Jaat Box Office Day 7 ; ಬಾಕ್ಸಾಫೀಸ್‌ನಲ್ಲಿ ಎಡವಿದ ಜಾಟ್, ಆದರೆ ನಿರ್ಮಾಪಕರು ಹೇಳೋದೇ ಬೇರೆ !

ಹಿಂದೆ ಎಲ್ಲ ಬಾಲಿವುಡ್ ನವರು, ಮಾತಿಗೂ ಮುನ್ನ ನಮ್ಮ ಸಿನಿಮಾದ ಗಳಿಕೆ ನೂರು ಕೋಟಿಯ ಗಡಿ ದಾಟಿದೆ ಎಂಬ ಮಾತುಗಳನ್ನಾಡ್ತಿದ್ದರು.ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದರು.ಆದರೆ ಆ ನಂತರ ಲೆಕ್ಕ ತಪ್ಪಿತು.ಸಲೀಸಾಗಿ ನೂರು ಕೋಟಿಯನ್ನ ಗಳಿಸುತ್ತಿದ್ದ ಬಾಲಿವುಡ್ ನಲ್ಲಿ ಐವತ್ತು ಕೋಟಿಗೂ ಹಾಹಾಕಾರ ಎದ್ದಿತು.ಕಳೆದ ವರ್ಷ ಹೊರತು ಪಡಿಸಿದರೆ, ಕೊರೊನಾ ನಂತರ ಬಾಲಿವುಡ್ ಅನುಭವಿಸಿದ್ದು ಬಹುತೇಕ ನಷ್ಟನೇ.

ಇಂಥಾ ಬಾಲಿವುಡ್ ನಲ್ಲಿ ಈ ವರ್ಷ ಕೂಡ ಬರಗಾಲ ಇದೆ. ಛಾವಾ ಹೊರತು ಪಡಿಸಿದರೆ ಬೇರೆ ಯಾವ ಚಿತ್ರ ಕೂಡ ಹೇಳಿಕೊಳ್ಳುವ ಸಾಧನೆ ಮಾಡಿಲ್ಲ. ಇನ್ನು ಸಿಕಂದರ್ ಚಿತ್ರವನ್ನು ಖುದ್ದು ಸಲ್ಮಾನ್ ಖಾನ್ ಮರೆತಿದ್ದಾರೆ. ಇದ್ದಿದ್ದರಲ್ಲಿ ಸದ್ಯ ಜಾಟ್ ಬಾಲಿವುಡ್‌ಗೆ ತುಸು ಆಸರೆಯಾಗಿದೆ. ತೆರೆಗೆ ಬಂದ ಒಂದು ವಾರದಲ್ಲಿ 100 ಕೋಟಿಯನ್ನು ಕೊಳ್ಳೆ ಹೊಡೆಯದಿದ್ದರೂ ಜಾಟ್ ₹ 50 ಕೋಟಿಯ ಗಡಿಯನ್ನು ದಾಟುವಲ್ಲಿ ಯಶಸ್ವಿಯಾಗಿದೆ.

jaat-box-office-day-7-sunny-deol-film-loses-momentum-but-makers-claim-its-a-blockbuster-outing

ಹೌದು, ಕಳೆದ ಗುರುವಾರ ತೆರೆಗೆ ಬಂದ ಜಾಟ್ ಚಿತ್ರ ದಿನದಿಂದ ದಿನಕ್ಕೆ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಚಿತ್ರ ಆರಕ್ಕೇರದೇ ಮೂರಕ್ಕಿಳಿಯದೇ ನಿಂತ ಜಾಗದಲ್ಲಿಯೇ ನಿಂತುಕೊಂಡಿದೆ. ಚಿತ್ರದ ಗಳಿಕೆಯ ಲೆಕ್ಕಾಚಾರವನ್ನು ಹಂಚಿಕೊಳ್ಳುವ ಸ್ಯಾಕ್ನಿಲ್ಕ್ ವೆಬ್ ಸೈಟ್ ಪ್ರಕಾರ ಜಾಟ್ ಚಿತ್ರ ಬಾಕ್ಸಾಫೀಸ್‌ನಲ್ಲಿ ಸದ್ಯ ₹50ಕೋಟಿಯ ಗಡಿಯನ್ನು ದಾಟಿದ್ದು 7 ದಿನದಲ್ಲಿ ಚಿತ್ರ ₹57.50 ಕೋಟಿಯನ್ನು ಗಳಿಸಿದೆ.

ಮೊದಲ ದಿನ ಹತ್ ಹತ್ತಿರ ಹತ್ತು ಕೋಟಿಯನ್ನು ಗಳಿಸಿದ್ದ ಚಿತ್ರದ ಗಳಿಕೆಯಲ್ಲಿ ಶನಿವಾರ ಮತ್ತು ಭಾನುವಾರ ಏರಿಕೆ ಕಂಡು ಬಂದಿತ್ತು. ಸಿಂಗಲ್ ಸ್ಕ್ರೀನ್‌ ಚಿತ್ರಮಂದಿರಗಳಲ್ಲಿ ಐಪಿಎಲ್ ನಡುವೆಯೂ ಕೂಡ ಜನಸಾಗರ ಕಂಡು ಬಂದಿತ್ತು. ಸೋಮವಾರ ಕೂಡ ಚಿತ್ರದ ಗಳಿಕೆ ಚೆನ್ನಾಗಿತ್ತು. ಆದರೆ ನಿನ್ನೆಯಿಂದ ಚಿತ್ರದ ಗಳಿಕೆಯಲ್ಲಿ ಕುಸಿತ ಕಂಡು ಬರುತ್ತಿದೆ. ಈ ಹಿನ್ನೆಲೆ ಚಿತ್ರ ಬಾಕ್ಸಾಫೀಸ್‌ನಲ್ಲಿ ₹100 ಕೋಟಿ ಗಳಿಸುವುದು ಅನುಮಾನ ಎನ್ನುವ ಮಾತು ಕೇಳಿ ಬರುತ್ತಿದೆ.

ಸ್ಯಾಕ್ನಿಲ್ಕ್ ವೆಬ್ ಸೈಟ್ ಪ್ರಕಾರ ಜಾಟ್ ಚಿತ್ರದ ಮೂರು ದಿನದ ಗಳಿಕೆ ಈ ಕೆಳಗಿನಂತೆ ಇದೆ.

ಮೊದಲ ದಿನ - { ಗುರುವಾರ } ₹ 9.5 ಕೋಟಿ

ಎರಡನೇ ದಿನ - { ಶುಕ್ರವಾರ } ₹ 7 ಕೋಟಿ

ಮೂರನೇ ದಿನ -{ ಶನಿವಾರ} ₹ 10 ಕೋಟಿ

ನಾಲ್ಕನೇ ದಿನ - { ಭಾನುವಾರ} ₹ 14 ಕೋಟಿ

ಐದನೇ ದಿನ - {ಸೋಮವಾರ } ₹ 7.25 ಕೋಟಿ

ಆರನೇ ದಿನ - { ಮಂಗಳವಾರ } ₹ 6 ಕೋಟಿ

ಏಳನೇ ದಿನ - { ಬುಧವಾರ } ₹ 4 ಕೋಟಿ { ಅಂದಾಜು }

ಒಟ್ಟು ಗಳಿಕೆ - ₹ 57.50 ಕೋಟಿ

ಆದರೆ ಚಿತ್ರದ ನಿರ್ಮಾಣ ಸಂಸ್ಥೆಯಾದ ಮೈತ್ರಿ ಮೂವಿ ಮೇಕರ್ಸ್ ಈ ವಿಚಾರದಲ್ಲಿ ಮಾಡುವ ವಾದವೇ ಬೇರೆ. ಚಿತ್ರದ ಗಳಿಕೆಯ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ವಿವರ ಹಂಚಿಕೊಳ್ಳುತ್ತಿರುವ ಮೈತ್ರಿ ಮೂವಿ ಮೇಕರ್ಸ್ ಜಾಟ್ ಚಿತ್ರದ ಆರು ದಿನದ ಗಳಿಕೆ ₹65.45 ಕೋಟಿಯಾಗಿದೆ ಎಂದು ಹೇಳಿದೆ. ಜಾಟ್ ಚಿತ್ರ ಬ್ಲಾಕ್‌ಬಸ್ಟರ್ ಆಗಿದೆ ಎಂದು ಕೂಡ ಉಲ್ಲೇಖಿಸಿದೆ.

ಸ್ಯಾಕ್ನಿಲ್ಕ್ ಮತ್ತು ಮೈತ್ರಿ ಮೂವಿ ಮೇಕರ್ಸ್ ಹಂಚಿಕೊಂಡ ಈ ಅಂಕಿ ಅಂಶಗಳಲ್ಲಿ ಅಂತರ ಇರುವುದನ್ನು ಗಮನಿಸಿದ ಚಿತ್ರಪ್ರೇಮಿಗಳು ಇಬ್ಬರಲ್ಲಿ ಯಾರ ಲೆಕ್ಕ ಪಕ್ಕಾ ಎಂದು ನಮಗೆ ಹೇಗೆ ಗೊತ್ತಾಗುತ್ತೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಈ ಕುರಿತು ಚರ್ಚೆಯನ್ನು ಮಾಡುತ್ತಿದ್ದಾರೆ.

ಇನ್ನುಳಿದಂತೆ ಈ ವಾರ ಅಕ್ಷಯ್ ಕುಮಾರ್ ಅಭಿನಯದ ಕೇಸರಿ 2 ಚಿತ್ರ ತೆರೆಗೆ ಬರಲಿದೆ. ಈಗಾಗಲೇ ಚಿತ್ರದ ಟ್ರೇಲರ್ ಕುತೂಹಲವನ್ನು ಮೂಡಿಸಿದ್ದು ಚಿತ್ರ ಉತ್ತಮ ಆರಂಭ ಪಡೆಯುವ ನಿರೀಕ್ಷೆ ಇದೆ. ಕೇಸರಿ 2 ಚಿತ್ರದಿಂದ ಜಾಟ್ ಚಿತ್ರದ ಗಳಿಕೆಯ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆ ಕೂಡ ಇದೆ. ಹೀಗಾಗಿ ಹೇಗೆ ಕೂಡಿ ಕಳೆದರು ಕೂಡ ಜಾಟ್ ಚಿತ್ರ ನೂರು ಕೋಟಿಯ ಗಡಿಯನ್ನು ದಾಟಲು ಸಾಧ್ಯ ಇಲ್ಲ ಎನ್ನುವ ಮಾತು ಕೂಡ ಬಾಲಿವುಡ್‌ನಲ್ಲಿ ಕೇಳಿ ಬರುತ್ತಿದೆ.


Disclaimer ; ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

Read more about: sunny deol boxofffice bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X