Bharat Bhhagya Viddhaata BO Day 1 ; ಕಂಗನಾಗೆ ಮತ್ತೊಮ್ಮೆ ಮುಖಭಂಗ, ಮೊದಲ ದಿನವೇ ಮಕಾಡೆ ಮಲಗಿದ ಭಾರತ್ ಭಾಗ್ಯ ವಿಧಾತ

ಈ ಅದೃಷ್ಟ ಅನ್ನೋದು ಎಂಥವರ ಬದುಕನ್ನೂ ಬದಲಾಯಿಸಿಬಿಡುತ್ತೆ. ಅದೇ ಕೈ ಕೊಟ್ಟಾಗ ಚಿನ್ನದಂತಿದ್ದ ಬದುಕು ಚಿತ್ರಾನ್ನವಾಗುತ್ತೆ. ಇದಕ್ಕೆ ಬಾಲಿವುಡ್‌ನ ನಾಯಕಿ, ನಿರ್ದೇಶಕಿ ಕಂಗನಾ ರಣಾವತ್ ಸದ್ಯದ ಉದಾಹರಣೆ.

ಹೌದು, ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಕಂಗನಾ ಹೆಸರಿಗೆ ಚಿತ್ರರಂಗದಲ್ಲಿ ಚಿನ್ನದಂತಹ ಬೆಲೆ ಇತ್ತು. ಬಾಲಿವುಡ್‌ ಇವರನ್ನು ''ಕ್ವೀನ್'' ಎಂದು ಕರೆಯುತ್ತಿತ್ತು. ಆದರೆ ಈಗ ಈ ಕ್ವೀನ್‌ನ ಕ್ಯಾರೇ ಎನ್ನುವವರು ಕೂಡ ಯಾರು ಇಲ್ಲ. ಇದಕ್ಕೆ ಪುರಾವೆ ಎಂಬಂತೆ ಕಂಗನಾ ರಣಾವತ್‌ಗೆ ಬಾಕ್ಸಾಫೀಸ್‌ನಲ್ಲಿ ಮತ್ತೊಮ್ಮೆ ಭಾರೀ ಹಿನ್ನೆಡೆ ಆಗಿದೆ. ''ಭಾರತ್ ಭಾಗ್ಯ ವಿಧಾತ'' ಮಕಾಡೆ ಮಲಗುವ ಎಲ್ಲ ಲಕ್ಷಣ ಕಂಡು ಬಂದಿದೆ.

Kangana s Bharat Bhhagya Viddhaata Tanks on Day 1 Struggles to Clear Even the Tejas Bar

ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ 26/11 ಮುಂಬೈ ದಾಳಿಯ ಮೇಲೆ ನಿರ್ಮಾಣವಾದ ಈ ಸಿನಿಮಾ, ನಿನ್ನೆ (ಜೂನ್ 12) ಭಾರತದೆಲ್ಲೆಡೆ 2181 ಪ್ರದರ್ಶನಗಳನ್ನು ಕಂಡಿದೆ. ಆದರೆ, ಮೊದಲ ದಿನ ಕೇವಲ 1 ಕೋಟಿಯನ್ನು ಮಾತ್ರ ಗಳಿಸಿದೆ.

''ಭಾರತ್ ಭಾಗ್ಯ ವಿಧಾತ'' ಈ ಗಳಿಕೆ ಬಾಲಿವುಡ್ ಮತ್ತು ಕಂಗನಾ ಪಾಲಿಗೆ ಈಗ ಚಿಂತೆಯ ವಿಷಯ. ಯಾಕೆಂದರೆ. ಆಗಲೇ ಹೇಳಿದಂತೆ ''ಭಾರತ್ ಭಾಗ್ಯ ವಿಧಾತ'' ಸತ್ಯಕಥೆಯನ್ನಾಧರಿಸಿದ ಚಿತ್ರ. ಉಗ್ರರ ದಾಳಿಯ ಸಂದರ್ಭದಲ್ಲಿ
ಕಾಮಾ ಆಸ್ಪತ್ರೆಯ ನರ್ಸ್‌ಗಳು ರೋಗಿಗಳನ್ನು ರಕ್ಷಿಸಿದ ಕಥೆಯೇ ''ಭಾರತ್ ಭಾಗ್ಯ ವಿಧಾತ''.

ಸಾಮಾನ್ಯವಾಗಿ ಇಂತಹ ಸತ್ಯಕಥೆಯ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮವಾದ ಪ್ರತಿಕ್ರಿಯೆಗಳು ಸಿಕ್ಕಿವೆ. ಉದಾಹರಣೆಗೆ2022ರಲ್ಲಿ ಇದೇ ಮುಂಬೈ ದಾಳಿಯ ಮೇಲೆ ನಿರ್ಮಾಣವಾಗಿದ್ದ ಅಡವಿ ಶೇಷ್ ಅಭಿನಯದ ''ಮೇಜರ್'' ಮೊದಲ ದಿನ ₹7 ಕೋಟಿ ಗಳಿಸಿತ್ತು.

ಆದರೆ ''ಭಾರತ್ ಭಾಗ್ಯ ವಿಧಾತ'' ಚಿತ್ರಕ್ಕೆ ವಿಮರ್ಶಕರ ಪ್ರೀತಿ ಸಿಕ್ಕಿದೆ ಅಷ್ಟೇ ಹೊರತು ಪ್ರೇಕ್ಷಕರು ಕಣ್ಣೆತ್ತಿಯೂ ಕೂಡ ಚಿತ್ರದ ಪೋಸ್ಟರ್ ಮತ್ತು ಟ್ರೇಲರ್ ನೋಡಿದಂತೆ ಇಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಇಡೀ ಭಾರತದಲ್ಲಿ ನಿನ್ನೆ (ಜೂನ್ 12) ಸರಿ ಸುಮಾರು 11% ಆಕ್ಯುಪೆನ್ಸಿ ಕಂಡು ಬಂದಿದೆ ಎಂದು ''ಸ್ಯಾಕ್ನಿಲ್'' ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ.

Kangana s Bharat Bhhagya Viddhaata Tanks on Day 1 Struggles to Clear Even the Tejas Bar

ತನ್ನ ಫ್ಲಾಪ್ ಚಿತ್ರಗಳ ಗಳಿಕೆಯನ್ನು ಕೂಡ ಹಿಂದಿಕ್ಕದ ಕಂಗನಾ

ಕಂಗನಾ ರಣಾವತ್ ಕಳೆದ ಹನ್ನೊಂದು ವರ್ಷಗಳಲ್ಲಿ ಹನ್ನೊಂದು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಿಪರ್ಯಾಸ ಅಂದರೆ ಹನ್ನೊಂದಕ್ಕೆ ಹನ್ನೊಂದು ಚಿತ್ರಗಳು ಕೂಡ ಸೋಲನ್ನು ಕಂಡಿವೆ. ಕಂಗನಾ ಕೊನೆಯ ಬಾರಿ ಗೆದ್ದು ಬೀಗಿದ್ದು ತನು ವೆಡ್ಸ್ ಮನು 2 ಚಿತ್ರದಲ್ಲಿ ಮಾತ್ರ. ಅದೇ ಕೊನೆ. ಆ ನಂತರ ಬಂದ ಇವರ ಯಾವ ಚಿತ್ರ ಕೂಡ ಗೆದ್ದಿಲ್ಲ.

ಕಳೆದ ವರ್ಷ ತೆರೆಗೆ ಬಂದ ಇವರ ಮಹತ್ವಕಾಂಕ್ಷೆಯ ಚಿತ್ರ ''ಎಮರ್ಜೆನ್ಸಿ'' ಮೊದಲ ದಿನ ₹2.50 ಕೋಟಿಯನ್ನು ಗಳಿಸಿತ್ತು. ಅದಕ್ಕೂ ಮುನ್ನ ಬಂದ ''ತೇಜಸ್'' (2023) ₹1.25 ಕೋಟಿಯನ್ನು ದೋಚಿತ್ತು. ಆ ನಂತರ ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾಗಳು ಬೋರಲು ಬಿದ್ದವಾದರೂ ತಮ್ಮ ಈ ಚಿತ್ರಗಳ ಗಳಿಕೆಯನ್ನು ಕೂಡ ಕಂಗನಾಗೆ ಹಿಂದಿಕ್ಕಲು ಈ ಬಾರಿ ಸಾಧ್ಯವಾಗಿಲ್ಲ.

ಕಂಗನಾ ರಣಾವತ್ ಕಳೆದ 5 ಚಿತ್ರಗಳು: ಡೇ 1 ಬಾಕ್ಸ್ ಆಫೀಸ್ ಕಲೆಕ್ಷನ್ (India Net)

ಚಿತ್ರದ ಹೆಸರು ಬಿಡುಗಡೆಯಾದ ದಿನಾಂಕ ಮೊದಲ ದಿನದ ಕಲೆಕ್ಷನ್ ಬಾಕ್ಸ್ ಆಫೀಸ್ ಫಲಿತಾಂಶ
ಭಾರತ್ ಭಾಗ್ಯ ವಿಧಾತ ಜೂನ್ 12, 2026 ₹1.00 ಕೋಟಿ *ಅತ್ಯಂತ ನೀರಸ ಆರಂಭ*
ಎಮರ್ಜೆನ್ಸಿ ಜನವರಿ 17, 2025 ₹2.50 ಕೋಟಿ ಡಿಸಾಸ್ಟರ್
ತೇಜಸ್ ಅಕ್ಟೋಬರ್ 27, 2023 ₹1.25 ಕೋಟಿ ಡಿಸಾಸ್ಟರ್
ಚಂದ್ರಮುಖಿ 2 (ಪ್ಯಾನ್ ಇಂಡಿಯಾ) ಸೆಪ್ಟೆಂಬರ್ 28, 2023 ₹7.50 ಕೋಟಿ ಫ್ಲಾಪ್
ಧಾಕಡ್ ಮೇ 20, 2022 ₹0.50 ಕೋಟಿ ಡಿಸಾಸ್ಟರ್

ಒಟ್ನಲ್ಲಿ ಸದ್ಯ ''ಭಾರತ್ ಭಾಗ್ಯ ವಿಧಾತ'' ಚಿತ್ರಕ್ಕೆ ಮೊದಲನೇ ದಿನ ತಣ್ಣನೆಯ ಪ್ರತಿಕ್ರಿಯೆ ಸಿಕ್ಕಿದೆ. ಇಂದು (ಜೂನ್ 13 ) ಮತ್ತು ನಾಳೆಯ (ಜೂನ್ 14) ಗಳಿಕೆಯ ಮೇಲೆ ಚಿತ್ರದ ಮುಂದಿನ ಭವಿಷ್ಯ ನಿಂತಿದೆ. ಈ ಎರಡು ದಿನದಲ್ಲಿ ಪವಾಡ ನಡೆಯದೇ ಇದ್ದರೆ ''ಭಾರತ್ ಭಾಗ್ಯ ವಿಧಾತ'' ಚಿತ್ರದ ಮೂಲಕ ಕಂಗನಾ ಖಾತೆಗೆ ಮತ್ತೊಂದು ಸೋಲು ಜಮೆಯಾದಂತೆ ಆಗಲಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

English summary
Bharat Bhhagya Viddhaata Day 1 Box Office: Kangana Ranaut's latest release starts slow, earning just ₹1 crore amid stiff theatrical competition. Read the report.
Read more about: kangana ranaut bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X