Hari Hara Veera Mallu Box Office Day 1 : ಪವನ್ ಕಲ್ಯಾಣ್ ಅಬ್ಬರಕ್ಕೆ ಬಾಕ್ಸ್ ಆಫೀಸ್ ಉಡೀಸ್, ಹೊಸ ದಾಖಲೆ

ಪವನ್ ಕಲ್ಯಾಣ್ ಈಗ ಕೇವಲ ಆಕ್ಟರ್ ಅಲ್ಲ ಬದಲಿಗೆ ಫುಲ್ ಟೈಮ್ ರಾಜಕಾರಣಿ ಕೂಡ ಹೌದು. ಆಂಧ್ರದ ಉಪ ಮುಖ್ಯಮಂತ್ರಿಯಾಗಿ ಕಳೆದೊಂದು ವರ್ಷದಿಂದ ಸೇವೆಯನ್ನು ಮಾಡುತ್ತಾ ಬರುತ್ತಿರುವ ಜನಸೇನಾ ಪಕ್ಷದ ನಾಯಕ. ಇನ್ನೂ.. ಸಾಮಾನ್ಯವಾಗಿ ಸ್ಟಾರ್ ಆದವರು ರಾಜಕಾರಣದತ್ತ ಹೊರಳಿದರೆವ ಅವರ.. ಚಿತ್ರರಂಗದ ಬದುಕು ಮುಗಿದಂತೆಯೇ. ಹಲವರು ರಾಜಕೀಯಕ್ಕೆ ಹೋದ ನಂತರ ನಿವೃತ್ತಿ ಪಡೆದಿದ್ದು ಇದೆ.

ನಿವೃತ್ತಿಯನ್ನು ಮೊದಲ ಘೋಷಿಸಿ ರಾಜಕೀಯದ ಚದುರಂಗವಾಡಲು ಮುಂದಾಗಿದ್ದು ಇದೆ. ಆದರೆ.. ಪವನ್ ಕಲ್ಯಾಣ್ ಇದಕ್ಕೆ ತದ್ವಿರುದ್ದ. ರಾಜಕಾರಣದಲ್ಲಿ ಕಳೆದು ಹೋಗಿದ್ದರು ಕೂಡ ಪವನ್ ಕಲ್ಯಾಣ್‌ಗೆ ಬಣ್ಣದ ಮೇಲಿನ ಮೋಹ ಕಡಿಮೆಯಾಗಿಲ್ಲ.

Hari Hara Veera Mallu Day 1 Box Office Pawan Kalyan Delivers Career-Best Opening Mints 44 20 Cr

'ಓಜಿ' ಹಾಗೂ 'ಉಸ್ತಾದ್ ಭಗತ್‌ಸಿಂಗ್' ಎಂಬ ಎರಡು ಚಿತ್ರಗಳು ಇನ್ನೂ ಪವನ್ ಕಲ್ಯಾಣ್ ಬತ್ತಳಕೆಯಲ್ಲಿವೆ. ಈ ಎರಡು ಚಿತ್ರಗಳು ಅದ್ಯಾವ ಕಾಲಕ್ಕೆ ಬಿಡುಗಡೆಯಾಗಲಿವೆ ಎನ್ನುವುದು ಖುದ್ದು ಪವನ್ ಕಲ್ಯಾಣ್‌ಗೆ ಗೊತ್ತಾದರು ಇವತ್ತು ಕೂಡ ಆಂಧ್ರದ ಪವರ್ ಸ್ಟಾರ್‌ನ ಪವರ್ ಚಿತ್ರರಂಗದಲ್ಲಿ ಕಡಿಮೆಯಾಗಿಲ್ಲ. ಪವನ್ ಕಲ್ಯಾಣ್ ಅವರನ್ನು ರಾಜಕೀಯದ ಪಡಸಾಲೆಯಲ್ಲಿ ನೋಡುವುದಕ್ಕಿಂತ ಬೆಳ್ಳಿತೆರೆಯ ಮೇಲೆಯೇ ನೋಡಲು ಜನ ಇಷ್ಟ ಪಡುತ್ತಾರೆ. ಇದಕ್ಕೆ ಸದ್ಯದ ಉದಾಹರಣೆಯೇ ಹರಿಹರ ವೀರಮಲ್ಲು.

ಹೌದು, ಪಂಚವಾರ್ಷಿಕ ಯೋಜನೆಯಡಿ ಪವನ್ ಕಲ್ಯಾಣ್ ಮಾಡಿದ ಹರಿಹರ ವೀರಮಲ್ಲು ನಿನ್ನೆ [ಜುಲೈ25] ಕೊನೆಗೂ ಬಿಡುಗಡೆಯಾಗಿದೆ. ನಿರೀಕ್ಷೆಯಂತೆ ಮೊದಲ ದಿನ ಬಾಕ್ಸಾಫೀಸ್‌ನಲ್ಲಿ ಅಬ್ಬರಿಸಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಹರಿಹರ ವೀರಮಲ್ಲು ಚಿತ್ರ ಮೊದಲ ದಿನ ಭಾರತದಲ್ಲಿ ಅಂದಾಜು ₹ 31.50 ಕೋಟಿ ಹಣವನ್ನು ದೋಚಿದೆ ಎಂದು ಲೆಕ್ಕ ನೀಡಿದೆ.

ಇನ್ನು ಹರಿಹರ ವೀರಮಲ್ಲು ಚಿತ್ರದ ಬಿಡುಗಡೆಗೂ ಹಿಂದಿನ ದಿನ ಅಂದರೆ ಗುರುವಾರ [ ಜುಲೈ 24 ] ದಂದು ಹಲವಡೆ ಪ್ರೀಮಿಯರ್ ಪ್ರದರ್ಶನವನ್ನು ಚಿತ್ರತಂಡ ಹಮ್ಮಿಕೊಂಡಿತ್ತು. ಆಂಧ್ರ ಮತ್ತು ತೆಲಂಗಾಣ ಮಾತ್ರವಲ್ಲ ಕರ್ನಾಟಕದಲ್ಲಿ ಕೂಡ ಹಮ್ಮಿಕೊಳ್ಳಲಾಗಿದ್ದ ಈ ಪ್ರದರ್ಶನದಿಂದನೇ ₹12.7 ಕೋಟಿ ಹಣ ಹರಿದು ಬಂದಿದೆ ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ ಮೊದಲ ದಿನ ₹44.20 ಕೋಟಿಯಾಗಿದೆ ಎಂದು ಕೂಡ 'ಸ್ಯಾಕ್ನಿಲ್' ಉಲ್ಲೇಖಿಸಿದೆ.

ಮೊದಲ ದಿನ ಹೈದರಾಬಾದ್‌ನಲ್ಲಿ ಶೇಕಡಾ 66.75% ಆಕ್ಯುಪೆನ್ಸಿ ಕಂಡು ಬಂದಿದ್ದು ವಿಜಯವಾಡಾದಲ್ಲಿ ನೂಕುನುಗ್ಗಲಿನ ವಾತಾವರಣ ಕಂಡು ಬಂದಿದೆ. ಇನ್ನು ಬೆಂಗಳೂರಿನಲ್ಲಿ 37.75% ಚೆನ್ನೈನಲ್ಲಿ 34.00% ಮುಂಬೈನಲ್ಲಿ 29.25% ಆಕ್ಯುಪೆನ್ಸಿ ಕಂಡು ಬಂದಿದೆ ಎಂದು 'ಸ್ಯಾಕ್ನಿಲ್' ತನ್ನ ವರದಿಯಲ್ಲಿ ಹೇಳಿದೆ.

ಅಂದ್ಹಾಗೇ ಹರಿಹರ ವೀರಮಲ್ಲು ಚಿತ್ರದ ಮೂಲಕ ಪವನ್ ಕಲ್ಯಾಣ್ ತಮ್ಮದೇ ಹಳೆಯ ದಾಖಲೆಗಳನ್ನು ಮುರಿದಿದ್ದಾರೆ. ಹೊಸ ದಾಖಲೆಯನ್ನು ಬರೆದಿದ್ದಾರೆ. ಇಲ್ಲಿಯವರೆಗಿನ ಪವನ್ ಕಲ್ಯಾಣ್ ವೃತ್ತಿ ಬದುಕಿನ ದಿ ಬೆಸ್ಟ್ ಓಪನರ್ ಎನ್ನುವ ಹೆಗ್ಗಳಿಕೆಗೆ ಹರಿಹರಿ ವೀರಮಲ್ಲು ಚಿತ್ರ ಪಾತ್ರವಾಗಿದೆ.

ಹೌದು, ಅಸಲಿಗೆ ಹರಿಹರ ವೀರಮಲ್ಲು ಚಿತ್ರಕ್ಕೂ ಮುನ್ನ ಬಿಡುಗಡೆಯಾಗಿದ್ದ 'ಭೀಮ್ಲಾ ನಾಯಕ್' ಮೊದಲ ದಿನ ₹37.15 ಕೋಟಿಯನ್ನು ಗಳಿಸಿತ್ತು. ಇದಕ್ಕೂ ಹಿಂದೆ ಬಂದ ವಕೀಲ್ ಸಾಬ್ ₹40.10 ಕೋಟಿಯನ್ನು ಗಳಿಸುವ ಮೂಲಕ ಹೊಸ ಇತಿಹಾಸ ಬರೆದಿತ್ತು. 2023ರಲ್ಲಿ ತೆರೆಗೆ ಬಂದಿದ್ದ 'ಬ್ರೋ' ಮೊದಲ ದಿನ ₹30.5 ಕೋಟಿ ಹಣ ಗಳಿಸಿತ್ತು. ಈ ಎಲ್ಲಾ ಗಳಿಕೆಯನ್ನು 'ಹರಿಹರ ವೀರಮಲ್ಲು' ಹಿಂದಿಕ್ಕಿದೆ.

ಸದ್ಯ ಮೊದಲ ದಿನ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಪವನ್ ಕಲ್ಯಾಣ್ ಅಭಿಮಾನಿಗಳಿಗೆ ಹೇಳಿ ಮಾಡಿಸಿದ ಚಿತ್ರ ಇದು ಎನ್ನುವ ಮಾತು ಕೇಳಿ ಬರುತ್ತಿದೆ. ಈ ವಾರಾಂತ್ಯದೊಳಗೆ ಚಿತ್ರ ಎಷ್ಟು ಹಣ ಗಳಿಸುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Hari Hara Veera Mallu' opens strong! Pawan Kalyan's epic film collects a massive ₹44.20 Cr on Day 1. Find out if it broke records
Read more about: tollywood pawan kalyan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X