Jaat Box Office Day 1 ; ಸಿಕಂದರ್‌ನ ಬಲಿ ಪಡೆದ 'ಜಾಟ್' , ಮೊದಲ ದಿನ ಸನ್ನಿ ಡಿಯೋಲ್ ಸಿನಿಮಾ ಗಳಿಸಿದ್ದೆಷ್ಟು ?

ಈ ಬಣ್ಣದ ಲೋಕನೇ ಹಂಗೆ. ಇಲ್ಲಿ ಯಾವತ್ತು ಏನಾಗುತ್ತೆ ? ಯಾರು ಗೆಲ್ಲುತ್ತಾರೆ ? ಯಾರು ಸೋಲುತ್ತಾರೆ ? ಎಂದು ಹೇಳಲು ಸಾಧ್ಯವೇ ಇಲ್ಲ. ಇಲ್ಲಿ ಇವತ್ತು ಸ್ಟಾರ್ ಆದವರು ನಾಳೆ ಟಾರ್ ರೋಡ್‌ನಲ್ಲಿ ಇದ್ದರೆ, ಟಾರ್ ರೋಡ್‌ನಲ್ಲಿ ಇದ್ದವರು ಏಕಾಏಕಿ ಕೆಲವೊಮ್ಮೆ ಸ್ಟಾರ್ ಆಗ್ಬಿಡ್ತಾರೆ. ಸದ್ಯ ಇದಕ್ಕೆ ಉದಾಹರಣೆಗೆ ಸನ್ನಿ ಡಿಯೋಲ್ ಅವರನ್ನೇ ತೆಗೆದುಕೊಳ್ಳಿ.

ಹೌದು, ಸನ್ನಿ ಡಿಯೋಲ್ .. ಒಂದ್ಕಾಲದ ಸೂಪರ್ ಸ್ಟಾರ್. 90ರ ದಶಕದಲ್ಲಿ ಒಂದಾದ ಮೇಲೊಂದರಂತೆ ಗೆಲುವುನ್ನ ಕಂಡ ಸನ್ನಿ ಡಿಯೋಲ್ ಅವನ್ನ ಇತ್ತೀಚಿನ ದಿನಗಳಲ್ಲಿ ಎಲ್ಲರೂ ಮರೆತೆ ಹೋಗಿದ್ದರು. ಬಾಲಿವುಡ್‌ನವರಿಗೆನೇ ಸನ್ನಿ ಡಿಯೋಲ್ ನೆನಪಿರಲಿಲ್ಲ. ಧಮೇಂದ್ರ ಮಗನಾದರೂ.. ಒಂದ್ಕಾಲದಲ್ಲಿ ಚಿನ್ನದ ಗಣಿ ತೆಗೆದಿದ್ದರೂ.. ಹಿಂದಿ ಚಿತ್ರರಂಗ ಸನ್ನಿ ಡಿಯೋಲ್ ಅವರನ್ನ ನಂಬಲಿಲ್ಲ. ಅವಕಾಶಗಳನ್ನ ಕೊಡಲಿಲ್ಲ. ಇದರಿಂದ ಹೈರಾಣಾದ ಸನ್ನಿ ಡಿಯೋಲ್‌ ಗೆ ಮಾಡಿಕೊಂಡ ಸಾಲ ಇನ್ನಷ್ಟು ಕಂಗಲಾಗಿಸಿತ್ತು. ಅಕ್ಷರಶಃ ಸನ್ನಿ ಡಿಯೋಲ್ ಅವರ ಬದುಕು ಕೇರ್ ಆಫ್ ಫುಟ್‌ಪಾತ್ ಎಂಬಂತಾಗಿತ್ತು.

Jaat Day 1 box office Sunny Deol s film opens strong with 9 50 crore among 2025 s top openings

ಇಂಥಾ ಸನ್ನಿ ಡಿಯೋಲ್ ಅವರನ್ನ ಕೈ ಹಿಡಿದು ಮೇಲೆತ್ತಿದ್ದು, ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಇವರಿಗೆ ಬೆಲೆ ಬರುವಂತೆ ಮಾಡಿದ್ದು ಮತ್ತದೇ ಗದರ್‌ ಸಿನಿಮಾ. 2000ನೇ ಇಸ್ವಿಯಲ್ಲಿ ಕೂಡ ಮುಳುಗುತ್ತಿದ್ದ ಸಮಯದಲ್ಲಿ ಗದರ್ ಚಿತ್ರದ ಮೂಲಕ ಎದ್ದು ನಿಂತಿದ್ದ ಸನ್ನಿ ಡಿಯೋಲ್‌ 2023ರಲ್ಲಿ ಗದರ್ 2 ಚಿತ್ರದ ಮೂಲಕ ಮತ್ತೆ ಮೈಕೊಡವಿ ಎದ್ದು ನಿಂತರು. ಸನ್ನಿ ಡಿಯೋಲ್ ಮುಖ ಚಹರೆ ಮರೆತ ಜನ ಗದರ್ 2 ಚಿತ್ರವನ್ನ ಮುಗಿ ಬಿದ್ದು ನೋಡಿದರು.

ಹೀಗೆ ಗದರ್ 2 ಮೂಲಕ ಮತ್ತೊಮ್ಮೆ ಗೆದ್ದ ಸನ್ನಿ ಡಿಯೋಲ್ ಸದ್ಯ ಜಾಟ್ ಚಿತ್ರದ ಮೂಲಕ ಚಿತ್ರಮಂದಿರಕ್ಕೆ ಬಂದಿದ್ದಾರೆ. ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಂಡಿದ್ದಾರೆ. ಆದರೆ, ಜಾಟ್ ಚಿತ್ರವನ್ನು ನೋಡಲು ಗದರ್ 2 ನೋಡಲು ಬಂದಂತೆ ಜನ ಮೊದಲ ದಿನ ಬಂದಿಲ್ಲ. ಹಾಗಂಥ ಚಿತ್ರಮಂದಿರಗಳು ಖಾಲಿ ಕೂಡ ಹೊಡೆದಿಲ್ಲ. ಮೊದಲ ದಿನ ತಕ್ಕಮಟ್ಟಿಗೆ ಹಣ ಗಳಿಸುವಲ್ಲಿ ಯಶಸ್ವಿಯಾಗಿದೆ ಜಾಟ್.

ಹೌದು, ಚಿತ್ರದ ಗಳಿಕೆಯ ಲೆಕ್ಕಾಚಾರವನ್ನು ಹಂಚಿಕೊಳ್ಳುವ ಸ್ಯಾಕ್ನಿಲ್ಕ್ ವೆಬ್ ಸೈಟ್ ಪ್ರಕಾರ ಜಾಟ್ ಚಿತ್ರ ಮೊದಲ ದಿನ ಭಾರತದಲ್ಲಿ ₹9.50 ಕೋಟಿ ಹಣವನ್ನು ಗಳಿಸಿದೆ. ಆ ಪೈಕಿ ಅತೀ ಹೆಚ್ಚು ಹಣ ಚೆನ್ನೈದಿಂದ ಹರಿದು ಬಂದಿದೆ. ಚೆನ್ನೈನಲ್ಲಿ ಶೇಕಡಾ 44.00% ಜನ ಜಾಟ್ ನೋಡುವ ಆಸಕ್ತಿಯನ್ನು ನಿನ್ನೆ ತೋರಿಸಿದ್ದರೆ ಬೆಂಗಳೂರಿನ ಚಿತ್ರಮಂದಿರಗಳು ನಿನ್ನೆ 17.75% ಭರ್ತಿಯಾಗಿವೆ. ದೆಹಲಿ ಶೇಕಡಾ 19 % ಮುಂಬೈನಲ್ಲಿ ಶೇಕಡಾ 10.75% ಹೈದರಾಬಾದ್‌ನಲ್ಲಿ ಶೇಕಡಾ 15.75% ಮತ್ತು ಚಂದೀಗಢದಲ್ಲಿ ಶೇಕಡಾ 19 % ಚಿತ್ರಮಂದಿರಗಳಲ್ಲಿ ಆಕ್ಯುಪೆನ್ಸಿ ಇತ್ತು ಎಂದು ಸ್ಯಾಕ್ನಿಲ್ ವೆಬ್ ಸೈಟ್ ವರದಿಯನ್ನು ಮಾಡಿದೆ.

ಇನ್ನು ನಿನ್ನೆ ಚಿತ್ರಕ್ಕೆ ಪ್ರೇಕ್ಷಕರು ಮತ್ತು ವಿಮರ್ಷಕರು ಜೈ ಎಂದ ಹಿನ್ನೆಲೆ ಇಂದು ಚಿತ್ರದ ಗಳಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಶನಿವಾರ ಮತ್ತು ಭಾನುವಾರ ಕೂಡ ಚಿತ್ರದ ಗಳಿಕೆ ಎರಡಂಕಿಯನ್ನು ದಾಟುವ ಭರವಸೆ ಸದ್ಯ ಬಾಲಿವುಡ್‌ಗೆ ಇದೆ. ಮತ್ತೊಂದೆಡೆ ಮೊದಲೇ ತೆವಳುತ್ತಾ ಸಾಗುತ್ತಿದ್ದ ಸಲ್ಮಾನ್ ಖಾನ್ ಅಭಿನಯದ ಸಿಕಂದರ್, ಜಾಟ್ ಚಿತ್ರ ತೆರೆಗೆ ಬಂದ ಹಿನ್ನೆಲೆ ಬಹುತೇಕ ಕಡೆ ನಿನ್ನೆ ಎತ್ತಂಗಡಿಯಾಗಿದೆ. ಇನ್ನುಳಿದ ಕಡೆ ಸಿಕಂದರ್ ಗಳಿಕೆಯ ಮೇಲೆ ಜಾಟ್ ಪರಿಣಾಮವನ್ನು ಬೀರಿದೆ.

ಅಂದ್ಹಾಗೇ ಈ ವರ್ಷ ಬಾಲಿವುಡ್‌ನಲ್ಲಿ ಛಾವಾ ಮತ್ತು ಸಿಕಂದರ್ ಮಾತ್ರ ಮೊದಲ ದಿನ ಅಬ್ಬರಿಸಿ ಬೊಬ್ಬಿರಿದಿದ್ದವು. ಎರಡಂಕಿ ಗಳಿಕೆಯನ್ನು ಮಾಡಿದ್ದವು. ಜಾಟ್ ಚಿತ್ರದ ಗಳಿಕೆ ಎರಡಂಕಿ ದಾಟಿಲ್ಲವಾದರೂ ಕೂಡ ಈ ವರ್ಷ ಮೊದಲ ದಿನ ಅತೀ ಹೆಚ್ಚು ಗಳಿಕೆ ಕಂಡ ಮೂರನೇ ಚಿತ್ರ ಎನ್ನುವ ಹೆಗ್ಗಳಿಕೆಗೆ ಜಾಟ್ ಪಾತ್ರವಾಗಿದೆ.

Disclaimer ; ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

Read more about: box office bollywood sunny deol
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X