ಬಾಲಿವುಡ್‌ನ ''ಪರಮ ಸುಂದರಿ'' ನಂಬಿ ₹21 ಕೋಟಿ ಕಳೆದುಕೊಂಡ ನಿರ್ಮಾಪಕ
ಸಿನಿಮಾ ಅನ್ನುವುದು ಗ್ಯಾಂಬ್ಲಿಂಗ್ ಇದ್ದಂತೆ ಎಂದು ಕಾಲ ಕಾಲಕ್ಕೆ ಬರುವ ಕಾರಣ ಚಕ್ರವರ್ತಿಗಳು ಹೇಳ್ತಾನೇ ಬಂದಿದ್ದಾರೆ. ಆದರೂ.. ಇಲ್ಲಿ ಹೂಡಿಕೆ ಮಾಡಿದರೆ ಒಳ್ಳೇ ಲಾಭ ಮಾಡಬಹುದು ಎಂಬ ಲೆಕ್ಕಾಚಾರದಲ್ಲಿ ಅನೇಕರು ಬರುತ್ತಾರೆ. ಕೆಲವರು ಗೆಲ್ತಾರೆ. ನಿರೀಕ್ಷೆಯನ್ನೂ ಮೀರಿ ಲಾಭ ಮಾಡುತ್ತಾರೆ. ಇನ್ನು ಕೆಲವರು ಹಣದಾಸೆಯಲ್ಲಿ ತಮ್ಮ ಕೈಯಲ್ಲಿದ್ದ ದುಡ್ಡೆಲ್ಲ ಚಿತ್ರಕ್ಕೆ ಹೂಡಿ ಆ ನಂತರ...
ನಷ್ಟಕ್ಕೀಡಾಗಿ ಮಾಡಿದ ತಪ್ಪಿಗೆ ಕೈ ಕೈ ಹಿಸುಕಿಕೊಳ್ಳುತ್ತಾರೆ. ಇದಕ್ಕೆ ''ಪರಮ ಸುಂದರಿ'' ನಿರ್ಮಾಪಕ ದಿನೇಶ್ ವಿಜ್ಜನ್ ಸದ್ಯದ ಉದಾಹರಣೆ. ಹೌದು, ''ಪರಮ ಸುಂದರಿ'' ಅಂದಕಾಲತ್ತಿಲ್‌ನ ''ಅತಿಲೋಕ ಸುಂದರಿ'' ಶ್ರೀದೇವಿಯ ಮಗಳು ಜಾಹ್ನವಿ ಅಭಿನಯದ ಚಿತ್ರ.

ಬಿಡುಗಡೆಗೆ ಮುನ್ನ ಹಾಡು ಮತ್ತು ಟ್ರೇಲರ್‌ದಿಂದ ಅನೇಕರ ಗಮನ ಸೆಳೆದಿದ್ದ ಚಿತ್ರ ಇದು. ಇದಕ್ಕೆ ಕೈಗನ್ನಡಿ ಎಂಬಂತೆ ಕಳೆದ ವಾರ (ಆಗಸ್ಟ್ 29 ) ಬಿಡುಗಡೆಯಾದ ದಿನ ಉತ್ತಮ ಪ್ರದರ್ಶನವನ್ನು ಕೂಡ ಈ ಚಿತ್ರ ಕಂಡಿತ್ತು.
ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ''ಪರಮ ಸುಂದರಿ'' ಮೊದಲ ದಿನ ₹ 7.25 ಕೋಟಿಯನ್ನು ಗಳಿಸಿತ್ತು. ಎರಡನೇ ದಿನ ₹ 9.25 ಕೋಟಿ ಗಳಿಸಿದ್ದ ಈ ಚಿತ್ರ ಮೂರನೇ ದಿನ ₹ 10.25 ಕೋಟಿಯನ್ನು ಕೊಳ್ಳೆ ಹೊಡೆದಿತ್ತು. ಈ ಮೂಲಕ ಗೆಲ್ಲುವ ಸೂಚನೆಯನ್ನು ಕೂಡ ಈ ಚಿತ್ರ ನೀಡಿತ್ತು.
ಆದರೆ..ಆ ನಂತರ ಲೆಕ್ಕಾಚಾರ ಅದಲು ಬದಲಾದವು. ಚಿತ್ರಕ್ಕೆ ಪ್ರೇಕ್ಷಕರ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆ ''ಪರಮ ಸುಂದರಿ''ಯನ್ನು ನೋಡಬೇಕೆನ್ನುವ ಆಲೋಚನೆ ಮಾಡಿದವರು ಕೂಡ ಹಿಂದೆ ಮುಂದೆ ಯೋಚನೆ ಮಾಡಲು ಶುರು ಮಾಡಿದರು.
ಇನ್ನೂ ಕೇರಳದಲ್ಲಿ ಚಿತ್ರೀಕರಣವಾದ ಈ ಚಿತ್ರದ ವಿರುದ್ಧ ಕೇರಳದಲ್ಲಿಯೇ ಆಕ್ರೋಶ ಭುಗಿಲೆದ್ದಿತ್ತು. ವಿಮರ್ಷಕರು ಕೂಡ ಈ ಚಿತ್ರಕ್ಕೆ ಮೂರು ಸ್ಟಾರ್‌ಗಳನ್ನು ನೀಡಿ ಕೈ ತೊಳೆದುಕೊಂಡಿದ್ದರು. ಇದೆಲ್ಲದರ ಪರಿಣಾಮ ಸೋಮವಾರ (ಸೆಪ್ಟೆಂಬರ್ 1)ದಿಂದ ಕುಸಿಯುತ್ತಲೇ ಬಂದ ಈ ಚಿತ್ರದ ಗಳಿಕೆಯಲ್ಲಿ ಆ ನಂತರ ಚೇತರಿಕೆ ಕಂಡು ಬರಲೇ ಇಲ್ಲ.

''ಸ್ಯಾಕ್ನಿಲ್'' ಪ್ರಕಾರ ಸದ್ಯ ಈ ಚಿತ್ರ 7 ದಿನದಲ್ಲಿ ಕೇವಲ ₹38.49 ಕೋಟಿಯನ್ನು ಮಾತ್ರ ಗಳಿಸಿದೆ. ಇನ್ನೂ ಹೊರದೇಶದಲ್ಲಿ ಕೂಡ ''ಪರಮ ಸುಂದರಿ''ಗೆ ಯಾರು ಮರುಳಾಗಿಲ್ಲ. ಅಲ್ಲಿ ಚಿತ್ರ ₹15 ಕೋಟಿಯ ಗಡಿಯನ್ನು ಕೂಡ ದಾಟಿಲ್ಲ.
60 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ''ಪರಮ ಸುಂದರಿ''
ಅಂದ್ಹಾಗೇ www.koimoi.com ವರದಿಯ ಪ್ರಕಾರ ''ಪರಮ ಸುಂದರಿ''ಗೆ ನಿರ್ಮಾಪಕ ದಿನೇಶ್ ವಿಜ್ಜನ್ ₹60 ಕೋಟಿ ಹಣ ಖರ್ಚು ಮಾಡಿದ್ದಾರೆ. ಪ್ರಚಾರಕ್ಕೆ ಇನ್ನೆಷ್ಟು ಹಣ ಖರ್ಚಾಗಿದೆ ಎನ್ನುವ ವಿವರ ಇಲ್ಲ. ಇಷ್ಟೊಂದು ದೊಡ್ಡ ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರ ಸದ್ಯ ಕೇವಲ ₹38.49 ಕೋಟಿಯನ್ನಷ್ಟೇ ಭಾರತದಲ್ಲಿ ಗಳಿಸಿದೆ. ಇನ್ನೂ ಸ್ಯಾಟ್‌ಲೈಟ್, ಡಿಜಿಟಲ್ ಸೇರಿ ಉಳಿದ ಹಕ್ಕುಗಳಿಂದ ಹೆಚ್ಚಿನ ಹಣವನ್ನು ನಿರೀಕ್ಷೆ ಮಾಡಲು ಸಾಧ್ಯ ಇಲ್ಲ. ''ಪೇ ಪರ್ ವ್ಯೂವ್'' ಸಿಸ್ಟಮ್‌ನಡಿ ಈ ಚಿತ್ರವನ್ನು ಓಟಿಟಿ ವೇದಿಕೆಯವರು ಖರೀದಿ ಮಾಡಿದ್ದರು ಮಾಡಿರಬಹುದು. ಆ ಸಾಧ್ಯತೆ ಕೂಡ ಇದೆ.
ಇನ್ನೂ ಈ ಶುಕ್ರವಾರ (ಸೆಪ್ಟೆಂಬರ್ 5) ಕನ್ನಡದ ನಿರ್ದೇಶಕ ಎ.ಹರ್ಷ ನಿರ್ದೇಶನದ ''ಭಾಘಿ 4'' ತೆರೆಗೆ ಅಪ್ಪಳಿಸಲಿದೆ. ''ಪರಮ ಸುಂದರಿ''ಯ ಲಭ್ಯ ಇರುವ ಸ್ಕ್ರೀನ್‌ಗಳನ್ನು ಕೂಡ ಈ ಚಿತ್ರ ಕಿತ್ತುಕೊಳ್ಳಲಿದೆ. ಈ ಹಿನ್ನೆಲೆ ಹೇಗೆ ಕೂಡಿ ಕಳೆದು ಲೆಕ್ಕ ಹಾಕಿದರು ನಿರ್ಮಾಪಕ ದಿನೇಶ್ ವಿಜ್ಜನ್‌ಗೆ ಈ ಚಿತ್ರದಿಂದ ₹21 ಕೋಟಿ ನಷ್ಟವಾಗುವುದು ಖಚಿತ ಎನ್ನುವ ಮಾತು ಸದ್ಯ ಬಾಲಿವುಡ್‌ನಲ್ಲಿ ಕೇಳಿ ಬರುತ್ತಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ


Click it and Unblock the Notifications