ಕಾಂತಾರ ಅಬ್ಬರ, ಸಲ್ಮಾನ್ ಖಾನ್ ಭಾರತ್ ದಾಖಲೆ ಉಡೀಸ್ ; 38ನೇ ಬ್ಲಾಕ್‌ಬಸ್ಟರ್, ಬಾಲಿವುಡ್‌ನಲ್ಲಿ 5ನೇ ಸ್ಥಾನ

''ಕಾಂತಾರ'' ಸಂಭ್ರಮ .. ಸಡಗರ ಶುರು ಆಗಿ ಒಂದು ತಿಂಗಳಾಗಿದೆ. ಈ ಒಂದು ತಿಂಗಳಿನಲ್ಲಿ ಹತ್ತು ಹಲವು ದಾಖಲೆಗಳು ಮಣ್ಣು ಪಾಲಾಗಿವೆ. ಅಮೆಜಾನ್‌ನಲ್ಲಿ ''ಕಾಂತಾರ-1'' ಬಿಡುಗಡೆಯಾಗದೇ ಇದ್ದರೆ ಈ ದಾಖಲೆಗಳ ರಣಬೇಟೆ ಇನ್ನೂ ಮುಂದುವರೆಯುತ್ತಿತ್ತು. ''ಕೆಜಿಎಫ್‌ ಚಾಪ್ಟರ್ 2'' ಪಕ್ಕ ಬಾಕ್ಸಾಫೀಸ್‌ನಲ್ಲಿ ''ಕಾಂತಾರ 1'' ಕಂಗೊಳಿಸುತ್ತಿತ್ತು. ₹1000 ಕೋಟಿಯ ಗಡಿಯನ್ನು ಕೂಡ ''ಕಾಂತಾರ 1'' ಅನಾಯಾಸವಾಗಿ ಪಾರು ಮಾಡುತ್ತಿತ್ತು.

ಆದರೆ .. ಚಿತ್ರದ ನಿರ್ಮಾಣ ಸಂಸ್ಥೆಯ ಅದ್ಭುತ ನಿರ್ಧಾರದಿಂದ ₹1000 ಕೋಟಿಯ ಕನಸು ಸದ್ಯ ಭಂಗವಾಗಿದೆ. ಆದರೂ ಕೂಡ ''ಕಾಂತಾರ 1'' ಸದ್ಯ ಕೆಲ ದಾಖಲೆಗಳನ್ನು ಮುರಿಯುತ್ತಿದೆ. ಮುನ್ನುಗ್ಗುತ್ತಿದೆ. ಬೆಳ್ಳಿತೆರೆಯಲ್ಲಿನ ದೈವದ ಅಬ್ಬರಕ್ಕೆ ಸದ್ಯ ಸಲ್ಮಾನ್ ಖಾನ್ ಅಭಿನಯದ ''ಭಾರತ್'' ಚಿತ್ರದ ದಾಖಲೆ ಧೂಳಿಪಟವಾಗಿದೆ.

Kantara Chapter 1 Roars Beats Salman Khan s Bharat Ranks as 5th Biggest Hit of 2025

ಹೌದು, ನಿಮಗೆ ಗೊತ್ತಿರಲಿ.. ''ಕಾಂತಾರ 1'' ಅಮೆಜಾನ್‌ನಲ್ಲಿ ಕೇವಲ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಮಾತ್ರ ಇದೆ. ಹಿಂದಿಯಲ್ಲಿ ಬಿಡುಗಡೆಯಾಗಿಲ್ಲ. ಅದಕ್ಕಿನ್ನೂ ನಾಲ್ಕು ವಾರದ ಸಮಯಾವಕಾಶ ಇದೆ.

ಇನ್ನು ''ಕಾಂತಾರ 1'' ಬಿಡುಗಡೆಯಾದ ದಿನದಿಂದ ಇಲ್ಲಿಯವರೆಗೆ ಭಾರತದೆಲ್ಲೆಡೆ ಭಾಷೆಯ ಭೇದ ಭಾವ ಇಲ್ಲದೇ ಅನೇಕರು ಈ ಕಾಂತಾರವನ್ನು ಕಣ್ತುಂಬಿಕೊಂಡಿದ್ದಾರೆ. ಭಕ್ತಿಯ ಅಲೆಯಲ್ಲಿ ತೇಲಿದ್ದಾರೆ. ಅದರಲ್ಲಿಯೂ ಕನ್ನಡಿಗರನ್ನು ಹೊರತು ಪಡಿಸಿದರೆ ಬೆಳ್ಳಿತೆರೆಯಲ್ಲಿ ಬೆಳಕಿನ ದರ್ಶನ ಕಂಡು ಉತ್ತರ ಭಾರತದ ಚಿತ್ರ ಪ್ರೇಮಿಗಳು ಪುನೀತರಾಗಿದ್ದಾರೆ. ಹೊಂಬಾಳೆ ಸಂಸ್ಥೆಗೆ ತಮ್ಮ ಅತ್ಯಮೂಲ್ಯ ಕಾಣಿಕೆ ನೀಡಿದ್ದಾರೆ. ಅಮೆಜಾನ್‌ನಲ್ಲಿ ಹಿಂದಿಯಲ್ಲಿ ''ಕಾಂತಾರ 1'' ಲಭ್ಯ ಇರದ ಕಾರಣ ಈಗಲೂ ನೀಡುತ್ತಿದ್ದಾರೆ.

ಇದಕ್ಕೆ ಕೈಗನ್ನಡಿ ಎಂಬಂತೆ ಸದ್ಯ ''ಕಾಂತಾರ ಚಾಪ್ಟರ್ 1'' ಚಿತ್ರದ ಹಿಂದಿ ಅವತರಣಿಕೆ ಬಾಲಿವುಡ್‌ನ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯದ ''ಭಾರತ್'' ಚಿತ್ರಕ್ಕೆ ಸೆಡ್ಡು ಹೊಡೆದಿದೆ. ಬಾಕ್ಸಾಫೀಸ್‌ನಲ್ಲಿ ಹಿಂದಿಕ್ಕಿದೆ.

ಹೌದು, ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ 2019ರಲ್ಲಿ ಬಿಡುಗಡೆಯಾಗಿದ್ದ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಅಭಿನಯದ ''ಭಾರತ್'' ಚಿತ್ರ ₹ 212.03 ಕೋಟಿಯನ್ನು ಗಳಿಸಿತ್ತು. ''ಕಾಂತಾರ 1'' ಹಿಂದಿ ವರ್ಷನ್ ಈ ಗಳಿಕೆಯನ್ನು ಹಿಂದಿಕ್ಕಿದೆ. ₹212.64 ಕೋಟಿಯನ್ನು ಚಿತ್ರ ಗಳಿಸಿದೆ. ಈ ಮೂಲಕ ಬಾಲಿವುಡ್‌ ಇತಿಹಾಸದಲ್ಲಿ ಅತೀ ಹೆಚ್ಚು ಹಣ ಗಳಿಸಿದ ಚಿತ್ರಗಳ ಲಿಸ್ಟ್‌ನಲ್ಲಿ 38ನೇ ಸ್ಥಾನವನ್ನು ''ಕಾಂತಾರ 1'' (ಹಿಂದಿ) ಪಡೆದಿದೆ.

kantara-chapter-1-roars-beats-salman-khans-bharat-ranks-as-5th-biggest-hit-of-2025

2025ರಲ್ಲಿ ಅತೀ ಹೆಚ್ಚು ಹಣ ಗಳಿಸಿದ 5ನೇ ಚಿತ್ರ

ಇನ್ನು ಈ ವರ್ಷ ಬಾಲಿವುಡ್‌ನಲ್ಲಿ ಹಲವಾರು ಚಿತ್ರಗಳು ಬಂದಿವೆ. ಆ ಪೈಕಿ ಬಹುತೇಕ ಚಿತ್ರಗಳು ಸೋತರೆ ಇನ್ನೂ ಕೆಲ ಚಿತ್ರಗಳು ''ಸೈಯಾರ''.. ''ಛಾವಾ''.. ಅಂತಹ ಚಿತ್ರಗಳು ದಾಖಲೆ ಗಳಿಕೆ ಮಾಡಿವೆ. ಇನ್ನುಳಿದ ಕೆಲ ಚಿತ್ರಗಳು ಕೂಡ 100-150 ಕೋಟಿಯ ಗಳಿಕೆಯನ್ನು ಮಾಡಿವೆ. ಈ ಮೂಲಕ ಈ ವರ್ಷ ಅತೀ ಹೆಚ್ಚು ಹಣ ಗಳಿಸಿದ ಚಿತ್ರಗಳು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿವೆ.

ಈ ಸಾಲಿನಲ್ಲಿ ಈಗ ''ಕಾಂತಾರ 1'' ಕೂಡ ಸೇರಿಕೊಂಡಿದ್ದು ಹಿಂದಿಯಲ್ಲಿ ಈ ವರ್ಷ ಅತೀ ಹೆಚ್ಚು ಹಣ ಗಳಿಸಿದ 5ನೇ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಕ್ಷಯ್ ಕುಮಾರ್ ಅಭಿನಯದ ಬಹುತಾರಾಗಣದ ''ಹೌಸ್‌ಫುಲ್ 5'' ಮತ್ತು ಅಜಯ್ ದೇವಗನ್ ಅಭಿನಯದ ''ರೇಡ್‌ 2'' ಗಳಿಕೆಯನ್ನು ಹಿಂದಿಕ್ಕಿದೆ.

2025ರಲ್ಲಿ ಹಿಂದಿಯಲ್ಲಿ ಅತೀ ಹೆಚ್ಚು ಹಣ ಗಳಿಸಿದ 10 ಚಿತ್ರಗಳ ಪಟ್ಟಿ ಈ ಕೆಳಗಿನಂತೆ ಇದೆ

1.ಛಾವಾ - ₹615.39 ಕೋಟಿ
2.ಸೈಯಾರ- ₹337.69ಕೋಟಿ
3.ಮಹಾವತಾರ್ ನರಸಿಂಹ-₹247.96ಕೋಟಿ
4.ವಾರ್ 2- ₹244.29ಕೋಟಿ
5. ಕಾಂತಾರ 1 (ಹಿಂದಿ)- ₹212.64 *
6.ಹೌಸ್‌ಫುಲ್ 5 - ₹198.41ಕೋಟಿ
7.ರೇಡ್ 2- ₹179.3 ಕೋಟಿ
8.ಸಿತಾರೆ ಜಮೀನ್ ಪರ್ - ₹167.3 ಕೋಟಿ
9.ಸ್ಕೈ ಫೋರ್ಸ್ - ₹134.93ಕೋಟಿ
10. ಸಿಕಂದರ್ - ₹129.95ಕೋಟಿ

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ

More from Filmibeat

English summary
The South's reign continues! 'Kantara: A Legend Chapter 1' outperforms Salman Khan's 'Bharat' and other blockbusters like 'Housefull 5' and 'Raid 2.' See its final Box Office ranking
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X