Kantara Day 15 Boxoffice: 3ನೇ ವಾರಕ್ಕೆ 'ಕಾಂತಾರ- 1' ದಾಪುಗಾಲು; 'ಛಾವ' ಹಿಂದಿಕ್ಕಲು ಇನ್ನೆಷ್ಟು ಗಳಿಸ್ಬೇಕು?

ರಾಜ್ಯಾದ್ಯಂತ 'ಕಾಂತಾರ- 1' ವಿಜಯಯಾತ್ರೆ ಶುರುವಾಗಿದೆ. ಮೈಸೂರಿನಲ್ಲಿ ಚಾಮುಂಡಿ ಬೆಟ್ಟ, ನಂಜನಗೂಡು ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ರಿಷಬ್ ಶೆಟ್ಟಿ ಅಭಿಮಾನಿಗಳ ಭೇಟಿ ಮಾಡುತ್ತಿದ್ದಾರೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಜೊತೆ ಸಿನಿಮಾ ವೀಕ್ಷಿಸಿ ಧನ್ಯವಾದ ತಿಳಿಸುತ್ತಿದ್ದಾರೆ. ಇದೀಗ ಸಿನಿಮಾ ಯಶಸ್ವಿಯಾಗಿ 3ನೇ ವಾರಕ್ಕೆ ಕಾಲಿಟ್ಟಿದೆ.

ಅಕ್ಟೋಬರ್ 2ರಂದು ಸಿನಿಮಾ ವಿಶ್ವದಾದ್ಯಂತ ತೆರೆಗಪ್ಪಳಿಸಿತ್ತು. ಅದಕ್ಕಿಂತ ಒಂದು ದಿನ ಮುನ್ನ ಪೇಯ್ಡ್ ಪ್ರೀಮಿಯರ್ ಶೋಗಳು ನಡೆದಿತ್ತು. ಮೊದಲ ಶೋನಿಂದಲೇ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಬೇಡಿಕೆಗೆ ತಕ್ಕಂತೆ ಕೆಲವೆಡೆ ಚಿತ್ರಮಂದಿರಗಳಲ್ಲಿ ಮೊದಲ ವಾರ ಹೆಚ್ಚಿನ ಶೋಗಳನ್ನು ಪ್ರದರ್ಶಿಸಲಾಗಿತ್ತು. ಟಿಕೆಟ್ ದರ ಕೂಡ ಹೆಚ್ಚಿದ್ದರಿಂದ ಭರ್ಜರಿ ಕಲೆಕ್ಷನ್ ಮಾಡಿ ಸಿನಿಮಾ ಸದ್ದು ಮಾಡ್ತಿದೆ.

Kantara-1 Continues Strong Run in 3rd Week Can It Surpass Chhaava at the Box Office

ರಿಷಬ್ ಶೆಟ್ಟಿ ನಟನೆ, ನಿರ್ದೇಶನಕ್ಕೆ ಸಿನಿರಸಿಕರು ಫಿದಾ ಆಗಿದ್ದಾರೆ. ಮೊದಲ ಭಾಗಕ್ಕಿಂತ ಹಲವು ಪಟ್ಟು ದೊಡ್ಡದಾಗಿ 'ಕಾಂತಾರ'-1 ಸಿನಿಮಾ ನಿರ್ಮಾಣವಾಗಿ ಬಿಡುಗಡೆಯಾಗಿತ್ತು. ಪ್ರೇಕ್ಷಕರು ಕೂಡ ಸಿನಿಮಾ ನೋಡಲು ಮುಗಿಬಿದ್ದರು. ಈಗಾಗಲೇ ಸಿನಿಮಾ 700 ಕೋಟಿ ರೂ. ಗ್ರಾಸ್ ಕಲೆಕ್ಷನ್ ಗಡಿಯಲ್ಲಿದೆ. ಕೆಲವರ ಪ್ರಕಾರ ಸಿನಿಮಾ ಈಗಾಗಲೇ 700 ಕೋಟಿ ರೂ. ಕ್ಲಬ್ ಸೇರಿದೆ ಎಂದು ಅಂದಾಜಿಸಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಸಿಗಬೇಕಿದೆ.

ಮೊದಲ ವಾರ 509 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ಚಿತ್ರತಂಡವೇ ಘೋಷಿಸಿತ್ತು. 2ನೇ ವಾರದಲ್ಲಿ ಬುಧವಾರಕ್ಕಿಂತ ಗುರುವಾರ ಕಲೆಕ್ಷನ್ ಚೆನ್ನಾಗಿದೆ. ನಿಧಾನವಾಗಿ ದೀಪಾವಳಿ ವೀಕೆಡ್ ಹತ್ತಿರವಾಗುತ್ತಿದೆ. ಹಾಗಾಗಿ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುವ ನಿರೀಕ್ಷೆ ಮೂಡಿದೆ. ಬಾಲಿವುಡ್‌ನಲ್ಲಿ ಆಯುಷ್‌ಮಾನ್ ಖುರಾನ ಹಾಗೂ ರಶ್ಮಿಕಾ ಮಂದಣ್ಣ ನಟನೆಯ 'ಥಮ' ಬಿಟ್ಟರೆ ಯಾವುದೇ ದೊಡ್ಡ ದೀಪಾವಳಿಗೆ ಬರ್ತಿಲ್ಲ. ಹಾಗಾಗಿ ಇನ್ನೊಂದು ವಾರ 'ಕಾಂತಾರ- 1' ದರ್ಬಾರ್ ನಡೆಯುವ ಸಾಧ್ಯತೆಯಿದೆ.

Kantara-1 Continues Strong Run in 3rd Week Can It Surpass Chhaava at the Box Office

ಇತ್ತ ದಕ್ಷಿಣ ಭಾರತದಲ್ಲಿ ತಮಿಳಿನ 'ಡ್ಯೂಡ್', ಕನ್ನಡದ 'ಮಾರ್ನಮಿ' ಸೇರಿ ಕೆಲ ಸಿನಿಮಾಗಳು ಈ ವಾರ ತೆರೆಗೆ ಬರ್ತಿವೆ. ಹಾಗಾಗಿ ಇಲ್ಲಿ ಕೂಡ ದೊಡ್ಡದಾಗಿ ಪೈಪೋಟಿ ಇಲ್ಲ. ಈ ವರ್ಷದ ಅತಿದೊಡ್ಡ ಹಿಟ್ ಸಿನಿಮಾ 'ಛಾವ'. ಅಂದಾಜು 800 ಕೋಟಿ ರೂ. ಈ ಸಿನಿಮಾ ಕಲೆಕ್ಷನ್ ಮಾಡಿತ್ತು. 'ಛಾವ' ಸಿನಿಮಾ ಹಿಂದಿಕ್ಕಿ ವರ್ಷದ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ಎನ್ನುವ ದಾಖಲೆ ಬರೆಯಲು ರಿಷಬ್ ಶೆಟ್ಟಿ ಸಿನಿಮಾ ಇನ್ನು 100 ಕೋಟಿ ರೂ. ಗಳಿಸಬೇಕಿದೆ.

'ಕಾಂತಾರ- 1' ಬಿಡುಗಡೆಗೂ ಮುನ್ನ 1000 ಕೋಟಿ ರೂ. ಕಲೆಕ್ಷನ್ ಮಾಡುವ ಲೆಕ್ಕಾಚಾರ ನಡೆದಿತ್ತು. ಆದರೆ ಅದು ಕಷ್ಟ ಎನ್ನುವುದು ಈಗ ಗೊತ್ತಾಗುತ್ತಿದೆ. ಅದಕ್ಕಾಗಿ ಸಿನಿಮಾ ಬಹಳ ದೂರ ಕ್ರಮಿಸಬೇಕಿದೆ. ಇನ್ನು 15ನೇ ದಿನವೂ ಸಿನಿಮಾ ಭರ್ಕರಿ ಕಲೆಕ್ಷನ್ ಮಾಡಿದೆ. ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆದಿದೆ. ವೀಕೆಂಡ್‌ ಬುಕ್ಕಿಂಗ್ ಕೂಡ ಜೋರಾಗಿದೆ.

ಅಂದಹಾಗೆ www.sacnilk.com ವೆಬ್‌ಸೈಟ್ ವರದಿ ಪ್ರಕಾರ 'ಕಾಂತಾರ- 1' ಸಿನಿಮಾ 670 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ. 485 ಕೋಟಿ ರೂ. ಭಾರತದಲ್ಲಿ ನೆಟ್ ಕಲೆಕ್ಷನ್, ಭಾರತದಲ್ಲಿ ಗ್ರಾಸ್ 569 ಕೋಟಿ ರೂ. ಹಾಗೂ ಓವರ್‌ಸೀಸ್‌ನಲ್ಲಿ 101 ಕೋಟಿ ರೂ. ಸಿನಿಮಾ ಗಳಿಸಿರುವುದಾಗಿ ವರದಿಯಾಗಿದೆ. 15ನೇ ದಿನ(ಅಕ್ಟೋಬರ್ 16) ಸಿನಿಮಾ 8.87 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದೆ. ದೀಪಾವಳಿ ಲಾಂಗ್ ವೀಕೆಂಡ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮತ್ತೆ ಜಾದೂ ಮಾಡುತ್ತಾ ನೋಡಬೇಕಿದೆ.

More from Filmibeat

Read more about: rishab shetty kantara chapter 1
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X