ಅಲ್ಲಿ,ಇಲ್ಲಿ,ಎಲ್ಲೆಲ್ಲೂ 'ಕಾಂತಾರ' ಅಬ್ಬರ ; 10 ದಿನ-₹50 ಕೋಟಿ ಗಡಿ ತಲುಪುವ ಮುನ್ನವೇ ಹಳಸಿತು ಧನುಷ್ ಮಾಡಿದ 'ಇಡ್ಲಿ'

ಸಾಮಾನ್ಯವಾಗಿ ಎರಡು ದೊಡ್ಡ ಚಿತ್ರಗಳು ಒಂದೇ ದಿನ ತೆರೆಗೆ ಬಂದರೆ ವ್ಯಾಪಾರ ಹಂಚಿಹೋಗುವ ಭಯ ಇರುತ್ತೆ. ಚಿತ್ರದ ಕಥೆ-ನಿರೂಪಣೆಯಲ್ಲಿ ಚೂರು ಯಾಮಾರಿದರೂ ಕೂಡ ಇನ್ನೊಂದು ಚಿತ್ರದ ಮುಂದೆ ಮತ್ತೊಂದು ಚಿತ್ರ ಸೋಲುವ ಹೆದರಿಕೆ ಇರುತ್ತೆ. ಯಾವ ಚಿತ್ರ ನೋಡಬೇಕು, ಯಾವ ಚಿತ್ರ ನೋಡಬಾರದು ಎನ್ನುವ ಗೊಂದಲ ಪ್ರೇಕ್ಷಕರಿಗೆ ಕಾಡುತ್ತೆ. ಈ ಕಾರಣಕ್ಕೆ ಒಂದೇ ದಿನ...

ದೊಡ್ಡ ದೊಡ್ಡ ಚಿತ್ರಗಳನ್ನು ಒಟ್ಟೊಟ್ಟಿಗೆ ಬಿಡುಗಡೆ ಮಾಡಬೇಡಿ ಎಂದು ಎಲ್ಲ ಭಾಷೆಯಲ್ಲಿ ಚಿತ್ರಪ್ರೇಮಿಗಳು ಮನವಿಯನ್ನು ಮಾಡಿಕೊಳ್ಳುತ್ತಾರೆ. ಆಯಾ ಚಿತ್ರರಂಗದ ದೊಡ್ಡವರು ಕೂಡ ಈ ಸಲಹೆಯನ್ನೇ ನೀಡುತ್ತಾರೆ. ಆದರೆ. ಪ್ರೇಕ್ಷಕರ ಅಭಿಲಾಷೆ ಮತ್ತು ಚಿತ್ರರಂಗದವರ ಸಲಹೆಯನ್ನು ಕಡೆಗಣಿಸಿ ಅನೇಕರು ತಮ್ಮ ಚಿತ್ರವನ್ನು ಮತ್ತೊಂದು ಚಿತ್ರದ ಎದುರು ಬಿಡುಗಡೆ ಮಾಡುತ್ತಾರೆ.

idli-kadai-fails-to-take-off-day10-box-office-total-44cr-shows-dhanush-film-is-no-match-for-kantara

ಅದರಲ್ಲಿಯೂ ಹಬ್ಬ ಹರಿದಿನ ಬಂದರೆ ಅಥವಾ ಸಾಲು ಸಾಳು ರಜೆಗಳಿದ್ದರೆ ಸಾಕು ಹಿಂದಡಿ ಇಡುವ ಪ್ರಶ್ನೆಯೇ ಇರಲ್ಲ. ಜಿದ್ದಿಗೆ ಬಿದ್ದವರಂತೆ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡುತ್ತಾರೆ. ಹೀಗೆ ಬಿಡುಗಡೆ ಮಾಡಿದಾಗೆಲ್ಲ ಬಹುತೇಕ ಬಾರಿ ಒಬ್ಬರಿಗೆ ಸೋಲಾಗಿದೆ. ಈ ಇತಿಹಾಸ ಇನ್ನೊಮ್ಮೆ ಮರುಕಳಿಸಿದೆ. ಕನ್ನಡ ನೆಲದ ''ಕಾಂತಾರ-ಚಾಪ್ಟರ್ 1'' ಚಿತ್ರದ ಎದುರು ಬಂದ ಧನುಷ್ ನಿರ್ದೇಶಿಸಿ ಅಭಿನಯಿಸಿದ್ದ ''ಇಡ್ಲಿ ಕಡೇ'' ಚಿತ್ರ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿದೆ.

ಹೌದು, ಒಂದು ಕಡೆ ''ಕಾಂತಾರ-ಚಾಪ್ಟರ್ 1'' ಬೆಳ್ಳಿ ಪರದೆಯಲ್ಲಿ ಧಗಧಗಿಸುತ್ತಿದೆ. ಈ 09 ದಿನದಲ್ಲಿಯೇ ಕೋಟ್ಯಂತರ ಹಣ ಕೊಳ್ಳೆ ಹೊಡೆದಿದೆ. ನಿರ್ಮಾಣ ಸಂಸ್ಥೆ ಹೊಂಬಾಳೆಯೇ ನೀಡಿರುವ ಲೆಕ್ಕದ ಪ್ರಕಾರ ವಿಶ್ವದೆಲ್ಲೆಡೆದಿಂದ ₹500 ಕೋಟಿಗೂ ಅಧಿಕ ಹಣ ಹರಿದು ಬಂದಿದೆ.

ಆದರೆ.. ಮತ್ತೊಂದು ಕಡೆ ''ಇಡ್ಲಿ ಕಡೇ'' ಬಿಡುಗಡೆಯಾಗಿ ಹತ್ತು ದಿನವಾದರೂ ಕೂಡ ₹50 ಕೋಟಿಯ ಗಡಿಯನ್ನು ತಲುಪಲು ಕೂಡ ಪರದಾಡುತ್ತಿದೆ. ಬಾಕ್ಸಾಫೀಸ್‌ನ ಅಂಕಿ-ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಕೇವಲ ₹ 44.33 ಕೋಟಿಯನ್ನಷ್ಟೇ ಈ ಚಿತ್ರ ಗಳಿಸಿದೆ.

ಇನ್ನೂ ''ಕಾಂತಾರ'' ತೆರೆಗೆ ಅಪ್ಪಳಿಸುವ ಒಂದು ದಿನ ಮುನ್ನ ಬಿಡುಗಡೆಯಾದ ಚಿತ್ರ '' ಇಡ್ಲಿ ಕಡೇ''. ವಿಪರ್ಯಾಸ ಅಂದರೆ ಬಿಡುಗಡೆಯಾದ ಮೊದಲ ದಿನ ಮಾತ್ರ ''ಇಡ್ಲಿ ಕಡೇ'' ಗಳಿಕೆ ಎರಡಂಕಿ ದಾಟಿದೆ. ಮೊದಲ ದಿನ ₹ 11 ಕೋಟಿ ಗಳಿಸಿದೆ. ಮರು ದಿನ ''ಕಾಂತಾರ-ಚಾಪ್ಟರ್ 1'' ಬಿಡುಗಡೆಯಾದ ದಿನದಿಂದ ಇಲ್ಲಿಯವರೆಗೆ ''ಇಡ್ಲಿ ಕಡೇ'' ಒಂದೇ ದಿನ ಒಂದು ದಿನ ₹10 ಕೋಟಿಯ ಗಡಿಯನ್ನು ತಲುಪಿಲ್ಲ.

idli-kadai-fails-to-take-off-day10-box-office-total-44cr-shows-dhanush-film-is-no-match-for-kantara

ಸ್ಯಾಕ್ನಿಲ್ ಪ್ರಕಾರ ''ಇಡ್ಲಿ ಕಡೇ'' ಚಿತ್ರದ ಹತ್ತು ದಿನದ ಗಳಿಕೆ ಈ ಕೆಳಗಿನಂತೆ ಇದೆ.

ಮೊದಲ ದಿನ [ಬುಧವಾರ] ₹ 11 ಕೋಟಿ
ಎರಡನೇ ದಿನ [ಗುರುವಾರ] ₹ 9.75ಕೋಟಿ
ಮೂರನೇ ದಿನ[ಶುಕ್ರವಾರ] ₹ 5.6 ಕೋಟಿ
ನಾಲ್ಕನೇ ದಿನ [ಶನಿವಾರ ] ₹ 6.25 ಕೋಟಿ
ಐದನೇ ದಿನ [ಭಾನುವಾರ] ₹6 ಕೋಟಿ
ಆರನೇ ದಿನ [ಸೋಮವಾರ] ₹1.75 ಕೋಟಿ
ಏಳನೇ ದಿನ [ಮಂಗಳವಾರ] ₹1.55 ಕೋಟಿ
ಎಂಟನೇ ದಿನ [ ಬುಧವಾರ] ₹1.3 ಕೋಟಿ
ಒಂಬತ್ತನೇ ದಿನ [ ಗುರುವಾರ] ₹1.1 ಕೋಟಿ
ಹತ್ತನೇ ದಿನ [ ಶುಕ್ರವಾರ] ₹ 32 ಲಕ್ಷ * ಅಂದಾಜು

ಒಟ್ಟು ಗಳಿಕೆ - ₹ 44.33 ಕೋಟಿ

ಹೀಗೆ ಸತತವಾಗಿ ಕುಸಿತ ಕಾಣುತ್ತಲೇ ಬಂದ ''ಇಡ್ಲಿ ಕಡೇ'' ಚಿತ್ರದ ಗಳಿಕೆ ಸದ್ಯ ಕೋಟಿಯಿಂದ ಲಕ್ಷಕ್ಕೆ ಬಂದಿದೆ. ದೀಪಾವಳಿ ಹಬ್ಬದವರೆಗೆ ಬೇರೆ ಯಾವ ದೊಡ್ಡ ಚಿತ್ರಗಳು ಇಲ್ಲದಿದ್ದರು ಕೂಡ ಸದ್ಯ ''ಇಡ್ಲಿ ಕಡೇ'' ₹50 ಕೋಟಿ ಕೂಡ ಗಳಿಸುವುದು ಅನುಮಾನ ಎನ್ನುವ ಮಾತು ಕೇಳಿ ಬರುತ್ತಿದೆ. ಬೆಂಗಳೂರಿನಲ್ಲಿ ಬಹುತೇಕ ಕಡೆ ಚಿತ್ರವನ್ನು ಎತ್ತಂಗಡಿ ಮಾಡಲಾಗಿದೆ. ಹದಿನೈದು ಕಡೆ ಇದೆಯಾದರು ಅಲ್ಲಿರುವುದು ಕೇವಲ ಒಂದು ಶೋ ಮಾತ್ರ.

ಇದು ಕೇವಲ ಬೆಂಗಳೂರಿನ ಕಥೆ ಮಾತ್ರ ಅಲ್ಲ. ಚೆನ್ನೈ ಹೊರತು ಪಡಿಸಿದರೆ ಬಹುತೇಕ ಅನೇಕ ಸ್ಥಳದಲ್ಲಿ ''ಇಡ್ಲಿ ಕಡೇ'' ಚಿತ್ರಮಂದಿರಗಳಿಂದ ಆಗಲೇ ಕಾಣೆಯಾಗಿದೆ. ಸದ್ಯ 10 ದಿನದಲ್ಲಿ ₹ 44.33 ಕೋಟಿ ಗಳಿಸಿರುವ ಈ ಚಿತ್ರ ಇನ್ನೆಷ್ಟು ಗಳಿಸುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
The Day 10 box office total for Idli Kadai is a disappointing ₹44 Cr. Get the full report on why the Dhanush starrer is registering low numbers against Kantara Chapter 1.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X