Ekka Day 4 Boxoffice: ಸೋಮವಾರ ಪರೀಕ್ಷೆ ಗೆದ್ನಾ 'ಎಕ್ಕ'; 4ನೇ ದಿನದ ಗಳಿಕೆ ಎಷ್ಟು?
ಯುವ ರಾಜ್‌ಕುಮಾರ್ ನಟನೆಯ 'ಎಕ್ಕ' ಸಿನಿಮಾ ಭರ್ಜರಿ ಪ್ರದರ್ಶನ ಮುಂದುವರೆದಿದೆ. 2ನೇ ವಾರದತ್ತ ಸಿನಿಮಾ ಮುನ್ನುಗ್ಗುತ್ತಿದೆ. ಫಸ್ಟ್ ವೀಕೆಂಡ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ ಸಿನಿಮಾ ಸೋಮವಾರ ಅಂದರೆ ವಾರದ ದಿನವೂ ಗೆಲುವಿನ ಓಟ ಮುಂದುವರೆಸಿದೆ.
ಸಂಜೆ ಹಾಗೂ ರಾತ್ರಿ ಶೋಗಳು ಹೌಸ್‌ಫುಲ್ ಆಗುತ್ತಿದೆ. ಬುಕ್‌ಮೈ ಶೋನಲ್ಲಿ ಕೂಡ ಟಿಕೆಟ್ ಬುಕ್ಕಿಂಗ್ ಜೋರಾಗಿದೆ. ರೋಹಿತ್ ಪದಕಿ ನಿರ್ದೇಶನದ ಸಿನಿಮಾ ಫ್ಯಾಮಿಲಿ ಆಡಿಯನ್ಸ್‌ನ ನಿಧಾನವಾಗಿ ಚಿತ್ರಮಂದಿರಗಳಿಗೆ ಸೆಳೆಯುತ್ತಿದೆ. ಮೌತ್ ಟಾಕ್ ಚೆನ್ನಾಗಿದೆ. ಹಾಗಾಗಿ ನಿಧಾನವಾಗಿ ಸಿನಿಮಾ ಚೇತರಿಸಿಕೊಳ್ಳುತ್ತಿದೆ. ಆಹಾ ಓಹೋ ಎನ್ನುವ ಕಲೆಕ್ಷನ್ ಇಲ್ಲದೇ ಇದ್ದರೂ ಯುವನಟನ 2ನೇ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಗುತ್ತಿದೆ. ವರ್ಷದ ಮೊದಲ ಕನ್ನಡದ ಹಿಟ್ ಸಿನಿಮಾ ಎನಿಸಿಕೊಳ್ಳುವ ಸುಳಿವು ಸಿಗುತ್ತಿದೆ.

ಫಸ್ಟ್ ಹಾಫ್ ಬಹಳ ಚೆನ್ನಾಗಿದೆ. ಸೆಕೆಂಡ್ ಹಾಫ್ ಕೊಂಚ ನಿರಾಸೆ ಮೂಡಿಸುತ್ತದೆ. ಆದರೂ ಒಟ್ಟಾರೆ ಸಿನಿಮಾ ಒಮ್ಮೆ ನೋಡಬಹುದು ಎನ್ನುವುದು ಸಿನಿಮಾ ನೋಡಿದ ಬಹುತೇಕರ ಅಭಿಪ್ರಾಯವಾಗಿದೆ. ಇನ್ನು ಚರಣ್ ಸಂಗೀತ ಚಿತ್ರದ ದೊಡ್ಡ ಬಲ. 'ಬ್ಯಾಂಗಲ್ ಬಂಗಾರಿ' ಸಾಂಗ್ ಚಿತ್ರಮಂದಿರಗಳಲ್ಲಿ ಕೂಡ ದೊಡ್ಡದಾಗಿ ಸದ್ದು ಮಾಡ್ತಿದೆ.
'ಎಕ್ಕ' 4ನೇ ದಿನದ ಗಳಿಕೆ
ಸಿನಿಮಾ ಕಲೆಕ್ಷನ್ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ. sacnilk.com ವೆಬ್‌ಸೈಟ್ ವರದಿ ಪ್ರಕಾರ 4ನೇ ದಿನ ಅಂದರೆ ಸೋಮವಾರ ಸಿನಿಮಾ 80 ಲಕ್ಷದಿಂದ 1 ಕೋಟಿ ರೂ. ವರೆಗೆ ಕಲೆಕ್ಷನ್ ಮಾಡಿರುವ ಅಂದಾಜಿದೆ. ಮೊದಲ 3 ದಿನಗಳಲ್ಲಿ ವಿಶ್ವದಾದ್ಯಂತ 6.42 ಕೋಟಿ ರೂ. ಗ್ರಾಸ್ ಕಲೆಕ್ಷನ್ ಜೊತೆಗೆ 5.66 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿರುವುದಾಗಿ ವರದಿಯಾಗಿತ್ತು. ಒಟ್ಟಾರೆ 4 ದಿನಕ್ಕೆ ಸಿನಿಮಾ ಕಲೆಕ್ಷನ್ 7 ಕೋಟಿ ರೂ. ಗಡಿ ದಾಟಿದೆ.

ಬಿಎಂಎಸ್ ಟಿಕೆಟ್ ಬುಕ್ಕಿಂಗ್
ಇತ್ತೀಚಿನ ದಿನಗಳಲ್ಲಿ ಬುಕ್‌ಮೈ ಶೋ ಸಿನಿಮಾ ಟಿಕೆಟ್ ಅಂಕಿ-ಅಂಶ ನೀಡುತ್ತಿದೆ. ಪ್ರೇಕ್ಷಕರು ಪ್ರತಿದಿನ, ಪ್ರತಿಗಂಟೆಗೆ ಎಷ್ಟು ಟಿಕೆಟ್ ಬುಕ್ ಮಾಡುತ್ತಾರೆ ಎನ್ನುವ ಲೆಕ್ಕ ಸಿಗುತ್ತದೆ. 'ಎಕ್ಕ' ಸಿನಿಮಾ ಬಿಡುಗಡೆಗೂ 17 ಸಾವಿರ ಟಿಕೆಟ್ ಬುಕ್ ಆಗಿತ್ತು. ಶುಕ್ರವಾರ 35 ಸಾವಿರ, ಶನಿವಾರ 41 ಸಾವಿರ ಹಾಗೂ ಭಾನುವಾರ 42 ಸಾವಿರ ಟಿಕೆಟ್ ಬರೀ ಬುಕ್‌ಮೈ ಶೋನಲ್ಲಿ ಬುಕ್ ಆಗಿತ್ತು. ಇನ್ನು ನಿನ್ನೆ (ಸೋಮವಾರ) 10 ಸಾವಿರಕ್ಕೂ ಹೆಚ್ಚು ಟಿಕೆಟ್ ಬುಕ್ ಆಗಿ 'ಎಕ್ಕ' ದರ್ಬಾರ್ ಹೇಗಿದೆ ಎನ್ನುವುದಕ್ಕೆ ಸಾಕ್ಷಿ ಒದಗಿಸಿತ್ತು.
'ಎಕ್ಕ' ಓಟಿಟಿ ರಿಲೀಸ್
ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿರುವ 'ಎಕ್ಕ' ಸಿನಿಮಾ ಓಟಿಟಿಗೆ ಬರುವುದು ಯಾವಾಗ ಎನ್ನುವ ಕುತೂಹಲ ಕೆಲವರಲ್ಲಿದೆ. ಈ ಬಗ್ಗೆ ಕೂಡ ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ. ಜೀ ಸಂಸ್ಥೆಗೆ ಚಿತ್ರದ ಓಟಿಟಿ ಹಾಗೂ ಸ್ಯಾಟಲೈಟ್ ರೈಟ್ಸ್ ಮಾರಾಟವಾಗಿದೆ ಎನ್ನುವ ಊಹಾಪೋಹ ಶುರುವಾಗಿದೆ. ಏಕಕಾಲಕ್ಕೆ ಜೀ-5 ಓಟಿಟಿ ವೇದಿಕೆ ಹಾಗೂ ಜೀ ಕನ್ನಡ ವಾಹಿನಿಯಲ್ಲಿ ಸಿನಿಮಾ ಪ್ರಸಾರ ಆರಂಭಿಸುವ ಸಾಧ್ಯತೆಯಿದೆ. ತಿಂಗಳ ಬಳಿಕ ಅಂದರೆ ಆಗಸ್ಟ್ ಕೊನೆವಾರದಲ್ಲಿ ಸಿನಿಮಾ ಓಟಿಟಿಗೆ ಬರಬಹುದು.
ಗೆದ್ದ ಯುವ
ರಾಘಣ್ಣನ ಕಿರಿಮಗ 'ಯುವ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. ಮೊದಲ ಪ್ರಯತ್ನದಲ್ಲೇ ಒಳ್ಳೆ ಪರ್ಫಾರ್ಮನ್ಸ್ ಪ್ರದರ್ಶಿಸಿದ್ದರು. ನಟನೆಯಲ್ಲಿ ಮತ್ತಷ್ಟು ಪಳಗಬೇಕು ಎನ್ನುವ ಸಲಹೆ ಕೂಡ ಪ್ರೇಕ್ಷಕರಿಂದ ಬಂದಿತ್ತು. 2ನೇ ಚಿತ್ರದಲ್ಲಿ ಅದನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಮುಂದೆ ಕನ್ನಡ ಚಿತ್ರರಂಗದಲ್ಲಿ ಯುವರಾಜ್‌ಕುಮಾರ್ ದೊಡ್ಡ ಹೀರೊ ಆಗುತ್ತಾರೆ ಎಂದು ಅಭಿಮಾನಿಗಳು ಭವಿಷ್ಯ ನುಡಿಯುತ್ತಿದ್ದಾರೆ.


Click it and Unblock the Notifications











