Housefull 5 Box Office Day 1 ; ಬದಲಾಯ್ತಾ ಅಕ್ಷಯ್ ಕುಮಾರ್ ಅದೃಷ್ಟ, ಮೊದಲ ದಿನ ಹೌಸ್‌ಫುಲ್ 5 ಗಳಿಸಿದ್ದೆಷ್ಟು ?
ಕೊರೊನಾ ಎಂಬ ಪೀಡೆ ವಕ್ಕರಿಸಿಕೊಳ್ಳುವ ಮುನ್ನ ಒಂದಾದ ಮೇಲೊಂದು ಗೆಲುವನ್ನೂ ಕಂಡವರು ಅಕ್ಷಯ್ ಕುಮಾರ್. ಆದರೆ.. ಕೊರೊನಾ ಕರಿನೆರಳು ಸರಿದ ಬಳಿಕ, ಅಕ್ಷಯ್ ಕುಮಾರ್ ಮಾಡಿದ್ದೆಲ್ಲವೂ ಪರಮ ತೋಪು ಸಿನಿಮಾಗಳೇ. ಕೊರೊನಾ ನಂತರ ಅಕ್ಷಯ್ ಕುಮಾರ್ ಅಭಿನಯದ ಹನ್ನೆರಡು ಸಿನಿಮಾಗಳು ತೆರೆಗೆ ಬಂದಿವೆ.ಈ ಹನ್ನೆರಡು ಸಿನಿಮಾಗಳಲ್ಲಿ ಪ್ರೇಕ್ಷಕರಿಂದ ಬ್ಲಾಕ್ ಬಸ್ಟರ್ ರೆಸ್ಫಾನ್ಸ್ ಪಡೆದಿದ್ದು ಕೇವಲ ಸೂರ್ಯವಂಶಿ ಚಿತ್ರ ಮಾತ್ರ.
ಸೂರ್ಯವಂಶಿ ಹೊರತು ಪಡಿಸಿದರೆ ಓ ಮೈ ಗಾಡ್-02 ಮಾತ್ರ ಗೆಲುವನ್ನು ಕಂಡಿದೆ. ಮಿಕ್ಕಂತೆ ಅಕ್ಷಯ್ ಕುಮಾರ್ ಗೆ ಸಿಕ್ಕಿದ್ದು ಸೋಲು ಮತ್ತು ಹಿನ್ನೆಡೆ. ಈ ವರ್ಷದ ಏಪ್ರಿಲ್‌ನಲ್ಲಿ ಬಿಡುಗಡೆಯಾದ ಕೇಸರಿ 2 ಕೂಡ ನೂರು ಕೋಟಿಯ ಗಡಿಯನ್ನು ತಲುಪಲಿಲ್ಲ.

ಹೀಗಾಗಿಯೇ ಮತ್ತೆ ತಮ್ಮ ಕಾಮಿಡಿ ಟ್ರ್ಯಾಕ್‌ಗೆ ಮರಳಿರುವ ಅಕ್ಷಯ್ ಕುಮಾರ್ ಸದ್ಯ ಹಲವಾರು ಹಾಸ್ಯ ಪ್ರಧಾನ ಚಿತ್ರಗಳನ್ನು ಮಾಡುತ್ತಿದ್ದಾರೆ. ಆ ಪೈಕಿ ಅಕ್ಷಯ್ ಕುಮಾರ್‌ಗೆ ಹೆಸರು ಮತ್ತು ಗೆಲುವನ್ನು ನೀಡಿದ್ದ ಹೌಸ್‌ಫುಲ್ ಚಿತ್ರದ 5ನೇ ಭಾಗ ನಿನ್ನೆ { ಜೂನ್ 6 } ತೆರೆಗೆ ಬಂದಿದೆ. ಹಲವು ವರ್ಷಗಳ ನಂತರ ಅಕ್ಷಯ್ ಕುಮಾರ್ ನಿರೀಕ್ಷೆ ಮಾಡಿದಂತಹ ಓಪನಿಂಗ್‌ನ್ನು ಕೂಡ ಚಿತ್ರ ಪಡೆದಿದೆ.
ಹೌದು, ಬಾಕ್ಸಾಫೀಸ್‌ನ ಲೆಕ್ಕಾಚಾರವನ್ನು ಹಂಚಿಕೊಳ್ಳುವ ಸ್ಯಾಕ್ನಿಲ್ ವೆಬ್ ಸೈಟ್ ವರದಿ ಮಾಡಿರುವಂತೆ ಹೌಸ್‌ಫುಲ್ 5 ಚಿತ್ರ ಮೊದಲ ದಿನ ಗಲ್ಲಾಪೆಟ್ಟಿಗೆಯಲ್ಲಿ ₹ 24ಕೋಟಿಯನ್ನು ಗಳಿಸಿದೆ.
ಇನ್ನು ಆಕ್ಯುಪೆನ್ಸಿ ವಿಚಾರಕ್ಕೆ ಬಂದರೆ ಸ್ಯಾಕ್ನಿಲ್ ಉಲ್ಲೇಖ ಮಾಡಿರುವಂತೆ ಚೆನ್ನೈನಲ್ಲಿ ಅತೀ ಹೆಚ್ಚು ಅಂದರೆ ಶೇಕಡಾ 43.50% ಆಕ್ಯುಪೆನ್ಸಿ ಕಂಡು ಬಂದಿದೆ. ಕಮಲ್ ಹಾಸನ್ ಅಭಿನಯದ ಥಗ್ ಲೈಫ್ ಬಿಡುಗಡೆಯಾಗಿದ್ದರು ಕೂಡ ಚೆನ್ನೈ ಚಿತ್ರ ಪ್ರೇಮಿಗಳು ಅಕ್ಷಯ್ ಕುಮಾರ್ ಚಿತ್ರಕ್ಕೆ ಮಣೆ ಹಾಕಿರುವುದು ವಿಶೇಷ.
ದೆಹಲಿಯಲ್ಲಿ ಶೇಕಡಾ 32 % ಮುಂಬೈನಲ್ಲಿ ಶೇಕಡಾ 30 % ಮತ್ತು ಜೈಪುರದಲ್ಲಿ ಶೇಕಡಾ 36.50 % ಆಕ್ಯುಪೆನ್ಸಿ ಕಂಡು ಬಂದಿದೆ. ಇನ್ನು ಬೆಂಗಳೂರಿನಲ್ಲಿ ಕೂಡ ಮೊದಲ ದಿನ ಹೌಸ್‌ಫುಲ್ 5 ಚಿತ್ರ ನೋಡುವ ಉತ್ಸಾಹ ಪ್ರೇಕ್ಷಕರಲ್ಲಿ ಕಂಡು ಬಂದಿದೆ. ಮೊದಲ ದಿನ ಬೆಂಗಳೂರಿನಲ್ಲಿ ಶೇಕಡಾ 25 % ಆಕ್ಯುಪೆನ್ಸಿ ಕಂಡು ಬಂದಿದೆ.
ಹೌಸ್‌ಫುಲ್ 5 ಚಿತ್ರದ ಮೊದಲ ದಿನದ ಈ ಗಳಿಕೆಯಿಂದ ಅಕ್ಷಯ್ ಕುಮಾರ್ ಮೊಗದಲ್ಲಿ ಮಂದಹಾಸ ಮೂಡಿದೆ. ಯಾಕೆಂದರೆ ಅಕ್ಷಯ್ ಕುಮಾರ್ ಅಭಿನಯದ ಚಿತ್ರವೊಂದು ಇಂತಹದ್ದೊಂದು ಓಪನಿಂಗ್ ಪಡೆದು ಹಲವು ವರ್ಷಗಳೇ ಆಗಿತ್ತು.
ಸ್ಯಾಕ್ನಿಲ್ ವೆಬ್ ಸೈಟ್ ಉಲ್ಲೇಖಿಸಿರುವಂತೆ ಹೌಸ್‌ಫುಲ್ 2 ಚಿತ್ರಕ್ಕೂ ಮುನ್ನ ತೆರೆಗೆ ಬಂದಿದ್ದ ಕೇಸರಿ 2 ಮೊದಲ ದಿನ ₹ 7.50 ಕೋಟಿಯನ್ನು ಮಾತ್ರ ಗಳಿಸಿತ್ತು.
ಇನ್ನು ಈ ವರ್ಷದ ಆರಂಭದಲ್ಲಿ ತೆರೆಗೆ ಬಂದ ಸ್ಕೈ ಫೋರ್ಸ್ ಮೊದಲ ದಿನ ₹ 11.25 ಕೋಟಿಯನ್ನು ಗಳಿಸಿತ್ತು. ಇದಕ್ಕೂ ಹಿಂದೆ ತೆರೆಗೆ ಬಂದಿದ್ದ ಖೇಲ್ ಖೇಲ್ ಮೇ ಮೊದಲ ದಿನ ಕೇವಲ ₹5 ಕೋಟಿಯನ್ನು ಮಾತ್ರ ಗಳಿಸಿತ್ತು.
ಅದಕ್ಕೂ ಹಿಂದೆ ಬಂದಿದ್ದ ಸರ್ಫಿರಾ ಕೇವಲ ₹2.40 ಕೋಟಿಯನ್ನು ಮಾತ್ರ ಗಳಿಸಿತ್ತು. ಹೀಗಾಗಿ ಹೌಸ್‌ಫುಲ್ 5 ಚಿತ್ರದ ಮೊದಲ ದಿನದ ಈ ಗಳಿಕೆಯಿಂದ ಅಕ್ಷಯ್ ಕುಮಾರ್ ನಿರಾಳರಾಗಿದ್ದರು ಆಗಿರಬಹುದು.
ಅಂದ್ಹಾಗೇ ಹೌಸ್‌ಫುಲ್ 5 ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿಮರ್ಷಕರ ವಲಯದಲ್ಲಿ ಕೂಡ ಎರಡು ಬಣಗಳಾಗಿವೆ. ಕೆಲವರಿಗೆ ಚಿತ್ರ ಇಷ್ಟವಾಗಿದೆ. ಇನ್ನು ಕೆಲವರು ಚಿತ್ರದ ಕುರಿತು ನೆಗೆಟಿವ್ ಮಾತುಗಳನ್ನಾಡಿದ್ದಾರೆ. ಪ್ರೇಕ್ಷಕರ ಮತ್ತು ವಿಮರ್ಷಕರ ಈ ಅಭಿಪ್ರಾಯ ಚಿತ್ರದ ಇಂದಿನ ಗಳಿಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಒಟ್ನಲ್ಲಿ ಸದ್ಯ ಹೌಸ್‌ಫುಲ್ 5 ಚಿತ್ರ ಮೊದಲ ದಿನ 24 ಕೋಟಿಯನ್ನು ಗಳಿಸಿದೆ. ಇಂದು ಮತ್ತು ನಾಳೆ ಈ ಚಿತ್ರ ಎಷ್ಟು ಹಣ ಗಳಿಸಲಿದೆ, ಸೋಲಿನ ಸುಳಿಯಿಂದ ಅಕ್ಷಯ್ ಕುಮಾರ್ ಹೊರ ಬರುತ್ತಾರಾ ಎನ್ನುವುದನ್ನು ಈಗ ಕಾದು ನೋಡಬೇಕಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications










