Ikkis BO Day 2; ಧುರಂಧರ್ ಅಬ್ಬರ, ಬಿಗ್ ಬಿ ಮೊಮ್ಮಗನ ಚಿತ್ರಕ್ಕೆ ಕೊಡಲಿ ಪೆಟ್ಟು - 2 ದಿನದಲ್ಲಿ ಗಳಿಸಿದ್ದೆಷ್ಟು ?

ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳಾಗೋದು ಹೇಗೆ ಕಾಮನ್ನೋ ಅದೇ ತರ ಸಿನಿಮಾರಂಗದಲ್ಲಿ ಸ್ಟಾರ್ ಗಳ ಮಕ್ಕಳು ಸ್ಟಾರ್ ಗಳಾಗೋದು ಕೂಡ ಕಾಮನ್ನೇ. ಆದರೆ, ಹೀಗೆ ಚಿತ್ರರಂಗಕ್ಕೆ ಬರುವ ಎಲ್ಲರಿಗೆ ಇಲ್ಲಿ ಗೆಲುವು ಸಿಗುವುದಿಲ್ಲ. ತೀರಾ ಅಪರೂಪಕ್ಕೆ ಎಂಬಂತೆ ಅಲ್ಲೊಬ್ಬರು.. ಇಲ್ಲೊಬ್ಬರು.. ಮಾತ್ರ ಗೆಲ್ಲುತ್ತಾರೆ. ಮಿಕ್ಕಂತೆ ಕೆಲವರು ಎಡವುತ್ತಾರೆ. ಮತ್ತೆ ಮತ್ತೆ ಪ್ರಯತ್ನ ಮಾಡುತ್ತಾರೆ. ಇನ್ನೂ ಕೆಲವರು....

ಬಂದ ದಾರಿಗೆ ಸುಂಕ ಇಲ್ಲ ಎಂದು ಮನೆಗೆ ಮರಳುತ್ತಾರೆ. ಇದರಲ್ಲಿ ಅಮಿತಾಬ್ ಬಚ್ಚನ್ ಮೊಮ್ಮಗ ಅಗಸ್ತ್ಯಾ ನಂದಾ ಯಾವ ಸಾಲಿನಲ್ಲಿ ಸೇರುತ್ತಾರೆ ಎನ್ನುವುದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆಯಾದರೂ ಸದ್ಯ ಮೊದಲ ಪ್ರಯತ್ನದಲ್ಲಿ ಅಗಸ್ತ್ಯಾಗೆ ಹಿನ್ನೆಡೆಯಾಗಿದೆ. ''ಧುರಂಧರ್'' ಅಬ್ಬರದಿಂದ ಅಗಸ್ತ್ಯಾನ ಮೊದಲ ಚಿತ್ರ ''ಇಕ್ಕೀಸ್‌'' ಬಾಕ್ಸಾಫೀಸ್‌ನಲ್ಲಿ ನರಳುತ್ತಿದೆ.

ikkis-day-2-box-office-agastya-nanda-s-war-epic-hits-friday-slump-crosses-10-cr-mark-despite-50

ಹೌದು, ಅಸಲಿಗೆ ''ಇಕ್ಕೀಸ್'' ಕಳೆದ ವರ್ಷಾಂತ್ಯದಲ್ಲಿ ಅಂದರೆ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ತೆರೆಗೆ ಬರಬೇಕಿತ್ತು. ಆದರೆ.. ''ಧುರಂಧರ್'' ಅಲೆಗೆ ಹೆದರಿ ಚಿತ್ರತಂಡ ಒಂದು ವಾರ ಚಿತ್ರದ ಬಿಡುಗಡೆಯನ್ನು ಮುಂದೂಡಿತ್ತು. ಹೊಸ ವರುಷ.. ಹೊಸ ಹರುಷ ತರುತ್ತೆ.. ''ಧುರಂಧರ್'' ಕ್ರೇಜ್ ಕಡಿಮೆಯಾಗಿರುತ್ತೆ ಎಂಬ ಲೆಕ್ಕಾಚಾರದಲ್ಲಿ ಚಿತ್ರವನ್ನು ಜನವರಿ 1ರಂದು ಬಿಡುಗಡೆ ಮಾಡಿತ್ತು. ಆದರೆ ಈ ಲೆಕ್ಕಾಚಾರ ಕೂಡ ಬುಡಮೇಲಾಗಿದೆ.

ಹಾಗೇ ನೋಡಿದರೆ ಮೊದಲ ದಿನ (ಜನವರಿ 1 ) ''ಇಕ್ಕಿಸ್'' ಭರವಸೆಯನ್ನು ಮೂಡಿಸಿತ್ತು. ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ವರದಿಯಂತೆ ₹ 7.00 ಕೋಟಿಯನ್ನು ಗಳಿಸಿತ್ತು. ಹೊಸ ಹುಡುಗನ ಚಿತ್ರಕ್ಕೆ ಇದು ಉತ್ತಮವಾದ ಆರಂಭ ಎಂದೇ ಟ್ರೇಡ್ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದರು. ಆದರೆ, ನಿನ್ನೆ (ಜನವರಿ 2 ) ''ಇಕ್ಕಿಸ್'' ಚಿತ್ರದ ಗಳಿಕೆಯಲ್ಲಿ ಬರೋಬ್ಬರಿ 50% ಕುಸಿತ ಕಂಡು ಬಂದಿದೆ.ಎರಡನೇ ದಿನ ಚಿತ್ರ ಕೇವಲ ₹ 3.50 ಕೋಟಿಯನ್ನು ಮಾತ್ರ ಗಳಿಸಿದೆ ಎಂದು ''ಸ್ಯಾಕ್ನಿಲ್'' ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ikkis-day-2-box-office-agastya-nanda-s-war-epic-hits-friday-slump-crosses-10-cr-mark-despite-50

''ಸ್ಯಾಕ್ನಿಲ್'' ಪ್ರಕಾರ ''ಇಕ್ಕಿಸ್'' ಚಿತ್ರದ ಮೊದಲ ಎರಡು ದಿನದ ಗಳಿಕೆ ಈ ಕೆಳಗಿನಂತೆ ಇದೆ.

ಮೊದಲ ದಿನ [ಗುರುವಾರ]₹ 7 ಕೋಟಿ
ಎರಡನೇ ದಿನ [ಶುಕ್ರವಾರ]-₹3.50 ಕೋಟಿ * ಅಂದಾಜು

ಒಟ್ಟು ಗಳಿಕೆ - ₹ 10.50 ಕೋಟಿ

ನಿಜಾ. ನಿನ್ನೆ ವರ್ಕಿಂಗ್ ಡೇ. ನ್ಯೂ ಇಯರ್ ಮೂಡ್‌ನಿಂದ ಎಲ್ಲರೂ ಹೊರ ಬಂದಿದ್ದಾರೆ. ಹೀಗಾಗಿ ಚಿತ್ರದ ಗಳಿಕೆಯಲ್ಲಿ ಕುಸಿತ ಕಂಡು ಬಂದಿರಬಹುದು. ಆದರೆ, ಮತ್ತೊಂದು ಕಡೆ ''ಧುರಂಧರ್'' ತೆರೆಗೆ ಬಂದು 29 ದಿನಗಳಾಗಿವೆ. ಆದರೂ ಕೂಡ ₹ 8.75 ಕೋಟಿಯನ್ನು ಈ ಚಿತ್ರ ನಿನ್ನೆ (ಜನವರಿ 2 ) ದೋಚಿದೆ. ಈ ಹಿನ್ನೆಲೆ ''ಧುರಂಧರ್'' ಅಲೆಯಿಂದಾಗಿ ''ಇಕ್ಕಿಸ್''ಗೆ ಕೊಡಲಿ ಪೆಟ್ಟು ಬಿತ್ತು ಎಂಬ ಮಾತು ಸದ್ಯ ಚಿತ್ರನಗರಿಯಲ್ಲಿ ಕೇಳಿ ಬರುತ್ತಿವೆ.

ಒಟ್ನಲ್ಲಿ ಮೊದಲ ಎರಡು ದಿನದಲ್ಲಿ ಸದ್ಯ ''ಇಕ್ಕಿಸ್'' ₹10.50 ಕೋಟಿಯನ್ನು ಗಳಿಸಿದೆ. ಚಿತ್ರಕ್ಕೆ ಉತ್ತಮವಾದ ಪ್ರತಿಕ್ರಿಯೆ ಪ್ರೇಕ್ಷಕರಿಂದ ಮತ್ತು ವಿಮರ್ಷಕರಿಂದ ಸಿಕ್ಕಿದೆ. ಆದರೂ ಪ್ರೇಕ್ಷಕರ ಕೊರತೆ ಚಿತ್ರತಂಡಕ್ಕೆ ಕಾಡುತ್ತಿದೆ. ಈ ಹಿನ್ನೆಲೆ ಇಂದು (ಜನವರಿ 3) ಮತ್ತು ನಾಳೆಯ (ಜನವರಿ 4) ಗಳಿಕೆ ಮೇಲೆ ಅಗಸ್ತ್ಯಾ ನಂದ ಮೊದಲ ಪ್ರಯತ್ನದ ಫಲಿತಾಂಶ ಪ್ರಕಟವಾಗಲಿದೆ. ಈ ಪರೀಕ್ಷೆಯಲ್ಲಿ ಅಮಿತಾಬ್ ಬಚ್ಚನ್ ಮೊಮ್ಮಗ ಪಾಸಾಗ್ತಾರಾ..? ಎನ್ನುವುದನ್ನು ಕಾದು ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Ikkis Day 2 Box Office Report: After a ₹7 Cr opening, the Dharmendra and Agastya Nanda starrer settles at ₹10.5 Cr total. With a 14.72% occupancy, can positive word-of-mouth save this war epic from the Dhurandhar wave? Read the latest earnings and theater stats.
Read more about: bollywood amitabh bachchan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X