'ಧುರಂಧರ್‌'ಗೆ ಸವಾಲು ಹಾಕಿದ್ದ ಕರಣ್ ಜೋಹರ್‌ಗೆ ಭಾರೀ ಆಘಾತ , ಕಳೆದುಕೊಂಡಿದ್ದೆಷ್ಟು ಕೋಟಿ?

ಬಾಲಿವುಡ್‌ನಲ್ಲಿ ಕಳೆದ ವರ್ಷ ಅಕ್ಷರಶಃ ಬರಗಾಲದ ವಾತಾವರಣ ಇತ್ತು. ಮಾಡಿದ ಎಲ್ಲ ಚಿತ್ರಗಳು ಒಂದಾದ ಮೇಲೊಂದರಂತೆ ದೊಪ್ಪನೆ ನೆಲಕ್ಕುರಳುತ್ತಿದ್ದ ಹಿನ್ನೆಲೆ ಆತಂಕ ಹಲವರಲ್ಲಿ ಮನೆ ಮಾಡಿತ್ತು. ಸಾಲದಕ್ಕೆ ದಕ್ಷಿಣ ಚಿತ್ರರಂಗದವರ ಅಬ್ಬರ. ಹಿಂದಿ ಮಾರುಕಟ್ಟೆಯಲ್ಲಿ ಸೌತ್ ಸ್ಟಾರ್‌ಗಳ ಅಬ್ಬರ ಬಾಲಿವುಡ್‌ನ ಬೆಚ್ಚಿ ಬೀಳಿಸಿತ್ತು. ಆದರೆ.. ವರ್ಷಾಂತ್ಯ ಇದೇ ಬಾಲಿವುಡ್‌ಗೆ ಹೊಸ ಚೈತನ್ಯ ತುಂಬಿದೆ. ಮರಭೂಮಿಯಲ್ಲಿ ಬಾಲಿವುಡ್‌ಗೆ ಓಯಾಸಿಸ್ ಸಿಕ್ಕಿದೆ. ಆ ಓಯಾಸಿಸ್‌ನ ಹೆಸರೇ ''ಧುರಂಧರ್''.

ಹೌದು.. ''ಧುರಂಧರ್''.. ಬಾಕ್ಸಾಫೀಸ್‌ಗೆ ಸದ್ಯ ಅಪ್ಪಳಿಸಿರುವ ಜ್ವಾಲಾಮುಖಿ. ಮೊದಲ ವಾರ ತಣ್ಣನೆಯ ಗಾಳಿಯಂತೆ ಭಾಸವಾದ ಈ ಚಿತ್ರ ಬಿಡುಗಡೆಗೊಂಡು ಒಂದು ತಿಂಗಳಾದರೂ ಕೂಡ ಇನ್ನೂ ಕೆಂಡದಂತೆ ಉರಿಯುತ್ತಿದೆ. ದಾಖಲೆಯ ಗಳಿಕೆಯನ್ನು ಮಾಡುತ್ತಿದೆ. ಹತ್ತು ಹಲವು ದಾಖಲೆಗಳನ್ನು ಪುಡಿ ಪುಡಿ ಮಾಡುತ್ತಿದೆ. ಇಷ್ಟೇ ಅಲ್ಲ ಬಾಲಿವುಡ್‌ ನಡೆಯುತ್ತಿರುವುದೇ ತಮ್ಮಿಂದ ಎನ್ನುವ ಭ್ರಮೆಯಲ್ಲಿದ್ದ ಕೆಲವರ ನಿದ್ದೆಯನ್ನು ಕೂಡ ಹಾಳು ಮಾಡಿದೆ. ಆ ಪೈಕಿ ಕರಣ್ ಜೋಹರ್ ಕೂಡ ಒಬ್ಬರು.

Karan Johar s 100-Crore Gamble Backfires Tu Meri Main Tera Drowns in the Dhurandhar Storm

ಹೌದು, ಕರಣ್ ಜೋಹರ್.. ಬಾಲಿವುಡ್‌ನ ಪ್ರಖ್ಯಾತ ನಿರ್ಮಾಪಕ. ನಿರ್ದೇಶಕ. ಅಷ್ಟೇ ಅಲ್ಲ ಬಾಲಿವುಡ್‌ನ ಹಲವು ಸ್ಟಾರ್‌ ಮಕ್ಕಳ ಗಾಡ್ ಫಾದರ್ ಕೂಡ ಹೌದು. ಆಲಿಯಾ ಭಟ್ ಅವರಿಂದ ಹಿಡಿದು ಜಾಹ್ನವಿ ಕಪೂರ್‌ವರೆಗೆ ವರುಣ್ ಧವನ್ ಅವರಿಂದ ಹಿಡಿದು ಶಾಹಿದ್ ಕಪೂರ್ ತಮ್ಮ ಇಶಾನ್‌ವರೆಗೆ ಹಲವರ ಮಕ್ಕಳನ್ನು ಕರೆತಂದು ಕ್ಯಾಮರಾ ಎದುರು ನಿಲ್ಲಿಸಿದ ಹೆಗ್ಗಳಿಕೆ ಇವರದ್ದು.

ಇಂಥಾ ಕರಣ್ ಜೋಹರ್ ಕಳೆದ ವರ್ಷದ (2025) ಅಂತ್ಯಕ್ಕೆ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಚಿತ್ರವನ್ನು ಬಿಡುಗಡೆ ಮಾಡಿದ್ದರು. ಆ ಚಿತ್ರದ ಹೆಸರು ''ತು ಮೇರಿ ಮೇ ತೇರಾ, ಮೇ ತೇರಾ ತು ಮೇರಿ''. ಬಾಲಿವುಡ್‌ನ ಹೊಸ ಸೂಪರ್ ಸ್ಟಾರ್‌ ಕಾರ್ತಿಕ್ ಆರ್ಯನ್ ಈ ಚಿತ್ರದ ನಾಯಕನಾದರೆ ಅನನ್ಯಾ ಪಾಂಡೆ ಈ ಚಿತ್ರದ ನಾಯಕಿ. ಸದ್ಯ ಇದೇ ಚಿತ್ರವನ್ನು ''ಧುರಂಧರ್'' ಎದುರು ಬಿಡುಗಡೆ ಮಾಡಿದ್ದಕ್ಕಾಗಿ ಕರಣ್ ಜೋಹರ್ ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ. ಯಾಕೆಂದರೆ.. ''ಧುರಂಧರ್'' ಅಲೆಯ ಎದುರು ''ತು ಮೇರಿ ಮೇ ತೇರಾ, ಮೇ ತೇರಾ ತು ಮೇರಿ'' ಅಕ್ಷರಶಃ ಕೊಚ್ಚಿಕೊಂಡು ಹೋಗಿದೆ.

ನಿಮಗೆ ಗೊತ್ತಿರಲಿ, ಆರಂಭದಲ್ಲಿ ''ಧುರಂಧರ್'' ಚಿತ್ರವನ್ನು ಎಲ್ಲರು ಗಂಭೀರವಾಗಿ ಪರಿಗಣಿಸಿರಲಿಲ್ಲ. ಹಿಂದಿ ಉದ್ಯಮದಲ್ಲಿಯೇ ಹಲವರು ಒಂದೆರಡು ವಾರದ ಸಿನಿಮಾ ಎಂದು ಮಾತನಾಡಿಕೊಂಡಿದ್ದರು. ಆದರೆ, ಮೂರುವರೆ ಗಂಟೆಯ ಈ ಸಿನಿಮಾವನ್ನು ವಿಮರ್ಷಕರು ಕೂಡ ಮೆಚ್ಚಿಕೊಂಡರು. ಪ್ರೇಕ್ಷಕರು ಕೂಡ ರಣ್ವೀರ್ ಸಿಂಗ್‌ ಮತ್ತು ಅಕ್ಷಯ್ ಖನ್ನಾಗೆ ಜೈ ಜೈ ಎಂದರು.

ಇಲ್ಲಿಂದ ಸಂಪೂರ್ಣ ಚಿತ್ರಣವೇ ಬದಲಾಗಿ ಹೋಗಿತ್ತು. ಪ್ರೇಕ್ಷಕರ ಮೌತ್ ಪಬ್ಲಿಸಿಟಿಯಿಂದ ದಿನದಿಂದ ದಿನಕ್ಕೆ ''ಧುರಂಧರ್'' ಗಳಿಕೆ ಹೆಚ್ಚಾಗುತ್ತಲೇ ಹೋಯ್ತು. ''ಧುರಂಧರ್‌'ನ ಈ ಕ್ರೇಜ್ ಕಂಡ ಕೆಲವರು ಎಚ್ಚೆತ್ತುಕೊಂಡು ತಮ್ಮ ಚಿತ್ರದ ಬಿಡುಗಡೆಯನ್ನು ಮುಂದೂಡಿದ್ದರು.

Karan Johar s 100-Crore Gamble Backfires Tu Meri Main Tera Drowns in the Dhurandhar Storm

ಆದರೆ, ಕರಣ್ ಜೋಹರ್ ಮಾತ್ರ ಕದಲಲಿಲ್ಲ. ಬದಲಿಗೆ ಪ್ರಖ್ಯಾತ ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ಬಿಡುಗಡೆಯ ದಿನಾಂಕ ಮುಂದೂಡುವಂತೆ ಹೇಳಿದ್ದರೂ.. ಎಚ್ಚರಿಕೆಯನ್ನು ನೀಡಿದ್ದರೂ ಕೂಡ ಅವರ ಮಾತನ್ನು ಕಡೆಗಣಿಸಿ ಅತಿಯಾದ ಆತ್ಮವಿಶ್ವಾಸದಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ತಮ್ಮ ''ತು ಮೇರಿ ಮೇ ತೇರಾ, ಮೇ ತೇರಾ ತು ಮೇರಿ'' ಚಿತ್ರವನ್ನು ಬಿಡುಗಡೆ ಮಾಡಿಯೇ ಬಿಟ್ಟರು ಕರಣ್ ಜೋಹರ್. ಖುದ್ದು ತರಣ್ ಆದಶ್ ಅವರೇ ಈ ಮಾತನ್ನು ಇತ್ತೀಚೆಗೆ ಹೇಳಿದ್ದಾರೆ.

ತಾವೇ ಮಾಡಿದ ಈ ತಪ್ಪಿಗೆ ಕರಣ್ ಜೋಹರ್ ಈಗ ಪಶ್ಚಾತಾಪ ಪಡುವಂತಾಗಿದೆ. ಯಾಕೆಂದರೆ, ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ''ತು ಮೇರಿ ಮೇ ತೇರಾ, ಮೇ ತೇರಾ ತು ಮೇರಿ'' ಬಾಕ್ಸಾಫೀಸ್‌ನಲ್ಲಿ ತೆವಳುತ್ತಿದೆ. ಬಿಡುಗಡೆಯಾಗಿ ಹನ್ನೆರಡು ದಿನವಾದರು ಕೂಡ ಈ ಚಿತ್ರ ಕೇವಲ ₹ 32.13 ಕೋಟಿಯನ್ನು ಮಾತ್ರ ಗಳಿಸಿದೆ.

ಸದ್ಯ ''ತು ಮೇರಿ ಮೇ ತೇರಾ, ಮೇ ತೇರಾ ತು ಮೇರಿ'' ಬಹುತೇಕ ಚಿತ್ರಮಂದಿರಗಳಿಂದ ಎತ್ತಂಗಡಿಯಾಗಿದೆ. ''ಸ್ಯಾಕ್ನಿಲ್'' ಹಂಚಿಕೊಂಡ ಅಂಕಿ ಅಂಶಗಳನ್ನು ಗಮನಿಸಿದರೆ ಚೇತರಿಕೆಯ ಯಾವ ಲಕ್ಷಣ ಕೂಡ ಕಂಡು ಬರುತ್ತಿಲ್ಲ.

ಇನ್ನು ''Bollymoviereviewz'' ಪ್ರಕಾರ ಈ ಚಿತ್ರಕ್ಕೆ ಕರಣ್ ಜೋಹರ್ ₹90 ಕೋಟಿ ಹಣವನ್ನು ಸುರಿದಿದ್ದಾರೆ. ''bollywoodshaadis'' ಪ್ರಕಾರ ಚಿತ್ರಕ್ಕೆ ₹150 ಕೋಟಿ ಬಂಡವಾಳವನ್ನು ಕರಣ್ ಜೋಹರ್ ತಮ್ಮ ಮೂರು ಪಾಲುದಾರರ ಜೊತೆ ಸೇರಿ ಹೂಡಿದ್ದಾರೆ. ಆ ಪೈಕಿ ಸದ್ಯ ಭಾರತದಿಂದ ₹ 32.13 ಕೋಟಿ ಮಾತ್ರ ಮರಳಿ ಬಂದಿದೆ. ವಿದೇಶಗಳಲ್ಲಿ ಕೂಡ ಗಳಿಕೆ ಹೇಳಿಕೊಳ್ಳುವಂತೆ ಇಲ್ಲ. ಆಡಿಯೋ, ಓಟಿಟಿ ಮತ್ತು ಸ್ಯಾಟಲೈಟ್ ಸೇರಿ ಹೆಚ್ಚೆಂದರೆ ₹50 ಕೋಟಿಗೆ ವ್ಯಾಪಾರ ಕುದುರಿಸಿರಬಹುದು. ಹೀಗಾಗಿ ''ಧುರಂಧರ್''ಗೆ ಸವಾಲು ಹಾಕಿದ ತಪ್ಪಿಗೆ ಕರಣ್ ಜೋಹರ್‌ಗೆ ಹತ್ ಹತ್ರ ₹50 ರಿಂದ ₹60 ಕೋಟಿ ನಷ್ಟವಾಗಿದೆ ಎನ್ನುವ ಮಾತು ಸದ್ಯ ಮಾಯಾನಗರಿ ಮುಂಬೈನಲ್ಲಿ ಕೇಳಿ ಬರುತ್ತಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
From a 100-crore budget to a box office disaster: Decoding the massive financial hit Karan Johar has taken with Tu Meri Main Tera. With Dhurandhar dominating the global markets, we break down the exact figures and the millions lost in this lopsided box office battle.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X