ಬೆಳ್ಳಿತೆರೆಯಲ್ಲಿ ದೈವದ ಘರ್ಜನೆ, ಕಾಂತಾರ ಅಬ್ಬರ ; ತಮಿಳುನಾಡಿನಲ್ಲಿಯೇ ನೆಲ ಸಮವಾಯ್ತು ಧನುಷ್ 'ಇಡ್ಲಿ' ಅಂಗಡಿ

ಅದೃಷ್ಟ ಅನ್ನೋದು ಅಷ್ಟು ಸುಲಭವಾಗಿ ಯಾರ ಸ್ವತ್ತು ಆಗಲ್ಲ. ರಾತ್ರೋರಾತ್ರಿ ಆರಕ್ಕೇರಿದವರು ಮಾರನೇ ದಿನವೇ ಮೂರಕ್ಕಿಳಿದು ಬಿಡುತ್ತಾರೆ. ಲಕ್ ಅನ್ನುವ ''ಕಿಕ್'' ಅಷ್ಟು ಸುಲಭಕ್ಕೆ ಯಾರಿಗೂ ಹತ್ತಲ್ಲ. ಇದಕ್ಕೆ ಸದ್ಯದ ಅತ್ಯುತ್ತಮ ಉದಾಹರಣೆಯೇ ಕಾಲಿವುಡ್‌ನ ಸೂಪರ್ ಸ್ಟಾರ್ ಧನುಷ್. ಹೌದು, ಹೆಚ್ಚೇನು ಇಲ್ಲ. ನಾಲ್ಕು ವರ್ಷದ ಹಿಂದಿನವರೆಗೆ ಒಂದಾದ ಮೇಲೊಂದು ಗೆಲುವನ್ನು ಕಂಡವರು ಧನುಷ್.

ಆದರೆ.. 2021ರ ನಂತರ ಧನುಷ್‌ಗೆ ಅದೃಷ್ಟ ಕೈ ನೀಡಿದೆ. ಮಾಡಿದ ಯಾವ ಚಿತ್ರ ಕೂಡ ಮೊದಲಿನಂತೆ ಧಾಂ ಧೂಂ ಎಂದು ಸದ್ದು ಮಾಡುತ್ತಿಲ್ಲ. ಆರಂಭದಲ್ಲಿ ಕೆಲ ಚಿತ್ರಗಳು ನಿರೀಕ್ಷೆ ಮೂಡಿಸಿವೆಯಾದರೂ ಬಾಕ್ಸಾಫೀಸ್‌ನಲ್ಲಿ ಚಿತ್ರಗಳು ಗೆಲ್ಲಲಿಲ್ಲ. ''ವಾತಿ'' ಮತ್ತು ''ರಾಯನ್'' ಹೊರತು ಪಡಿಸಿದರೆ ''ಅತರಂಗಿ ರೇ'' .. ''ಕ್ಯಾಪ್ಟನ್ ಮಿಲ್ಲರ್''.. ''ಕುಬೇರ''..

Kantara Chapter 1 CONQUERS Tamil Nadu Box Office Crushing Idli Kadai in Weekend Showdown

ಹೀಗೆ ಧನುಷ್‌ ಕೈಗೆ ಒಂದಾದ ಮೇಲೊಂದರಂತೆ ದಕ್ಕಿದ್ದು ಕೇವಲ ನಿರಾಸೆ ಮಾತ್ರ. ಈ ಹಿನ್ನೆಲೆ '' ಇಡ್ಲಿ ಕಡೇ'' ಚಿತ್ರದ ಮೇಲೆ ತಮಿಳು ಚಿತ್ರರಂಗಕ್ಕೆ ಭರವಸೆ ಇತ್ತು. ಧನುಷ್‌ಗೆ ಕೂಡ ಚಿತ್ರ ಗೆಲ್ಲುತ್ತೆ ಎನ್ನುವ ವಿಶ್ವಾಸ ಇತ್ತು. ಬಹುಶಃ ಬೇರೆಯ ದಿನ ಧನುಷ್ ತಮ್ಮ ಈ ಚಿತ್ರವನ್ನು ಬಿಡುಗಡೆ ಮಾಡಿದ್ದರೆ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತಿತ್ತೇನೋ..?

ಆದರೆ.. ಧನುಷ್ ತಮ್ಮ ಕೈಯಾರೆ ಮಾಡಿದ್ದ ''ಇಡ್ಲಿ ಕಡೇ'' ಚಿತ್ರವನ್ನು ''ಕಾಂತಾರ-ಚಾಪ್ಟರ್ 1'' ಎದುರು ಬಿಡುಗಡೆ ಮಾಡಿದರು. ಪರಿಣಾಮ ''ಇಡ್ಲಿ ಕಡೇ'' ಬಾಕ್ಸಾಫೀಸ್‌ನಲ್ಲಿ ಬಸವಳಿದಿದೆ. ''ಕಾಂತಾರ'' ಅಬ್ಬರದ ಮುಂದೆ ಧನುಷ್ ಮಾಡಿದ್ದ ''ಇಡ್ಲಿ'' ಹಳಸಿ ಹೋಗಿದೆ. ಇದಕ್ಕೆ ಈ ಚಿತ್ರದ ಬಾಕ್ಸಾಫೀಸ್‌ನ ಅಂಕಿ ಅಂಶಗಳೇ ಸಾಕ್ಷಿ.

ಹೌದು, ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ವರದಿ ಮಾಡಿರುವಂತೆ ''ಕಾಂತಾರ-ಚಾಪ್ಟರ್ 1'' ಚಿತ್ರದ ಅಲೆ ಶುರುವಾಗುವ ಒಂದು ದಿನದ ಮೊದಲು ಬಿಡುಗಡೆಯಾದ ''ಇಡ್ಲಿ ಕಡೇ'' ಮೊದಲ ದಿನ 11 ಕೋಟಿ ಗಳಿಸಿತ್ತು. ಭರವಸೆಯನ್ನು ಮೂಡಿಸಿತ್ತು.

ಆದರೆ..ಧನುಷ್ ದುರಾದೃಷ್ಟ. ಮೊದಲ ದಿನ ''ಇಡ್ಲಿ ಕಡೇ'' ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯ್ತು. ಎಲ್ಲಕ್ಕಿಂತ ಹೆಚ್ಚಾಗಿ ಮರುದಿನವೇ ''ಕಾಂತಾರ'' ಕ್ರೇಜ್ ಇಡೀ ದೇಶವನ್ನು ಆವರಿಸಿಕೊಂಡಿತು. ಇದಕ್ಕೆ ಕೈಗನ್ನಡಿ ಎಂಬಂತೆ ಎರಡನೇ ದಿನದಿಂದ ಕುಸಿಯಲು ಶುರುವಾದ ''ಇಡ್ಲಿ ಕಡೇ'' ಗಳಿಕೆ ದಿನದಿಂದ ದಿನಕ್ಕೆ ಇನ್ನೂ ಕುಸಿಯುತ್ತಲೇ ಇದೆಯೇ ಹೊರತು ಮೇಲಕ್ಕೇರುತ್ತಿಲ್ಲ.

ಸ್ಯಾಕ್ನಿಲ್ ಪ್ರಕಾರ ''ಇಡ್ಲಿ ಕಡೇ'' ಚಿತ್ರದ 5 ದಿನಗಳ ಗಳಿಕೆ ಈ ಕೆಳಗಿನಂತೆ ಇದೆ.

ಮೊದಲ ದಿನ [ಬುಧವಾರ] ₹ 11 ಕೋಟಿ
ಎರಡನೇ ದಿನ [ಗುರುವಾರ] ₹ 9.75ಕೋಟಿ
ಮೂರನೇ ದಿನ[ಶುಕ್ರವಾರ] ₹ 5.6 ಕೋಟಿ
ನಾಲ್ಕನೇ ದಿನ [ಶನಿವಾರ ] ₹ 6.25 ಕೋಟಿ
ಐದನೇ ದಿನ [ಭಾನುವಾರ] ₹6 ಕೋಟಿ

ಒಟ್ಟು ಗಳಿಕೆ - ₹ 38.60 ಕೋಟಿ

ಇನ್ನು ಆಶ್ಚರ್ಯ ಅಂದರೆ ತಮಿಳುನಾಡಿನಲ್ಲಿ ''ಇಡ್ಲಿ ಕಡೇ'' ಚಿತ್ರಕ್ಕಿಂತ ''ಕಾಂತಾರ- ಚಾಪ್ಟರ್ 1'' ನೋಡುವ ಉತ್ಸಾಹವೇ ಅಲ್ಲಿನ ಚಿತ್ರ ರಸಿಕರಲ್ಲಿ ಕಂಡು ಬರುತ್ತಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಕೇವಲ ನಾಲ್ಕು ದಿನದಲ್ಲಿ ''ಕಾಂತಾರ'' ತಮಿಳು ವರ್ಷನ್ ₹ 25 ಕೋಟಿಯನ್ನು ದೋಚಿದೆ. ಅದರಲ್ಲಿಯೂ ನಿನ್ನೆ ( ಭಾನುವಾರ- ಅಕ್ಟೋಬರ್ 5) ''ಇಡ್ಲಿ ಕಡೇ'' ಚಿತ್ರವನ್ನು ಹಿಂದಿಕ್ಕಿರುವ ''ಕಾಂತಾರ-ಚಾಪ್ಟರ್ 1'' ತಮಿಳುನಾಡಿನಲ್ಲಿಯೇ ₹ 7.5 ಕೋಟಿ ಹಣವನ್ನು ಗಳಿಸಿದೆ.


ಸ್ಯಾಕ್ನಿಲ್ ಪ್ರಕಾರ ತಮಿಳುನಾಡಿನಲ್ಲಿ ''ಕಾಂತಾರ'' ಚಿತ್ರದ 4 ದಿನಗಳ ಗಳಿಕೆ ಈ ಕೆಳಗಿನಂತೆ ಇದೆ.

ಮೊದಲ ದಿನ [ಗುರುವಾರ] ₹ 6.25 ಕೋಟಿ
ಎರಡನೇ ದಿನ [ಶುಕ್ರವಾರ] ₹ 5.25ಕೋಟಿ
ಮೂರನೇ ದಿನ[ಶನಿವಾರ] ₹ 6 ಕೋಟಿ
ನಾಲ್ಕನೇ ದಿನ [ಭಾನುವಾರ ] ₹ 7.5 ಕೋಟಿ


ಒಟ್ಟು ಗಳಿಕೆ - ₹ 25 ಕೋಟಿ

ಹೀಗೆ ''ಕಾಂತಾರ'' ಚಿತ್ರದ ಗಳಿಕೆ ತಮಿಳುನಾಡಿನಲ್ಲಿ ದಿನದಿಂದ ದಿನಕ್ಕೆ ಏರುತ್ತಿದೆ. ಮತ್ತೊಂದು ಕಡೆ ''ಇಡ್ಲಿ ಕಡೇ'' ಗಳಿಕೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಚಿತ್ರಮಂದಿರದಿಂದ ಎತ್ತಂಗಡಿಯಾಗುವ ಮುನ್ನ ''ಇಡ್ಲಿ ಕಡೇ'' ಎಷ್ಟು ಗಳಿಸುತ್ತೆ ಎನ್ನುವುದನ್ನು ಈಗ ಕಾದು ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
The Tamil Nadu box office battle is over! Find out just how badly Rishab Shetty's 'Kantara: Chapter 1' crushed the collections of 'Idli Kadai' in its explosive opening weekend
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X