Kantara 1 Day 16 collection: ಗುರುವಾರಕ್ಕಿಂತ ಶುಕ್ರವಾರ ಹೆಚ್ಚು; 16ನೇ ದಿನ 'ಕಾಂತಾರ'-1 ಗಳಿಸಿದ್ದೆಷ್ಟು?

ದಿನದಿಂದ ದಿನಕ್ಕೆ 'ಕಾಂತಾರ- 1' ಬಾಕ್ಸಾಫೀಸ್ ಕಲೆಕ್ಷನ್ ಹೆಚ್ಚುತ್ತಾ ಸಾಗಿದೆ. ವೀಕೆಂಡ್‌ಗಳಲ್ಲಿ ಸಿನಿಮಾ ಜೋರಾಗಿಯೇ ಸದ್ದು ಮಾಡ್ತಿದೆ. 2 ವಾರಗಳ ಒಟ್ಟು ಗ್ರಾಸ್ ಕಲೆಕ್ಷನ್ ಎಷ್ಟು ಎಂದು ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯೇ ಘೋಷಿಸಿದೆ. ದೀಪಾವಳಿ ವೀಕೆಂಡ್ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ.

ಈಗಾಗಲೇ 2 ವಾರಕ್ಕೆ 717 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ 'ಕಾಂತಾರ- 1' ದಾಖಲೆ ಬರೆದಿದೆ. ಉತ್ತರ ಭಾರತದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸಿನಿಮಾ ಗೆಲ್ಲಲಿಲ್ಲ. ಆದರೆ ಕರ್ನಾಟಕ ಸೇರಿದಂತೆ ಬೇರೆ ಕಡೆಗಳಲ್ಲಿ ರೆಸ್ಪಾನ್ಸ್ ಚೆನ್ನಾಗಿದೆ. 3ನೇ ವಾರದಲ್ಲಿ ಕೂಡ 'ಕಾಂತಾರ- 1' ಸಿನಿಮಾ ಯಾವುದೇ ಸಮಸ್ಯೆ ಇಲ್ಲದೇ ಯಶಸ್ವಿ ಪ್ರದರ್ಶನ ಮುಂದುವರೆಸಿದೆ. ಈ ವಾರ ಹೊಸ ಹೊಸ ಸಿನಿಮಾಗಳು ಬಿಡುಗಡೆ ಆಗಿದ್ದರೂ ರಿಷಬ್ ಶೆಟ್ಟಿ ಸಿನಿಮಾ ಹವಾ ಕಮ್ಮಿ ಆಗಿಲ್ಲ.

Kantara-1 Roars at Box Office Rishab Shetty s Film Crosses 717 Crore in 2 Weeks Eyes Diwali Boom

ಶುಕ್ರವಾರ(ಅಕ್ಟೋಬರ್ 17) ಅಂದ್ರೆ 16ನೇ ದಿನ 'ಕಾಂತಾರ- 1' ಚಿತ್ರ ನೋಡಲು 2 ಲಕ್ಷಕ್ಕೂ ಅಧಿಕ ಟಿಕೆಟ್ ಬುಕ್‌ಮೈ ಶೋನಲ್ಲಿ ಬುಕ್ ಆಗಿದೆ. ಗುರುವಾರ 1 ಲಕ್ಷದ 93 ಸಾವಿರ ಟಿಕೆಟ್ ಬುಕ್ ಆಗಿತ್ತು. ಶುಕ್ರವಾರ 2 ಲಕ್ಷದ 17 ಸಾವಿರ ಟಿಕೆಟ್ ಬುಕ್ ಆಗಿದೆ. ಸಹಜವಾಗಿಯೇ ವೀಕೆಂಡ್ ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬಿದ್ದಿರುವುದು ಗೊತ್ತಾಗುತ್ತಿದೆ. ಶನಿವಾರ ಹಾಗೂ ಭಾನುವಾರ ರಜೆ ಇರುವುದರಿಂದ ಕಲೆಕ್ಷನ್ ಹೆಚ್ಚುವ ಸಾಧ್ಯತೆಯಿದೆ.

ಸೋಮವಾರ, ಮಂಗಳವಾರ ದೀಪಾವಳಿ ರಜೆ ಇರುವುದು ಕೂಡ 'ಕಾಂತಾರ- 1' ಬಾಕ್ಸಾಫೀಸ್ ಗಳಿಕೆ ಹೆಚ್ಚಿಸಲಿದೆ. ಉತ್ತರ ಭಾರತದ ಮಂದಿ ನಿಧಾನವಾಗಿ ಚಿತ್ರಮಂದಿರಗಳ ಕಡೆ ಮುಖ ಮಾಡುತ್ತಿದ್ದಾರೆ. ಮತ್ತೊಂದು ಕಡೆ ರಿಷಬ್ ಶೆಟ್ಟಿ ರಾಜ್ಯಾದ್ಯಂತ ವಿಜಯಯಾತ್ರೆ ಕೈಗೊಂಡಿದ್ದಾರೆ. ಡಿವೈನ್ ಸ್ಟಾರ್ ವಾರಣಾಸಿಗೆ ತೆರಳಿ ಗಂಗಾರತಿಯಲ್ಲಿ ಭಾಗಿ ಆಗಿ ಬಂದಿದ್ದಾರೆ. ಕೌನ್ ಬನೇಗಾ ಕರೋಡ್‌ಪತಿ ಶೋನಲ್ಲಿ ಭಾಗಿ ಆಗಿ ಸಿನಿಮಾ ಪ್ರಚಾರ ಮಾಡಿದ್ದಾರೆ. ಈ ವರ್ಷದ ಬಹಳ ಜನಪ್ರಿಯ ನಟ ಎನಿಸಿಕೊಂಡಿದ್ದಾರೆ.

Kantara-1 Roars at Box Office Rishab Shetty s Film Crosses 717 Crore in 2 Weeks Eyes Diwali Boom

16ನೇ ದಿನದ ಕಲೆಕ್ಷನ್

ಅಂದಹಾಗೆ 'ಕಾಂತಾರ- 1' ಸಿನಿಮಾ 16ನೇ ದಿನ ಭಾರತದಲ್ಲಿ 9.12 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದೆ. ವಿಶ್ವದಾದ್ಯಂತ ಗ್ರಾಸ್ 20 ಕೋಟಿ ದಾಟಿರುವ ಸಾಧ್ಯತೆಯಿದೆ. ಇನ್ನು ಗುರುವಾರ 8.85 ರೂ. ನೆಟ್ ಕಲೆಕ್ಷನ್ ಮಾಡಿತ್ತು. ಶನಿವಾರ 10 ಕೋಟಿ ರೂ. ದಾಟುವ ಅಂದಾಜಿದೆ. ಶನಿವಾರ, ಭಾನುವಾರ ಬುಕ್ಕಿಂಗ್ ಚೆನ್ನಾಗಿದೆ. ಒಟ್ಟಾರೆ ಭಾರತದಲ್ಲಿ 494 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದಂತಾಗಿದೆ.

ಕರ್ನಾಟಕದಲ್ಲಿ 200 ಕೋಟಿ ರೂ.

ರಾಜ್ಯದಲ್ಲಿ 'ಕಾಂತಾರ- 1' ಸಿನಿಮಾ ಆರ್ಭಟ ಮುಂದುವರೆದಿದೆ. 'ಕೆಜಿಎಫ್'-2 ಗಳಿಕೆಯನ್ನು ಕೂಡ ಈ ಸಿನಿಮಾ ದಾಟಿದೆ. ಬರೋಬ್ಬರಿ 200 ಕೋಟಿ ರೂ. ಗ್ರಾಸ್ ಕಲೆಕ್ಷನ್ ಕರ್ನಾಟಕದಲ್ಲೇ ಆಗಿದೆ. ತಮಿಳುನಾಡು, ಕೇರಳ, ಆಂಧ್ರ, ತೆಲಂಗಾಣದಲ್ಲಿ 50 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡಿದೆ.

'ಛಾವ' ದಾಖಲೆ ಬಾಕಿ

ಈ ವರ್ಷ ಅತಿಹೆಚ್ಚು ಗಳಿಕೆ ಕಂಡ ಸಿನಿಮಾ 'ಛಾವ' ಎನಿಸಿಕೊಂಡಿದೆ. 800 ಕೋಟಿ ರೂ. ಕಲೆಕ್ಷನ್ ಮಾಡಿ ಮೊದಲ ಸ್ಥಾನದಲ್ಲಿದೆ. 717 ಕೋಟಿ ರೂ. ಗಳಿಕೆ 'ಕಾಂತಾರ- 1' ಸಿನಿಂಆ ಎರಡನೇ ಸ್ಥಾನದಲ್ಲಿದೆ. 'ಕೂಲಿ' ಹಾಗೂ 'ಸಯ್ಯಾರ' ಸಿನಿಮಾಗಳ ದಾಖಲೆ ಧೂಳಿಪಟವಾಗಿದೆ. ಅಂದಹಾಗೆ 15 ದಿನಗಳ ಕಲೆಕ್ಷನ್ ವಿಚಾರಕ್ಕೆ ಬಂದರೆ 'ಕಾಂತಾರ- 1' ಚಿತ್ರವೇ ಮೊದಲ ಸ್ಥಾನದಲ್ಲಿದೆ. ಆದರೆ 'ಛಾವ' ನಿಧಾನವಾಗಿ 800 ಕೋಟಿ ರೂ. ಗಳಿಸಿತ್ತು. ರಿಷಬ್ ಶೆಟ್ಟಿ ಚಿತ್ರಕ್ಕೆ ಆ ಸಾಮರ್ಥ್ಯ ಇದ್ಯಾ ಕಾದು ನೋಡಬೇಕಿದೆ.

More from Filmibeat

Read more about: kantara chapter 1 rishab shetty
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X