2 ವಾರಕ್ಕೆ 'ಕಾಂತಾರ'-1 ಕಲೆಕ್ಷನ್ ಎಷ್ಟು? ಪೈಸಾ ಪೈಸಾ ಲೆಕ್ಕ ಕೊಟ್ಟ ಹೊಂಬಾಳೆ

ದೀಪಾವಳಿ ಸಂಭ್ರಮದಲ್ಲಿ 'ಕಾಂತಾರ- 1' ಸಿನಿಮಾ ಅಬ್ಬರಿಸಲು ಸಜ್ಜಾಗುತ್ತಿದೆ. ಈಗಾಗಲೇ 2 ವಾರ ಯಶಸ್ವಿಯಾಗಿ ಪೂರೈಸಿ 3ನೇ ವಾರ ಸಿನಿಮಾ ಪ್ರದರ್ಶನ ಕಾಣ್ತಿದೆ. ಎಲ್ಲೆಲ್ಲೂ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ತಿದೆ. ಬಾಕ್ಸಾಫೀಸ್‌ನಲ್ಲಿ ಸಿನಿಮಾ ಕೋಟಿ ಕೋಟಿ ಕಲೆಕ್ಷನ್ ಮಾಡ್ತಿದೆ. ಇದೀಗ 2 ವಾರಗಳ ಸಿನಿಮಾ ಗಳಿಕೆ ಲೆಕ್ಕ ಸಿಕ್ಕಿದೆ.

ಮೊದಲ ವಾರವೇ 509 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಘೋಷಿಸಿತ್ತು. ಇದೀಗ 2 ವಾರಗಳ ಗಳಿಕೆ ಲೆಕ್ಕ ಕೊಟ್ಟಿದೆ. ದೇಶ ವಿದೇಶಗಳಲ್ಲಿ ಸಿನಿಮಾ ಭರ್ಜರಿ ಪ್ರದರ್ಶನ ಕಾಣ್ತಿದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ದಾಖಲೆ ಮಾಡಿದೆ. ಈ ಆಮೂಲಕ 'KGF- 2' ದಾಖಲೆಯನ್ನು ಹಿಂದಿಕ್ಕಿ 'ಕಾಂತಾರ- 1' ಹೊಸ ಇತಿಹಾಸ ನಿರ್ಮಿಸಿದೆ.

Kantara Chapter 1 first 2 weeks Box Office Collection Officially Announced by Makers

3 ವರ್ಷಗಳ ಹಿಂದೆ 'KGF- 2' ಸಿನಿಮಾ ಕರ್ನಾಟಕದಲ್ಲಿ 183 ಕೋಟಿ ರೂ. ಕಲೆಕ್ಷನ್ ಮಾಡಿದ್ದೇ ಈವರೆಗೆ ಅತಿಹೆಚ್ಚು ಎನ್ನಲಾಗಿತ್ತು. ಇದೀಗ 'ಕಾಂತಾರ- 1' ಸಿನಿಮಾ 200 ಕೋಟಿ ರೂ. ಗಡಿಯಲ್ಲಿದೆ. ದಕ್ಷಿಣ ಭಾರತದ 4 ರಾಜ್ಯಗಳಲ್ಲಿ 50 ಕೋಟಿ ರೂ. ಕಲೆಕ್ಷನ್ ಮಾಡಿದ ಸಿನಿಮಾ ಇದಾಗಿದೆ. ಇದಕ್ಕೂ ಮುನ್ನ 3 ಸಿನಿಮಾಗಳು ಈ ದಾಖಲೆ ಬರೆದಿದ್ದವು. ರಜನಿಕಾಂತ್ ನಟನೆಯ 'ಕೂಲಿ', ಬಾಲಿವುಡ್ ಸಿನಿಮಾ 'ಸಯ್ಯಾರ' ದಾಖಲೆಗಳನ್ನು ಹಿಂದಿಕ್ಕಿ ಈ ವರ್ಷ ಅತಿಹೆಚ್ಚು ಗಳಿಕೆ ಕಂಡ ಸಿನಿಮಾಗಳ ಪಟ್ಟಿಯಲ್ಲಿ 'ಕಾಂತಾರ- 1' ಸದ್ಯ 2ನೇ ಸ್ಥಾನಕ್ಕೇರಿದೆ.

800 ಕೋಟಿ ರೂ. ಕಲೆಕ್ಷನ್ ಮಾಡಿ ಈ ವರ್ಷ ಅತಿಹೆಚ್ಚು ಗಳಿಕೆ ಕಂಡ ಸಿನಿಮಾ ಎನ್ನುವ ದಾಖಲೆ 'ಛಾವ' ಹೆಸರಿನಲ್ಲಿದೆ. ದೀಪಾವಳಿ ಲಾಂಗ್ ವೀಕೆಂಡ್‌ನಲ್ಲಿ ಈ ದಾಖಲೆಯನ್ನು 'ಕಾಂತಾರ- 1' ಮುರಿಯುವ ಲೆಕ್ಕಾಚಾರ ನಡೀತಿದೆ. ಅಂದಹಾಗೆ 15 ದಿನಗಳಲ್ಲಿ ಸಿನಿಮಾ 717.50 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಘೋಷಿಸಿದೆ. ಅಧಿಕೃತ ಪೋಸ್ಟರ್ ರಿಲೀಸ್ ಮಾಡಿದೆ.

3 ವರ್ಷಗಳ ಹಿಂದೆ 'ಕಾಂತಾರ' ಸಿನಿಮಾ ತೆರೆಕಂಡು 300 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿತ್ತು. ಅದಕ್ಕಿಂತ ಹಲವು ಪಟ್ಟು ದೊಡ್ಡದಾಗಿ ಪ್ರೀಕ್ವೆಲ್ ನಿರ್ಮಾಣವಾಗಿತ್ತು. ಅಕ್ಟೋಬರ್ 2ರಂದು ಸಿನಿಮಾ ವಿಶ್ವದಾದ್ಯಂತ ತೆರೆಗಪ್ಪಳಿಸಿತ್ತು. ಒಂದು ದಿನ ಮೊದಲೇ ಪ್ರೀಮಿಯರ್‌ ಶೋಗಳು ನಡೆದು ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿತ್ತು. ಬಳಿಕ ಹಿಂತಿರುಗಿ ನೋಡಲೇ ಇಲ್ಲ. ಬುಕ್‌ಮೈ ಶೋನಲ್ಲಿ ಟಿಕೆಟ್ ಬುಕ್ಕಿಂಗ್ ಜೋರಾಗಿತ್ತು. ಕೆಲವೆಡೆ ಹೆಚ್ಚಿನ ಶೋಗಳನ್ನು ಪ್ರದರ್ಶಿಸಲಾಗಿತ್ತು.

ರಿಷಬ್ ಶೆಟ್ಟಿ ನಿರ್ದೇಶನ, ನಟನೆಗೆ ಪರಭಾಷಿಕರು ಕೂಡ ಫಿದಾ ಆಗಿದ್ದಾರೆ. ತಮಿಳುನಾಡಿನಲ್ಲಿ ಬೆಳಗಿನ ಜಾವ 3 ಗಂಟೆಗೆ ವಿಶೇಷ ಪ್ರದರ್ಶನಗಳನ್ನು ಏರ್ಪಡಿಸಿರುವುದು ಅದಕ್ಕೆ ಸಾಕ್ಷಿ. ಅಷ್ಟರಮಟ್ಟಿಗೆ ಸಿನಿಮಾ ಹೊರ ರಾಜ್ಯಗಳಲ್ಲಿ ಸದ್ದು ಮಾಡ್ತಿದೆ. ಉತ್ತರ ಭಾರತದಲ್ಲಿ ಸಿನಿಮಾ ಆರಂಭದಲ್ಲಿ ಕೊಂಚ ಹಿನ್ನಡೆ ಅನುಭವಿಸಿತ್ತು. ಬಳಿಕ ನಿಧಾನವಾಗಿ ಚೇತರಿಸಿಕೊಂಡಿತ್ತು. ಇಲ್ಲದೇ ಇದ್ದಿದ್ದರೆ ಈಗಾಗಲೇ 1000 ಕೋಟಿ ರೂ. ಕ್ಲಬ್ ಸೇರಬೇಕಿತ್ತು.

ತೆಲುಗಿನ 'ಓಜಿ', ತಮಿಳಿನ 'ಇಡ್ಲಿ ಕಡೇ' ಹಾಗೂ 'ಸನ್ನಿ ಸಂಸ್ಕರಿ ಕಿ ತುಳಸಿ ಕುಮಾರಿ' ಚಿತ್ರಗಳು ಕೂಡ 'ಕಾಂತಾರ- 1' ಆರ್ಭಟ ತಡೆಯಲು ಸಾಧ್ಯವಾಗಲಿಲ್ಲ. ಎಲ್ಲಾ ಸಿನಿಮಾಗಳನ್ನು ಮೀರಿ ರಿಷಬ್ ಶೆಟ್ಟಿ ಸಿನಿಮಾ ದಸರಾ ವಿನ್ನರ್ ಎನಿಸಿಕೊಂಡಿತ್ತು. ಈ ವಾರವೇ 'ಛಾವ' ಸಿನಿಮಾ ದಾಖಲೆಯನ್ನು 'ಕಾಂತಾರ- 1' ಹಿಂದಿಕ್ಕುವ ಸುಳಿವು ಸಿಕ್ಕಿದೆ. ರಿಷಬ್ ಶೆಟ್ಟಿ ರಾಜ್ಯಾದ್ಯಂತ ವಿಜಯಯಾತ್ರೆ ಕೈಗೊಂಡು ಸಿನಿಮಾ ಗೆಲ್ಲಿಸಿದ ಪ್ರೇಕ್ಷಕರಿಗೆ ಧನ್ಯವಾದ ತಿಳಿಸುತ್ತಿದ್ದಾರೆ.

More from Filmibeat

Read more about: kantara chapter 1 hombale films
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X