Ek Din Box Office Day 1 ; ಮೊದಲ ದಿನವೇ ಮಕಾಡೆ ಮಲಗಿದ ಮಗನ 'ಏಕ್ ದಿನ್' - ಆಮಿರ್ ಖಾನ್‌ಗೆ ಮುಖಭಂಗ

ಅಪ್ಪ-ಅಮ್ಮ ಸ್ಟಾರ್ ಆಗಿದ್ದರೆ ಚಿತ್ರರಂಗದಲ್ಲಿ ಅವಕಾಶದ ಬಾಗಿಲು ಸುಲಭವಾಗಿ ತೆರೆಯಬಹುದು. ಆದರೆ.. ಆ ನಂತರ ಬೆಳೆಯೋದು.. ಬೀಳುವುದು.. ಅವರ ಅವರ ಹಣೆಬರಹ. ಅವರ ಅವರ ಪ್ರತಿಭೆ ಮತ್ತು ಸಾಮರ್ಥ್ಯದ ಮೇಲಿರುತ್ತೆ. ಇದಕ್ಕೆ ಕೈಗನ್ನಡಿ ಎಂಬಂತೆ ಚಿತ್ರರಂಗದಲ್ಲಿ ಇಲ್ಲಿಯವರೆಗೆ ಹಲವಾರು ಸ್ಟಾರ್ ಗಳ ಮಕ್ಕಳು-ಮೊಮ್ಮಕ್ಕಳು ಬಂದಿದ್ದಾರೆ.

ಆದರೆ ಜನ ಹೊತ್ತು ಮೆರೆಸಿದ್ದು ಮಾತ್ರ ಕೆಲವೇ ಕೆಲವರನ್ನು. ಈ ಕೆಲವರಲ್ಲಿ ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮಿರ್ ಖಾನ್ ಅವರ ಮಗ ಜುನೈದ್ ಖಾನ್‌ ಕೂಡ ಇರುತ್ತಾರಾ ಎನ್ನುವುದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆಯಾದರೂ ಸದ್ಯ ಆಮಿರ್ ಖಾನ್‌ಗೆ ಭಾರೀ ಮುಖಭಂಗವಾಗಿದೆ. ''ಏಕ್ ದಿನ್'' ಚಿತ್ರದ ಬಾಕ್ಸಾಫೀಸ್ ಕಥೆ-ವ್ಯಥೆಯಂತೆ ಹಲವರ ಕಣ್ಣಿಗೆ ಕಾಣುತ್ತಿದೆ.

the-star-kid-curse-junaid-khan-sai-pallavi-s-ek-din-struggles-with-a-1-crore-opening

ಹೌದು. ''ಏಕ್ ದಿನ್''.. ಜುನೈದ್ ಖಾನ್ ಅಭಿನಯದ 3ನೇ ಸಿನಿಮಾ. ಚಿತ್ರಮಂದಿರದಲ್ಲಿ ಬಿಡುಗಡೆಯಾದ ಇವರ ಎರಡನೇ ಸಿನಿಮಾ. ಸಾಯಿ ಪಲ್ಲವಿ ಈ ಚಿತ್ರದ ನಾಯಕಿ. ಈ ಕಾರಣಕ್ಕೆ ಕುತೂಹಲ ಕೆರಳಿಸಿದ್ದ ಸಿನಿಮಾ ಇದು.

ಯಾಕೆಂದರೆ ದಕ್ಷಿಣದ ಸರಳ ಸುಂದರಿ ಮೊದಲಿಂದ ಕಥೆಗೆ ಪ್ರಾಮುಖ್ಯತೆ ನೀಡಿದವರು. ಅಭಿನಯಕ್ಕೆ ಒತ್ತು ಇರುವ ಪಾತ್ರವನ್ನೇ ಆಯ್ಕೆ ಮಾಡಿಕೊಂಡು ಬಂದವರು. ಈ ಕಾರಣಕ್ಕೆ ತಮ್ಮ ಮೊದಲ ಹಿಂದಿ ಚಿತ್ರವನ್ನು ಅಳೆದು ತೂಗಿ ಸಾಯಿ ಪಲ್ಲವಿ ಆಯ್ಕೆ ಮಾಡಿರುತ್ತಾರೆ ಎನ್ನುವ ಭರವಸೆ ಇತ್ತು.

ಇನ್ನು ಆಮಿರ್ ಖಾನ್ ಈ ಚಿತ್ರದ ಪ್ರಚಾರದಲ್ಲಿ ತಮ್ಮನ್ನು ತಾವು ತೋಡಗಿಸಿಕೊಂಡಿದ್ದರು. ಹೆಚ್ಚು ಕಡಿಮೆ ಕಳೆದ ಒಂದು ಒಂದೂವರೆ ತಿಂಗಳಿಂದ ಚಿತ್ರದ ಪ್ರಚಾರವನ್ನು ಕೂಡ ಮಾಡಿದರು. ಸಂಗೀತ ಕಾರ್ಯಕ್ರಮ ಹಮ್ಮಿಕೊಂಡರು.

ಆದರೆ ಸಿಕ್ಕ ಫಲಿತಾಂಶ ಮಾತ್ರ ಶೂನ್ಯ. ಮೊದಲ ದಿನ ಹೀನಾಯ ಪ್ರದರ್ಶನ ಕಂಡಿದೆ ಈ ಸಿನಿಮಾ. ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ನಿನ್ನೆ ( ಮೇ 1 ) ತೆರೆಗೆ ಬಂದ ''ಏಕ್ ದಿನ್'' ಮೊದಲ ದಿನ ಕೇವಲ 1 ಕೋಟಿಯನ್ನು ಮಾತ್ರ ಗಳಿಸಿದೆ. ಪ್ರೇಕ್ಷಕರ ಬರ ಎದುರಿಸುತ್ತಿದೆ.

the-star-kid-curse-junaid-khan-sai-pallavi-s-ek-din-struggles-with-a-1-crore-opening

ಇನ್ನು ಚಿತ್ರಕ್ಕೆ ಉತ್ತಮವಾದ ವಿಮರ್ಶೆ ಕೂಡ ಸಿಕ್ಕಿಲ್ಲ. ಈ ಹಿನ್ನೆಲೆ ಚಿತ್ರದ ಗಳಿಕೆ ಇಂದು ಅಥವಾ ನಾಳೆ ಹೆಚ್ಚಾಗಬಹುದು ಎನ್ನುವ ನಂಬಿಕೆ ಕೂಡ ಬಾಲಿವುಡ್ ಪಂಡಿತರಿಗೆ ಇಲ್ಲ.

ಅಂದ್ಹಾಗೇ ಜುನೈದ್ ಹಿಂದಿನ ''ಲವ್‌ಯಪಾ'' ₹1.15 ಕೋಟಿಯನ್ನು ಗಳಿಸಿತ್ತು. ಸಾಯಿ ಪಲ್ಲವಿ ಅಂತಹ ಖ್ಯಾತ ನಟಿ ಜೊತೆ ಇದ್ದರೂ ಕೂಡ ತಮ್ಮದೇ ಹಿಂದಿನ ಚಿತ್ರದ ಗಳಿಕೆಯನ್ನು ಹಿಂದಿಕ್ಕಲು ಜುನೈದ್ ಖಾನ್‌ಗೆ ಸಾಧ್ಯವಾಗಿಲ್ಲ.

ಇನ್ನುಳಿದಂತೆ ಬಾಲಿವುಡ್‌ ಪಂಡಿತರಲ್ಲಿ ಒಬ್ಬರಾದ ರೋಹಿತ್ ಜೈಸ್ವಾಲ್ ಪ್ರಕಾರ ''ಏಕ್ ದಿನ್'' ಚಿತ್ರಕ್ಕೆ ಆಮಿರ್ ಖಾನ್ ₹15-₹16 ಕೋಟಿ ಹಣ ಹೂಡಿದ್ದಾರೆ. ಹೀಗಾಗಿ ಗೆದ್ದೇ ಎಮದು ಬೀಗಲು ಜುನೈದ್ ಖಾನ್ ಕಡಿಮೆ ಅಂದರೂ ಬಾಕ್ಸಾಫೀಸ್‌ನಲ್ಲಿ ₹20 ಕೋಟಿಯನ್ನು ದೋಚಬೇಕು. ಸದ್ಯದ ಗಳಿಕೆಯನ್ನು ನೋಡಿದರೆ ಪವಾಡ ನಡೆಯದ ಹೊರತು ಇಷ್ಟೊಂದು ಹಣವನ್ನು ಈ ಚಿತ್ರ ಗಳಿಸಲು ಸಾಧ್ಯ ಇಲ್ಲ. ಇಂದು ಮತ್ತು ನಾಳೆ ಗಳಿಕೆಯಲ್ಲಿ ಏರಿಕೆ ಕಾಣದಿದ್ದರೆ ಮುಂದಿನ ವಾರದೊತ್ತಿಗೆ ಈ ಚಿತ್ರ ಚಿತ್ರಮಂದಿರದಲ್ಲಿ ಉಳಿಯಲ್ಲ ಎನ್ನುವ ಮಾತು ಸದ್ಯ ಬಾಲಿವುಡ್‌ನಲ್ಲಿ ಕೇಳಿ ಬರುತ್ತಿವೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

English summary
Junaid Khan and Sai Pallavi’s Ek Din manages a lukewarm ₹1.00 Cr on Day 1. Despite the hype, the film fails to outshine Loveyapa's opening. Is the "Star Kid" factor failing at the box office? Read the full analysis here.
Read more about: aamir khan bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X