ಎಕ್ಕ' ಕಲೆಕ್ಷನ್ ಜೋರಾಗಿದೆ.

Ekka box office collection day 5 Yuva Rajkumar starrer keeps the momentum

ಮಳೆ ಬಿಟ್ಟು ಬಿಟ್ಟು ಬರ್ತಿದೆ. ಪ್ರೇಕ್ಷಕರು ಸಿನಿಮಾ ಮಂದಿರಗಳಿಗೆ ಹೋಗಲು ಮಳೆ ಅಡಚಣೆ ಉಂಟು ಮಾಡ್ತಿದೆ. ಆದರೆ ಅದನ್ನೆಲ್ಲಾ ಲೆಕ್ಕಿಸದೇ ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬೀಳುತ್ತಿದ್ದಾರೆ. ನಗರದ ವಿಕ್ಟರಿ ಸಿನಿಮಾಸ್, ವೀರೇಶ್ ಸೇರಿದಂತೆ ಸಾಕಷ್ಟು ಕಡೆಗಳಲ್ಲಿ ಮಂಗಳವಾರ ಕೂಡ ಸಿನಿಮಾ ಕಲೆಕ್ಷನ್ ಉತ್ತಮವಾಗಿದೆ. 'ಬ್ಯಾಂಗಲ್ ಬಂಗಾರಿ' ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುತ್ತಿದ್ದಾಳೆ. ಪಮ್ಮಿ ಹಾಗೂ ಮುತ್ತು ಭಾವನಾತ್ಮಕ ಸನ್ನಿವೇಶಗಳಿಗೆ ಪ್ರೇಕ್ಷಕರು ಕನೆಕ್ಟ್ ಆಗುತ್ತಿದ್ದಾರೆ.

5ನೇ ದಿನದ ಗಳಿಕೆ

'ಎಕ್ಕ' ಸಿನಿಮಾ ಕಲೆಕ್ಷನ್ ಬಗ್ಗೆ ಚಿತ್ರತಂಡ ಖಚಿತ ಮಾಹಿತಿ ನೀಡಿಲ್ಲ. ಆದರೆ ಚಿತ್ರತಂಡ ಫುಲ್ ಖುಷಿಯಾಗಿದೆ. ಶೀಘ್ರದಲ್ಲೇ ಸಕ್ಸಸ್ ಮೀಟ್ ಪ್ಲ್ಯಾನ್ ಮಾಡಲಾಗುತ್ತಿದೆ. ಅಲ್ಲಿ ಕಲೆಕ್ಷನ್ ಬಗ್ಗೆ ಮಾಹಿತಿ ಸಿಗುವ ಸಾಧ್ಯತೆ ದಟ್ಟವಾಗಿದೆ. sacnilk.com ವರದಿ ಪ್ರಕಾರ ಸಿನಿಮಾ 5ನೇ ದಿನ ಅಂದರೆ ಮಂಗಳವಾರ 60ರಿಂದ 70 ಲಕ್ಷ ರೂ. ಕಲೆಕ್ಷನ್ ಮಾಡಿದೆ. ಒಟ್ಟಾರೆ 5 ದಿನಕ್ಕೆ ಸಿನಿಮಾ ಕಲೆಕ್ಷನ್ 8 ಕೋಟಿ ರೂ. ಸಮೀಪದಲ್ಲಿದೆ. ಕೆಲವರ ಪ್ರಕಾರ ಅದಕ್ಕಿಂತಲೂ ಹೆಚ್ಚು ಗಳಿಕೆ ಕಂಡಿರುವ ಸಾಧ್ಯತೆ ಇದೆ.

ಕೆಲ ಬಾಕ್ಸಾಫೀಸ್ ಪಂಡಿತರ ಪ್ರಕಾರ ಈಗಾಗಲೇ ಸಿನಿಮಾ 10 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ ಎನ್ನಲಾಗ್ತಿದೆ. ಆದರೆ ಈ ಬಗ್ಗೆ ಖಚಿತ ಮಾಹಿತಿ ಸಿಗಬೇಕಿದೆ. ಮತ್ತೆ ವೀಕೆಂಡ್‌ನಲ್ಲಿ ಸಿನಿಮಾ ಗಳಿಕೆ ಹೆಚ್ಚಾಗುವ ಸುಳಿವು ಸಿಕ್ತಿದೆ. ಒಟ್ಟಾರೆ ಸಿನಿಮಾ ನೋಡಿದ ಪ್ರೇಕ್ಷಕರು ಎಂಜಾಯ್ ಮಾಡುತ್ತಿದ್ದಾರೆ. ಯುವ ನಟನೆ, ರೋಹಿತ್ ನಿರ್ದೇಶನ ಹಾಗೂ ಚರಣ್ ಸಂಗೀತದ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

'ಯುವ'ಗಿಂತ್ಲೂ ಒಳ್ಳೆ ರೆಸ್ಪಾನ್ಸ್

ಕಳೆದ ವರ್ಷ ಮಾರ್ಚ್ 28ರಂದು 'ಯುವ' ಸಿನಿಮಾ ತೆರೆಗೆ ಬಂದಿತ್ತು. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಚಿತ್ರಕ್ಕೆ ಸಂತೋಷ್ ಆನಂದ್ ರಾಮ್ ಆಕ್ಷನ್ ಕಟ್ ಹೇಳಿದ್ದರು. 'ಯುವ' ಚಿತ್ರಕ್ಕೆ 5ನೇ ದಿನ ಬುಕ್‌ಮೈ ಶೋನಲ್ಲಿ 8 ಸಾವಿರ ಟಿಕೆಟ್ ಬುಕ್ ಆಗಿತ್ತು. ಆದರೆ 'ಎಕ್ಕ' ಚಿತ್ರಕ್ಕೆ ಮಂಗಳವಾರ 12 ಸಾವಿರಕ್ಕೂ ಅಧಿಕ ಟಿಕೆಟ್ ಬುಕ್ ಆಗಿದೆ. ಆ ಮೂಲಕ 'ಯುವ' ಚಿತ್ರಕ್ಕಿಂತಲೂ 'ಎಕ್ಕ' ಚಿತ್ರಕ್ಕೆ ಪ್ರೇಕ್ಷಕರ ಪ್ರೀತಿ ಹೆಚ್ಚಾಗಿದೆ.

ಪಮ್ಮಿ & ಮುತ್ತು ಝಲಕ್

'ಎಕ್ಕ' ಚಿತ್ರದಲ್ಲಿ ಬೆಂಗಳೂರಿಗೆ ಬರುವ ಮುತ್ತುಗೆ ಬಾಲಕಿ ಪಮ್ಮಿ ಜೊತೆ ಆತ್ಮೀಯ ಅನುಬಂಧ ಬೆಳೆಯುತ್ತದೆ. ಆತನನ್ನು ಸೂಪರ್‌ ಮ್ಯಾನ್ ಎಂದೇ ಆಕೆ ಕರೆಯುತ್ತಿರುತ್ತಾಳೆ. ಪಮ್ಮಿಯಿಂದಲೇ ಮುತ್ತು ಜೀವನಕ್ಕೆ ಹೊಸ ತಿರುವು ಸಿಗುತ್ತದೆ. ಮುತ್ತು ಹಾಗೂ ಪಮ್ಮಿ ಸ್ಪೆಷಲ್ ವೀಡಿಯೋ ರಿಲೀಸ್ ಮಾಡಿ 'ಎಕ್ಕ' ಸಕ್ಸಸ್ ಬಗ್ಗೆ ಚಿತ್ರತಂಡ ಸಂತಸ ವ್ಯಕ್ತಪಡಿಸಿದೆ.

More from Filmibeat

English summary
Ekka box office report day 5; action thriller film steady on weekdays.
Read more about: ekka yuva rajkumar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X