ಬೆಳ್ಳಿತೆರೆಯಲ್ಲಿ ಬೆಳಕಿನ ದರ್ಶನ ; ಆಮೀರ್ ಖಾನ್ 'ಸಿತಾರೆ ಜಮೀನ್ ಪರ್' ದಾಖಲೆ ಛಿದ್ರ-ಹಿಂದಿಯಲ್ಲಿ 'ಕಾಂತಾರ'ಗೆ 7ನೇ ಸ್ಥಾನ

ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಚಿತ್ರರಂಗ ಅಂದರೆ ಕೇವಲ ಬಾಲಿವುಡ್ ಮಾತ್ರ ಎಂಬಂತೆ ಬಿಂಬಿಸಲಾಗುತ್ತಿತ್ತು. ಅಹಂಕಾರ ಅಕ್ಷರಶಃ ಬಾಲಿವುಡ್‌ನವರ ನೆತ್ತಿಗೇರಿದ್ದ ಕಾಲ ಅದು. ಆದರೆ ಈಗ ಕಾಲ ಬದಲಾಗಿದೆ. ದಕ್ಷಿಣ ಚಿತ್ರಗಳ ಅಬ್ಬರದ ಮುಂದೆ ಹಿಂದಿ ಉದ್ಯಮದ ಚಿತ್ರಗಳು ತರಗೆಲೆಗಳಂತೆ ಚದುರಿ ದಿಕ್ಕಾಪಾಲಾಗುತ್ತಿವೆ. ಸ್ವಲ್ಪ ಯಾಮಾರಿದರೂ ಬಾಲಿವುಡ್ಡಿಗೇ ಬಾಲಿವುಡ್ಡೇ ಬಾಗಿಲು ಹಾಕಿಕೊಂಡು ಹೋಗಬೇಕಾದ ಅಪಾಯ ಇದೆ.

ಹೀಗಿರುವಾಗ ತೆರೆಗೆ ಬಂದಿರುವ ''ಕಾಂತಾರ-ಚಾಪ್ಟರ್ 1'' ಬಾಲಿವುಡ್‌ನ ಇನ್ನೂ ಬೆಚ್ಚಿ ಬೀಳಿಸಿದೆ. ಉಳಿದಿದ್ದ ಚೂರು ಪಾರು ನೆಮ್ಮದಿಗೆ ಕೊಳ್ಳಿ ಇಟ್ಟಿದೆ. ಚಿಂತೆಯನ್ನು ಹೆಚ್ಚಿಸಿದೆ. ಹೌದು, ಎಲ್ಲರಿಗೆ ಗೊತ್ತಿರುವಂತೆ ಭಾರತದೆಲ್ಲೆಡೆ ಸದ್ಯ ''ಕಾಂತಾರ'' ಅಲೆ ಇದೆ. ಭಾಷೆಯ ಭೇದ ಭಾವ ಇಲ್ಲದೇ ಅನೇಕರು ಈ ಕಾಂತಾರವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಭಕ್ತಿಯ ಅಲೆಯಲ್ಲಿ ತೇಲುತ್ತಿದ್ದಾರೆ.

KANTARA Chapter 1 CRUSHES Sitaare Zameen Par Day 16 Ranks 7th Biggest Hindi Film of 2025

ಅದರಲ್ಲಿಯೂ ಕನ್ನಡಿಗರನ್ನು ಹೊರತು ಪಡಿಸಿದರೆ ಬೆಳ್ಳಿತೆರೆಯಲ್ಲಿ ಬೆಳಕಿನ ದರ್ಶನ ಕಂಡು ಉತ್ತರ ಭಾರತದ ಚಿತ್ರ ಪ್ರೇಮಿಗಳು ಪುನೀತರಾಗುತ್ತಿದ್ದಾರೆ. ಹೊಂಬಾಳೆ ಸಂಸ್ಥೆಗೆ ತಮ್ಮ ಕಾಣಿಕೆ ನೀಡುತ್ತಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಸದ್ಯ ''ಕಾಂತಾರ ಚಾಪ್ಟರ್ 1'' ಚಿತ್ರದ ಹಿಂದಿ ಅವತರಣಿಕೆ ಬಾಲಿವುಡ್‌ನ ಸೂಪರ್ ಸ್ಟಾರ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮಿರ್ ಖಾನ್ ಅವರ ''ಸಿತಾರೆ ಜಮೀನ್ ಪರ್'' ಚಿತ್ರಕ್ಕೆ ಸೆಡ್ಡು ಹೊಡೆದಿದೆ. ಬಾಕ್ಸಾಫೀಸ್‌ನಲ್ಲಿ ಹಿಂದಿಕ್ಕಿದೆ.

ಹೌದು, ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಈ ವರ್ಷದ ಜೂನ್‌ನಲ್ಲಿ ತೆರೆಗೆ ಬಂದಿದ್ದ ''ಸಿತಾರೆ ಜಮೀನ್ ಪರ್'' ಚಿತ್ರ ಚಿತ್ರಮಂದಿರಗಳಲ್ಲಿ 44 ದಿನ ಪ್ರದರ್ಶನ ಕಂಡಿತ್ತು. ಭಾರತದ ಬಾಕ್ಸಾಫೀಸ್‌ನಲ್ಲಿ ₹167.3 ಕೋಟಿಯನ್ನು ದೋಚಿತ್ತು.

ಈ ಗಳಿಕೆಯನ್ನು ಕನ್ನಡದ ''ಕಾಂತಾರ-ಚಾಪ್ಟರ್ 1''ನ ಹಿಂದಿ ವರ್ಷನ್ ಕೇವಲ 16 ದಿನದಲ್ಲಿ ಹಿಂದಿಕ್ಕಿದೆ. ''www.koimoi.com'' ವರದಿಯ ಪ್ರಕಾರ ಈ 16 ದಿನದಲ್ಲಿ ಕೇವಲ ಹಿಂದಿಯಲ್ಲಿ ₹168.32 ಕೋಟಿಯನ್ನು ಕೊಳ್ಳೆ ಹೊಡೆದಿದೆ. ಈ ಮೂಲಕ ಈ ವರ್ಷ ಅತೀ ಹೆಚ್ಚು ಹಣ ಗಳಿಸಿದ ಹಿಂದಿ ಚಿತ್ರಗಳ ಸಾಲಿನಲ್ಲಿ 07ನೇ ಸ್ಥಾನವನ್ನು ''ಕಾಂತಾರ ಚಾಪ್ಟರ್ 1'' ತನ್ನದಾಗಿಸಿಕೊಂಡಿದೆ.

2025ರಲ್ಲಿ ಹಿಂದಿಯಲ್ಲಿ ಅತೀ ಹೆಚ್ಚು ಹಣ ಗಳಿಸಿದ 10 ಚಿತ್ರಗಳ ಪಟ್ಟಿ ಈ ಕೆಳಗಿನಂತೆ ಇದೆ

1.ಛಾವಾ - ₹615.39 ಕೋಟಿ
2.ಸೈಯಾರ- ₹337.69ಕೋಟಿ
3.ಮಹಾವತಾರ್ ನರಸಿಂಹ-₹247.96ಕೋಟಿ
4.ವಾರ್ 2- ₹244.29ಕೋಟಿ
5.ಹೌಸ್‌ಫುಲ್ 5 - ₹198.41ಕೋಟಿ
6.ರೇಡ್ 2- ₹179.3 ಕೋಟಿ
7.ಕಾಂತಾರ :ಚಾಪ್ಟರ್ 1 (ಹಿಂದಿ)* - ₹168.32 ಕೋಟಿ
8.ಸಿತಾರೆ ಜಮೀನ್ ಪರ್ - ₹167.3 ಕೋಟಿ
9.ಸ್ಕೈ ಫೋರ್ಸ್ - ₹134.93ಕೋಟಿ
10. ಸಿಕಂದರ್ - ₹129.95ಕೋಟಿ

KANTARA Chapter 1 CRUSHES Sitaare Zameen Par Day 16 Ranks 7th Biggest Hindi Film of 2025

ಸದ್ಯ ಟ್ರೇಡ್ ವಿಶ್ಲೇಷಕರ ಲೆಕ್ಕಾಚಾರದ ಪ್ರಕಾರ ''ಸಿತಾರೆ ಜಮೀನ್ ಪರ್'' ಚಿತ್ರವನ್ನು ಹಿಂದಿಕ್ಕಿರುವ ''ಕಾಂತಾರ-ಚಾಪ್ಟರ್ 1'' ಹಿಂದಿ ವರ್ಷನ್ ಚಿತ್ರ ಮುಂಬರುವ ದಿನಗಳಲ್ಲಿ ಅಜಯ್ ದೇವಗನ್ ಅಭಿನಯದ ''ರೇಡ್ 2'' ಚಿತ್ರವನ್ನು ಕೂಡ ಹಿಂದಿಕ್ಕಲಿದೆ.

ಇನ್ನೂ ಸದ್ಯ ದೀಪಾವಳಿ ಹಬ್ಬದ ಪ್ರಯುಕ್ತ ಬೇರೆ ಚಿತ್ರಗಳು ಬಿಡುಗಡೆಯಾಗುತ್ತಿರುವ ಹಿನ್ನೆಲೆ ಅಕ್ಷಯ್ ಕುಮಾರ್ ಅಭಿನಯದ ''ಹೌಸ್‌ಫುಲ್ 5'' ಚಿತ್ರದ ಗಳಿಕೆಯನ್ನು ಹಿಂದಿಕ್ಕಲು ರಿಷಬ್ ಶೆಟ್ಟಿಯ ''ಕಾಂತಾರ''ಗೆ ತುಸು ಕಷ್ಟವಾಗಬಹುದು. ಆದರೆ ಅಸಾಧ್ಯವೇನು ಅಲ್ಲ. ಹಾಗೊಂದು ವೇಳೆ ಹೌಸ್ ಫುಲ್ ಹಿಂದಿಕ್ಕಿದರೆ ಈ ವರ್ಷ ಅತೀ ಹೆಚ್ಚು ಹಣ ಗಳಿಸಿದ 5ನೇ ಹಿಂದಿ ಚಿತ್ರ ಎನ್ನುವ ಹೆಗ್ಗಳಿಕೆಗೆ ''ಕಾಂತಾರ-ಚಾಪ್ಟರ್ 1'' ಪಾತ್ರವಾಗಲಿದೆ. ಕೇವಲ ಹಿಂದಿಯಲ್ಲಿಯೇ ₹200 ಕೋಟಿಯನ್ನು ಚಿತ್ರ ಗಳಿಸಿದಂತೆ ಆಗಲಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
BOX OFFICE SHOCKER: The Hindi collection of Kantara: Chapter 1 storms past 'Sitaare Zameen Par' on Day 16, solidifying its spot as a Top 7 grosser for 2025!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X