Chhaava Box Office Day 66 ; ಸ್ತ್ರೀ 2 ನಂತರ ಐತಿಹಾಸಿಕ ಸಾಧನೆ ಮಾಡಿದ ಛಾವಾ,ಬಾಹುಬಲಿ 2,ಕೆಜಿಎಫ್ 2 ದಾಖಲೆ ಉಡೀಸ್..!
ಚಿತ್ರವೊಂದು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ಇನ್ನು ನಾಲ್ಕು ವಾರ ಕೂಡ ಆಗಿರಲ್ಲ. ಆಗಲೇ ಆ ಚಿತ್ರ ಓಟಿಟಿಗೆ ಬಂದು ಬಿಡುತ್ತೆ. ಇದರಿಂದಾಗಿ ಚಿತ್ರಮಂದಿರದಲ್ಲಿ ಚಿತ್ರವನ್ನು ನೋಡುವ ಆಸಕ್ತಿಯನ್ನು ಬಹುತೇಕ ಚಿತ್ರಪ್ರೇಮಿಗಳು ಕಳೆದುಕೊಂಡಿದ್ದಾರೆ. ಇಂತಹ ಕಾಲದಲ್ಲಿ ಬಾಲಿವುಡ್‌ನಲ್ಲಿ ಕಳೆದ 66 ದಿನಗಳಿಂದ ಚಿತ್ರವೊಂದು ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣ್ತಿದೆ. ವಿಶೇಷ ಅಂದರೆ ಈ ಚಿತ್ರ ಕೂಡ ಓಟಿಟಿಗೆ ಈಗಾಗಲೇ ಬಂದಿದೆ.
ಆದರೂ ಕೂಡ ಕ್ರೇಜ್ ಕಡಿಮೆಯಾಗಿಲ್ಲ. ಇವತ್ತು ಕೂಡ ಅನೇಕ ಕಡೆ ಈ ಚಿತ್ರ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಈ ಚಿತ್ರ ಬೇರೆ ಯಾವುದು ಅಲ್ಲ ಬದಲಿಗೆ ವಿಕ್ಕಿ ಕೌಶಲ್ ಅಭಿನಯದ ಛಾವಾ. ಹೌದು, ಸತತ ಸೋಲುಗಳಿಂದ, ಸೌತ್ ಚಿತ್ರಗಳ ಅಬ್ಬರದಿಂದ, ಹೈರಾಣಾಗಿದ್ದ ಹಿಂದಿ ಚಿತ್ರರಂಗಕ್ಕೆ ಛಾವಾ ಕಳೆದೊಂದು ತಿಂಗಳಿಂದ ಆಸರೆಯಾಗಿದೆ.

ತೆರೆಗೆ ಬಂದು 66 ದಿನವಾದರೂ ಕೂಡ ಛಾವಾ ಸದ್ದು ಕಡಿಮೆಯಾಗಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ನೂರಲ್ಲ, ಇನ್ನೂರಲ್ಲ, ₹ 600 ಕೋಟಿಯನ್ನು ಕೊಳ್ಳೆ ಹೊಡೆಯುವ ಮೂಲಕ ಛಾವಾ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಐತಿಹಾಸಿಕ ದಾಖಲೆಯನ್ನು ಬರೆದಿದೆ. ಪುಷ್ಟ 2 ಮತ್ತು ಸ್ತ್ರೀ 2 ನಂತರ ಭಾರತದ ಮಾರುಕಟ್ಟೆಯಲ್ಲಿ ₹ 600 ಕೋಟಿ ಗಡಿಯನ್ನು ತಲುಪಿದ ಮೂರನೇ ಚಿತ್ರ ಎನ್ನುವ ಹೆಗ್ಗಳಿಕೆಗೆ ಛಾವಾ ಪಾತ್ರವಾಗಿದೆ. ಸ್ತ್ರೀ 2 ನಂತರ ₹ 600 ಕೋಟಿ ಗಳಿಸಿದ ಎರಡನೇ ಹಿಂದಿ ಚಿತ್ರವಾಗಿ ಕೂಡ ಛಾವಾ ಹೊರ ಹೊಮ್ಮಿದೆ.
ಇನ್ನು ಪುಷ್ಪ 2 ಮತ್ತು ಸ್ತ್ರೀ 2 ಎರಡು ಚಿತ್ರಗಳು ಎರಡು ಭಾಗಗಳಲ್ಲಿ ತೆರೆಗೆ ಬಂದಿದ್ದವು. ಮೊದಲ ಭಾಗ ಪ್ರೇಕ್ಷಕರ ಹೃದಯ ಗೆದ್ದಿದ್ದ ಹಿನ್ನೆಲೆ ಎರಡನೇ ಭಾಗ ಎರಡನೇ ಭಾಗ ಹೇಗಿರಬಹುದು ಎನ್ನುವ ಕುತೂಹಲ ಇತ್ತು. ಈ ಕೂತುಹಲಕ್ಕೆ ಅನೇಕ ಪ್ರೇಕ್ಷಕರು ಚಿತ್ರಮಂದಿರಕ್ಕೆ ತೆರಳಿದ್ದರು.
ಆದರೆ, ಛಾವಾ ವಿಚಾರದಲ್ಲಿ ಈ ಪ್ಲಸ್ ಪಾಯಿಂಟ್ ಇರಲಿಲ್ಲ. ಆದರೂ ಕೂಡ ಚಿತ್ರ ₹ 600 ಕೋಟಿಯ ಗಡಿಯನ್ನು ದಾಟಿರುವುದು ಅಚ್ಚರಿಯೂ ಹೌದು. ವಿಶೇಷ ಕೂಡ ಹೌದು. ಬಾಲಿವುಡ್‌ನ ಟ್ರೇಡ್ ವಿಶ್ಲೇಷಕ ತರಣ್ ಆದರ್ಶ ಅವರ ಪ್ರಕಾರ ಭಾರತದಲ್ಲಿ ಛಾವಾ ಚಿತ್ರದ ಹತ್ತು ವಾರದ ಗಳಿಕೆ ಈ ಕೆಳಗಿನಂತೆ ಇದೆ.
ಮೊದಲ ವಾರ :₹ 225.28 ಕೋಟಿ
ಎರಡನೇ ವಾರ :₹ 186.18 ಕೋಟಿ
ಮೂರನೇ ವಾರ :₹ 84.94 ಕೋಟಿ
ನಾಲ್ಕನೇ ವಾರ :₹ 43.98 ಕೋಟಿ
ಐದನೇ ವಾರ :₹ 31.02 ಕೋಟಿ
ಆರನೇ ವಾರ :₹ 15.60 ಕೋಟಿ
ಏಳನೇ ವಾರ :₹ 7 ಕೋಟಿ
ಎಂಟನೇ ವಾರ :₹ 3.50 ಕೋಟಿ
ಒಂಬತ್ತನೇ ವಾರ :₹ 2.30 ಕೋಟಿ
ಹತ್ತನೇ ವಾರ :₹ 30 ಲಕ್ಷ
ಒಟ್ಟು ಗಳಿಕೆ : ₹ 600.10 ಕೋಟಿ
ಅಂದ್ಹಾಗೇ ಬಾಕ್ಸಾಫೀಸ್‌ನಲ್ಲಿ ಅಬ್ಬರಿಸಿ ಬೊಬ್ಬಿರಿದ ಛಾವಾ ಚಿತ್ರ ಕೆಜಿಎಫ್ 2 ಮತ್ತು ಬಾಹುಬಲಿ 2 ಚಿತ್ರದ ದಾಖಲೆಯನ್ನು ಕೂಡ ಮುರಿದಿದೆ. ಬಾಲಿವುಡ್ ಹಂಗಾಮಾದಲ್ಲಿ ಉಲ್ಲೇಖವಾದಂತೆ ಭಾರತದಲ್ಲಿ ಕೆಜಿಎಫ್ 2 ಚಿತ್ರ 8 ವಾರಗಳಲ್ಲಿ 434.70 ಕೋಟಿಯನ್ನು ಗಳಿಸಿತ್ತು. ಇನ್ನು ಬಾಹುಬಲಿ 2 ಹದಿನಾರು ವಾರ ಪ್ರದರ್ಶನ ಕಂಡಿತ್ತು, ಭಾರತದ ಭಾಕ್ಸಾಫೀಸ್‌ನಲ್ಲಿ ₹510.99 ಕೋಟಿಯನ್ನು ಗಳಿಸಿತ್ತು. ಈ ದಾಖಲೆಯನ್ನು ಛಾವಾ ಮುರಿದಿದೆ. ₹ 600.10 ಕೋಟಿಯನ್ನು ಹತ್ತು ವಾರಗಳಲ್ಲಿ ಗಳಿಸಿದೆ.
ಇನ್ನು ಬಾಕ್ಸಾಫೀಸ್ ಮೇಲೆ ಹದ್ದಿನ ಕಣ್ಣು ಇಡುವ, ಚಿತ್ರಗಳ ಗಳಿಕೆಯ ವಿವರಗಳನ್ನು ಹಂಚಿಕೊಳ್ಳುವ ಸ್ಯಾಕ್ನಿಲ್ಕ್ ವೆಬ್ ಸೈಟ್ ಪ್ರಕಾರ ಭಾರತದಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಹತ್ತು ಚಿತ್ರಗಳ ಪಟ್ಟಿ ಈ ಕೆಳಗಿನಂತೆ ಇದೆ
1. ಪುಷ್ಪ 2 - ₹812.14 ಕೋಟಿ
2. ಸ್ತ್ರೀ 2 - ₹627.50 ಕೋಟಿ
3. ಛಾವಾ - ₹600.10 ಕೋಟಿ
4. ಜವಾನ್ - ₹582.31 ಕೋಟಿ
5. ಗದರ್ 2 - ₹525.7 ಕೋಟಿ
6. ಪಠಾಣ್ - ₹524.53 ಕೋಟಿ
7. ಬಾಹುಬಲಿ 2- ₹510.99 ಕೋಟಿ
8. ಅನಿಮಲ್ - ₹502.98 ಕೋಟಿ
9. ಕೆಜಿಎಫ್ 2 - ₹435.33 ಕೋಟಿ
10. ದಂಗಲ್ - ₹374.43 ಕೋಟಿ
ಇನ್ನು ರಶ್ಮಿಕಾ ಮಂದಣ್ಣ ಸಂಭ್ರಮಕ್ಕೆ ಸದ್ಯ ಪಾರವೇ ಇಲ್ಲ. ಒಂದಾದ ಮೇಲೊಂದು ಗೆಲುವನ್ನು ಕಾಣುತ್ತಿರುವ ರಶ್ಮಿಕಾ ಮಂದಣ್ಣ ಸದ್ಯ ಛಾವಾ ಚಿತ್ರದ ಈ ಅಭೂತಪೂರ್ವ ಗೆಲುವನ್ನು ಸಂಭ್ರಮಿಸಿದ್ದಾರೆ. ನೀವು ಯಾವಾಗಲೂ ನಮ್ಮನ್ನು ಖುಷಿ ಪಡಿಸುತ್ತೀರಾ ಎಂದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡು ನಿರ್ಮಾಣ ಸಂಸ್ಥೆ ಹಂಚಿಕೊಂಡ ₹600 ಕೋಟಿಯ ಪೋಸ್ಟರ್‌ನ್ನು ಶೇರ್ ಮಾಡಿದ್ದಾರೆ.
ಹೀಗೆ ಛಾವಾ ಸದ್ಯ ದಾಖಲೆಯನ್ನು ಬರೆದಿದೆ. ₹ 600.10 ಕೋಟಿ ಗಳಿಸಿದೆ. ಈಗ ಛಾವಾ ಎದುರು ಸ್ತ್ರೀ 2 ಮತ್ತು ಪುಷ್ಪ 2 ಚಿತ್ರದ ದಾಖಲೆಗಳಿದ್ದು ವಿಕ್ಕಿ ಕೌಶಲ್ ಅಭಿನಯದ ಛಾವಾ ಈ ಎರಡು ಚಿತ್ರಗಳ ದಾಖಲೆಯನ್ನು ಮುರಿಯುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ


Click it and Unblock the Notifications











