Kantara Day 10 Collection; ಕಲೆಕ್ಷನ್ ಲೆಕ್ಕಾಚಾರ ಉಲ್ಟಾ ಮಾಡಿದ 'ಕಾಂತಾರ-1'; 10ನೇ ದಿನ ಹೊಸ ದಾಖಲೆ

ಬಾಕ್ಸಾಫೀಸ್‌ನಲ್ಲಿ 'ಕಾಂತಾರ- 1' ಆರ್ಭಟ ಮುಂದುವರೆದಿದೆ. ದಿನದಿಂದ ದಿನಕ್ಕೆ ಸಿನಿಮಾ ಕ್ರೇಜ್ ಹೆಚ್ಚುತ್ತಿದೆ. ಉತ್ತರ ಭಾರತದಲ್ಲಿ ಸಿನಿಮಾ ಇದೀಗ ಸಖತ್ ಸದ್ದು ಮಾಡ್ತಿದೆ. 2ನೇ ವೀಕೆಂಡ್‌ ದೊಡ್ಡಮಟ್ಟದಲ್ಲಿ ಸಿನಿಮಾ ಗಳಿಕೆ ಕಾಣುವ ಸುಳಿವು ಸಿಕ್ಕಿದೆ. ಸಾಮಾನ್ಯವಾಗಿ ದಿನದಿಂದ ದಿನಕ್ಕೆ ಸಿನಿಮಾ ಕಲೆಕ್ಷನ್ ಕಮ್ಮಿ ಆಗುತ್ತದೆ. ಆದರೆ 'ಕಾಂತಾರ- 1' ವಿಚಾರದಲ್ಲಿ ಇದು ಉಲ್ಟಾ ಆಗ್ತಿದೆ.

ದೊಡ್ಡಮಟ್ಟದಲ್ಲಿ ಓಪನಿಂಗ್ ಪಡೆದುಕೊಂಡಿದ್ದ 'ಕಾಂತಾರ- 1' ಸಿನಿಮಾ ಬಳಿಕ ಕೊಂಚ ಡಲ್ ಆದಂತೆ ಕಂಡಿತ್ತು. ಆದರೆ ಹಿಂದಿ ಬೆಲ್ಟ್‌ನಲ್ಲಿ ಸಿನಿಮಾ ನಿಧಾನವಾಗಿ ತಳವೂರಿದೆ. ಸೆಕೆಂಡ್ ವೀಕೆಂಡ್ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡ್ತಿದೆ. 10ನೇ ದಿನ ಬಾಕ್ಸಾಫೀಸ್‌ನಲ್ಲಿ ಸಿನಿಮಾ ಜಾದೂ ಮಾಡಿದೆ. ಭಾರತದಲ್ಲಿ 400 ಕೋಟಿ ರೂ. ನೆಟ್ ಕಲೆಕ್ಷನ್ ಗಡಿ ಸೇರಿದೆ. ರಿಷಬ್ ಶೆಟ್ಟಿ ವಿಜಯಯಾತ್ರೆ ಮುಂದುವರೆಸಿದ್ದಾರೆ.

Kantara-1 Joins 600 Crore Club Rishab Shetty s Film Continues to Dominate Box Office

2ನೇ ಶನಿವಾರ(ಅಕ್ಟೋಬರ್ 11) 'ಕಾಂತಾರ-1' ಸಿನಿಮಾ ಭಾರತದಲ್ಲಿ 37 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಆ ಮೂಲಕ ಚಿತ್ರದ ಒಟ್ಟು ಗಳಿಕೆ 396 ಕೋಟಿ ರೂ. ದಾಟಿದ್ದು ಶೀಘ್ರದಲ್ಲೇ 400 ಕೋಟಿ ರೂ. ಕ್ಲಬ್ ಸೇರಲಿದೆ. ಮೊದಲ ವಾರ ವಿಶ್ವದಾದ್ಯಂತ ಸಿನಿಮಾ 509 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವದಾಗಿ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಘೋಷಿಸಿತ್ತು. ಆ ಲೆಕ್ಕದಲ್ಲಿ ಈಗಾಗಲೇ ಸಿನಿಮಾ ಒಟ್ಟು ಕಲೆಕ್ಷನ್ 600 ಕೋಟಿ ರೂ. ಗಡಿ ದಾಟಿದೆ.

ವಾರದ ದಿನಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಂಡಿದ್ದ ಸಿನಿಮಾ 2ನೇ ವೀಕೆಂಡ್‌ನಲ್ಲಿ ಆರ್ಭಟ ಹೆಚ್ಚಿಸಿದೆ. ಶನಿವಾರ ಅಡ್ವಾನ್ಸ್ ಬುಕ್ಕಿಂಗ್ ಜೋರಾಗಿತ್ತು. ಕರ್ನಾಟಕ ಮಾತ್ರವಲ್ಲದೇ ತಮಿಳುನಾಡು, ಕೇರಳ, ಆಂಧ್ರ, ತೆಲಂಗಾಣದಲ್ಲಿ 'ಕಾಂತಾರ- 1' ಫೀವರ್ ಜೋರಾಗಿದೆ. ಸಿನಿಮಾ ನೋಡಿದವರೆಲ್ಲಾ ಮೆಚ್ಚಿ ಕಾಮೆಂಟ್ ಮಾಡುತ್ತಿದ್ದಾರೆ. ಹಾಗಾಗಿ ನಿಧಾನವಾಗಿ ನ್ಯೂಟ್ರಲ್ ಆಡಿಯನ್ಸ್ ಕೂಡ ಚಿತ್ರಮಂದಿರಗಳಿಗೆ ಬರ್ತಿದ್ದಾರೆ.

Kantara-1 Joins 600 Crore Club Rishab Shetty s Film Continues to Dominate Box Office

ಶನಿವಾರ ಮಾತ್ರವಲ್ಲ ಭಾನುವಾರ(11ನೇ ದಿನ) ಅಡ್ವಾನ್ಸ್ ಬುಕ್ಕಿಂಗ್ ಕೂಡ ಜಾಸ್ತಿಯಾಗಿದೆ. ಸೆಕೆಂಡ್ ವೀಕೆಂಡ್ ದಾಖಲೆ ಮಟ್ಟದಲ್ಲಿ ಸಿನಿಮಾ ಕಲೆಕ್ಷನ್ ಮಾಡುವುದು ಖಚಿತವಾಗಿದೆ. 'ಕೆಜಿಎಫ್- 2' ಸಿನಿಮಾ 10ನೇ ದಿನ 35 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಆದರೆ 'ಕಾಂತಾರ- 1' ಸಿನಿಮಾ 37 ಕೋಟಿ ರೂ. ಬಾಚಿದೆ. ಮುಂಬೈ ಸೇರಿದಂತೆ ಉತ್ತರ ಭಾರತದಲ್ಲಿ ರಿಷಬ್ ಶೆಟ್ಟಿ ಸಿನಿಮಾ ಪ್ರಚಾರದಲ್ಲಿ ಮುಳುಗಿದ್ದಾರೆ.

ರಾಷ್ಟ್ರೀಯ ಮಾಧ್ಯಮಗಳಿಗೆ ಸಂದರ್ಶನ ಕೊಡುವುದು ಮಾತ್ರವಲ್ಲ, ಮುಂಬೈನ ಚಿತ್ರಮಂದಿರಗಳಿಗೆ ಭೇಟಿ ಕೊಟ್ಟು ರಿಷಬ್ ಪ್ರೇಕ್ಷಕರ ಜೊತೆ ಸಿನಿಮಾ ವೀಕ್ಷಿಸುತ್ತಿದ್ದಾರೆ. ಎಲ್ಲೆಲ್ಲೂ ಭವ್ಯ ಸ್ವಾಗತ ಸಿಗುತ್ತಿದೆ. 'ಕಾಂತಾರ- 1' ಸಕ್ಸಸ್ ಉತ್ತರ ಭಾರತದಲ್ಲಿ ಅವರ ಕ್ರೇಜ್ ಹೆಚ್ಚಿಸಿದೆ. ನಟರಾಗಿ ಮಾತ್ರವಲ್ಲದೇ ನಿರ್ದೇಶಕರಾಗಿಯೂ ಅದ್ಭುತ ಸಿನಿಮಾ ಕಟ್ಟಿಕೊಟ್ಟಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

'ಕಾಂತಾರ- 1' ಸಿನಿಮಾ ಜೊತೆಗೆ ತೆರೆಗೆ ಬಂದಿದ್ದ 'ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ' ಸಿನಿಮಾ ಆರ್ಭಟ ಕಮ್ಮಿ ಆಗಿದೆ. ರಿಷಬ್ ಶೆಟ್ಟಿ ಸಿನಿಮಾ ಎದುರು ಕರಣ್ ಜೋಹರ್ ನಿರ್ಮಾಣದ ಸಿನಿಮಾ ಮುಗ್ಗರಿಸಿದೆ. ಬಾಕ್ಸಾಫೀಸ್‌ನಲ್ಲಿ ಕುಂಟುತ್ತಿದೆ. ಫಸ್ಟ್ ವೀಕ್ ಬಾಲಿವುಡ್ ಸಿನಿಮಾವನ್ನು ಅಲ್ಲಿನ ಪ್ರೇಕ್ಷಕರು ಕೈ ಹಿಡಿದರೂ 2ನೇ ವಾರಕ್ಕೆ 'ಕಾಂತಾರ- 1' ಚಮತ್ಕಾರಕ್ಕೆ ಶರಣಾಗಿದ್ದಾರೆ.

ಭಾನುವಾರ 'ಕಾಂತಾರ- 1' ಸಿನಿಮಾ ಮತ್ತೊಂದು ದಾಖಲೆ ಬರೆಯಲು ಸಜ್ಜಾಗುತ್ತಿದೆ. ಅಡ್ವಾನ್ಸ್ ಬುಕ್ಕಿಂಗ್ ಜೋರಾಗಿದೆ. ಸಾಕಷ್ಟು ಕಡೆಗಳಲ್ಲಿ ಸಿನಿಮಾ ಹೌಸ್‌ಫುಲ್ ಆಗುವ ಸುಳಿವು ಸಿಕ್ಕಿದೆ. ಶನಿವಾರ ರಾತ್ರಿಯೇ ಅಡ್ವಾನ್ಸ್ ಬುಕ್ಕಿಂಗ್‌ನಿಂದ 5 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಆಗಿತ್ತು.

More from Filmibeat

English summary
Rishab Shetty’s ‘Kantara-1’ Surpasses ₹600 Crore Worldwide, Shattering Box Office Records
Read more about: kantara chapter 1 rishab shetty
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X