Kannappa Box Office Day 1: ಪ್ರಭಾಸ್ ಮ್ಯಾಜಿಕ್ ಹೇಗಿದೆ? 'ಕಣ್ಣಪ್ಪ' ಮೊದಲ ದಿನದ ಕಲೆಕ್ಷನ್ ಎಷ್ಟು?

'ಕಣ್ಣಪ್ಪ' ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರಪ್ರತಿಕ್ರಿಯೆ ಸಿಕ್ಕಿದೆ. ಪ್ರಭಾಸ್, ಅಕ್ಷಯ್‌ ಕುಮಾರ್ ಹಾಗೂ ಮೋಹನ್ ಲಾಲ್ ಅತಿಥಿ ಪಾತ್ರಗಳಲ್ಲಿ ನಟಿಸಿರುವುದು ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿತ್ತು. ಆದರೆ ದೊಡ್ಡಮಟ್ಟದಲ್ಲಿ ಓಪನಿಂಗ್ ಪಡೆಯಲು ಸಿನಿಮಾ ವಿಫಲವಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ತೆರೆಗೆ ಬಂದಿದ್ದರೂ ಮೊದಲ ದಿನ ಬಾಕ್ಸಾಫೀಸ್‌ನಲ್ಲಿ ಗಳಿಕೆ ಒಂದಕಿ ದಾಟಿಲ್ಲ.

ಮೋಹನ್ ಬಾಬು ತಮ್ಮ ಮಗನನ್ನು ಹೀರೊ ಮಾಡಿ 200 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಿಸಿದ್ದಾರೆ. ದೇಶ ವಿದೇಶಗಳಲ್ಲಿ ಚಿತ್ರೀಕರಿಸುವ ಸಾಹಸ ಮಾಡಿದ್ದರು. ಇದು ಇತ್ತ ಮೋಹನ್ ಬಾಬು, ಮಂಚು ವಿಷ್ಣು ಹಾಗೂ ಪ್ರಭಾಸ್‌ ಕನಸಿನ ಸಿನಿಮಾ ಆಗಿತ್ತು. ಸೆಟ್ಟೇರಿದ ದಿನದಿಂದಲೂ ಚಿತ್ರತಂಡ ಬಹಳ ಭರವಸೆಯ ಮಾತುಗಳನ್ನು ಆಡುತ್ತಾ ಬಂದಿತ್ತು. ಇದೀಗ ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶನ ಆರಂಭಿಸಿದೆ.

Kannappa Opens to Mixed Reviews Struggles at Box Office Despite Star Power

ಸಿನಿಮಾ ನೋಡಿದ ಕೆಲವರು ಓಕೆ ಓಕೆ ಎಂದಿದ್ದಾರೆ. ಫಸ್ಟ್ ಹಾಫ್ ತಾಳ್ಮೆ ಪರೀಕ್ಷಿಸುತ್ತದೆ. ಸೆಕೆಂಡ್ ಹಾಫ್ ಪರವಾಗಿಲ್ಲ. ಅದರಲ್ಲೂ ಪ್ರಭಾಸ್ ಎಂಟ್ರಿ ಬಳಿಕ ಸಿನಿಮಾ ಚೆನ್ನಾಗಿದೆ. ಕೊನೆಯ 30 ನಿಮಿಷ ಹೈಲೆಟ್ ಎನ್ನುತ್ತಿದ್ದಾರೆ. ಆದರೆ ಬಹುತೇಕರು ಚಿತ್ರದ ಗುಣಮಟ್ಟ, ಮಂಚು ವಿಷ್ಣು ನಟನೆ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಆದರೂ ವೀಕೆಂಡ್‌ನಲ್ಲಿ ಫ್ಯಾಮಿಲಿ ಆಡಿಯನ್ಸ್ ಸಿನಿಮಾ ನೋಡಲು ಬರುತ್ತಾರೆ ಎನ್ನುವ ನಿರೀಕ್ಷೆಯಿದೆ.

ವಿಶ್ವದಾದ್ಯಂತ 5400 ಸ್ಕ್ರೀನ್‌ಗಳಲ್ಲಿ 'ಕಣ್ಣಪ್ಪ' ಸಿನಿಮಾ ಬಿಡುಗಡೆಯಾಗಿದೆ. ಆದರೆ ಅದಕ್ಕೆ ತಕ್ಕಂತೆ ಕಲೆಕ್ಷನ್ ಮಾತ್ರ ಆಗುತ್ತಿಲ್ಲ. ಆಂಧ್ರ, ತೆಲಂಗಾಣ ಬಿಟ್ಟರೆ ಬಹುತೇಕ ಕಡೆಗಳಲ್ಲಿ ಚಿತ್ರಕ್ಕೆ ಹಿನ್ನಡೆಯಾಗಿದೆ. ಪ್ರಭಾಸ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ ಎನ್ನುವ ಕಾರಣಕ್ಕೆ ಮಾತ್ರ ಸಿನಿಮಾ ನೋಡಲು ಬರುವವರ ಸಂಖ್ಯೆ ದೊಡ್ಡದಿದೆ. ಮೊದಲ ದಿನ ಸಿನಿಮಾ ಕಲೆಕ್ಷನ್ ಸಾಧಾರಣವಾಗಿದೆ. ಅಧಿಕೃತವಾಗಿ ಸಿನಿಮಾ ಬಾಕ್ಸಾಫೀಸ್ ಲೆಕ್ಕ ಸಿಕ್ಕಿಲ್ಲ.

'ಬೇಡರ ಕಣ್ಣಪ್ಪ' ಕಥೆಯನ್ನು ಹೊಸ ರೂಪದಲ್ಲಿ ತೆರೆಗೆ ತರುವ ಪ್ರಯತ್ನ ಚಿತ್ರದಲ್ಲಿ ಮಾಡಿದ್ದಾರೆ. ಅದರಲ್ಲಿ ಗೆಲುವು ಸಿಕ್ಕಿದ್ದರೂ ಪ್ರೇಕ್ಷಕರನ್ನು ಸಂಪೂರ್ಣವಾಗಿ ರಂಜಿಸುವಲ್ಲಿ ಸಿನಿಮಾ ವಿಫಲವಾಗಿದೆ. Sacnilk.com ವೆಬ್‌ಸೈಟ್ ವರದಿ ಪ್ರಕಾರ 'ಕಣ್ಣಪ್ಪ' ಸಿನಿಮಾ ಮೊದಲ ದಿನ ಭಾರತದಲ್ಲಿ 9 ಕೋಟಿ ರೂ. ಕಲೆಕ್ಷನ್ ಮಾಡಿದೆ. ಅದರಲ್ಲಿ ತೆಲುಗು ವರ್ಷನ್ ಪಾಲು ದೊಡ್ಡದಿದೆ. ಕನ್ನಡ, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಗಳಿಗೆ ಡಬ್ ಆಗಿ ಬಿಡುಗಡೆ ಆಗಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ.

ನಟ ಮಂಚು ವಿಷ್ಣುಗೆ ಬೇರೆ ಕಡೆಗಳಲ್ಲಿ ದೊಡ್ಡ ಕ್ರೇಜ್ ಆಗಲಿ ಮಾರ್ಕೆಟ್ ಆಗಲಿ ಇಲ್ಲ. ಅದೇ ಕಾರಣಕ್ಕೆ ಅತಿಥಿ ಪಾತ್ರಗಳಲ್ಲಿ ಪ್ರಭಾಸ್ ಹಾಗೂ ಮೋಹನ್ ಲಾಲ್ ಅವರನ್ನು ತೋರಿಸುವ ಸಾಹಸ ಮಾಡಿದ್ದರು. ಅದರಲ್ಲಿ ಯಶಸ್ಸು ಸಿಕ್ಕಿದೆ. ಒಟ್ಟಾರೆಯಾಗಿ ಸಿನಿಮಾ ಬಹುತೇಕರಿಗೆ ಇಷ್ಟವಾಗಿಲ್ಲ. 3 ಗಂಟೆಗಳ ಸುದೀರ್ಘ ಕಾಲಾವಧಿಯೇ ಚಿತ್ರಕ್ಕೆ ದೊಡ್ಡ ಹಿನ್ನಡೆಯಾಗುವಂತೆ ಮಾಡಿದೆ.

'ಕಣ್ಣಪ್ಪ'ನ ಭಕ್ತಿರಸಕ್ಕಿಂತ ದಿಣ್ಣನ ಪ್ರೀತಿ ಪ್ರೇಮ ಪ್ರಣಯ ಹಾಗೂ ಸಾಹಸದಂತಹ ವಿಷಯಗಳು ಮುನ್ನಲೆಗೆ ಬಂದು ಸಿನಿಮಾ ಬೇಸರ ಮೂಡಿಸುತ್ತದೆ. ಕೊನೆ ಅರ್ಧ ಗಂಟೆ ಚಿತ್ರದಲ್ಲಿ 'ಕಣ್ಣಪ್ಪ'ನ ಶಿವಭಕ್ತಿಯನ್ನು ಪ್ರದರ್ಶಿಸಿದರೂ ಅದು ಚಿತ್ರವನ್ನು ಗೆಲ್ಲಿಸುವ ಸುಳಿವು ಸಿಗುತ್ತಿಲ್ಲ. ಒಟ್ಟಾರೆ ಸಿನಿಮಾ ಓಕೆ ಓಕೆ ಎನಿಸಿಕೊಂಡಿದೆ.

ಸಿನಿಮಾ 500 ಕೋಟಿ ರೂ. ಕಲೆಕ್ಷನ್ ಮಾಡುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಮೊದಲ ದಿನ ಸಿಕ್ಕಿರುವ ರೆಸ್ಪಾನ್ಸ್ ನೋಡಿದರೆ ಸಿನಿಮಾ ಗೆಲ್ಲುವುದು ಕಷ್ಟ ಎನ್ನುವಂತಾಗಿದೆ. ಚಿತ್ರತಂಡ ಮಾತ್ರ 'ಕಣ್ಣಪ್ಪ' ಇಂಡಸ್ಟ್ರಿ ಹಿಟ್ ಎಂದು ಪೋಸ್ಟರ್ ಬಿಡುಗಡೆ ಮಾಡಿದೆ. ಆದರೆ ಕಲೆಕ್ಷನ್ ಲೆಕ್ಕ ಕೊಡುವ ಗೋಜಿಗೆ ಹೋಗಿಲ್ಲ. ಮುಂದಿನ ದಿನಗಳಲ್ಲಿ ಸಿನಿಮಾ ಬಾಕ್ಸಾಫೀಸ್ ಗಳಿಕೆ ಹೇಗಿರುತ್ತದೆ ಎಂದು ಕಾದು ನೋಡಬೇಕು.

More from Filmibeat

English summary
‘Kannappa’, starring Manchu Vishnu with guest appearances by Prabhas, Mohanlal, and Akshay Kumar, receives mixed audience reviews
Read more about: prabhas
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X