Kantara 1 Day 14 Boxoffice: 14ನೇ ದಿನ 'ಕಾಂತಾರ-1' ಗಳಿಕೆ ಎಷ್ಟಾಯ್ತು? BMSನಲ್ಲಿ ಎಷ್ಟು ಟಿಕೆಟ್ ಬುಕ್ ಆಗಿತ್ತು?

ಚಿತ್ರಮಂದಿರಗಳಲ್ಲಿ 'ಕಾಂತಾರ- 1' ದರ್ಬಾರ್ ಮುಂದುವರೆದಿದೆ. ವಾರದ ದಿನಗಳಲ್ಲಿ ಕೊಂಚ ಡಲ್ ಆಗಿದ್ದರೂ ವೀಕೆಂಡ್‌ಗಳಲ್ಲಿ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡ್ತಿದೆ. ಇನ್ನೆರಡು ದಿನ ಕಳೆದರೆ ದೀಪಾವಳಿ ವೀಕೆಂಡ್ ಬರ್ತಿದೆ. ಶನಿವಾರ ಭಾನುವಾರ ಸೇರಿ ಒಟ್ಟು 5 ದಿನಗಳ ರಜಾ ದಿನಗಳು ಚಿತ್ರದ ಗಳಿಕೆಗೆ ಪ್ಲಸ್ ಆಗುವ ಸಾಧ್ಯತೆಯಿದೆ.

ಈಗಾಗಲೇ ಸಿನಿಮಾ 'ಕಾಂತಾರ- 1' ಚಿತ್ರದ ಗ್ರಾಸ್ ಕಲೆಕ್ಷನ್ 600 ಕೋಟಿ ರೂ. ಗಡಿ ದಾಟಿದೆ. ಮಂಗಳವಾರ(ಅಕ್ಟೋಬರ್ 14) ಹಾಗೂ ಬುಧವಾರ(ಅಕ್ಟೋಬರ್ 15) ಕೂಡ ಸಿನಿಮಾ ಗಳಿಕೆ ಚೆನ್ನಾಗಿದೆ. ಬುಕ್‌ಮೈ ಶೋನಲ್ಲಿ ಟಿಕೆಟ್ ಬುಕ್ಕಿಂಗ್ ಜೋರಾಗಿದೆ. ಸಿನಿಮಾ ನೋಡುವ ಪ್ರೇಕ್ಷಕರ ಉತ್ಸಾಹ ಇನ್ನು ಕಮ್ಮಿ ಆಗಿಲ್ಲ. ಹಾಗಾಗಿ ಈ ವೀಕೆಂಡ್ ಭಾರೀ ಕಲೆಕ್ಷನ್ ನಿರೀಕ್ಷಿಸಲಾಗುತ್ತಿದೆ.

Kantara-1 Nears 600 Crore Mark Strong Weekend Collections Expected Ahead of Diwali Holidays

ಅಕ್ಟೋಬರ್ 2ರಂದು ಸಿನಿಮಾ ಬಿಡುಗಡೆ ಆಗಿತ್ತು. ಅದಕ್ಕಿಂತ ಒಂದು ದಿನ ಮುನ್ನ ಪ್ರೀಮಿಯರ್ ಶೋಗಳು ಆರಂಭವಾಗಿತ್ತು. ಮೊದಲ ಶೋನಿಂದಲೇ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಬಳಿಕ ನೋಡ ನೋಡುತ್ತಲೇ ಸಿನಿಮಾ ಪ್ರೇಕ್ಷಕರನ್ನು ಸಾಗರದಂತೆ ಚಿತ್ರಮಂದಿರಗಳಿಗೆ ಸೆಳೆಯಿತು. 7000 ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಭಾರತದಾದ್ಯಂತ 'ಕಾಂತಾರ- 1' ಸಿನಿಮಾ ಬಿಡುಗಡೆ ಆಗಿತ್ತು. 14ನೇ ದಿನವೂ ಸಿನಿಮಾ ಒಳ್ಳೆ ಕಮಾಯಿ ಮಾಡಿದೆ.

ಭಾರತದಲ್ಲಿ ನೆಟ್ ಕಲೆಕ್ಷನ್

'ಕಾಂತಾರ- 1' ಸಿನಿಮಾ ಮೊದಲ ವಾರ 509 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ಹೊಂಬಾಳೆ ಫಿಲ್ಮ್ಸ್ ಮಾಹಿತಿ ನೀಡಿತ್ತು. ಬಳಿಕ ಕಲೆಕ್ಷನ್ ಲೆಕ್ಕ ಅಧಿಕೃತವಾಗಿ ಸಿಗಲಿಲ್ಲ. www.sacnilk.com ವೆಬ್‌ಸೈಟ್ ಭಾರತದಲ್ಲಿ ಚಿತ್ರದ ನೆಟ್ ಕಲೆಕ್ಷನ್ ಲೆಕ್ಕ ಕೊಡುತ್ತಿದೆ. ಅದರ ಪ್ರಕಾರ ಈ ಸಿನಿಮಾ 14ನೇ ದಿನ 10.55 ಕೋಟಿ ರೂ. ಗಳಿಸಿದೆ. ಕನ್ನಡ ವರ್ಷನ್ 3.25 ಕೋಟಿ ರೂ, ತೆಲುಗು 1.1 ಕೋಟಿ ರೂ, ಹಿಂದಿ 4.15 ಕೋಟಿ ರೂ, ತಮಿಳು 1.2 ಕೋಟಿ ರೂ, ಹಾಗೂ ಮಲಯಾಳಂ ವರ್ಷನ್ 8 ಲಕ್ಷ ರೂ. ಗಳಿಕೆ ಕಂಡಿದೆ.

BMS ಟಿಕೆಟ್ ಬುಕ್ಕಿಂಗ್

ಕಳೆದ 2 ವರ್ಷಗಳಿಂದ ಬುಕ್‌ಮೈ ಶೋ ಆನ್ಲೈನ್ ಟಿಕೆಟ್ ಬುಕ್ಕಿಂಗ್ ವೆಬ್‌ಸೈಟ್ ಗಂಟೆಗೆ ಎಷ್ಟು ಟಿಕೆಟ್ ಬುಕ್ ಆಗುತ್ತದೆ ಎನ್ನುವ ಮಾಹಿತಿ ನೀಡುತ್ತಿದೆ. ಇದು ಸಿನಿಮಾ ಟ್ರೆಂಡ್ ಬಗ್ಗೆ ಪ್ರೇಕ್ಷಕರಿಗೆ ಮಾಹಿತಿ ನೀಡುತ್ತಿದೆ. ಮೊದಲ ದಿನದಿಂದಲೂ 'ಕಾಂತಾರ- 1' ಚಿತ್ರಕ್ಕೆ ಟಿಕೆಟ್ ಬುಕ್ಕಿಂಗ್ ಜೋರಾಗಿದೆ. ಬರೀ ಬುಕ್‌ಮೈ ಶೋನಲ್ಲೇ ಈಗಾಗಲೇ 1 ಕೋಟಿಗೂ ಅಧಿಕ ಟಿಕೆಟ್ ಬುಕ್ ಆಗಿದೆ. 14ನೇ ದಿನ ಕೂಡ 1 ಲಕ್ಷದ 72 ಸಾವಿರ ಜನ ಆನ್ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಿ ಸಿನಿಮಾ ನೋಡಿದ್ದಾರೆ.

Kantara-1 Nears 600 Crore Mark Strong Weekend Collections Expected Ahead of Diwali Holidays

'ಕಾಂತಾರ- 1' ವಿಜಯಯಾತ್ರೆ

ಚಿತ್ರತಂಡ ರಾಜ್ಯಾದ್ಯಂತ ಸುತ್ತಾಡಿ ಸಿನಿಮಾ ಗೆಲ್ಲಿಸಿದ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಲು ಮುಂದಾಗಿದ್ದಾರೆ. ವಿಜಯಯಾತ್ರೆಗೆ ಸಿದ್ಧತೆ ಶುರುವಾಗಿದೆ. ಇವತ್ತು(ಅಕ್ಟೋಬರ್ 16) ಬೆಳಗ್ಗೆ 9 ಗಂಟೆಗೆ ಚಾಮುಂಡಿ ಬೆಟ್ಟದಲ್ಲಿ ಪೂಜೆ ಸಲ್ಲಿಸಿ ಬಳಿಕ ನಂಜನಗೂಡು ದೇವಸ್ಥಾನಕ್ಕೆ ಚಿತ್ರತಂಡ ಭೇಟಿ ಕೊಡಲಿದೆ. ಸಂಜೆ 4 ಗಂಟೆಗೆ ಮೈಸೂರಿನ ಗಾಯತ್ರಿ ಚಿತ್ರಮಂದಿರದಲ್ಲಿ ಪ್ರೇಕ್ಷಕರನ್ನು ಚಿತ್ರತಂಡ ಭೇಟಿ ಆಗಲಿದೆ.

ಸದ್ಯಕ್ಕಿಲ್ಲ ಓಟಿಟಿ ಎಂಟ್ರಿ

ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಮತ್ತೊಂದು ಕಡೆ ಓಟಿಟಿಯಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ ಎನ್ನುವ ಸುಳ್ಳು ಸುದ್ದಿ ಹರಿದಾಡುತ್ತಿದೆ. ಅಮೇಜಾನ್ ಪ್ರೈಂ ಸಂಸ್ಥೆ ಜೊತೆಗೆ ಡಿಜಿಟಲ್ ಸ್ಟ್ರೀಮಿಂಗ್ ಒಪ್ಪಂದ ಆಗಿದೆ. 120 ಕೋಟಿ ರೂ.ಗೆ ರೈಟ್ಸ್ ಮಾರಾಟವಾಗಿದೆ ಎನ್ನಲಾಗ್ತಿದೆ. ಸಿನಿಮಾ ಚಿತ್ರಮಂದಿರಗಳಲ್ಲೇ ಯಶಸ್ವಿಯಾಗಿ ಪ್ರದರ್ಶನ ಕಾಣ್ತಿದ್ದು ಹೆಚ್ಚು ಕಮ್ಮಿ ಇನ್ನು ಒಂದು ತಿಂಗಳು ಓಟಿಟಿಗೆ ಬರುವುದು ಅನುಮಾನ.

More from Filmibeat

English summary
Rishab Shetty’s ‘Kantara-1’ Maintains Box Office Dominance with ₹600 Crore Collection
Read more about: kantara chapter 1 rishab shetty
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X