Ghaati Box Office Day 5 ; ಕಿಕ್ಕೇರಿಸದ ಅನುಷ್ಕಾ ಶೆಟ್ಟಿ ರಗಡ್ ಲುಕ್, ₹10 ಕೋಟಿಯನ್ನು ಗಳಿಸಲಿಲ್ಲ ಘಾಟಿ
''ಸೂಪರ್'' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಅನುಷ್ಕಾ ಶೆಟ್ಟಿ ಚಿತ್ರರಂಗದಲ್ಲಿ ಎರಡು ದಶಕಗಳನ್ನು ಪೂರೈಸಿದ್ದಾರೆ. ಈ ಎರಡು ದಶಕಗಳಲ್ಲಿ ಹತ್ತು ಹಲವು ಚಿತ್ರಗಳನ್ನು ಮಾಡಿದ್ದಾರೆ. ಹಲವು ಸ್ಟಾರ್‌ಗಳ ಜೊತೆ ತೆರೆಯನ್ನು ಹಂಚಿಕೊಂಡಿದ್ದಾರೆ. ಇನ್ನು.. ನಾಯಕಿಯರು ಅಂದರೆ ಕೇವಲ ಮರ ಸುತ್ತಲು ಮಾತ್ರ ಎಂಬ ಮಾತನ್ನು ಸುಳ್ಳಾಗಿಸಿದವರು ಚಿತ್ರರಂಗದಲ್ಲಿ ಹಲವರು ಇದ್ದಾರೆ. ಆ ಪೈಕಿ ಒಬ್ಬರಾದ ಅನುಷ್ಕಾ ಶೆಟ್ಟಿ...
''ಅರುಂಧತಿ''.. ''ಭಾಗ್ಮತಿ''.. ''ರುದ್ರಮ್ಮದೇವಿ'' ಸೇರಿ ಕೆಲ ಮಹಿಳಾ ಪ್ರಧಾನ ಚಿತ್ರಗಳನ್ನು ಮಾಡಿದರು. ರಗಡ್ ಲುಕ್ಕಿನಲ್ಲಿ ಮಿಂಚಿದರು. ಅಭಿಮಾನಿಗಳ ಹೃದಯವನ್ನು ಗೆದ್ದರು. ಆದರೆ.. ಅದ್ಯಾಕೋ ಕೆಲ ವರ್ಷಗಳಿಂದ ಅನುಷ್ಕಾ ವೃತ್ತಿ ಬದುಕು ಬಾಡಿ ಹೋಗಿದೆ. ಎಷ್ಟೇ ಪ್ರಯತ್ನ ಮಾಡಿದರು ಕೂಡ ಮೊದಲಿದ್ದ ಹವಾ ಕಾಣುತ್ತಿಲ್ಲ. ಇದಕ್ಕೆ ''ಘಾಟಿ'' ಸದ್ಯದ ಮತ್ತೊಂದು ಉದಾಹರಣೆ.

ಹೌದು, ಅಸಲಿಗೆ ಮೊದಲ ದಿನ '''ಘಾಟಿ'' ತಕ್ಕಮಟ್ಟಿನ ಹಣವನ್ನು ಗಳಿಸಿತ್ತು. ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ₹2 ಕೋಟಿಯನ್ನು ದೋಚಿತ್ತು. ಆದರೆ.. ಪ್ರೇಕ್ಷಕರು ಮತ್ತು ವಿಮರ್ಷಕರು ಈ ಚಿತ್ರವನ್ನು ಮೆಚ್ಚಲಿಲ್ಲ. ಅನುಷ್ಕಾ ರಗಡ್ ಅವತಾರಕ್ಕೆ ಬಹುಪರಾಕ್ ಹಾಕಲಿಲ್ಲ.
ಇನ್ನೂ ''ಘಾಟಿ'' ಎದುರು ಹಲವು ಚಿತ್ರಗಳು ಬಿಡುಗಡೆಯಾಗಿದ್ದವು. ಈ ಕಾರಣಕ್ಕೆ ಪ್ರೇಕ್ಷಕರ ಎದುರು ಆಯ್ಕೆಗಳಿದ್ದವು. ಈ ಎಲ್ಲ ಕಾರಣಗಳಿಂದ ಎರಡನೇ ದಿನ ಹೆಚ್ಚಾಗಬೇಕಿದ್ದ ಗಳಿಕೆಯಲ್ಲಿ 13.00% ಕುಸಿತ ಕಾಣಿಸಿತು. ₹ 1.74 ಕೋಟಿಯನ್ನಷ್ಟೇ ಚಿತ್ರ ಗಳಿಸಿತು. ಮೂರು ಮತ್ತು ನಾಲ್ಕನೇ ದಿನ ಕೂಡ ಕಥೆ ಸೇಮ್. ''ಘಾಟಿ''ಯ ಗಳಿಕೆಯಲ್ಲಿ ಸುಧಾರಣೆ ಕಂಡು ಬರಲೇ ಇಲ್ಲ. ಗಳಿಕೆ ಏರಲೇ ಇಲ್ಲ.

''ಸ್ಯಾಕ್ನಿಲ್'' ಪ್ರಕಾರ ನಿನ್ನೆ (ಸೆಪ್ಟೆಂಬರ್ 9- ಮಂಗಳವಾರ) ಅಂದರೆ ಐದನೇ ದಿನ ''ಘಾಟಿ'' ಕೇವಲ ₹ 0.51 ಲಕ್ಷವನ್ನು ಮಾತ್ರ ಗಳಿಸಿದೆ. ಈ ಮೂಲಕ ಚಿತ್ರದ ಐದು ದಿನದ ಒಟ್ಟಾರೆ ಗಳಿಕೆ ₹ 6.05 ಕೋಟಿ ಮಾತ್ರ ಆಗಿದೆ.
ಸ್ಯಾಕ್ನಿಲ್ ಪ್ರಕಾರ ''ಘಾಟಿ'' ಚಿತ್ರದ ಐದು ದಿನದ ಗಳಿಕೆ ಈ ಕೆಳಗಿನಂತೆ ಇದೆ
ಮೊದಲ ದಿನ [ಶುಕ್ರವಾರ] ₹ 2 ಕೋಟಿ
ಎರಡನೇ ದಿನ [ಶನಿವಾರ] ₹ 1.74 ಕೋಟಿ
ಮೂರನೇ ದಿನ[ಭಾನುವಾರ] ₹ 1.15 ಕೋಟಿ
ನಾಲ್ಕನೇ ದಿನ [ಸೋಮವಾರ] ₹ 0.65 ಲಕ್ಷ
ಐದನೇ ದಿನ [ಮಂಗಳವಾರ] ₹ 0.51 ಲಕ್ಷ *ಅಂದಾಜು
ಒಟ್ಟು ಗಳಿಕೆ - ₹ 6.05 ಕೋಟಿ
ಹೀಗೆ ಸದ್ಯ ಬಾಕ್ಸಾಫೀಸ್‌ನಲ್ಲಿ ''ಘಾಟಿ'' ತೆವಳುತ್ತಿದೆ. ನರಳುತ್ತಿದೆ. ₹10 ಕೋಟಿಯ ಗಡಿಯನ್ನು ಕೂಡ ''ಘಾಟಿ''ದಾಟುವುದು ಕೂಡ ಅನುಮಾನ ಎನ್ನುವ ಮಾತು ಸದ್ಯ ಕೇಳಿ ಬರುತ್ತಿದೆ. ಇನ್ನು ಈ ವಾರ ತೇಜಾ ಸಜ್ಜಾ ಅಭಿನಯದ ''ಮಿರಾಯಿ'' ಸೇರಿ ಕೆಲ ಚಿತ್ರಗಳು ಬಿಡುಗಡೆಯಾಗುತ್ತಿವೆ. ಈ ಹಿನ್ನೆಲೆ ಚಿತ್ರಮಂದಿರಗಳಿಂದ ಈ ವಾರವೇ ''ಘಾಟಿ'' ಎತ್ತಂಗಡಿಯಾದರುನ ಆಗಬಹುದು.
ಅಂದ್ಹಾಗೇ ಅನುಷ್ಕಾ ಶೆಟ್ಟಿ ಅಭಿನಯದ ''ಘಾಟಿ'' ಚಿತ್ರವನ್ನು ಕರುನಾಡಿನೆಲ್ಲೆಡೆ ತಲುಪಿಸುವ ಜವಾಬ್ಧಾರಿಯನ್ನು ಯಶ್ ಅವರ ತಾಯಿ ಪುಷ್ಪಾ ವಹಿಸಿಕೊಂಡಿದ್ದರು. ಈ ಕಾರಣದಿಂದ ನಿರ್ಮಾಪಕಿಯಾಗಿ ''ಕೊತ್ತಲವಾಡಿ'' ಚಿತ್ರ ನಿರ್ಮಾಣ ಮಾಡಿ ಸೋತಿದ್ದ ಪುಷ್ಪಾ ಅರುಣ್ ಕುಮಾರ್ ಈಗ ವಿತರಕಿಯಾಗಿ ಕೂಡ ''ಘಾಟಿ'' ಮೂಲಕ ಸೋಲನ್ನು ನೋಡಿದಂತಾಗಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ


Click it and Unblock the Notifications











