ಕೇಸರಿ 2 ಬಂದರೂ ಕೂಡ ಕದಲದ ಜಾಟ್, ಅಕ್ಷಯ್ ಕುಮಾರ್‌ಗೆ ಸೆಡ್ಡು ಹೊಡೆದ ಸನ್ನಿ ಡಿಯೋಲ್..!
ಸನ್ನಿ ಡಿಯೋಲ್ ಯಾರಿಗೆ ತಾನೇ ಗೊತ್ತಿಲ್ಲ. ಒಂದ್ಕಾಲದ ಸೂಪರ್ ಸ್ಟಾರ್. 90ರ ದಶಕದಲ್ಲಿ ಒಂದಾದ ಮೇಲೊಂದರಂತೆ ಗೆಲುವುನ್ನ ಕಂಡ ಸನ್ನಿ ಡಿಯೋಲ್ ಅವರನ್ನು ಮೊನ್ನೆ ಮೊನ್ನೆವರೆಗೆ ಅನೇಕರು ಮರೆತೇ ಹೋಗಿದ್ದರು. ಬಾಲಿವುಡ್‌ನವರಿಗೆನೇ ಸನ್ನಿ ಡಿಯೋಲ್ ನೆನಪಿರಲಿಲ್ಲ.ಧಮೇಂದ್ರ ಮಗನಾದರೂ ..ಒಂದ್ಕಾಲದಲ್ಲಿ ಚಿನ್ನದ ಗಣಿ ತೆಗೆದಿದ್ದರೂ..ಹಿಂದಿ ಚಿತ್ರರಂಗ ಸನ್ನಿ ಡಿಯೋಲ್ ಅವರನ್ನ ನಂಬಲಿಲ್ಲ. ಅವಕಾಶಗಳನ್ನ ಕೊಡಲಿಲ್ಲ.
ಇಂಥಾ ಸನ್ನಿ ಡಿಯೋಲ್ ಈಗ ಮೈಕೊಡವಿ ಎದ್ದು ನಿಂತಿದ್ದಾರೆ. ಗದರ್ 2 ಚಿತ್ರದ ಅಪಾರ ಯಶಸ್ಸಿನ ನಂತರ ಮತ್ತೊಮ್ಮೆ ಬ್ಯುಸಿಯಾಗಿದ್ದಾರೆ. ಇನ್ನು, ಸನ್ನಿ ಡಿಯೋಲ್ ಸ್ಟಾರ್ ಪವರ್ ಮೇಲೆ ಕೇವಲ ಬಾಲಿವುಡ್‌ನವರಿಗೆ ಮಾತ್ರ ಈಗ ನಂಬಿಕೆ ಬಂದಿಲ್ಲ. ಬದಲಿಗೆ ಸೌತ್‌ನಲ್ಲಿ ಕೂಡ ಅನೇಕರು ಸಮೂಹ ಸನ್ನಿಗೆ ಒಳಗಾಗಿದ್ದಾರೆ.

ಇದಕ್ಕೆ ಕೈಗನ್ನಡಿ ಎಂಬಂತೆ ಈಗಾಗಲೇ ದಕ್ಷಿಣದ ನಿರ್ದೇಶಕನ ಉಸ್ತುವಾರಿಯಲ್ಲಿ ಜಾಟ್ ಚಿತ್ರ ತೆರೆಗೆ ಬಂದಿದೆ. ಬಾಕ್ಸಾಫೀಸ್‌ನ ಕೊಳ್ಳೆ ಹೊಡೆಯುತ್ತಿದೆ. ವಿಶೇಷ ಅಂದರೆ ಹಿಂದೊಂದು ಕಾಲದಲ್ಲಿ ಅಕ್ಷಯ್ ಕುಮಾರ್ ಚಿತ್ರ ಬಂದರೆ ಸಾಕು, ಅನೇಕರು ಬೇರೆ ಸ್ಟಾರ್‌ಗಳನ್ನು ಮರೆಯುತ್ತಿದ್ದರು. ಅಕ್ಷಯ್ ಕುಮಾರ್ ಚಿತ್ರಗಳನ್ನು ಹೊತ್ತು ಮೆರೆಸುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಅಕ್ಷಯ್ ಕುಮಾರ್ ಎದುರು ಸನ್ನಿ ಡಿಯೋಲ್ ಸದ್ಯ ಗೆದ್ದು ಬೀಗುತ್ತಿದ್ದಾರೆ. ಅಕ್ಷಯ್ ಕುಮಾರ್ ಅವರನ್ನೇ ಬಾಕ್ಸಾಫೀಸ್‌ನಲ್ಲಿ ಹಿಂದಿಕ್ಕುತ್ತಿದ್ದಾರೆ.
ಹೌದು, ಸ್ಯಾಕ್ನಿಲ್ ವೆಬ್ ಸೈಟ್‌ನಲ್ಲಿ ಉಲ್ಲೇಖವಾದಂತೆ ಏಪ್ರಿಲ್ 18ರಂದು ತೆರೆಗೆ ಬಂದ ಕೇಸರಿ 2 ಈ 07 ದಿನದಲ್ಲಿ ₹ 46.1 ಕೋಟಿ ಹಣವನ್ನು ಗಳಿಸಿದೆ. ಆದರೆ, ಸನ್ನಿ ಡಿಯೋಲ್ ಅಭಿನಯದ ಜಾಟ್ ಒಂದು ವಾರದಲ್ಲಿ ಕೇಸರಿ 2 ಗಳಿಸಿದ ಈ ಹಣಕ್ಕಿಂತ ಹೆಚ್ಚಿನ ಹಣ ಗಳಿಸಿತ್ತು. ಏಪ್ರಿಲ್ ಹತ್ತರಂದು ತೆರೆಗೆ ಬಂದಿದ್ದ ಜಾಟ್ ಒಂದು ವಾರದಲ್ಲಿ ₹57.5 ಕೋಟಿ ಹಣವನ್ನು ಕೊಳ್ಳೆ ಹೊಡೆದಿತ್ತು.
07 ದಿನದ ಬಾಕ್ಸಾಫೀಸ್‌ನ ಈ ಲೆಕ್ಕಾಚಾರ ಸದ್ಯ ಬಾಲಿವುಡ್ ಪಂಡಿತರನ್ನೇ ಅಚ್ಚರಿಗೆ ದೂಡಿದೆ. ಯಾಕೆಂದರೆ ಕೆಲ ವರ್ಷಗಳ ಹಿಂದೆ ಸನ್ನಿ ಡಿಯೋಲ್ ಬಾಲಿವುಡ್ ಮೈದಾನದಲ್ಲಿಯೇ ಇರಲಿಲ್ಲ. ಬದಲಿಗೆ ರಿಟೈರ್ಡ್ ಹರ್ಟ್ ಆಗಿದ್ದರು. ಇತ್ತ ಅಕ್ಷಯ್ ಕುಮಾರ್ ಒಂದಾದ ಮೇಲೊಂದು ಚಿತ್ರಗಳನ್ನು ಮಾಡುತ್ತಿದ್ದರು. ಆದರೂ ಕೂಡ ಸನ್ನಿ ಡಿಯೋಲ್ ಬಾಕ್ಸಾಫೀಸ್‌ನಲ್ಲಿ ಅಕ್ಷಯ್ ಕುಮಾರ್‌ಗೆ ಸೆಡ್ಡು ಹೊಡೆದಿದ್ದಾರೆ.
ಹೀಗಾಗಿಯೇ ಆಶ್ಚರ್ಯ ಚಕಿತಗೊಂಡಿರುವ ಅನೇಕರು ಜಾಟ್ ಚಿತ್ರದ ಒಟ್ಟಾರೆ ಗಳಿಕೆಯನ್ನು ಕೇಸರಿ 2 ಪಾರು ಮಾಡುತ್ತಾ ಎಂದು ಕುತೂಹಲದಿಂದ ಕಾಯುತ್ತಿದ್ದಾರೆ. ಇನ್ನು ಕೆಲವರು ಈ ವಿಚಾರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಬೆಟ್ಟಿಂಗ್ ಕೂಡ ಕಟ್ಟುತ್ತಿದ್ದಾರೆ.
ಅಂದ್ಹಾಗೇ ಸದ್ಯ ಬಾಕ್ಸಾಫೀಸ್‌ನಲ್ಲಿ ಎರಡು ವಾರಗಳನ್ನು ಪೂರೈಸಿರುವ ಜಾಟ್,₹80 ಕೋಟಿಯನ್ನು ಗಳಿಸಿದೆ. ಬಾಕ್ಸಾಫೀಸ್ ಮೇಲೆ ಹದ್ದಿನ ಕಣ್ಣಿಡುವ ಸ್ಯಾಕ್ನಿಲ್ ವೆಬ್ ಸೈಟ್ ಪ್ರಕಾರ ಜಾಟ್ ಚಿತ್ರದ ಹದಿನೈದು ದಿನಗಳ ಗಳಿಕೆ ಈ ಕೆಳಗಿನಂತೆ ಇದೆ.
ಮೊದಲ ವಾರದ ಗಳಿಕೆ
ಮೊದಲ ದಿನ - { ಗುರುವಾರ } ₹ 9.5 ಕೋಟಿ
ಎರಡನೇ ದಿನ - { ಶುಕ್ರವಾರ } ₹ 7 ಕೋಟಿ
ಮೂರನೇ ದಿನ -{ ಶನಿವಾರ} ₹ 9.75 ಕೋಟಿ
ನಾಲ್ಕನೇ ದಿನ - { ಭಾನುವಾರ} ₹ 14 ಕೋಟಿ
ಐದನೇ ದಿನ - {ಸೋಮವಾರ } ₹ 7.25 ಕೋಟಿ
ಆರನೇ ದಿನ - {ಮಂಗಳವಾರ } ₹ 6 ಕೋಟಿ
ಏಳನೇ ದಿನ - { ಬುಧವಾರ } ₹ 4 ಕೋಟಿ
ಎಂಟನೇ ದಿ - { ಗುರುವಾರ } ₹ 4.15 ಕೋಟಿ
ಒಟ್ಟು ಗಳಿಕೆ - ₹ 61.65 ಕೋಟಿ
ಹೀಗೆ ಮೊದಲ ವಾರ ₹ 61.65 ಕೋಟಿ ಹಣ ಗಳಿಸಿದ ಜಾಟ್ ಚಿತ್ರಕ್ಕೆ ಎರಡನೇ ವಾರ ಕೇಸರಿ 2 ಸ್ಫರ್ಧೆ ಒಡ್ಡಿತ್ತು. ಕೇಸರಿ ಅಲೆಯ ಮುಂದೆ ಜಾಟ್ ಚಿತ್ರದ ಗಳಿಕೆ ಕುಸಿಯುತ್ತೆ ಎನ್ನುವ ಭವಿಷ್ಯವಾಣಿ ಕೂಡ ಬಾಲಿವುಡ್‌ನಲ್ಲಿ ಕೇಳಿ ಬಂದಿತ್ತು. ಆದರೆ ಜಾಟ್ ಚಿತ್ರ ಕೇಸರಿ 2 ಚಿತ್ರದ ಮುಂದೆ ಕೂಡ ಕದಲಲಿಲ್ಲ.
ಜಾಟ್ ಚಿತ್ರದ ಎರಡನೇ ವಾರದ ಗಳಿಕೆ
ಒಂಬತ್ತನೇ ದಿನ - { ಶುಕ್ರವಾರ } ₹ 4 ಕೋಟಿ
ಹತ್ತನೇ ದಿನ - { ಶನಿವಾರ } ₹3.75 ಕೋಟಿ
ಹನ್ನೊಂದನೇ ದಿನ - { ಭಾನುವಾರ } ₹5 ಕೋಟಿ
ಹನ್ನೆರಡನೇ ದಿನ - {ಸೋಮವಾರ} ₹ 1.85 ಕೋಟಿ
ಹದಿಮೂರನೇ ದಿನ - {ಮಂಗಳವಾರ} ₹ 1.9 ಕೋಟಿ
ಹದಿನಾಲ್ಕನೇ ದಿನ - {ಬುಧುವಾರ} ₹ 1.35 ಕೋಟಿ
ಹದಿನೈದನೇ ದಿನ - { ಗುರುವಾರ } ₹1.25 ಕೋಟಿ
ಒಟ್ಟು ಗಳಿಕೆ - ₹ 19.1 ಕೋಟಿ
ಹೀಗೆ ಮೊದಲ ವಾರ ₹ 61.65 ಕೋಟಿಯನ್ನು ಗಳಿಸಿದ ಜಾಟ್ ಎರಡನೇ ವಾರ ₹ 19.1 ಕೋಟಿ ಹಣವನ್ನು ಬಾಕ್ಸಾಫೀಸ್‌ನಲ್ಲಿ ಗಳಿಸಿದೆ. ಈ ಮೂಲಕ ಹದಿನೈದು ದಿನದಲ್ಲಿ ಚಿತ್ರ ₹ 81.17 ಕೋಟಿ ಹಣವನ್ನು ಗಳಿಸಿದೆ.
ಇನ್ನು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ ಜಾಟ್ ಚಿತ್ರಕ್ಕೆ ದೆಹಲಿಯಲ್ಲಿ ಅತ್ಯುತ್ತಮ ಪ್ರತಿಕ್ರಿಯೆ ಸಿಕ್ತಿದೆ. ಇದಕ್ಕೆ ಪೂರಕವಾಗಿ ಸ್ಯಾಕ್ನಿಲ್ ವೆಬ್ ಸೈಟ್ ಕೂಡ ಹದಿನೈದು ದಿನ ಕಳೆದರು ಕೂಡ ದೆಹಲಿಯಲ್ಲಿ ಜಾಟ್ ಚಿತ್ರಕ್ಕೆ 395 ಶೋಗಳನ್ನು ನೀಡಲಾಗಿದೆ ಎಂದು ವರದಿ ಮಾಡಿದೆ.
ದೆಹಲಿ ಹೊರತು ಪಡಿಸಿದರೆ ಅಹಮದಾಬಾದ್, ಸೂರತ್, ಜೈಪುರ್ ಮತ್ತು ಕೋಲ್ಕತ್ತಾದಲ್ಲಿ ಪ್ರೇಕ್ಷಕರು ಚಿತ್ರ ನೋಡಲು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದ್ದಾರೆ. ಬೆಂಗಳೂರಿನಲ್ಲಿ ಕೂಡ ಜಾಟ್ ಚಿತ್ರಕ್ಕೆ 21 ಶೋಗಳನ್ನು ನೀಡಲಾಗಿದ್ದು ಮುಂಬೈನಲ್ಲಿ 87 ಶೋಗಳನ್ನು ನೀಡಲಾಗಿದೆ.
ಅಂದ್ಹಾಗೇ ಎರಡು ವರ್ಷದ ನಂತರ ತೆರೆಗೆ ಬಂದಿರುವ ಸನ್ನಿ ಡಿಯೋಲ್ ಅಭಿನಯದ ಚಿತ್ರ ಇದು. ಈ ಹಿಂದೆ ತೆರೆಗೆ ಬಂದ ಗದರ್ 2 ಬಾಕ್ಸಾಫೀಸ್‌ನಲ್ಲಿ ಹಣದ ಹೊಳೆ ಹರಿಸಿತ್ತು. ಬಾಲಿವುಡ್ ಹಂಗಾಮ ವರದಿಯ ಪ್ರಕಾರ ₹525.45 ಕೋಟಿ ಹಣ ಗಳಿಸಿತ್ತು. ಜಾಟ್ ಈ ದಾಖಲೆಯನ್ನು ಮುರಿಯುವುದು ಅಸಾಧ್ಯವಾದರು ಕೂಡ ಬಾಲಿವುಡ್ ಪಂಡಿತರಿಗೆ ಜಾಟ್ ನೂರು ಕೋಟಿಯ ಗಡಿಯನ್ನು ತಲುಪುವ ವಿಶ್ವಾಸ ಇದೆ.
ಹಾಗೊಂದು ವೇಳೆ ಜಾಟ್ 100 ಕೋಟಿಯ ಗಡಿಯನ್ನು ತಲುಪಿದ್ದೇ ಆದರೆ ಸನ್ನಿ ಡಿಯೋಲ್ ಮಾರುಕಟ್ಟೆ ಮತ್ತೊಮ್ಮೆ ಕುದುರಿದಂತೆ ಆಗಲಿದೆ. ಇನ್ನು ಜಾಟ್ ಚಿತ್ರದ ಈ ಗಳಿಕೆಯಿಂದ ಫುಲ್ ಖುಷಿಯಾಗಿರುವ ಚಿತ್ರತಂಡ ಈಗಾಗಲೇ ಜಾಟ್ 2 ಚಿತ್ರವನ್ನು ಘೋಷಿಸಿದ್ದು ಶೀಘ್ರದಲ್ಲಿಯೇ ಈ ಚಿತ್ರದ ಚಿತ್ರೀಕರಣ ಶುರುವಾಗುವ ಸಾಧ್ಯತೆ ಇದೆ.
Disclaimer ; ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











