Kantara 1 Day 6 Boxoffice: 6ನೇ ದಿನ ಉತ್ತರ ಭಾರತದಲ್ಲಿ ಭರ್ಜರಿ ಕಲೆಕ್ಷನ್; ಒಟ್ಟು ಗಳಿಕೆ ಎಷ್ಟು?
ಚಿತ್ರಮಂದಿರಗಳಲ್ಲಿ 'ಕಾಂತಾರ- 1' ಸಿನಿಮಾ ಗೆಲುವಿನ ನಾಗಾಲೋಟ ಮುಂದುವರೆದಿದೆ. 6ನೇ ದಿನವೂ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿ ಸದ್ದು ಮಾಡ್ತಿದೆ. ಟಿಕೆಟ್ ದರ ಕಮ್ಮಿ ಮಾಡಿದ್ದಕ್ಕೆ 6ನೇ ದಿನ ಉತ್ತರ ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬಿದ್ದರು. ಹಾಗಾಗಿ ಸಹಜವಾಗಿಯೇ ಗಳಿಕೆ ಹೆಚ್ಚಾಗಿದೆ.
ಅಕ್ಟೊಬರ್ 1ರಂದು ಪ್ರೀಮಿಯರ್ ಶೋಗಳ ಮೂಲಕ 'ಕಾಂತಾರ- 1' ಆರ್ಭಟ ಶುರುವಾಗಿತ್ತು. ಫಸ್ಟ್ ವೀಕೆಂಡ್‌ನಲ್ಲಿ ಸಿನಿಮಾ ಬಾಕ್ಸಾಫೀಶ್ ಶೇಕ್ ಮಾಡಿತ್ತು. ಬಳಿಕ ಸೋಮವಾರದ ಪರೀಕ್ಷೆ ಪಾಸ್ ಆಗಿ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಮುಂದುವರೆಸಿದೆ. ಕರ್ನಾಟಕದಲ್ಲೇ ಸಿನಿಮಾ ಈಗಾಗಲೇ 100 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ. ಇನ್ನು ತಮಿಳುನಾಡು, ಕೇರಳ, ಆಂಧ್ರ, ತೆಲಂಗಾಣ ಹಾಗೂ ಕೇರಳದಲ್ಲೂ ಒಳ್ಳೆ ಕಮಾಯಿ ಮಾಡ್ತಿದೆ.

ರಿಷಬ್ ಶೆಟ್ಟಿ ನಟನೆಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರ್ತಿದೆ. ಸಿನಿಮಾ ಉಂಟು ಮಾಡುತ್ತಿರುವ ಭಾವ ತೀವ್ರತೆ ಅಗಾಧವಾಗಿದೆ. ಕೊನೆಯ ಅರ್ಧ ಗಂಟೆ ನೋಡುಗರನ್ನು ಬೇರೆಯದ್ದೇ ಪ್ರಪಂಚಕ್ಕೆ ಕೊಂಡೊಯ್ಯುತ್ತಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಎಲ್ಲೆಲ್ಲೂ 'ಕಾಂತಾರ- 1' ಹವಾ ಜೋರಾಗಿದೆ. ವಿದೇಶಗಳಲ್ಲಿ ಕೂಡ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.
'ಕಾಂತಾರ- 1' ಸಿನಿಮಾ ಕಲೆಕ್ಷನ್ 6 ದಿನಕ್ಕೆ 300 ಕೋಟಿ ರೂ. ಗಡಿಯಲ್ಲಿದೆ. ಇವತ್ತು(ಅಕ್ಟೋಬರ್ 8) ಸಿನಿಮಾ ಆ ಮೈಲಿಗಲ್ಲು ಸ್ಥಾಪಿಸಲಿದೆ. ಸಂಭ್ರಮದಲ್ಲಿರುವ ಚಿತ್ರತಂಡ ಪ್ರಮೋಷನ್ ಮುಂದುವರೆಸಿದೆ. ರಾಷ್ಟ್ರಪತಿ ಭವನದಲ್ಲಿ ಸಿನಿಮಾ ಪ್ರದರ್ಶನ ಮಾಡಲಾಗಿದೆ. ದೆಹಲಿ ಮುಖ್ಯಮಂತ್ರಿ ರೇಖಾಗುಪ್ತಾ ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ಚಿತ್ರತಂಡವನ್ನು ಭೇಟಿ ಮಾಡಿದ್ದಾರೆ. ಕೆಲವರು ಪಂಜುರ್ಲಿ ಹಾಗೂ ಗುಳಿಗ ದೈವಗಳನ್ನು ಅನುಕರಣೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ಚಿತ್ರತಂಡ ಬೇಸರ ವ್ಯಕ್ತಪಡಿಸಿ ಯಾರೂ ಮಾಡದಂತೆ ಮನವಿ ಮಾಡಿದೆ.

ಉತ್ತರ ಭಾರತದಲ್ಲಿ 'ಕಾಂತಾರ- 1' ಸಿನಿಮಾ ನಿಧಾನವಾಗಿ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುತ್ತಿದೆ. ಮಂಗಳವಾರ(ಅಕ್ಟೋಬರ್ 7) ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ದರ ಕಡಿತಗೊಳಿಸಲಾಗಿತ್ತು. ಅದರ ಲಾಭ ಪಡೆದು ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬಿದ್ದರು. ಹಾಗಾಗಿ ಹೆಚ್ಚು ಹೆಚ್ಚು ಜನರನ್ನು ಸಿನಿಮಾ ತಲುಪುತ್ತಿದೆ. ಮುಂದಿನ ದಿನಗಳಲ್ಲಿ ಉತ್ತರ ಭಾರತದಲ್ಲಿ ಸಿನಿಮಾ ಕ್ರೇಜ್ ಹೆಚ್ಚುವ ಸುಳಿವು ಸಿಗ್ತಿದೆ.
6 ದಿನಗಳ ಕಲೆಕ್ಷನ್
ಅಧಿಕೃತವಾಗಿ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ 'ಕಾಂತಾರ- 1' ಸಿನಿಮಾ ಕಲೆಕ್ಷನ್ ಲೆಕ್ಕ ಕೊಡುತ್ತಿಲ್ಲ. ಆದರೆ ಟ್ರೇಡ್ ಎಕ್ಸ್‌ಪರ್ಟ್ ಚಿತ್ರದ ಗಳಿಕೆಯನ್ನು ಲೆಕ್ಕ ಹಾಕುತ್ತಿದ್ದಾರೆ. www.sacnilk.com ವೆಬ್ ಸೈಟ್ ವರದಿ ಪ್ರಕಾರ
1ನೇ ದಿನ ₹61.85 ಕೋಟಿ
2ನೇ ದಿನ ₹45.4 ಕೋಟಿ
3ನೇ ದಿನ ₹55 ಕೋಟಿ
4ನೇ ದಿನ ₹63 ಕೋಟಿ
5ನೇ ದಿನ ₹31.50 ಕೋಟಿ
6ನೇ ದಿನ ₹33.50 ಕೋಟಿ
ಒಟ್ಟು ₹290.25 ಕೋಟಿ (Net)
'ಕಾಂತಾರ-1' ಸಿನಿಮಾ ಕಲೆಕ್ಷನ್ ಮಾಡಿದೆ. ಓವರ್‌ಸೀಸ್ ಗಳಿಕೆಯನ್ನು ಸೇರಿಸಿಕೊಂಡರೆ 300 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದಂತಾಗಿದೆ. ವಾರದ ದಿನಗಳಲ್ಲಿ ಕೂಡ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಬುಕ್‌ಮೈ ಶೋನಲ್ಲಿ ಗಂಟೆ ಗಂಟೆಗೆ ಸಾವಿರಾರು ಟಿಕೆಟ್ ಬುಕ್ ಆಗುತ್ತಿದೆ. ನೇರವಾಗಿ ಚಿತ್ರಮಂದಿರಕ್ಕೆ ತೆರಳಿ ಟಿಕೆಟ್ ಖರೀದಿಸಿ ಸಿನಿಮಾ ನೋಡುವವರ ಸಂಖ್ಯೆ ಹೆಚ್ಚುತ್ತಿದೆ.
₹500 ಕೋಟಿ ಕ್ಲಬ್‌ನತ್ತ ಕಾಂತಾರ-1
ಈ ವೀಕೆಂಡ್‌ನಲ್ಲಿ 'ಕಾಂತಾರ- 1' ಸಿನಿಮಾ 500 ಕೋಟಿ ರೂ, ಬಾಕ್ಸಾಫೀಸ್ ಕ್ಲಬ್ ಸೇರಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಈ ಸಾಧನೆ ಮಾಡಿದ 2ನೇ ಕನ್ನಡ ಸಿನಿಮಾ ಇದಾಗಲಿದೆ. ಇದಕ್ಕೂ ಮುನ್ನ ಯಶ್ ನಟನೆಯ 'ಕೆಜಿಎಫ್- 2' ಸಿನಿಮಾ 1150 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿತ್ತು.


Click it and Unblock the Notifications











