4 ತಿಂಗಳಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಕನ್ನಡ ಚಿತ್ರಗಳ ಪಟ್ಟಿ

ನೋಡ್ತಾ ನೋಡ್ತಾ ವರ್ಷದ 4 ತಿಂಗಳು ಕಳೆದು ಹೋಗಿದೆ. ಈ ವರ್ಷದಲ್ಲಿ ಕನ್ನಡದಲ್ಲಿ ಯಾವುದೇ ದೊಡ್ಡ ಸಿನಿಮಾ ತೆರೆಗೆ ಬರಲಿಲ್ಲ. 'ಕೆಡಿ' ಸಿನಿಮಾ ಕೂಡ ನಿರೀಕ್ಷಿತ ಮಟ್ಟದಲ್ಲಿ ಗೆಲ್ಲಲಿಲ್ಲ. 11 ದಿನಕ್ಕೆ ಸಿನಿಮಾ 20 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಹೇಳಲಾಗ್ತಿದೆ. ಆ ಮೂಲಕ ಈ ವರ್ಷ ತೆರೆಗೆ ಬಂದ ಕನ್ನಡ ಸಿನಿಮಾಗಳಲ್ಲಿ ಅತಿಹೆಚ್ಚು ಗಳಿಕೆ ಕಂಡ ಸಿನಿಮಾ ಎನಿಸಿಕೊಂಡಿದೆ.

ಜೋಗಿ ಪ್ರೇಮ್ ಹಾಗೂ ಧ್ರುವ ಸರ್ಜಾ ಜೋಡಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತದೆ ಎಂದುಕೊಂಡಿದ್ದ ನಿರೀಕ್ಷೆ ಸುಳ್ಳಾಗಿದೆ. ಕನ್ನಡದಲ್ಲಿ ಮಾತ್ರ ಸಿನಿಮಾ ತೆರೆಕಂಡಿದೆ. ಮುಂದಿನ ದಿನಗಳಲ್ಲಿ ಬೇರೆ ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಮಾಡ್ತೀವಿ ಎಂದು ಪ್ರೇಮ್ ಹೇಳಿದ್ದಾರೆ. ಆದರೆ ಅಂತಹ ಸುಳಿವು ಸಿಕ್ತಿಲ್ಲ. ಈಗಾಗಲೇ ರಾಜ್ಯಾದ್ಯಂತ ಚಿತ್ರತಂಡ ವಿಜಯಯಾತ್ರೆ ಮಾಡಿ ಬಂದಿದೆ. ಅಬ್ಬಬ್ಬಾ ಎನ್ನುವ ಕಲೆಕ್ಷನ್ ಮಾಡದೇ ಇದ್ರು ಒಂದು ಹಂತಕ್ಕೆ ಸಿನಿಮಾ ಸದ್ದು ಮಾಡಿದೆ. ಆದರೆ ಹಾಕಿರುವ ಬಂಡವಾಳಕ್ಕೆ ಹೋಲಿಸಿದರೆ ಇದು ಏನೇನೂ ಅಲ್ಲ.

From KD the Devil To cult Top 5 Highest Grossing kannada films in Last 4 months

ಈ ವರ್ಷದ ಮೊದಲ ಹಿಟ್ ಎನಿಸಿಕೊಂಡಿದ್ದು 'ಲವ್ ಮಾಕ್ಟೇಲ್- 3'. ಕಮ್ಮಿ ಬಜೆಟ್‌ನಲ್ಲಿ ಕಟ್ಟಿಕೊಟ್ಟಿದ್ದ ಸಿನಿಮಾ ಪ್ರೇಕ್ಷಕರ ಮನಗೆಲ್ಲುವಲ್ಲಿ ಸಕ್ಸಸ್ ಕಂಡಿತ್ತು. ಯಾವುದೇ ಅಬ್ಬರ ಇಲ್ಲದೇ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆದಿತ್ತು. ಯಶಸ್ವಿಯಾಗಿ 50 ದಿನ ಪೂರೈಸಿತ್ತು. ಮತ್ತೊಮ್ಮೆ ಕೃಷ್ಣ ನಿರ್ದೇಶಕ, ನಿರ್ಮಾಪಕ, ನಟನಾಗಿ ಸಕ್ಸಸ್ ಕಂಡರು. ಸದ್ಯ ಸಿನಿಮಾ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ.

'ಕೆಡಿ' ಕಲೆಕ್ಷನ್

11 ದಿನಕ್ಕೆ 'ಕೆಡಿ' ಸಿನಿಮಾ 20.46 ಕೋಟಿ ಗ್ರಾಸ್ ಕಲೆಕಜ್ಷನ್ ಮಾಡಿರುವುದಾಗಿ sacnilk ವರದಿ ಮಾಡಿದೆ. 17.64 ಕೋಟಿ ರೂ. ನೆಟ್ ಕಲೆಕ್ಷನ್ ಆಗಿದೆ. ಕರ್ನಾಟಕದಲ್ಲಿ ಮಾತ್ರ ಸಿನಿಮಾ ಬಿಡುಗಡೆ ಆಗಿತ್ತು. ವೀಕೆಂಡ್‌ನಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಮಾಸ್ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ಒದಗಿಸುತ್ತಿದೆ.

ಲವ್ ಮಾಕ್ಟೇಲ್-3

ಡಾರ್ಲಿಂಗ್ ಕೃಷ್ಣ ನಟನೆಯ 'ಲವ್ ಮಾಕ್ಟೇಲ್-3' ಸಿನಿಮಾ 53 ದಿನಕ್ಕೆ 14.91 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿರುವುದಾಗಿ sacnilk ಮಾಹಿತಿ ನೀಡಿದೆ. ಐಪಿಎಲ್ ಆರ್ಭಟದ ನಡುವೆಯೂ ಈ ಎರಡೂ ಸಿನಿಮಾಗಳು ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುತ್ತಿರುವುದು ವಿಶೇಷ.

ಲ್ಯಾಂಡ್ ಲಾರ್ಡ್

ವರ್ಷದ ಆರಂಭದಲ್ಲೇ ಬಂದಿದ್ದ ದುನಿಯಾ ವಿಜಯ್ ನಟನೆಯ 'ಲ್ಯಾಂಡ್ ಲಾರ್ಡ್' ಸಿನಿಮಾ ಕೊಂಚ ಸದ್ದು ಮಾಡಿತ್ತು. ಕತೆ, ಕಲಾವಿದರ ಅಭಿನಯ, ಚಿತ್ರತಂಡದ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ಪ್ರೇಕ್ಷಕರಿಂದ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿರಲಿಲ್ಲ. ಅಂತಿಮವಾಗಿ ಸಿನಿಮಾ 7 ಕೋಟಿ ರೂ. ಕಲೆಕ್ಷನ್ ಮಾಡಿದ್ದಾಗಿ ಹೇಳಲಾಗಿತ್ತು. ದುನಿಯಾ ವಿಜಯ್ ಜೊತೆ ರಾಜ್. ಬಿ ಶೆಟ್ಟಿ, ರಚಿತಾ ರಾಮ್, ಉಮಾಶ್ರೀ ಸೇರಿದಂತೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದರು. ಸರ್ಕಾರ ತೆರೆಗೆ ವಿನಾಯ್ತಿ ಕೂಡ ಕೊಟ್ಟಿತ್ತು.

ರಕ್ಕಸಪುರದೋಳ್

ರಾಜ್‌. ಬಿ ಶೆಟ್ಟಿ ನಟನೆಯ 'ರಕ್ಕಸಪುರದೋಳ್' ಸಿನಿಮಾ ಕೂಡ ಪ್ರೇಕ್ಷಕರ ಮನಗೆದ್ದಿತ್ತು. ಕ್ರೈಂ ಥ್ರಿಲ್ಲರ್ ಸಿನಿಮಾ ಪಾಸಿಟಿವ್ ರೆಸ್ಪಾನ್ಸ್ ಪಡೆದುಕೊಂಡು ಗಮನ ಸೆಳೆದಿತ್ತು. ಅಂದಾಜು 6 ಕೋಟಿ ರೂ. ಕಲೆಕ್ಷನ್ ಮಾಡಿದ್ದಾಗಿ ಹೇಳಲಾಗಿತ್ತು.

ಕಲ್ಟ್

ಝೈದ್ ಖಾನ್ ನಟನೆಯ 'ಕಲ್ಟ್' ಸಿನಿಮಾ 4 ಕೋಟಿ ರೂ. ಕಲೆಕ್ಷನ್ ಮಾಡಿದ್ದಾಗಿ ಹೇಳಲಾಗಿತ್ತು. ಅನಿಲ್ ಕುಮಾರ್ ನಿರ್ದೇಶನದ ಚಿತ್ರದಲ್ಲಿ ಮಲೈಕಾ ವಸುಪಾಲ್ ಹಾಗೂ ರಚಿತಾ ರಾಮ್ ನಾಯಕಿಯರಾಗಿ ನಟಿಸಿದ್ದರು. ಜನವರಿ 23ರಂದು ಸಿನಿಮಾ ತೆರೆಗೆ ಬಂದಿತ್ತು. ಸಿಎಂ ಸಿದ್ದರಾಮಯ್ಯ ಕೂಡ ಸಿನಿಮಾ ನೋಡಿ ತಂಡಕ್ಕೆ ಶುಭ ಕೋರಿದ್ದರು.

Read more about: kd vijay raj b shetty
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X