Junior Box Office Day 7 ; ಒಂದು ವಾರದಲ್ಲಿ ಗಣಿಧಣಿ ಮಗನ 'ಜೂನಿಯರ್' ಗಳಿಸಿದ್ದೆಷ್ಟು ಕೋಟಿ ?

ಕನ್ನಡದ ಚಿತ್ರಗಳಿಗೆ ಕರ್ನಾಟಕದಲ್ಲಿ ಬೆಲೆ ಸಿಗುವುದಿಲ್ಲ ಎನ್ನುವ ಮಾತು ಇಂದು ನಿನ್ನೆಯದಲ್ಲ. ಹಲವಾರು ವರ್ಷಾನುಗಳಿಂದ ಈ ಮಾತು ಕೇಳಿ ಬರುತ್ತಲೇ ಇದೆ. ಪರಭಾಷೆಯ ಚಿತ್ರಕ್ಕೆ ಅನುವು ಮಾಡಿ ಕೊಡಲು ಒಳ್ಳೆಯ ಪ್ರದರ್ಶನ ಕಾಣುವ ಚಿತ್ರಗಳನ್ನು ಕಿತ್ತೆಸೆಯಲಾಗುತ್ತಲೇ ಇದೆ. ಇದರ ನಡುವೆ ವಾರವೊಂದಕ್ಕೆ ಕನ್ನಡದಲ್ಲಿಯೇ ಒಂದರ್ಧ ಡಜನ್ ಚಿತ್ರಗಳು ಬಿಡುಗಡೆಯಾಗುತ್ತವೆ. ಇದರಿಂದ ಯಾವ ಚಿತ್ರ ನೋಡಬೇಕು ಎಂಬ..

ಗೊಂದಲಕ್ಕೆ ಪ್ರೇಕ್ಷಕರು ಸಿಲುಕಿಕೊಳ್ಳುತ್ತಾರೆ. ಪ್ರೇಕ್ಷಕರನ್ನು ಸೆಳೆಯಲು ಚಿತ್ರತಂಡದವರು ಕೂಡ ನಾನಾ ಸರ್ಕಸ್ಸು ಮಾಡುತ್ತಾರೆ. ಇಂಥಾ ವಾತಾವರಣದಲ್ಲಿ ಗಾಲಿ ಜನಾರ್ಧನ್ ರೆಡ್ಡಿ ಅವರ ಮಗ ಕಿರೀಟಿ ಅಭಿನಯದ ಚೊಚ್ಚಲ ಚಿತ್ರ 'ಜೂನಿಯರ್' ಚಿತ್ರಮಂದಿರಗಳಲ್ಲಿ ಒಂದು ವಾರವನ್ನು ಪೂರೈಸಿದೆ.

Junior Box Office Kireeti Reddy s Debut Film Crosses Rs 8 Crore Mark in Just 7 Days

ಇನ್ನು ಜೂನಿಯರ್ ಕೇವಲ ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿಲ್ಲ. ತೆಲುಗಿನಲ್ಲಿ ಕೂಡ ಬಿಡುಗಡೆಯಾಗಿದೆ. ವಿಶೇಷ ಅಂದರೆ.. ಎರಡು ಭಾಷೆಯಲ್ಲಿ 'ಜೂನಿಯರ್' ಚಿತ್ರವನ್ನು ನೋಡಿದ ಅನೇಕರು ಕಿರೀಟಿಯ ಶ್ರದ್ಧೆ ಮತ್ತು ಶ್ರಮವನ್ನು ಮೆಚ್ಚಿಕೊಂಡಿದ್ದಾರೆ. ಅಭಿನಯ ಮತ್ತು ಡ್ಯಾನ್ಸ್‌ಗೆ ಮನ ಸೋತಿದ್ದಾರೆ.

ಸಾಮಾನ್ಯವಾಗಿ ಮೊದಲ ದಿನ ಹೊಸ ಹುಡುಗನ ಚಿತ್ರಕ್ಕೆ ಪ್ರೇಕ್ಷಕರು ಬರುವುದು ಕಡಿಮೆ. ಹೀಗಿರುವಾಗ ಬೇರೆ ಚಿತ್ರಗಳ ನಡುವೆ ಕೂಡ ಒಂದು ವಾರದವರೆಗೆ ತಮ್ಮತ್ತ ಪ್ರೇಕ್ಷಕರನ್ನು ಸೆಳೆಯುವಲ್ಲಿ ಕಿರೀಟಿ ಯಶಸ್ವಿಯಾಗಿದ್ದಾರೆ. ಇದೆಲ್ಲದಕ್ಕೆ ಚಿತ್ರದ ಗಳಿಕೆ ಕೈಗನ್ನಡಿ.

ಹೌದು, ಚಿತ್ರದ ಗಳಿಕೆಯ ಅಂಕಿ-ಅಂಶವನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಚಿತ್ರ ಈ ಒಂದು ವಾರದಲ್ಲಿ ₹ 8.04 ಕೋಟಿ ಹಣವನ್ನು ಗಳಿಸಿದೆ. ನಿನ್ನೆ ಅಂದರೆ ಏಳನೇ ದಿನ { ಜುಲೈ 24-ಗುರುವಾರ } ಚಿತ್ರ ಕೇವಲ ತೆಲುಗಿನಲ್ಲಿ ₹ 27 ಲಕ್ಷವನ್ನು ಗಳಿಸಿದೆ. ಇನ್ನು ಕನ್ನಡದಲ್ಲಿ ನಿನ್ನೆ ₹ 12 ಲಕ್ಷವನ್ನು ಗಳಿಸಿದೆ ಎಂದು 'ಸ್ಯಾಕ್ನಿಲ್' ವರದಿಯನ್ನು ಮಾಡಿದೆ.

junior-box-office-kireeti-reddys-debut-film-crosses-rs-8-crore-mark-in-just-7-days

''ಸ್ಯಾಕ್ನಿಲ್'' ಪ್ರಕಾರ ಜೂನಿಯರ್ ಚಿತ್ರದ 7 ದಿನದ ಗಳಿಕೆ ಈ ಕೆಳಗಿನಂತೆ ಇದೆ.

ಮೊದಲ ದಿನ [ಶುಕ್ರವಾರ] ₹1.5ಕೋಟಿ [ತೆಲುಗು:₹1.3ಕೋಟಿ, ಕನ್ನಡ ₹20ಲಕ್ಷ]

ಎರಡನೇ ದಿನ[ಶನಿವಾರ] ₹1.8ಕೋಟಿ [ತೆಲುಗು:₹1.55ಕೋಟಿ, ಕನ್ನಡ ₹25ಲಕ್ಷ]

ಮೂರನೇ ದಿನ[ಭಾನುವಾರ] ₹2.14ಕೋಟಿ [ತೆಲುಗು:₹1.75ಕೋಟಿ, ಕನ್ನಡ ₹45ಲಕ್ಷ]

ನಾಲ್ಕನೇ ದಿನ [ಸೋಮವಾರ] ₹90 ಲಕ್ಷ[ತೆಲುಗು:₹70 ಲಕ್ಷ, ಕನ್ನಡ ₹20ಲಕ್ಷ]

ಐದನೇ ದಿನ [ಮಂಗಳವಾರ] ₹70 ಲಕ್ಷ[ತೆಲುಗು:₹53 ಲಕ್ಷ ,ಕನ್ನಡ ₹17ಲಕ್ಷ]

ಆರನೇ ದಿನ [ಬುಧವಾರ] ₹55 ಲಕ್ಷ [ತೆಲುಗು:₹43ಲಕ್ಷ, ಕನ್ನಡ ₹12ಲಕ್ಷ]

ಏಳನೇ ದಿನ [ ಗುರುವಾರ] ₹39 ಲಕ್ಷ [ತೆಲುಗು:₹27 ಲಕ್ಷ, ಕನ್ನಡ ₹12ಲಕ್ಷ]

ಒಟ್ಟು ಗಳಿಕೆ - [ತೆಲುಗು] ₹ 6.53 ಕೋಟಿ + [ಕನ್ನಡ ] ₹1.51 ಕೋಟಿ = ₹ 8.4 ಕೋಟಿ

ಹೀಗೆ ಒಂದು ವಾರದಲ್ಲಿ ₹ 8.4 ಕೋಟಿಯನ್ನು 'ಜೂನಿಯರ್' ಗಳಿಸುವಲ್ಲಿ ಯಶಸ್ವಿಯಾಗಿದೆ. ನಿನ್ನೆ ಪವನ್ ಕಲ್ಯಾಣ್ ಅಭಿನಯದ ''ಹರಿಹರ ವೀರಮಲ್ಲು'' ಚಿತ್ರ ಬಿಡುಗಡೆಯಾದ ಹಿನ್ನೆಲೆ 'ಜೂನಿಯರ್' ಓಟಕ್ಕೆ ಬ್ರೇಕ್ ಬೀಳುವ ಸಾಧ್ಯತೆ ಇದೆ. ಆದರೂ ಕೂಡ ನಿಜಾಮ್‌ ಪೇಟ್‌ನ GPR ಮಲ್ಟಿಪ್ಲೆಕ್ಸ್‌, ಅಟ್‌ಪುರ್‌ನ ಮಂತ್ರ ಮಾಲ್‌, ಗಚ್ಚಿಬೌಲಿಯ ಪ್ಲಾಟಿನಂ ಮೂವಿಟೈಮ್‌ ಸಿನಿಮಾ ಹೀಗೆ ಕೆಲ ಕಡೆ ಇಂದು[ಜುಲೈ 25} ಮಧ್ಯಾಹ್ನ 1 ಗಂಟೆಯ ಶೋಗಳು ಹೌಸ್‌ಫುಲ್ ಆಗಿವೆ. ಬೆಂಗಳೂರಿನ ಕನಕಪುರ ರಸ್ತೆಯ ಸೂಪರ್ ಫ್ಲೆಕ್ಸ್ ಫೋರಂ ಮಾಲ್ ಮತ್ತು ಓರಾಯನ್ ಮಾಲ್‌ನಲ್ಲಿ ಕೂಡ ಜನಸಂದಣಿ ಕಂಡು ಬಂದಿದೆ. 'ಜೂನಿಯರ್' ಒಟ್ಟಾರೆಯಾಗಿ ಎಷ್ಟು ಹಣ ಗಳಿಸಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Despite a slowdown, Kireeti Reddy's 'Junior' achieved Rs 8 crore in its first 7 days at the box office. Get the full collection report here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X