Baahubali The Epic Box Office; ಬೆಳ್ಳಿತೆರೆಯಲ್ಲಿ ಮತ್ತೊಮ್ಮೆ ಬಾಹುಬಲಿ ಅಬ್ಬರ, ರೀ ರಿಲೀಸ್ ದಾಖಲೆಗಳೆಲ್ಲಾ ಉಡೀಸ್
ಕೇವಲ ಕನ್ನಡ ಚಿತ್ರರಂಗ ಮಾತ್ರ ಅಲ್ಲ ಬೇರೆ ಎಲ್ಲಾ ಭಾಷೆಯಲ್ಲಿ ಕೂಡ ಆಯಾ ಚಿತ್ರರಂಗದ ಅಳಿವು-ಉಳಿವು ಅಲ್ಲಿನ ಸೂಪರ್ ಸ್ಟಾರ್ಸ್ ಕೈಯಲ್ಲಿದೆ. ಆದರೆ.. ಸದ್ಯ ಎಲ್ಲಾ ಭಾಷೆಯಲ್ಲಿ ಎಲ್ಲರನ್ನು ಪ್ಯಾನ್ ಇಂಡಿಯಾ ಜ್ವರ ಆವರಿಸಿಕೊಂಡಿದೆ. ವರ್ಷಗಳು ಉರುಳಿದರೂ ಕೂಡ ಇವರ ಒಂದು ಸಿನಿಮಾ ಬಿಡುಗಡೆಯಾಗುವುದಿಲ್ಲ. ಇನ್ನೂ ಹೊಸಬರದ್ದು ಕಥೆ ಅಲ್ಲ ಬದಲಿಗೆ ವ್ಯಥೆ.
ಪ್ರೇಕ್ಷಕರ ಕೊರತೆಯಿಂದ ಹೊಸಬರ ಮುಖದಲ್ಲಿನ ಕಾಂತಿ ಕಡಿಮೆಯಾಗುತ್ತಿದೆ ಹೊರತು ಯಾವುದೇ ಕ್ರಾಂತಿ ಆಗ್ತಿಲ್ಲ. ಅಲ್ಲೊಂದು.. ಇಲ್ಲೊಂದು.. ಸಿನಿಮಾಗಳನ್ನು ಹೊರತು ಪಡಿಸಿದರೆ ಎಷ್ಟೇ ತಿಪ್ಪರಲಾಗ ಹಾಕಿದರೂ ಚಿತ್ರಗಳನ್ನ ನೋಡಲು ಮೊದಲಿನಂತೆ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿಲ್ಲ.

ಹೀಗಾಗಿಯೇ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯಲು ನಾನಾ ಕಸರತ್ತುಗಳನ್ನು ಎಲ್ಲೆಡೆ ಮಾಡಲಾಗುತ್ತಿದೆ. ಕೇವಲ ಕನ್ನಡ ಮಾತ್ರವಲ್ಲ ಬೇರೆ ಬೇರೆ ಭಾಷೆಯಲ್ಲಿ ಕೂಡ ಮರು ಬಿಡುಗಡೆ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮದಡಿಯಲ್ಲಿ ರೀ ರಿಲೀಸ್ ಆದ ''ಬಾಹುಬಲಿ'' ಸದ್ಯ ಎಲ್ಲ ದಾಖಲೆಗಳನ್ನು ಮುರಿದಿದೆ.
ಹೌದು, ಅಸಲಿಗೆ ''ಬಾಹುಬಲಿ ದಿ ಬಿಗಿನಿಂಗ್'' ಹಾಗೂ ''ಬಾಹುಬಲಿ ದಿ ಕನ್‌ಕ್ಲೂಷನ್'' ಚಿತ್ರಗಳನ್ನು ಒಟ್ಟಿಗೆ ಸೇರಿಸಿ ಎಡಿಟ್ ಮಾಡಿ ''ಬಾಹುಬಲಿ ದಿ ಎಪಿಕ್'' ಹೆಸರಿನಲ್ಲಿ ಮರು ಬಿಡುಗಡೆ ಮಾಡಲಾಗಿದೆ. ವಿಶ್ವದಾದ್ಯಂತ ಕಳೆದ ವಾರ ( ಅಕ್ಟೋಬರ್ 31 ) ಬಿಡುಗಡೆಯಾಗಿದೆ.
ಹೀಗೆ ಮರು ಬಿಡುಗಡೆಗೊಂಡ ಈ ಚಿತ್ರ ಸದ್ಯ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಬೇಟೆಯಾಡುತ್ತಿದೆ. ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಕೇವಲ ಭಾರತದಲ್ಲಿಯೇ ಈ 5 ದಿನದಲ್ಲಿ ₹ 27.60 ಕೋಟಿಯನ್ನು ಕೊಳ್ಳೆ ಹೊಡೆದಿದೆ.
ಇನ್ನು www.koimoi.com ಪ್ರಕಾರ ''ಬಾಹುಬಲಿ'' ಈ 5 ದಿನದಲ್ಲಿ ವಿಶ್ವದೆಲ್ಲೆಡೆ ₹41.95ಕೋಟಿ ಗಳಿಸಿದೆ. ₹50 ಕೋಟಿಯತ್ತ ಮುನ್ನುಗ್ಗುತ್ತಿದೆ. ಆ ಪ್ರಕಾರ ಸದ್ಯ ''ಏಕ್ ದಿವಾನೆ ಕಿ ದೀವಾನಿಯತ್'' ಚಿತ್ರ ಗೆದ್ದಿರುವ ಸಂಭ್ರಮದಲ್ಲಿರುವ ,ಬಾಲಿವುಡ್‌ನಲ್ಲಿ ಹೊಸ ಸೂಪರ್ ಸ್ಟಾರ್ ಆಗಿ ಹೊರ ಹೊಮ್ಮಿರುವ ಹರ್ಷವರ್ಧನ್ ರಾಣೆ ಅಭಿನಯದ "ಸನಮ್ ತೇರಿ ಕಸಮ್" ಚಿತ್ರದ ರೀ ರಿಲೀಸ್ ಗಳಿಕೆಯನ್ನು ಹಿಂದಿಕ್ಕಿದೆ. ಇಷ್ಟೇ ಅಲ್ಲ ಸೋಹಮ್ ಶಾ ಅಭಿನಯದ ''ತುಂಬಾಡ್'' ಚಿತ್ರಕ್ಕೂ ಕೂಡ ''ಬಾಹುಬಲಿ- ದಿ ಎಪಿಕ್ '' ಸೆಡ್ಡು ಹೊಡೆದಿದೆ.
Koi Moi ವಿಶ್ವದೆಲ್ಲೆಡೆ ಅತಿ ಹೆಚ್ಚು ಗಳಿಕೆ ಮಾಡಿದ ರೀ ರಿಲೀಸ್ ಸಿನಿಮಾಗಳು
ಬಾಹುಬಲಿ : ದಿ ಎಪಿಕ್ - ₹41.95 ಕೋಟಿ
ಸನಮ್ ತೇರಿ ಕಸಮ್ : ₹41.94 ಕೋಟಿ
ತುಂಬಾಡ್: ₹38 ಕೋಟಿ
ಬಾಹುಬಲಿ - ದಿ ಎಪಿಕ್ ಚಿತ್ರದ 4 ದಿನದ ವರ್ಲ್ಡ್ ವೈಡ್ ಕಲೆಕ್ಷನ್
ಭಾರತದಲ್ಲಿ ನೆಟ್ ಗಳಿಕೆ : ₹26.10 ಕೋಟಿ
ಭಾರತದಲ್ಲಿ ಗ್ರಾಸ್ ಗಳಿಕೆ : ₹30.79 ಕೋಟಿ
ವಿದೇಶದಿಂದ ಬಂದ ಮೊತ್ತ : ₹11.15 ಕೋಟಿ
ವಿಶ್ವಾದ್ಯಂತ ಒಟ್ಟು ಗಳಿಕೆ : ₹41.95 ಕೋಟಿ
ಹೀಗೆ ಸದ್ಯ ₹41.95 ಕೋಟಿಯನ್ನು ಬಾಕ್ಸಾಫೀಸ್‌ನಲ್ಲಿ ''ಬಾಹುಬಲಿ-ದಿ ಎಪಿಕ್'' ಚಿತ್ರ ಸದ್ಯ ದೋಚಿದ್ದು ದೊಡ್ಡ ಚಿತ್ರಗಳು ಸದ್ಯ ಬಿಡುಗಡೆಯಾಗದ ಹಿನ್ನೆಲೆ ಮುಂಬರುವ ದಿನಗಳಲ್ಲಿ ಈ ಚಿತ್ರದ ಗಳಿಕೆ ಹೆಚ್ಚಾಗುವ ನಿರೀಕ್ಷೆ ಇದೆ. ಒಟ್ಟಾರೆ ಈ ಚಿತ್ರ ಎಷ್ಟು ಗಳಿಸುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











