'ಪಠಾಣ್' ಹಿಂದಿಕ್ಕಿ ಹೆಚ್ಚು ಗಳಿಕೆ ಕಂಡ ಚಿತ್ರಗಳ ಪಟ್ಟಿಯಲ್ಲಿ 10ನೇ ಸ್ಥಾನಕ್ಕೇರಿದ 'ಕಾಂತಾರ-1'

ರಿಷಬ್ ಶೆಟ್ಟಿ ಸಾರಥ್ಯದ 'ಕಾಂತಾರ-1' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆಲುವಿನ ಓಟ ಮುಂದುವರೆಸಿದೆ. 20 ದಿನಕ್ಕೆ ಸಿನಿಮಾ ಕಲೆಕ್ಷನ್ 750 ಕೋಟಿ ರೂ. ದಾಟಿದೆ. ದೀಪಾವಳಿ ಸಂಭ್ರಮದಲ್ಲಿ ತೆರೆಗೆ ಬಂದ ದೊಡ್ಡ ಸಿನಿಮಾಗಳ ಆರ್ಭಟದ ನಡುವೆಯೂ ಕನ್ನಡದ ಹೆಮ್ಮೆಯ 'ಕಾಂತಾರ- 1' ಸಿನಿಮಾ ಕಾರುಬಾರು ಜೋರಾಗಿದೆ.

ಈ ವರ್ಷ ಅತಿಹೆಚ್ಚು ಗಳಿಕೆ ಕಂಡ ಸಿನಿಮಾಗಳ ಪಟ್ಟಿಯಲ್ಲಿ 'ಛಾವ' ಚಿತ್ರವನ್ನು 'ಕಾಂತಾರ- 1' ಹಿಂದಿಕ್ಕುವ ಸಮಯ ಹತ್ತಿರ ಬಂದಿದೆ. ಬರೀ ಕರ್ನಾಟಕದಲ್ಲೇ 200 ಕೋಟಿ ರೂ. ಕಲೆಕ್ಷನ್ ಸೇರಿ ಹಲವು ದಾಖಲೆಗಳು ಈ ಚಿತ್ರದ ಪಾಲಾಗಿದೆ. ಕೇರಳದಲ್ಲಿ 50 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಸದ್ದು ಮಾಡ್ತಿದೆ. ಆಸ್ಟ್ರೇಲಿಯಾದಲ್ಲಿ ಈ ವರ್ಷ ಅತಿಹೆಚ್ಚು ಗಳಿಕೆ ಕಂಡ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

Kantara-1 Creates History Crosses 750 Crore Worldwide Beats Pathaan in Indian Collections

ಸದ್ಯ ಶಾರುಖ್ ಖಾನ್ ನಟನೆಯ 'ಪಠಾಣ್' ಚಿತ್ರ ದಾಖಲೆಯನ್ನು ಕೂಡ 'ಕಾಂತಾರ-1' ಸಿನಿಮಾ ಮುರಿದಿದೆ ಎನ್ನಲಾಗ್ತಿದೆ. ವಿಶ್ವದಾದ್ಯಂತ 750 ಕೋಟಿ ರೂ. ಕಲೆಕ್ಷನ್ ಮಾಡಿರುವ ಸಿನಿಮಾ ಭಾರತದಲ್ಲಿ 547 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿರುವ ಅಂದಾಜಿದೆ. ಅಧಿಕೃತವಾಗಿ ಈ ಬಗ್ಗೆ ಮಾಹಿತಿ ಸಿಗದೇ ಇದ್ದರೂ www.sacnilk.com ವೆಬ್ ಸೈಟ್ ವರದಿ ಮಾಡಿದೆ.

ಎರಡು ವರ್ಷಗಳ ಹಿಂದೆ ಬಂದಿದ್ದ 'ಪಠಾಣ್' ಸಿನಿಮಾ ವಿಶ್ವದಾದ್ಯಂತ 1050 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿತ್ತು. ಆದರೆ ಭಾರತದಲ್ಲಿ 543.09 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿತ್ತು. ವಿದೇಶಗಳಲ್ಲಿ ಕಿಂಗ್ ಖಾನ್ ಸಿನಿಮಾಗಳಿಗೆ ಭಾರೀ ಡಿಮ್ಯಾಂಡ್ ಇದೆ. ಹಾಗಾಗಿ ಹೊರ ದೇಶಗಳಲ್ಲಿ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿತ್ತು. ಸದ್ಯ 20 ದಿನಕ್ಕೆ ಭಾರತದಲ್ಲಿ 547 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿ ಶಾರುಖ್ ಸಿನಿಮಾ ದಾಖಲೆ ಮುರಿದಿದೆ.

Kantara-1 Creates History Crosses 750 Crore Worldwide Beats Pathaan in Indian Collections

ಭಾರತದಲ್ಲಿ ಅತಿ ಹೆಚ್ಚು ನೆಟ್ ಕಲೆಕ್ಷನ್ ಮಾಡಿರುವ ಸಿನಿಮಾಗಳ ಪಟ್ಟಿಯಲ್ಲಿ 'ಕಾಂತಾರ- 1' ಸಿನಿಮಾ 10ನೇ ಸ್ಥಾನಕ್ಕೆ ಜಿಗಿದಿದೆ. ಶೀಘ್ರದಲ್ಲೇ ರಣ್‌ಬೀರ್ ಕಪೂರ್ ನಟನೆಯ ಅನಿಮಲ್(554 ಕೋಟಿ ರೂ.) ಹಾಗೂ ವಿಕ್ಕಿ ಕೌಶಲ್ ಅಭಿನಯದ 'ಛಾವ'(615.39 ಕೋಟಿ ರೂ.) ಸಿನಿಮಾಗಳ ದಾಖಲೆ ಮುರಿಯುವ ಸಾಧ್ಯತೆಯಿದೆ.

ಸದ್ಯ ಭಾರತದಲ್ಲಿ ಅತಿಹೆಚ್ಚು ನೆಟ್ ಕಲೆಕ್ಷನ್ ಮಾಡಿರುವ ಸಿನಿಮಾಗಳ ಪಟ್ಟಿ

1. ಪುಷ್ಪ-2 -1265 ಕೋಟಿ ರೂ.

2. ಬಾಹುಬಲಿ-2 -1031 ಕೋಟಿ ರೂ.

3. ಕೆಜಿಎಫ್-2 - 865 ಕೋಟಿ ರೂ.

4. ಆರ್‌ಆರ್‌ಆರ್‌- 772 ಕೋಟಿ ರೂ.

5. ಕಲ್ಕಿ 2898AD - 653 ಕೋಟಿ ರೂ.

6. ಜವಾನ್- 640 ಕೋಟಿ ರೂ.

7. ಸ್ತ್ರೀ-2 - 627 ಕೋಟಿ ರೂ.

8. ಛಾವ- 615 ಕೋಟಿ ರೂ.

9. ಅನಿಮಲ್- 554 ಕೋಟಿ ರೂ.

10. ಕಾಂತಾರ- 1- 547 ಕೋಟಿ ರೂ.

ಶೀಘ್ರದಲ್ಲೇ ಚಿತ್ರವನ್ನು ಇಂಗ್ಲೀಷ್ ಭಾಷೆಗೆ ಡಬ್ ಮಾಡಿ ಬಿಡುಗಡೆ ಮಾಡುವ ಪ್ರಯತ್ನ ನಡೀತಿದೆ. ಇದು ಭಾರತದಲ್ಲಿ ಹೊಸ ಪ್ರಯತ್ನ ಎನ್ನುವ ಮಾತುಗಳು ಕೇಳಿಬರ್ತಿದೆ. ಆ ಮೂಲಕ ಮತ್ತೊಂದು ದಾಖಲೆ ಬರೆಯಲು ರಿಷಬ್ ಶೆಟ್ಟಿ ಸಿನಿಮಾ ಮುಂದಾಗಿದೆ. 2 ಗಂಟೆ 14 ನಿಮಿಷಕ್ಕೆ ಚಿತ್ರದ ಕಾಲಾವಧಿಯನ್ನು ಇಳಿಸಲಾಗಿದೆ. ಇನ್ನು ವಿಶ್ವದಾದ್ಯಂತ ಅತಿಹೆಚ್ಚು ಗ್ರಾಸ್ ಕಲೆಕ್ಷನ್ ‌ಮಾಡಿದ ಚಿತ್ರಗಳ‌ ಪಟ್ಟಿಯಲ್ಲಿ 'ಕಾಂತಾರ' ಪ್ರೀಕ್ವೆಲ್ 14ನೇ ಸ್ಥಾನದಲ್ಲಿದೆ. ಈ ವಾರ 'ಛಾವ' ದಾಖಲೆ ಮುರಿದು 13ನೇ ಸ್ಥಾನಕ್ಕೆ ಏರಲಿದೆ.

More from Filmibeat

Read more about: kantara chapter 1 shahrukh khan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X