Jolly LLB 3 Box Office Day 3 ; ಮೂರೇ ದಿನದಲ್ಲಿ ₹50 ಕೋಟಿ ದೋಚಿದ ಜಾಲಿ, ಟಾಪ್ 8ನೇ ಸ್ಥಾನಕ್ಕೇರಿದ ಅಕ್ಷಯ್ ಕುಮಾರ್ ಸಿನಿಮಾ
ಕಳೆದ ವರ್ಷ ಹೆಚ್ಚು ಕಡಿಮೆ ಇದೇ ಸಮಯದಲ್ಲಿ ಅಕ್ಷಯ್ ಕುಮಾರ್ ಕುರಿತು ಹಲವರು ನಾನಾ ರೀತಿಯಲ್ಲಿ ಮಾತನಾಡುತ್ತಿದ್ದರು. ಫ್ಲಾಪ್ ಕುಮಾರ್ ಎಂದು ಕರೆಯಲು ಶುರು ಮಾಡಿದ್ದರು. ಅಕ್ಷಯ್ ಕುಮಾರ್ ಜೊತೆ ಚಿತ್ರ ಮಾಡಿದರೆ ನಷ್ಟ ಆಗುವುದು ಪಕ್ಕಾ ಎಂದು ನಿರ್ಮಾಪಕರನ್ನು ಹೆದರಿಸಲು ಶುರು ಮಾಡಿದ್ದರು. ಸಹಜವಾಗಿ ಈ ಎಲ್ಲಾ ಮಾತುಗಳಿಂದ ಮತ್ತು ಎದುರಾದ ನಿರಂತರ ಸೋಲುಗಳಿಂದ ಅಕ್ಷಯ್ ಕುಮಾರ್ ಕೂಡ ನೊಂದುಕೊಂಡಿದ್ದರು.
ತಮ್ಮ ಬಗ್ಗೆ ಕೇಳಿ ಬಂದ ಮಾತುಗಳಿಂದ ಬೇಸತ್ತು ನಾನೆಲ್ಲಿಯೂ ಓಡಿ ಹೋಗಲ್ಲ. ನಾನು ಇನ್ನೂ ಸತ್ತಿಲ್ಲ ಎಂದು ಹೇಳಿದ್ದರು. ಇಂದಲ್ಲ ನಾಳೆ ಮತ್ತೆ ಗೆಲ್ಲುತ್ತೇನೆ ಎಂದು ಭರವಸೆಯನ್ನು ಕೂಡ ವ್ಯಕ್ತಪಡಿಸಿದ್ದರು. ಅಕ್ಷಯ್ ಕುಮಾರ್ ಅವರ ಈ ನಂಬಿಕೆ ಸದ್ಯ ಹುಸಿಯಾಗಿಲ್ಲ. ಸತತ ಸೋಲುಗಳಿಂದ ಹೈರಾಣಾಗಿದ್ದ ಅಕ್ಷಯ್ ಕುಮಾರ್ ಸದ್ಯ ಮತ್ತೆ ಗೆಲುವಿನ ಲಯಕ್ಕೆ ಮರಳಿದಂತೆ ಇದೆ. ಇಂತಹದ್ದೊಂದು ಸೂಚನೆಯನ್ನು ಸದ್ಯ ''ಜಾಲಿ ಎಲ್‌ಎಲ್‌ಬಿ 3'' ಚಿತ್ರ ನೀಡುತ್ತಿದೆ.

ಹೌದು, ಕಳೆದ ವಾರ (ಸೆಪ್ಟೆಂಬರ್ 19) ತೆರೆಗೆ ಬಂದ ''ಜಾಲಿ ಎಲ್‌ಎಲ್‌ಬಿ-3'' ಸದ್ಯ ಬಾಕ್ಸಾಫೀಸ್‌ನಲ್ಲಿ ಜಾದೂ ಮಾಡುತ್ತಿದೆ. ಚಿತ್ರದ ಗಳಿಕೆ ಮೊದಲ ದಿನಕ್ಕಿಂತ ಮೂರನೇ ದಿನ ಅಂದರೆ ನಿನ್ನೆ ಭಾನುವಾರ ಹೆಚ್ಚಾಗಿದೆ. ಬಹುತೇಕ ಡಬಲ್. ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ನಿನ್ನೆ ಈ ಚಿತ್ರ ₹ 21 ಕೋಟಿಯನ್ನು ದೋಚಿದೆ.
''ಸ್ಯಾಕ್ನಿಲ್'' ಪ್ರಕಾರ ಚಿತ್ರದ ಮೂರು ದಿನದ ಗಳಿಕೆ ಈ ಕೆಳಗಿನಂತೆ ಇದೆ.
ಮೊದಲ ದಿನ [ಶುಕ್ರವಾರ] ₹ 12.5 ಕೋಟಿ
ಎರಡನೇ ದಿನ [ಶನಿವಾರ] ₹ 20.00 ಕೋಟಿ
ಮೂರನೇ ದಿನ[ಭಾನುವಾರ] ₹ 21.00 ಕೋಟಿ
ಒಟ್ಟು ಗಳಿಕೆ ₹ 53.50 Cr
ಹೀಗೆ ಮೂರು ದಿನದಲ್ಲಿ ₹50 ಕೋಟಿಯ ಗಡಿಯನ್ನು ಭಾರತದಲ್ಲಿ ದಾಟಿರುವ ''ಜಾಲಿ ಎಲ್‌ಎಲ್‌ಬಿ'' ಈ ವರ್ಷ ಬಾಲಿವುಡ್‌ನಲ್ಲಿ ಮೊದಲ ವಾರಾಂತ್ಯದಲ್ಲಿ ಅತೀ ಹೆಚ್ಚು ಹಣ ಗಳಿಸಿದ 08ನೇ ಚಿತ್ರದ ಹೆಗ್ಗಳಿಕೆಗೆ ಕೂಡ ಪಾತ್ರವಾಗಿದೆ.

ಮೊದಲ ವಾರಾಂತ್ಯದಲ್ಲಿ ಅತೀ ಹೆಚ್ಚು ಹಣ ಗಳಿಸಿದ 10 ಚಿತ್ರಗಳು
ವಾರ್ 2 : ₹179.25 ಕೋಟಿ (4 ದಿನ)
ಛಾವಾ : ₹121.43 ಕೋಟಿ
ಹೌಸ್‌ಫುಲ್ 5 : ₹91.83 ಕೋಟಿ
ಸಿಖಂದರ್ : ₹86.44 ಕೋಟಿ
ರೇಡ್ 2 : ₹ 73.83 ಕೋಟಿ ( 4 ದಿನ )
ಸ್ಕೈ ಫೋರ್ಸ್ : ₹73.2 ಕೋಟಿ
ಸಿತಾರೆ ಜಮೀನ್ ಪರ್ : 57.30 ಕೋಟಿ
*ಜಾಲಿ ಎಲ್‌ಎಲ್‌ಬಿ 3 : ₹ 53.50 ಕೋಟಿ
ಜಾಟ್ : ₹40.62 ಕೋಟಿ
ಕೇಸರಿ 2 : ₹29.62 ಕೋಟಿ
ಇನ್ನೂ ಕೇವಲ ಮೂರು ದಿನದಲ್ಲಿ ₹ 53.50 ಕೋಟಿಯನ್ನು ''ಜಾಲಿಎಲ್‌ಎಲ್‌ಬಿ 3'' ಚಿತ್ರದ ಮೂಲಕ ಗಳಿಸಿರುವ ಅಕ್ಷಯ್ ಕುಮಾರ್ ಹಲವು ಚಿತ್ರಗಳು ಚಿತ್ರಮಂದಿರದಿಂದ ಎತ್ತಂಗಡಿ ಆಗುವ ಮುನ್ನ ಮಾಡಿದ್ದ ಗಳಿಕೆಯನ್ನು ಕೂಡ ಹಿಂದಿಕ್ಕಿದ್ದಾರೆ. ಆ ಪೈಕಿ ಸೋನು ಸೂದ್ ಅಭಿನಯಿಸಿ, ನಿರ್ದೇಶಿಸಿದ ''ಫತೇಹ್'' ( ₹18.87 ಕೋಟಿ), ಕಂಗನಾ ರಣಾವತ್ ನಿರ್ದೇಶನದ ''ಎಮರ್ಜೆನ್ಸಿ'' (₹ 20.48 ಕೋಟಿ), ಶಾಹಿದ್ ಕಪೂರ್ ಅಭಿನಯದ ''ದೇವಾ'' (₹33.97 ಕೋಟಿ), ಹಿಮೇಶ್ ರೇಶಮಿಯಾ ಅಭಿನಯದ ''ಬ್ಯಾಡ್ ಆಸ್ ರವಿಕುಮಾರ್'' (₹13.78 ಕೋಟಿ), ಜಾನ್ ಅಬ್ರಹಾಂ ಅಭಿನಯದ ದಿ ಡಿಪ್ಲೋಮ್ಯಾಟ್ (₹40.73 ಕೋಟಿ) ಕಾಜೋಲ್ ಅಭಿನಯದ ''ಮಾ'' (₹38.63 ಕೋಟಿ ), ರಾಜ್‌ಕುಮಾರ್ ರಾವ್ ಅಭಿನಯದ ''ಮಾಲಿಕ್'' (₹.26.36 ಕೋಟಿ), ಸಿದ್ಧಾಂತ್ ಚತುರ್ವೇದಿ ಮತ್ತು ಜಾಹ್ನವಿ ಕಪೂರ್ ಅಭಿನಯದ ''ಧಡಕ್ 2'' (₹ 24.24 ಕೋಟಿ), ಮತ್ತು ಅಜಯ್ ದೇವಗನ್ ಅಭಿನಯದ ''ಸನ್ ಆಫ್ ಸರ್ದಾರ್ 2'' (₹47.15 ಕೋಟಿ) ಪ್ರಮುಖವಾದ ಚಿತ್ರಗಳು.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











