Maa box office Day 5 ; ಕೇವಲ ಐದೇ ದಿನದಲ್ಲಿ ಕಂಗನಾ ರಣಾವತ್ ದಾಖಲೆಯನ್ನ ಮುರಿದ ಕಾಜೋಲ್..!

ಈ ವರ್ಷದ ಆರಂಭದಲ್ಲಿ ಬಾಲಿವುಡ್ ಈ ವರ್ಷ ಚಿನ್ನದ ಬೆಳೆ ಬೆಳೆಯುತ್ತೆ ಎಂದು ಅನೇಕರು ಅಂದುಕೊಂಡಿದ್ದರು. ಯಾಕೆಂದರೆ.. ಶಾರುಖ್ ಖಾನ್ ಹೊರತು ಪಡಿಸಿದರೆ ಬೇರೆ ಸ್ಟಾರ್‌ಗಳ ಚಿತ್ರಗಳು ವರ್ಷದ ಮೊದಲ ಆರು ತಿಂಗಳಿನಲ್ಲಿಯೇ ಬಿಡುಗಡೆಗೆ ಸಿದ್ಧವಾಗಿದ್ದವು. ಸ್ಕೈ ಫೋರ್ಸ್‌.. ಎಮರ್ಜೆನ್ಸಿ .. ಸಿಕಂದರ್ .. ಕೇಸರಿ 2..ರೇಡ್ 2.. ದೇವಾ.. ಹೌಸ್‌ಫುಲ್ 5.. ಹೀಗೆ ಬಿಡುಗಡೆಯಾದ ಅನೇಕ ಚಿತ್ರಗಳ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು.

ಆದರೆ .. ಛಾವಾ .. ಹೌಸ್‌ಫುಲ್ 5 .. ರೇಡ್ 2 ಮತ್ತು ಸಿತಾರೆ ಜಮೀನ್ ಪರ್ ಚಿತ್ರಗಳನ್ನು ಹೊರತು ಪಡಿಸಿದರೆ ಬೇರೆ ಯಾವ ಚಿತ್ರ ಕೂಡ ಈ 6 ತಿಂಗಳಿನಲ್ಲಿ ಸದ್ದು ಮಾಡಲಿಲ್ಲ. ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯಲಿಲ್ಲ. ಬಾಕ್ಸಾಫೀಸ್‌ನಲ್ಲಿ ಗೆಲ್ಲಲಿಲ್ಲ.

kajols-maa-box-office-triumph-horror-film-leaves-kangana-ranauts-emergency-behind-on-day-5

ಹೀಗಿರುವಾಗ ತೆರೆಗೆ ಬಂದ ಕಾಜೋಲ್ ಅಭಿನಯದ ಮಹಿಳಾ ಪ್ರಧಾನ ಚಿತ್ರ ''ಮಾ'' ಬಾಲಿವುಡ್‌ನಲ್ಲಿ ಸದ್ಯ ಸದ್ದು ಮಾಡುತ್ತಿದೆ. ಗೆಲುವಿನ ಗಡಿಯನ್ನು ಚಿತ್ರ ತಲುಪುತ್ತಾ ಇಲ್ಲವಾ ಎನ್ನುವುದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆಯಾದರು 'ಮಾ' ಸದ್ಯ 5 ದಿನದಲ್ಲಿ ₹20.79 ಕೋಟಿ ಹಣವನ್ನು ಗಳಿಸಿದೆ ಎಂದು ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ಸ್ಯಾಕ್ನಿಲ್ ವೆಬ್ ಸೈಟ್ ವರದಿ ಮಾಡಿದೆ.


ಸ್ಯಾಕ್ನಿಲ್ ವೆಬ್ ಸೈಟ್ ಪ್ರಕಾರ 'ಮಾ' ಚಿತ್ರದ 5 ದಿನದ ಗಳಿಕೆ ಈ ಕೆಳಗಿನಂತೆ ಇದೆ.


ದಿನ ಗಳಿಕೆ

ಮೊದಲನೇ ದಿನ { ಶುಕ್ರವಾರ } ₹ 4.65ಕೋಟಿ

ಎರಡನೇ ದಿನ { ಶನಿವಾರ } ₹ 6 ಕೋಟಿ

ಮೂರನೇ ದಿನ {ಭಾನುವಾರ} ₹ 7 ಕೋಟಿ

ನಾಲ್ಕನೇ ದಿನ {ಸೋಮವಾರ} ₹2.5 ಕೋಟಿ

ಐದನೇ ದಿನ {ಮಂಗಳವಾರ} ₹64 ಲಕ್ಷ ಅಂದಾಜು

ಒಟ್ಟು ಗಳಿಕೆ - ₹20.79 ಕೋಟಿ

kajols-maa-box-office-triumph-horror-film-leaves-kangana-ranauts-emergency-behind-on-day-5

ಕಂಗನಾ ರಣಾವತ್‌ನ ಹಿಂದಿಕ್ಕಿದ ಕಾಜೋಲ್

ಇನ್ನು, ಈ ವರ್ಷದ ಆರಂಭದಲ್ಲಿ ಬಂದ ಕಂಗನಾ ರಣಾವತ್ ಅಭಿನಯಿಸಿ ನಿರ್ದೇಶಿಸಿದ್ದ ಎಮರ್ಜೆನ್ಸಿ ಚಿತ್ರ ಬಾಕ್ಸಾಫೀಸ್‌ನಲ್ಲಿ ₹19.67 ಕೋಟಿ ಹಣವನ್ನು ಗಳಿಸಿತ್ತು ಎಂದು ಬಾಲಿವುಡ್ ಹಂಗಾಮಾ ವರದಿ ಮಾಡಿದೆ. ಈ ಗಳಿಕೆಯನ್ನು ಈಗ ಕಾಜೋಲ್ ಅಭಿನಯದ 'ಮಾ' ಚಿತ್ರ ಬಾಕ್ಸಾಫೀಸ್‌ನಲ್ಲಿ ಹಿಂದಿಕ್ಕಿದೆ.

ಕಾಜೋಲ್ ವರ್ಸಸ್ ಕಾಜೋಲ್

ಅಂದ್ಹಾಗೇ ಕಾಜೋಲ್ ಅಭಿನಯದ ಚಿತ್ರ ಬಂದು ಮೂರು ವರ್ಷಗಳಾಗಿತ್ತು. ಮೂರು ವರ್ಷಗಳ ಹಿಂದೆ ಕಾಜೋಲ್ 'ಸಲಾಂ ವೆಂಕಿ' ಚಿತ್ರವನ್ನು ಮಾಡಿದ್ದರು. ಆದರೆ.. ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿತ್ತು. ಸ್ಯಾಕ್ನಿಲ್ ವೆಬ್ ಸೈಟ್ ವರದಿಯ ಪ್ರಕಾರ ಈ ಚಿತ್ರದ ಒಟ್ಟಾರೆ ಗಳಿಕೆ ಜಸ್ಟ್ ₹ 2.42 ಕೋಟಿ ಮಾತ್ರ. ಒಂದು ವಾರದಲ್ಲಿ 'ಸಲಾಂ ವೆಂಕಿ' ಗಳಿಸಿದ್ದ ಈ ಹಣವನ್ನು 'ಮಾ' ಕೇವಲ ನಿನ್ನೆ { ಜೂನ್ 30 } ಒಂದೇ ದಿನದಲ್ಲಿ { ₹2.5 ಕೋಟಿ } ಗಳಿಸಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
'Maa' Box Office Collection Day 5: Kajol's horror movie beats Kangana Ranaut's 'Emergency' lifetime gross. Latest updates on 'Maa's theatrical run and earnings
Read more about: kajol kangana ranaut bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X