Kantara Chapter 1 Box Office ; ಐತಿಹಾಸಿಕ ದಾಖಲೆ ಬರೆಯುತ್ತಾ ಕಾಂತಾರ 1 ? ಸಿನಿಮಾ ಪಂಡಿತರ ಲೆಕ್ಕಾಚಾರವೇನು ?
2022.. ಸೆಪ್ಟೆಂಬರ್ 30.. ಕನ್ನಡದ ಕಾಂತಾರ ಚಿತ್ರ ಕಂಡು ಚಿತ್ರರಂಗ ಬೆಚ್ಚಿ ಬಿದ್ದಿತ್ತು. ಭಾರತದೆಲ್ಲೆಡೆ ಕಾಂತಾರ ಮೆರವಣಿಗೆ ನಡೆದಿತ್ತು. ಚಿತ್ರಕ್ಕೆ ಹಣ ಹೂಡಿದ್ದ ಹೊಂಬಾಳೆ ಸಂಸ್ಥೆ ಮತ್ತು ರಿಷಬ್ ಶೆಟ್ಟಿಯೇ ಈ ಅದ್ಭುತ .. ಅತ್ಯಮೋಘ.. ಅದ್ವೀತಿಯ ಗೆಲುವನ್ನು ನಿರೀಕ್ಷೆ ಮಾಡಿರಲಿಲ್ಲ. ಎಲ್ಲರ ಲೆಕ್ಕಾಚಾರ ತಲೆಕೆಳಗಾಗಿಸಿ ಹೊಸದೊಂದು ಇತಿಹಾಸವನ್ನು ಬರೆದ ಈ ಕಾಂತಾರ ಚಿತ್ರದ ಕಲರವ ಈಗ ಮತ್ತೆ ಶುರುವಾಗಿದೆ.
ಈ ಬಾರಿ ಕೂಡಾ ಹಳೆಯ ಇತಿಹಾಸ ಮರುಕಳಿಸುತ್ತಾ ಗೊತ್ತಿಲ್ಲ. ಆದರೆ.. ಕಾಂತಾರ ಪ್ರಿಕ್ವೆಲ್ ಚಿತ್ರ ಮೊದಲ ದಿನ ಹಲವು ಪವಾಡಗಳನ್ನು ಬಾಕ್ಸಾಫೀಸ್ ನಲ್ಲಿ ಮಾಡುವ ನಿರೀಕ್ಷೆಗಳಿವೆ. ಕೇವಲ ಕನ್ನಡದಲ್ಲಿ ಮಾತ್ರ..ಕನ್ನಡಿಗರಲ್ಲಿ ಮಾತ್ರ ಈ ನಿರೀಕ್ಷೆಗಳಿಲ್ಲ. ಬದಲಿಗೆ ಬಾಲಿವುಡ್ ನಲ್ಲಿ ಕೂಡ "ಕಾಂತಾರ ಭಾಗ ಒಂದು" ಮಾಡಬಹುದಾದ ಗಳಿಕೆಯ ಕುರಿತು ಚರ್ಚೆಗಳಾಗುತ್ತಿವೆ.

ಇದಕ್ಕೆ ಕೈಗನ್ನಡಿ ಎಂಬಂತೆ ಬಾಲಿವುಡ್ ನ ಟ್ರೇಡ್ ಪಂಡಿತರಾದ ರೋಹಿತ್ ಜೈಸ್ವಾಲ್ ಅವರನ್ನೊಳಗೊಂಡು ಹಲವರು ಹಿಂದಿ ಭಾಷೆಯಲ್ಲಿ ಕಾಂತಾರ ಮೊದಲ ದಿನ ಎಷ್ಟು ಹಣ ಗಳಿಸಬಹುದು ಎನ್ನುವ ಲೆಕ್ಕಾಚಾರ ಹಾಕುತ್ತಿದ್ದಾರೆ.
ಇನ್ನೂ ವಾರದ ಹಿಂದೆ ''ಕಾಂತಾರ'' ಮೇಲೆ ಹಿಂದಿ ಉದ್ಯಮಕ್ಕೆ ಯಾವ ನಿರೀಕ್ಷೆಗಳಿರಲಿಲ್ಲ. ಚಿತ್ರದ ಟ್ರೇಲರ್ ಬಿಡುಗಡೆಯಾದಾಗ ಹಲವರು ಅಪಸ್ವರ ಎತ್ತಿದ್ದರು. ಆದರೆ ಈಗ ಹಾಗಿಲ್ಲ. ಮೊದಲ ದಿನ ''ಕಾಂತಾರ'' ಚಿತ್ರದ ಹಿಂದಿ ಅವತರಣಿಕೆ ಹೆಚ್ಚೆಂದರೆ ₹12-15 ಕೋಟಿ ಗಳಿಸಬಹುದು ಎನ್ನುತ್ತಿದ್ದ ಬಾಲಿವುಡ್ ಪಂಡಿತರೇ ಈಗ ಮೊದಲ ದಿನದ ಗಳಿಕೆ ಕೇವಲ ಹಿಂದಿಯಲ್ಲಿಯೇ ₹20 ಕೋಟಿ ಗಡಿ ದಾಟುವ ಸಾಧ್ಯತೆ ಇದೆ ಎಂದು ಹೇಳುತ್ತಿದ್ದಾರೆ. ಎಲ್ಲರಿಗೆ ಗೊತ್ತಿರುವಂತೆ ''ಕಾಂತಾರ'' ಪ್ಯಾನ್ ಇಂಡಿಯಾ ಸಿನಿಮಾ. ಹೀಗಾಗಿ ಎಲ್ಲಾ ಭಾಷೆಯ ಗಳಿಕೆಯನ್ನು ಲೆಕ್ಕ ಹಾಕಿದರೆ ''ಕಾಂತಾರ'' ಚಿತ್ರದ ಮೊದಲ ದಿನದ ಗಳಿಕೆ ₹40 ಕೋಟಿಯ ಗಡಿಯನ್ನು ದಾಟುವುದು ಖಚಿತ ಎನ್ನುವ ಭವಿಷ್ಯವಾಣಿ ಸದ್ಯ ಕೇಳಿ ಬರುತ್ತಿದೆ.

ಹಾಗೊಂದು ವೇಳೆ ಕೇಳಿ ಬರುತ್ತಿರುವ ಈ ಭವಿಷ್ಯವಾಣಿ ನಿಜಾ ಆಗಿದ್ದೇ ಆದಲ್ಲಿ, ಚಿತ್ರ ಮೊದಲ ದಿನ ₹40 ಕೋಟಿಯ ಗಡಿಯನ್ನು ತಲುಪಿದ್ದೇ ಆದಲ್ಲಿ ''ಕಾಂತಾರ'' ಹಿಂದಿಯಲ್ಲಿ ತೆರೆಗೆ ಬಂದಿದ್ದ ಹೊಸ ಹುಡುಗನ ''ಸೈಯಾರಾ'' (₹22 ಕೋಟಿ), ಸಲ್ಮಾನ್ ಖಾನ್ ಅಭಿನಯದ ''ಸಿಕಂದರ್'' (₹26 ಕೋಟಿ), ಮತ್ತು ವಿಕ್ಕಿ ಕೌಶಲ್ ಅಭಿನಯದ ''ಛಾವಾ'' (₹31 ಕೋಟಿ) ಚಿತ್ರಗಳ ಮೊದಲ ದಿನದ ಗಳಿಕೆಯನ್ನು ಹಿಂದಿಕ್ಕಿದಂತೆ ಆಗಲಿದೆ.
ಇನ್ನು ಈ ವರ್ಷ ಮೊದಲ ದಿನ ಅತೀ ಹೆಚ್ಚು ಹಣ ಗಳಿಸಿದ ಕೀರ್ತಿ ದಕ್ಷಿಣ ಭಾರತೀಯ ಸ್ಟಾರ್‌ಗಳಿಗೆಯೇ ಸಿಗುತ್ತೆ. ಪವನ್ ಕಲ್ಯಾಣ್ ಅಭಿನಯದ ''ಓಜಿ'' ಮೊದಲ ದಿನ ₹84 ಕೋಟಿ ಹಣವನ್ನು ಗಳಿಸಿತ್ತು. ರಜನಿಕಾಂತ್ ಅಭಿನಯದ ''ಕೂಲಿ''ಯ ಮೊದಲ ದಿನದ ಗಳಿಕೆ ₹65 ಕೋಟಿ ಆಗಿತ್ತು. ಈ ಗಳಿಕೆಯನ್ನು ''ಕಾಂತಾರ'' ಹಿಂದಿಕ್ಕುತ್ತಾ ಎನ್ನುವ ಕುತೂಹಲ ಕೂಡ ಸದ್ಯ ಹಲವರಲ್ಲಿದೆ.
ಇನ್ನುಳಿದಂತೆ ಚಿತ್ರಕ್ಕೆ ಸದ್ಯ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರ ನೋಡಿದವರು ಚಿತ್ರ ಕುರಿತು ವ್ಯಾಪಕ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ''ಕಾಂತಾರ'' ಬ್ಲಾಕ್‌ಬಸ್ಟರ್ ಆಗುವುದು ಗ್ಯಾರಂಟಿ ಎನ್ನುತ್ತಿದ್ದಾರೆ. ಮೊದಲ ವಾರಾಂತ್ಯಕ್ಕೆ ''ಕಾಂತಾರ'' ಎಷ್ಟು ಹಣ ದೋಚುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ


Click it and Unblock the Notifications











