ಬೆಳ್ಳಿತೆರೆಯಲ್ಲಿ ಕಾಂತಾರ ಮ್ಯಾಜಿಕ್; ಕರಣ್ ಜೋಹರ್‌ಗೆ ಭಾರೀ ಆಘಾತ-ಉತ್ತರ ಭಾರತದಲ್ಲಿ ಮುಂದುವರೆದ ರಣಬೇಟೆ
ಪ್ಯಾನ್ ಇಂಡಿಯಾ ಅಲೆಯಿಂದಾಗಿ ''ಬಾಲಿವುಡ್'' ಬೆಚ್ಚಿ ಬಿದ್ದು ವರ್ಷಗಳೇ ಆಗಿವೆ. ಮೊದಲೆಲ್ಲ ದಕ್ಷಿಣ ಭಾರತೀಯ ಚಿತ್ರರಂಗವನ್ನು ಲೇವಡಿ ಮಾಡುತ್ತಿದ್ದ ಹಿಂದಿ ಉದ್ಯಮ ಈ ಪ್ಯಾನ್ ಇಂಡಿಯಾ ಗಾಳಿಯಿಂದ ಚಡಪಡಿಸುತ್ತಿದೆ. ಯಾಕೆಂದರೆ ಬದಲಾದ ಈ ಕಾಲದಲ್ಲಿ ಯಶ್.. ಅಲ್ಲು ಅರ್ಜುನ್.. ಪ್ರಭಾಸ್.. ಜ್ಯೂ.ಎನ್.ಟಿ.ಆರ್.. ಹೀಗೆ ಸೌತ್ ಇಂಡಿಯಾದ ಅನೇಕ ಸ್ಟಾರ್‌ಗಳು ಹಿಂದಿ ಮಾರುಕಟ್ಟೆಯನ್ನು ಕಬ್ಜಾ ಮಾಡಿಕೊಳ್ಳುತ್ತಿದ್ದಾರೆ. ತಮ್ಮದೇ ಆದ ಅಭಿಮಾನಿ ಬಳಗವನ್ನು ಉತ್ತರ ಭಾರತದಲ್ಲಿ ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಕ್ಷಿಣದ ಈ ಸ್ಟಾರ್‌ಗಳ ಹಾವಳಿಯನ್ನು ಕಂಡು ಅಲ್ಲಿನವರ ಬುಡಕ್ಕೆ ಬೆಂಕಿ ಬಿದ್ದಿದೆ. ಹೀಗಿರುವಾಗ ಇದೀಗ ಪ್ಯಾನ್ ಇಂಡಿಯಾ ಮೆರವಣಿಗೆಯಲ್ಲಿ ಹೊಸದಾಗಿ ಬಂದು ಸೇರಿಕೊಂಡ ರಿಷಬ್ ಶೆಟ್ಟಿ ಸದ್ಯ ಹಿಂದಿ ಉದ್ಯಮದಲ್ಲಿ ಮನೆ ಮಾಡಿದ್ದ ಚೂರು ಪಾರು ನೆಮ್ಮದಿಗೆ ಕೊಳ್ಳಿ ಇಟ್ಟಿದ್ದಾರೆ. ಅದರಲ್ಲಿಯೂ ಬಾಲಿವುಡ್‌ನ ಪ್ರಖ್ಯಾತ ನಿರ್ಮಾಪಕ-ನಿರ್ದೇಶಕ ಕರಣ್ ಜೋಹರ್ ''ಕಾಂತಾರ'' ಹೊಡೆತದಿಂದ ವಿಲವಿಲ ಒದ್ದಾಡುತ್ತಿದ್ದಾರೆ.

ಹೌದು,ಅಸಲಿಗೆ ಉತ್ತರ ಭಾರತದಲ್ಲಿ ''ಕಾಂತಾರ'' ಮೊದಲ ಭಾಗಕ್ಕೆ ಸಿಕ್ಕ ಪ್ರತಿಕ್ರಿಯೆ, ಆ ಸಂಭ್ರಮ .. ಮೂರು ವರ್ಷದ ಹಿಂದೆ ಚಿತ್ರ ಮಾಡಿದ್ದ ದಾಖಲೆ.. ಎಲ್ಲವನ್ನೂ ಮರೆತು ಬಾಲಿವುಡ್‌ನ ಪ್ರಖ್ಯಾತ ನಿರ್ಮಾಪಕ ಮತ್ತು ನಿರ್ದೇಶಕ ಕರಣ್ ಜೋಹರ್ ತಮ್ಮ ನಿರ್ಮಾಣದಡಿ ಸಿದ್ದವಾದ "ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ" ಚಿತ್ರವನ್ನು ತೆರೆಗೆ ತಂದಿದ್ದರು.
ಆದರೆ ತಾವು ಮಾಡಿದ ಈ ತಪ್ಪಿಗೆ ಈಗ ಕರಣ್ ಜೋಹರ್‌ಗೆ ಕೈ ಕೈ ಹಿಸುಕಿಕೊಳ್ಳುವ ಪರಿಸ್ಥಿತಿ ಬಂದಿದೆ. ಯಾಕೆಂದರೆ ''ಕಾಂತಾರ-ಚಾಪ್ಟರ್ 1'' ಎದುರು ಬಂದ ವರುಣ್ ಧವನ್ ಮತ್ತು ಜಾಹ್ನವಿ ಕಪೂರ್ ಅಭಿನಯದ ''ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ'' ಚಿತ್ರ ''ಕಾಂತಾರ''ದ ಅಬ್ಬರ ಮತ್ತು ದೈವದ ಚಮತ್ಕಾರದಿಂದ ಬಾಕ್ಸಾಫೀಸ್‌ನಲ್ಲಿ ಬೋರಲು ಬಿದ್ದಿದೆ. ₹50 ಕೋಟಿಯ ಗಡಿಯನ್ನು ತಲುಪಲು ಕೂಡ ಪರದಾಡುತ್ತಿದೆ. ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಈ 9 ದಿನದಲ್ಲಿ ಕೇವಲ ₹41 ಕೋಟಿಯನ್ನು ಮಾತ್ರ ಈ ಚಿತ್ರ ಗಳಿಸಿದೆ.
ಸ್ಯಾಕ್ನಿಲ್ ಪ್ರಕಾರ ''ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ'' ಚಿತ್ರದ 09 ದಿನದ ಗಳಿಕೆ ಈ ಕೆಳಗಿನಂತೆ ಇದೆ.
ಮೊದಲ ದಿನ [ಗುರುವಾರ] ₹ 9.25 ಕೋಟಿ
ಎರಡನೇ ದಿನ [ಶುಕ್ರವಾರ] ₹ 5.5 ಕೋಟಿ
ಮೂರನೇ ದಿನ [ಶನಿವಾರ] ₹ 7.5 ಕೋಟಿ
ನಾಲ್ಕನೇ ದಿನ [ಭಾನುವಾರ] ₹ 7.75ಕೋಟಿ
ಐದನೇ ದಿನ [ಸೋಮವಾರ]₹ 3.25 ಕೋಟಿ
ಆರನೇ ದಿನ [ಮಂಗಳವಾರ]₹3.25 ಕೋಟಿ
ಏಳನೇ ದಿನ [ಬುಧವಾರ] ₹2.35 ಕೋಟಿ
ಎಂಟನೇ ದಿನ [ ಗುರುವಾರ]₹2.25 ಕೋಟಿ
ಒಂಬತ್ತನೇ ದಿನ [ಶುಕ್ರವಾರ] ₹2 ಕೋಟಿ * ಅಂದಾಜು
ಒಟ್ಟು ಗಳಿಕೆ - ₹43.10ಕೋಟಿ
ಹೀಗೆ ಬಾಕ್ಸಾಫೀಸ್‌ನಲ್ಲಿ ಪರದಾಡುತ್ತಿರುವ ''ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ'' 09 ದಿನದಲ್ಲಿ ಕೇವಲ₹ 43.10 ಕೋಟಿ ಗಳಿಸಿದ್ದರೆ ಮತ್ತೊಂದು ಕಡೆ ''ಕಾಂತಾರ-ಚಾಪ್ಟರ್ 1'' ಕೇವಲ ಹಿಂದಿಯಲ್ಲಿಯೇ ನೂರು ಕೋಟಿ ಕೊಳ್ಳೆ ಹೊಡೆದಿದೆ. ಈ 08 ದಿನದಲ್ಲಿ ₹110 ಕೋಟಿ ಹಣವನ್ನು ದೋಚಿದೆ.
ಬಾಲಿವುಡ್ ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ಪ್ರಕಾರ ''ಕಾಂತಾರ-ಅಧ್ಯಾಯ 1'' (ಹಿಂದಿ ವರ್ಷನ್) ಮೊದಲ ಮೂರು ದಿನದ ಗಳಿಕೆ ಈ ಕೆಳಗಿನಂತೆ ಇದೆ.
ಮೊದಲ ದಿನ[ಗುರುವಾರ] ₹ 18.50 ಕೋಟಿ
ಎರಡನೇ ದಿನ[ಶುಕ್ರವಾರ] ₹ 13.50 ಕೋಟಿ
ಮೂರನೇ ದಿನ[ಶನಿವಾರ] ₹ 20 ಕೋಟಿ
ನಾಲ್ಕನೇ ದಿನ [ಭಾನುವಾರ] ₹23 ಕೋಟಿ
ಐದನೇ ದಿನ [ಸೋಮವಾರ]₹ 8.70 ಕೋಟಿ
ಆರನೇ ದಿನ [ಮಂಗಳವಾರ]₹11.20 ಕೋಟಿ
ಏಳನೇ ದಿನ [ಬುಧವಾರ] ₹8.20 ಕೋಟಿ
ಎಂಟನೇ ದಿನ [ ಗುರುವಾರ]₹7 ಕೋಟಿ
ಒಟ್ಟು ಗಳಿಕೆ - ₹ 110 ಕೋಟಿ
ಹೀಗೆ ''ಕಾಂತಾರ-ಚಾಪ್ಟರ್ 1'' ಸದ್ಯ ಬಾಲಿವುಡ್‌ನವರಿಗೆ ಮಣ್ಣು ಮುಕ್ಕಿಸಿದೆ. ಕರಣ್ ಜೋಹರ್ ಅವರಂತಹ ನಿಪುಣ ಚತುರ ಚಾಲಾಕಿ ನಿರ್ಮಾಪಕನ ಚಿತ್ರವನ್ನು ಕೂಡ ''ಕಾಂತಾರ 1'' ಬಾಕ್ಸಾಫೀಸ್‌ನಲ್ಲಿ ಬಲಿ ಪಡೆದಿದೆ. ಬಿಡುಗಡೆಯಾಗಿ 09 ದಿನವಾದರೂ ಇನ್ನೂ ₹50 ಕೋಟಿ ಗಳಿಸದ ''ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ'' ₹50 ಕೋಟಿಯ ಗಡಿಯನ್ನಾದರೂ ದಾಟುತ್ತಾ, ಇಲ್ವಾ ? ಎನ್ನುವುದನ್ನು ಕಾದು ನೋಡಬೇಕಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ


Click it and Unblock the Notifications











