Kantara 1 Day 2 Boxoffice: 2ನೇ ದಿನವೂ ಭರ್ಜರಿ ಕಲೆಕ್ಷನ್, ಬಾಕ್ಸಾಫೀಸ್‌ 'ಕಾಂತಾರ- 1' ಸುನಾಮಿ

ವಿಜಯದಶಮಿ ಸಂಭ್ರಮದಲ್ಲಿ ಬಿಡುಗಡೆಯಾಗಿ ಅದ್ಧೂರಿ ಓಪನಿಂಗ್ ಪಡೆದುಕೊಂಡಿದ್ದ 'ಕಾಂತಾರ- 1' ಸಿನಿಮಾ 2ನೇ ದಿನವೂ ಭರ್ಜರಿ ಕಲೆಕ್ಷನ್ ಮಾಡಿದೆ. ಕೋಟಿ ಕೋಟಿ ಕೊಳ್ಳೆ ಹೊಡೆದು ಬಾಕ್ಸಾಫೀಸ್‌ ಶೇಕ್ ಮಾಡ್ತಿದೆ. ಬಹುತೇಕ ಕಡೆಗಳಲ್ಲಿ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಮುಂದುವರೆದಿದೆ. ರಿಷಬ್ ಶೆಟ್ಟಿ ನಟನೆ ಹಾಗೂ ನಿರ್ದೇಶನಕ್ಕೆ ಪ್ರೇಕ್ಷಕರು ಮಂತ್ರಮುಗ್ಧರಾಗಿದ್ದಾರೆ.

2ನೇ ದಿನವಾದ ಶುಕ್ರವಾರ ಸಿನಿಮಾ 100 ಕೋಟಿ ರೂ. ಕ್ಲಬ್ ಸೇರಿದೆ. ಮೊದಲ ದಿನವೇ 89 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ಹೇಳಲಾಗಿತ್ತು. ಇದೀಗ 2ನೇ ದಿನದ ಗಳಿಕೆ ಬಗ್ಗೆ ಚರ್ಚೆ ಶುರುವಾಗಿದೆ. ಸಿನಿಮಾ ಕ್ರೇಜ್, ಬುಕ್ ಮೈ ಶೋ ಟ್ರೆಂಡ್ ನೋಡಿದರೆ ಕಲೆಕ್ಷನ್ ಹೇಗಿದೆ ಎನ್ನುವುದು ಗೊತ್ತಾಗುತ್ತಿದೆ. ಕರ್ನಾಟಕ, ತಮಿಳುನಾಡು, ಆಂಧ್ರ, ತೆಲಂಗಾಣದಲ್ಲಿ ಪ್ರೇಕ್ಷಕರು ದೊಡ್ಡಮಟ್ಟದಲ್ಲಿ ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ.

Kantara-1 Roars at Box Office Crosses 100 Crore in Just 2 Days with Record-Breaking Collections

ನಿಧಾನವಾಗಿ ಉತ್ತರ ಭಾರತದಲ್ಲಿ 'ಕಾಂತಾರ- 1' ಆರ್ಭಟ ಶುರುವಾಗಿದೆ. ಶೋಗಳು ಫಾಸ್ಟ್‌ಫಿಲ್ಲಿಂಗ್, ಹೌಸ್‌ಫುಲ್ ಆಗುತ್ತಿದೆ. ಇಂದು(ಶನಿವಾರ) ಹಾಗೂ ನಾಳೆ(ಭಾನುವಾರ) ಮತ್ತಷ್ಟು ಜೋರಾಗಿ ಸಿನಿಮಾ ಸದ್ದು ಮಾಡಲಿದೆ. ಸಿನಿಮಾ ನೋಡಿದವರೆಲ್ಲಾ ಕೊಂಡಾಡುತ್ತಿದ್ದಾರೆ. ಮೌತ್ ಟಾಕ್ ಮೂಲಕ ಹೆಚ್ಚು ಹೆಚ್ಚು ಜನರನ್ನು ಸಿನಿಮಾ ಸೆಳೆಯುತ್ತಿದೆ. 1000 ಕೋಟಿ ರೂ. ಗ್ರಾಸ್ ಕಲೆಕ್ಷನ್ ಲೆಕ್ಕಾಚಾರ ಮುಂದುವರೆದಿದೆ. ಮುಂದಿನ ದಿನಗಳಲ್ಲಿ ಬೆರ್ಮೆ ದರ್ಬಾರ್ ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ.

'ಕಾಂತಾರ- 1' ಕಲೆಕ್ಷನ್ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. www.Sacnilk.com ವೆಬ್‌ಸೈಟ್ ವರದಿ ಪ್ರಕಾರ 2ನೇ ದಿನ ಭಾರತದಲ್ಲಿ ಸಿನಿಮಾ 43.65 ಕೋಟಿ ನೆಟ್ ಕಲೆಕ್ಷನ್ ಮಾಡಿದೆ. ಮೊದಲ ದಿನ 61.85 ಕೋಟಿ ರೂ. ಗಳಿಕೆ ಕಂಡಿತ್ತು. ಆ ಮೂಲಕ 2 ದಿನಕ್ಕೆ ಸಿನಿಮಾ 105.5 ಕೋಟಿ ರೂ. ಕೊಳ್ಳೆ ಹೊಡೆದಂತೆ ಆಗಿದೆ. ಇದು ಬರೀ ಭಾರತದಲ್ಲಿ ಸಿನಿಮಾ ನೆಟ್ ಕಲೆಕ್ಷನ್ ಮಾತ್ರ. ಗ್ರಾಸ್ ಕಲೆಕ್ಷನ್ ಮತ್ತಷ್ಟು ಜಾಸ್ತಿ ಆಗಿದೆ.

Kantara-1 Roars at Box Office Crosses 100 Crore in Just 2 Days with Record-Breaking Collections

ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ 'ಕಾಂತಾರ- 1' ಸಿನಿಮಾ ಬಿಡುಗಡೆಯಾಗಿದೆ. ಕನ್ನಡದಲ್ಲೇ ಹೆಚ್ಚು ಗಳಿಕೆ ಕಾಣುತ್ತಿದೆ. ಬಳಿಕ ತೆಲುಗು, ತಮಿಳು, ಮಲಯಾಳಂ ಹೀಗೆ ವಿವಿಧ ಭಾಷೆಗಳಲ್ಲಿ ಜನ ಹೆಚ್ಚು ಸಿನಿಮಾ ನೋಡುತ್ತಿದ್ದಾರೆ. ಒಟ್ಟು ಗಳಿಕೆಯಲ್ಲಿ ಕನ್ನಡ ವರ್ಷನ್ ಪಾಲು 82% ಇದೆ. 3ನೇ ದಿನಕ್ಕೆ 200 ಕೋಟಿ ರೂ. ಕ್ಲಬ್ ಸೇರುವ ಸುಳಿವು ಸಿಗುತ್ತಿದೆ.

ತೆಲುಗು ಹಾಗೂ ತಮಿಳು ಪ್ರೇಕ್ಷಕರು ದೊಡ್ಡಮಟ್ಟದಲ್ಲಿ 'ಕಾಂತಾರ- 1' ಚಿತ್ರವನ್ನು ಆಧರಿಸುತ್ತಿದ್ದಾರೆ. 'KGF- 2' ಬಳಿಕ 2 ದಿನದಲ್ಲಿ 100 ಕೋಟಿ ರೂ. ಗಡಿ ದಾಟಿದ ಮತ್ತೊಂದು ಕನ್ನಡ ಸಿನಿಮಾ ಇದಾಗಿದೆ. ಈ ಹಿಂದೆ ಕನ್ನಡದ ಯಾವುದೇ ಸಿನಿಮಾ ಮಾಡದ ಒಂದಷ್ಟು ದಾಖಲೆಗಳನ್ನು 'ಕಾಂತಾರ- 1' ತನ್ನದಾಗಿಸಿಕೊಂಡಿದೆ. ಕೆಲ ವಿಚಾರಗಳಲ್ಲಿ ಯಶ್ ನಟನೆಯ 'KGF- 2' ಚಿತ್ರವನ್ನು ಹಿಂದಿಕ್ಕಿ ಮುನ್ನುಗ್ಗುತ್ತಿದೆ.

ವೀಕೆಂಡ್‌ನಲ್ಲಿ 'ಕಾಂತಾರ- 1' ಸಿನಿಮಾ ದೊಡ್ಡದಾಗಿ ಕಲೆಕ್ಷನ್ ಮಾಡುವ ಲೆಕ್ಕಾಚಾರ ಶುರುವಾಗಿದೆ. ಶನಿವಾರ, ಭಾನುವಾರ ಸಿನಿಮಾ ಗಳಿಕೆ ಚಿತ್ರದ ಸಕ್ಸಸ್ ಯಾವ ಮಟ್ಟದಲ್ಲಿರುತ್ತದೆ ಎನ್ನುವುದನ್ನು ನಿರ್ಧರಿಸಲಿದೆ. 3ನೇ ದಿನವೂ ಬೆಂಗಳೂರಿನ ಬಹುತೇಕ ಶೋಗಳು ಹೌಸ್‌ಫುಲ್ ಆಗ್ತಿದೆ. ಬುಕ್‌ಮೈ ಶೋ ಸಂಪೂರ್ಣ ಕೇಸರಿಮಯವಾಗಿದೆ. ಸೋಲ್ಡೌಟ್, ಫಾಸ್ಟ್‌ಫಿಲ್ಲಿಂಗ್ ಗೊತ್ತಾಗುತ್ತಿದೆ. ಅತ್ತ ಆಂಧ್ರ, ತೆಲಂಗಾಣ, ತಮಿಳುನಾಡಿನಲ್ಲಿ ಶೋಗಳನ ಸಂಖ್ಯೆ ಹೆಚ್ಚಾಗಿದೆ. ಫಾಸ್ಟ್‌ಫಿಲ್ಲಿಂಗ್ ಕೂಡ ಜೋರಾಗಿ ನಡೀತಿದೆ. 'ಕಾಂತಾರ- 1' ಸಿನಿಮಾ ಬಾಯ್ಕಾಟ್ ಎಂದು ಹೇಳುತ್ತಿದ್ದವರು ಸಿನಿಮಾ ನೋಡಿ ಬಾಯ್ತುಂಬ ಹೊಗಳುತ್ತಿದ್ದಾರೆ.

More from Filmibeat

English summary
Kantara-1 Sets Box Office on Fire, Rakes in Over ₹100 Crore Within 2 Days
Read more about: kantara chapter 1 rishab shetty
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X