Karuppu Box Office Day 15 ; ಬಾಕ್ಸಾಫೀಸ್‌ನಲ್ಲಿ ಸೂರ್ಯ ಶಿಕಾರಿ, ಮಹತ್ವದ ಮೈಲಿಗಲ್ಲಿಗೆ 'ಕರುಪ್ಪು'ಗೆ ಕೆಲವೇ ಹೆಜ್ಜೆ ಬಾಕಿ

ಐಪಿಎಲ್ ಅಂದರೆ ಸಾಕು ಸಂಭ್ರಮ ಸಡಗರದ ವಾತಾವರಣ ಅನೇಕ ಕಡೆ ನಿರ್ಮಾಣವಾಗುತ್ತೆ. ಆರು ವರ್ಷದ ಹುಡುಗರಿಂದ ಹಿಡಿದು ಅರವತ್ತು ವರ್ಷದ ವೃದ್ಧರವರೆಗೆ ಐಪಿಎಲ್ ಕಿಕ್ ಕೊಡುತ್ತೆ. ನಮ್ಮ ತಂಡ ನಿಮ್ಮ ತಂಡ, ಗೆಲುವು, ಸೋಲು ಅಂತಾ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನದ ಮೆರವಣಿಗೆ ಶುರುವಾಗುತ್ತೆ.

ಇನ್ನು ಐಪಿಎಲ್ ಬಂದರೆ ಸಾಕು ಸಿನಿಮಾಗಳನ್ನು ಬಿಡುಗಡೆ ಮಾಡಲು ಅನೇಕರು ಹಿಂದೇಟು ಹಾಕುತ್ತಾರೆ.ಕೇವಲ ಕನ್ನಡದಲ್ಲಿ ಮಾತ್ರವಲ್ಲ ಬೇರೆ ಭಾಷೆಯಲ್ಲಿ ಕೂಡ ಬಿಡುಗಡೆ ವಿಚಾರದಲ್ಲಿ ಕವಡೆ ಹಾಕುವರ ಸಂಖ್ಯೆಯೇ ಹೆಚ್ಚಿದೆ. ಎಲ್ಲೋ ಅಲ್ಲೊಬ್ಬರು.. ಇಲ್ಲೊಬ್ಬರು ಮಾತ್ರ ಐಪಿಎಲ್ ಸಮಯದಲ್ಲಿ ಕೂಡ ತಮ್ಮ ಚಿತ್ರವನ್ನು ರಿಲೀಸ್ ಮಾಡುವ ಭಂಡ ಧೈರ್ಯ ಮಾಡುತ್ತಾರೆ.

karuppu-infiltrates-day-15-inches-from-massive-175-crore-mark-in-india

ವಿಶೇಷ ಅಂದರೆ ಇವರು ಹೀಗೆ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡಿದಾಗ ಚಿತ್ರ ಚೆನ್ನಾಗಿದ್ದಾಗ ಪ್ರೇಕ್ಷಕರು ಆ ಚಿತ್ರದ ಕೈ ಬಿಟ್ಟಿಲ್ಲ. ಐಪಿಎಲ್ ಜ್ವರ ನೆತ್ತಿಗೇರಿದ್ದರೂ ಕೂಡ ಚಿತ್ರಮಂದಿರಕ್ಕೆ ಹೋಗಿ ಚಿತ್ರವನ್ನು ನೋಡಿದ್ದಾರೆ. ಉದಾಹರಣೆಗೆ 'ಕರುಪ್ಪು''.

ಹೌದು, ''ಕರುಪ್ಪು''.. ಐಪಿಎಲ್ ರೋಚಕ ಹಂತ ತಲುಪಿದಾಗ ಬಿಡುಗಡೆಯಾದ ಸಿನಿಮಾ. ಕಳೆದ 15 ದಿನಗಳ ಹಿಂದೆ ತೆರೆಗೆ ಬಂದ ಈ ''ಕರುಪ್ಪು'' ಸತತ ಸೋಲುಗಳಿಂದ ಕಂಗಾಲಾಗಿದ್ದ ಸೂರ್ಯ ಕೈ ಮಾತ್ರ ಹಿಡಿದಿಲ್ಲ. ಬದಲಿಗೆ ಕಾಲಿವುಡ್‌ ಕೈಯನ್ನು ಕೂಡ ಹಿಡಿದಿದೆ. ನಿಮಗೆ ಗೊತ್ತಿರಲಿ, ಕಳೆದ 6 ತಿಂಗಳಿನಲ್ಲಿ ಕನ್ನಡದಲ್ಲಿ ಬಿಡುಗಡೆಯಾದಂತೆ ಹಲವಾರು ಸಿನಿಮಾಗಳು ತಮಿಳಿನಲ್ಲಿ ಬಿಡುಗಡೆಯಾಗಿವೆ.

ಆದರೆ, ಗೆದ್ದಿದ್ದು ರಾಧಿಕಾ ಶರತ್ ಕುಮಾರ್ ಅವರ ''ಥಾಯ್ ಕಳವಿ''.. ಪ್ರದೀಪ್ ರಂಗನಾಥನ್ ಅವರ ''ಲವ್ ಇನ್ಸುರೆನ್ಸ್ ಕಂಪನಿ''.. ''ಯೂತ್''.. ಸೇರಿ ಕೆಲ ಬೆರಳಣಿಕೆಯ ಸಿನಿಮಾಗಳು ಮಾತ್ರ. ಹೀಗಾಗಿ ಸಹಜವಾಗಿ ತಮಿಳು ಚಿತ್ರರಂಗ ಚಿಂತೆಗೀಡಾಗಿತ್ತು. ಈ ಚಿಂತೆಯನ್ನು ತಾತ್ಕಾಲಿಕವಾಗಿ ''ಕರುಪ್ಪು'' ದೂರ ಮಾಡಿದ್ದು, ನಿನ್ನೆ ಅಂದರೆ 15ನೇ ದಿನ ( ಶುಕ್ರವಾರ ) ₹3.25 ಕೋಟಿಯನ್ನು ಚಿತ್ರ ಗಳಿಸಿದೆ ಎಂದು ''ಸ್ಯಾಕ್ನಿಲ್'' ವರದಿ ಮಾಡಿದೆ. ಈ ಮೂಲಕ 15 ದಿನದಲ್ಲಿ ₹171.96 ಕೋಟಿಗೆ ''ಕರುಪ್ಪು'' ಗಳಿಕೆ ತಲುಪಿದೆ.

ಸ್ಯಾಕ್ನಿಲ್ ಪ್ರಕಾರ ''ಕರುಪ್ಪು'' ಚಿತ್ರದ 15 ದಿನದ ಗಳಿಕೆ ಈ ಕೆಳಗಿನಂತೆ ಇದೆ.

ದಿನ ಭಾರತದ ಒಟ್ಟು ಕಲೆಕ್ಷನ್ (India Net)
ಮೊದಲನೇ ದಿನ (ಶುಕ್ರವಾರ) ₹15.50 ಕೋಟಿ
ಎರಡನೇ ದಿನ (ಶನಿವಾರ) ₹24.15 ಕೋಟಿ
ಮೂರನೇ ದಿನ (ಭಾನುವಾರ) ₹28.35 ಕೋಟಿ
ನಾಲ್ಕನೇ ದಿನ (ಸೋಮವಾರ) ₹14.30 ಕೋಟಿ
ಐದನೇ ದಿನ (ಮಂಗಳವಾರ) ₹12.75 ಕೋಟಿ
ಆರನೇ ದಿನ (ಬುಧವಾರ) ₹10.70 ಕೋಟಿ
ಏಳನೇ ದಿನ (ಗುರುವಾರ) ₹8.10 ಕೋಟಿ
ಮೊದಲ ವಾರದ ಒಟ್ಟು ಕಲೆಕ್ಷನ್ (Week 1) ₹113.85 ಕೋಟಿ
ಎಂಟನೇ ದಿನ (ಶುಕ್ರವಾರ) ₹7.80 ಕೋಟಿ
ಒಂಬತ್ತನೇ ದಿನ (ಶನಿವಾರ) ₹12.45 ಕೋಟಿ
ಹತ್ತನೇ ದಿನ (ಭಾನುವಾರ) ₹14.75 ಕೋಟಿ
ಹನ್ನೊಂದನೇ ದಿನ (ಸೋಮವಾರ) ₹5.90 ಕೋಟಿ
ಹನ್ನೆರಡನೇ ದಿನ (ಮಂಗಳವಾರ) ₹4.45 ಕೋಟಿ
ಹನ್ನೆರಡನೇ ದಿನ (ಬುಧವಾರ) ₹4.00 ಕೋಟಿ
ಹದಿನಾಲ್ಕನೇ ದಿನ (ಗುರುವಾರ) ₹4.95 ಕೋಟಿ
ಎರಡನೇ ವಾರದ ಒಟ್ಟು ಕಲೆಕ್ಷನ್ (Week 2) ₹54.30 ಕೋಟಿ
ಹದಿನೈದನೇ ದಿನ (ಶುಕ್ರವಾರ) ₹3.25 ಕೋಟಿ
ಒಟ್ಟು ಭಾರತದ ನಿವ್ವಳ ಕಲೆಕ್ಷನ್ (Overall Total) ₹171.40 ಕೋಟಿ

ಇನ್ನು ಸೂರ್ಯ ಚಿತ್ರರಂಗಕ್ಕೆ ಬಂದು ಹತ್ ಹತ್ರ 30 ವರ್ಷಗಳಾಗುತ್ತಾ ಬಂದಿವೆ. ವಿಶೇಷ ಅಂದರೆ ಇಲ್ಲಿಯವರೆಗೆ ಸೂರ್ಯ ಅಭಿನಯದ ಯಾವ ಚಿತ್ರ ಕೂಡ ಕೇವಲ ಭಾರತದಲ್ಲಿ ₹200 ಕೋಟಿಯನ್ನು ಕೊಳ್ಳೆ ಹೊಡೆದಿಲ್ಲ. ''ಕರುಪ್ಪು'' ಚಿತ್ರಕ್ಕೆ ಸದ್ಯ ಈ ಅವಕಾಶ ಇದೆ. ಯಾಕೆಂದರೆ ಈ ಚಿತ್ರಕ್ಕೆ ಪ್ರೇಕ್ಷಕರು ಮನ ಸೋತಿದ್ದಾರೆ. ವಿಮರ್ಷಕರು ಕೂಡ ಚಿತ್ರವನ್ನು ಮೆಚ್ಚಿದ್ದಾರೆ.

ಈ ವಾರಾಂತ್ಯದಲ್ಲಿ ಚಿತ್ರದ ಗಳಿಕೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದ್ದು, ಇನ್ನು 8-9 ಕೋಟಿಯನ್ನು ''ಕರುಪ್ಪು'' ಭಾರತದಲ್ಲಿ ಕೊಳ್ಳೆ ಹೊಡೆದರೆ ಅತೀ ಹೆಚ್ಚು ಹಣ ಗಳಿಸಿದ ಹತ್ತು ತಮಿಳು ಚಿತ್ರಗಳ ಪಟ್ಟಿಯಲ್ಲಿ ''ಕರುಪ್ಪು''ಗೆ ಹತ್ತನೇ ಸ್ಥಾನ ಸಿಗಲಿದೆ. ಈ ಮೂಲಕ ಮಹತ್ವದ ಮೈಲಿಗಲ್ಲನ್ನು ''ಕರುಪ್ಪು'' ತಲುಪಿದಂತಾಗಲಿದೆ.

ಅತೀ ಹೆಚ್ಚು ಹಣ ಗಳಿಸಿದ ತಮಿಳಿನ ಟಾಪ್ 10 ಚಿತ್ರಗಳ ಪಟ್ಟಿ ಈ ಕೆಳಗಿನಂತೆ ಇದೆ.

ಸ್ಥಾನ (Rank) ಚಿತ್ರದ ಹೆಸರು (Movie Name) ಭಾರತದ ಒಟ್ಟು ನಿವ್ವಳ ಗಳಿಕೆ (India Net)
1 2.0 ₹407.05 ಕೋಟಿ
2 ಜೈಲರ್‌ ₹348.55 ಕೋಟಿ
3 ಲಿಯೋ ₹341.04 ಕೋಟಿ
4 ಕೂಲಿ ₹285.01 ಕೋಟಿ
5 ಪೊನ್ನಿಯನ್ ಸೆಲ್ವನ್ 1 ₹266.54 ಕೋಟಿ
6 ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್ ₹252.71 ಕೋಟಿ
7 ವಿಕ್ರಮ್ ₹247.32 ಕೋಟಿ
8 ಅಮರನ್ ₹220.05 ಕೋಟಿ
9 ಪೊನ್ನಿಯನ್ ಸೆಲ್ವನ್ 2 ₹181.96 ಕೋಟಿ
10 ವಾರಿಸು ₹178.14 ಕೋಟಿ

ಸದ್ಯ ''ಕರುಪ್ಪು'' ಚಿತ್ರ ತಮಿಳುನಾಡಿನಲ್ಲಿ ಅಬ್ಬರಿಸುತ್ತಿದ್ದು, ಈ ವಾರ ''ಪೆದ್ದಿ'' ಬಿಡುಗಡೆಯಾಗಲಿರುವ ಹಿನ್ನೆಲೆ ಆಂಧ್ರದಲ್ಲಿ ''ಕರುಪ್ಪು'' ಚಿತ್ರಕ್ಕೆ ಹಿನ್ನೆಡೆಯಾಗುವ ಸಾಧ್ಯತೆ ಇದೆ. 200 ಕೋಟಿಯ ಗಡಿಯನ್ನು ''ಕರುಪ್ಪು' ದಾಟುತ್ತಾ..? ಎನ್ನುವುದನ್ನು ಕಾದು ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

English summary
Unstoppable Suriya! Karuppu rules the box office on Day 15, nearing a massive ₹175 crore milestone in India. See the detailed collection report!
Read more about: suriya kollywood trisha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X