ದಕ್ಷಿಣದಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಮಹಿಳಾ ಪ್ರಧಾನ ಚಿತ್ರಗಳು; ಲೆಕ್ಕಾಚಾರ ಬದಲಿಸಿದ ಸಮಂತಾ

ಮಹಿಳಾ ಪ್ರಧಾನ ಸಿನಿಮಾಗಳನ್ನು ಮಾಡಿ ಗೆಲ್ಲುವುದು ಅಷ್ಟು ಸುಲಭವಲ್ಲ. ಸ್ಟಾರ್ ನಟರಿಗೆ ಇರುವ ಅಭಿಮಾನಿಗಳ ಬಲ ನಟಿಯರಿಗೆ ಇರುವುದಿಲ್ಲ. ಇದ್ದರೂ ಸಂಖ್ಯೆ ಕಮ್ಮಿ ಎನ್ನಬಹುದು. ಇನ್‌ಸ್ಟಾಗ್ರಾಮ್‌ನಲ್ಲಿ 20 ಮಿಲಿಯನ್ ಫಾಲೋವರ್ಸ್ ಇದ್ರು, ಅಷ್ಟು ಜನ ಟಿಕೆಟ್ ತಗೊಂಡು ನಮ್ಮ ಸಿನಿಮಾ ನೋಡ್ತಾರಾ? ಎಂದು ಸ್ಟಾರ್ ನಟಿಯರು ಆಗಾಗ್ಗೆ ಪ್ರಶ್ನೆ ಮಾಡುತ್ತಾರೆ. ಅದೇ ರಿಯಾಲಿಟಿ.

ಬಾಲಿವುಡ್‌ನಲ್ಲಿ ಮಹಿಳಾ ಪ್ರಧಾನ ಸಿನಿಮಾಗಳು ಆಗೊಮ್ಮೆ ಈಗೊಮ್ಮೆ ಸದ್ದು ಮಾಡುತ್ತವೆ. ದಕ್ಷಿಣದ 4 ಭಾಷೆಗಳಲ್ಲಿ ಇದು ಬಹಳ ಅಪರೂಪ. ಸದ್ಯ 'ಮಾ ಇಂಟಿ ಬಂಗಾರಂ' ಸಿನಿಮಾ ಮೂಲಕ ಸಮಂತಾ ದರ್ಬಾರ್ ನಡೆಸುತ್ತಿದ್ದಾರೆ. ನೋಡ ನೋಡುತ್ತಲೇ ಸಿನಿಮಾ 100 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಅದರ ಬೆನ್ನಲ್ಲೇ ಓಟಿಟಿಗೂ ಬರ್ತಿದೆ. ಅದನ್ನು ಪಕ್ಕಕ್ಕಿಟ್ರೆ ಸಮಂತಾಗೆ ದೊಡ್ಡ ಬ್ರೇಕ್ ಸಿಕ್ಕಿದೆ. ಇತ್ತೀಚಿನ ವರ್ಷಗಳಲ್ಲಿ ವೈಯಕ್ತಿಕ ಹಾಗೂ ವೃತ್ತಿ ಜೀವನದಲ್ಲಿ ಸ್ಯಾಮ್ ಸಾಕಷ್ಟು ಸಮಸ್ಯೆ ಎದುರಿಸಿದ್ದರು. ಇದೊಂದು ಗೆಲುವು ಆಕೆಗೆ ಮತ್ತೆ ಪುನರ್ಜನ್ಮ ಕೊಟ್ಟಂತೆ ಆಗಿದೆ.

From Lokha to Maa Inti Bangaarami South Indian top 5 Highest-Grossing Female-Led Films

ದಕ್ಷಿಣದಲ್ಲಿ 100 ಕೋಟಿ ರೂ. ಕಲೆಕ್ಷನ್ ಮಾಡಿದ 2ನೇ ಮಹಿಳಾ ಪ್ರಧಾನ ಸಿನಿಮಾ 'ಮಾ ಇಂಟಿ ಬಂಗಾರಂ' ಎನಿಸಿಕೊಂಡಿದೆ. ಇದಕ್ಕೂ ಮುನ್ನ ಮಲಯಾಳಂ ಸಿನಿಮಾ 'ಲೋಕಾ' ಬಾಕ್ಸಾಫೀಸ್ ಕೊಳ್ಳೆ ಹೊಡೆದು ಹುಬ್ಬೇರಿಸಿತ್ತು. ನಾಯಕಿಯೇ ಲೀಡ್ ರೋಲ್‌ನಲ್ಲಿ ನಟಿಸಿರುವ ಸಿನಿಮಾ ಇಷ್ಟು ಕಲೆಕ್ಷನ್ ಮಾಡಬಹುದಾ? ಎನ್ನುವ ಪ್ರಶ್ನೆ ಹುಟ್ಟು ಹಾಕಿತ್ತು. ಅದೂ ಕೂಡ ಮಲಯಾಳಂ ಚಿತ್ರರಂಗದಲ್ಲಿ. ದಕ್ಷಿಣದಲ್ಲಿ ಅತಿಹೆಚ್ಚು ಗಳಿಕೆ ಕಂಡ ಟಾಪ್-5 ಮಹಿಳಾ ಪ್ರಧಾನ ಸಿನಿಮಾಗಳ ಪಟ್ಟಿ ಮುಂದೆ ಓದಿ.'

1. ಲೋಕಾ

ಕಲ್ಯಾಣಿ ಪ್ರಿಯದರ್ಶನ್ ನಟನೆಯ 'ಲೋಕಾ ಚಾಪ್ಟರ್-1: ಚಂದ್ರ' ಸಿನಿಮಾ ಕಳೆದ ವರ್ಷ ತೆರೆಗೆ ಬಂದಿತ್ತು. ಡೊಮಿನಿಕ್ ಅರುಣ್ ನಿರ್ದೇಶನದ ಈ ಸೂಪರ್ ಹೀರೊ ಸಿನಿಮಾ ಮಲಯಾಳಂ ಚಿತ್ರರಂಗದಲ್ಲಿ ಇತಿಹಾಸ ನಿರ್ಮಿಸಿತ್ತು. ದೊಡ್ಡ ದೊಡ್ಡ ಸೂಪರ್ ಸ್ಟಾರ್‌ಗಳ ಸಿನಿಮಾಗಳು ಮಾಡದ ದಾಖಲೆ ಮಾಡಿತ್ತು. ಬರೋಬ್ಬರಿ 304 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ಎಲ್ಲರ ಹುಬ್ಬೇರಿಸಿತ್ತು. ಸದ್ಯದ ಮಟ್ಟಿಗೆ ಈ ದಾಖಲೆ ಮುರಿಯುವುದು ಕಷ್ಟ ಕಷ್ಟ. ಮುಂದೆ ಈ ಚಿತ್ರದ ಸೀಕ್ವೆಲ್ ಬರಲಿದ್ದು ಮತ್ತೊಂದು ಇತಿಹಾಸ ನಿರ್ಮಾಣವಾದರೂ ಅಚ್ಚರಿಪಡಬೇಕಿಲ್ಲ.

From Lokha to Maa Inti Bangaarami South Indian top 5 Highest-Grossing Female-Led Films

2. ಮಾ ಇಂಟಿ ಬಂಗಾರಂ

ನಂದಿನಿ ರೆಡ್ಡಿ ನಿರ್ದೇಶನ ಆಕ್ಷನ್ ಥ್ರಿಲ್ಲರ್ 'ಮಾ ಇಂಟಿ ಬಂಗಾರಂ' ಚಿತ್ರಕ್ಕೆ ಸಮಂತಾ ಪತಿ ರಾಜ್ ನಿಡುಮೊರು ಕಥೆ, ಚಿತ್ರಕಥೆ ಬರೆದಿದ್ದಾರೆ. ಕನ್ನಡ ನಟ ದಿಗಂತ್ ಚಿತ್ರದಲ್ಲಿ ಸ್ಯಾಮ್ ಜೋಡಿಯಾಗಿ ಮಿಂಚಿದ್ದಾರೆ. ಎರಡು ವಿಭಿನ್ನ ಶೇಡ್‌ಗಳಿರುವ ಪಾತ್ರದಲ್ಲಿ ಸಮಂತಾ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಜಬರ್ದಸ್ತ್ ಆಕ್ಷನ್ ಸನ್ನಿವೇಶಗಳಲ್ಲಿ ಆಕೆ ಅಬ್ಬರಿಸಿದ್ದು ಅಭಿಮಾನಿಗಳ ಮನಗೆದ್ದಿದ್ದಾರೆ. ಸಿನಿಮಾ 100 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಘೋಷಿಸಿದ್ದಾರೆ.

3. ರುದ್ರಮದೇವಿ

ದಕ್ಷಿಣದಲ್ಲಿ ಮಹಿಳಾ ಪ್ರಧಾನ ಸಿನಿಮಾಗಳು ಅಂದಾಕ್ಷಣ ಅನುಷ್ಕಾ ಶೆಟ್ಟಿ ಹೆಸರು ನೆನಪಾಗುತ್ತದೆ. ಅದಕ್ಕೆ ಕಾರಣ ಆಕೆ ನಟಿಸಿರುವ ಪವರ್‌ಫುಲ್ ಮಹಿಳಾ ಪಾತ್ರಗಳು. ಏಕಾಂಗಿಯಾಗಿ ಚಿತ್ರವನ್ನು ಗೆಲ್ಲಿಸಿರುವ ಉದಾಹರಣೆಗಳು ಇವೆ. 'ರುದ್ರಮದೇವಿ'ಯಾಗಿ 2015ರಲ್ಲಿ ಸ್ವೀಟಿ ಅಬ್ಬರಿಸಿದ್ದರು. ಸಿನಿಮಾ 87 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿತ್ತು. ಅಲ್ಲು ಅರ್ಜುನ್ ಕೂಡ ಚಿತ್ರದ ಅತಿಥಿ ಪಾತ್ರದಲ್ಲಿ ಬಣ್ಣ ಹಚ್ಚಿದ್ದರು.

4. ಮಹಾನಟಿ

ಖ್ಯಾತ ನಟಿ ಸಾವಿತ್ರಿ ಜೀವನವನ್ನಾಧರಿಸಿ ನಿರ್ಮಾಣವಾಗಿದ್ದ 'ಮಹಾನಟಿ' ಚಿತ್ರವನ್ನು ಮರೆಯೋಕೆ ಸಾಧ್ಯವಿಲ್ಲ. ನಾಗ್ ಅಶ್ವಿನ್ ನಿರ್ದೇಶನದಲ್ಲಿ ಬಯೋಪಿಕ್ ಚಿತ್ರದಲ್ಲಿ ಸಾವಿತ್ರಿ ಪಾತ್ರಕ್ಕೆ ಕೀರ್ತಿ ಸುರೇಶ್ ಜೀವ ತುಂಬಿದ್ದರು. 2018ರಲ್ಲಿ ತೆಲುಗು ಹಾಗೂ ತಮಿಳಿನಲ್ಲಿ ಸಿನಿಮಾ ತೆರೆಗೆ ಬಂದು ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. 85 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದು ವಿಶೇಷ.

5. ಅರುಂಧತಿ

ಭಾರತೀಯ ಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಸಿನಿಮಾ ಇದು. ಅನುಷ್ಕಾ ಶೆಟ್ಟಿ ಪವರ್‌ಫುಲ್ ಪರ್ಫಾರ್ಮನ್ಸ್ ಇವತ್ತಿಗೂ ಮರೆಯೋಕೆ ಸಾಧ್ಯವಿಲ್ಲ. ಕೋಡಿ ರಾಮಕೃಷ್ಣ ನಿರ್ದೇಶನದ ಫ್ಯಾಂಟಸಿ ಸಿನಿಮಾ 70 ಕೋಟಿ ರೂ. ಕಲೆಕ್ಷನ್ ಮಾಡಿತ್ತು ಎನ್ನಲಾಗುತ್ತದೆ. ಇವತ್ತಿನ ಲೆಕ್ಕಕ್ಕೆ 200 ಕೋಟಿ ರೂ. ಗ್ರಾಸ್ ಕಲೆಕ್ಷನ್ ಎನ್ನಬಹುದು.

Read more about: samantha tollywood mollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X