KD Advance Booking: ಧ್ರುವ- ಪ್ರೇಮ್ ಜೋಡಿ ಕ್ರೇಜ್ ಹೆಂಗೈತೆ? 'ಕೆಡಿ' ಅಡ್ವಾನ್ಸ್ ಬುಕ್ಕಿಂಗ್ ರಿಪೋರ್ಟ್

ಜೋಗಿ ಪ್ರೇಮ್ ನಿರ್ದೇಶನದಲ್ಲಿ ಧ್ರುವ ಸರ್ಜಾ ನಟನೆಯ 'ಕೆಡಿ' ಸಿನಿಮಾ ಬಿಡುಗಡೆಗೆ ಇನ್ನೊಂದು ದಿನ ಬಾಕಿಯಿದೆ. ಚಿತ್ರದ ಪ್ರಚಾರ ಕೆಲಸಗಳಲ್ಲಿ ಚಿತ್ರತಂಡ ಮುಳುಗಿದೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ. ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಕಿಚ್ಚ ಸುದೀಪ್ ಕೂಡ ಅತಿಥಿ ಪಾತ್ರದಲ್ಲಿ ನಟಿಸಿರುವುದು ಚಿತ್ರಕ್ಕೆ ಬಲ ತುಂಬಿದೆ.

ಟ್ರೈಲರ್ ಬಿಡುಗಡೆವರೆಗೂ 'ಕೆಡಿ' ಸಿನಿಮಾ ಬಗ್ಗೆ ಅಷ್ಟೇನು ನಿರೀಕ್ಷೆ ಇರಲಿಲ್ಲ. ಆದರೆ ಜಬರ್ದಸ್ತ್ ಟ್ರೈಲರ್ ಸಿನಿಮಾ ಬಗ್ಗೆ ಹೈಪ್ ಕ್ರಿಯೇಟ್ ಮಾಡಿದೆ. ಇನ್ನು ಈಗಾಗಲೇ ಸಾಂಗ್ಸ್ ಹಿಟ್ ಆಗಿದೆ. ಪ್ರೇಮ್ ಸಿನಿಮಾ ಎನ್ನುವ ಕಾರಣಕ್ಕೂ ಜನ ಮೊದಲ ದಿನವೇ ಚಿತ್ರಮಂದಿರಕ್ಕೆ ಭೇಟಿ ನೀಡಲು ಮನಸ್ಸು ಮಾಡಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ನಿರ್ಮಾಣವಾಗಿದ್ದರೂ ಸದ್ಯಕ್ಕೆ ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆಗೆ ಚಿತ್ರತಂಡ ಮನಸ್ಸು ಮಾಡಿದೆ.

KD Advance Booking Dhruva Sarja s Action Film Targets 1 Crore Pre-Release in Karnataka

ಪ್ಯಾನ್ ಇಂಡಿಯಾ ಟೂರ್ ಮಾಡಿ ಪ್ರೇಮ್ ಅಂಡ್ ಟೀಂ 'ಕೆಡಿ' ಟೀಸರ್ ಬಿಡುಗಡೆ ಮಾಡಿದ್ದರು. ಆದರೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ತಂದುಕೊಡಲಿಲ್ಲ. ಹಾಗಾಗಿ ಸದ್ಯಕ್ಕೆ ಪ್ಯಾನ್ ಕರ್ನಾಟಕ ಕಡೆ ಫೋಕಸ್ ಮಾಡಿದ್ದಾರೆ. ನಾಲ್ಕು ದಿನಗಳ ಹಿಂದೆಯೇ ಫ್ಯಾನ್ಸ್ ಶೋಗಳ ಬುಕ್ಕಿಂಗ್ ಶುರುವಾಗಿತ್ತು. ಇದೀಗ ಬಹುತೇಕ ಕಡೆಗಳಲ್ಲಿ ಟಿಕೆಟ್ ಬುಕ್ ಮಾಡಲು ಅವಕಾಶ ಸಿಕ್ಕಿದೆ. ಐಪಿಎಲ್ ಆರ್ಭಟದ ನಡುವೆ ಯಾವುದೇ ಬೇರೆ ಸಿನಿಮಾಗಳು ಇಲ್ಲದೇ ಇರುವುದರಿಂದ ದೊಡ್ಡ ಮಟ್ಟದಲ್ಲಿ 'ಕೆಡಿ' ಸಿನಿಮಾ ಬಿಡುಗಡೆ ಆಗ್ತಿದೆ.

ರೆಸ್ಪಾನ್ಸ್ ಹೇಗಿದೆ?

'ಕೆಡಿ' ಚಿತ್ರಕ್ಕೆ ಅಡ್ವಾನ್ಸ್ ಬುಕ್ಕಿಂಗ್ ಚೆನ್ನಾಗಿದೆ. ಆದರೆ ಆಹಾ ಓಹೋ ಎನ್ನುವಂತೆ ಇಲ್ಲ. ಕೆಲವೆಡೆ ಶೋಗಳು ಸೋಲ್ಡೌಟ್ ಆಗಿದೆ. ಇನ್ನು ಕೆಲವು ಕಡೆಗಳಲ್ಲಿ ಫಾಸ್ಟ್‌ ಫಿಲ್ಲಿಂಗ್ ನಡೀತಿದೆ. ಮೊದಲ ದಿನ ಟಿಕೆಟ್ ದರ 50ರಿಂದ 100 ರೂ. ಹೆಚ್ಚಿಸಲಾಗಿದೆ. ಬೆಂಗಳೂರಿನಲ್ಲಿ ಮೊದಲ ದಿನ 320ಕ್ಕೂ ಅಧಿಕ ಶೋಗಳಲ್ಲಿ ಸಿನಿಮಾ ಪ್ರದರ್ಶನ ನಡೆಯಲಿದೆ.

KD Advance Booking Dhruva Sarja s Action Film Targets 1 Crore Pre-Release in Karnataka

80 ಲಕ್ಷ ಕಲೆಕ್ಷನ್?

ಸಿನಿಮಾ ಬಿಡುಗಡೆಹೆ 2 ದಿನ ಬಾಕಿಯಿದೆ. ಈಗಾಗಲೇ 40 ಸಾವಿರಕ್ಕೂ ಅಧಿಕ ಟಿಕೆಟ್ ಬುಕ್ ಆಗಿದೆ. ಅಂದಾಜು 75ರಿಂದ 80 ಲಕ್ಷ ರೂ. ಕಲೆಕ್ಷನ್ ಆಗಿದೆ. ಸಿನಿಮಾ ಬಿಡುಗಡೆಗೂ ಮುನ್ನ ಅಡ್ವಾನ್ಸ್ ಬುಕ್ಕಿಂಗ್‌ನಲ್ಲೇ 1 ಕೋಟಿ ರೂ.ಗೂ ಅಧಿಕ ಗಳಿಕೆ ಕಾಣುವ ನಿರೀಕ್ಷೆಯಿದೆ. ಇದು ಬರೀ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಕಲೆಕ್ಷನ್ ಲೆಕ್ಕ. ದೊಡ್ಡ ಮಲ್ಟಿಪ್ಲೆಕ್ಸ್‌ಗಳಲ್ಲಿ ಇನ್ನು ಬುಕ್ಕಿಂಗ್ ಶುರುವಾಗಿಲ್ಲ. ನಾಳೆ(ಬುಧವಾರ) ಎಲ್ಲಾ ಕಡೆ ಬುಕ್ಕಿಂಗ್ ಮಾಡಲು ಅವಕಾಶ ಸಿಗಲಿದೆ. ಸಿಂಗಲ್ ಸ್ಕ್ರೀನ್‌ ಚಿತ್ರಮಂದಿರಗಳಲ್ಲಿ ಟಿಕೆಟ್ ದರ 200 ರೂ, 300 ರೂ, ನಿಗದಿಯಾಗಿದೆ. ಎಂ. ಜಿ ರಸ್ತೆಯ ಸ್ವಾಗತ್ ಶಂಕರ್ ನಾಗ್ ಸೇರಿ ಕೆಲವಡೆ ಮಾತ್ರ ಟಿಕೆಟ್ ದರ ಹೆಚ್ಚಾಗಿದೆ.

ಬೆಳ್ಳಂ ಬೆಳಗ್ಗೆ 'ಕೆಡಿ' ದರ್ಶನ

'ಮಾರ್ಕ್' ಬಳಿಕ ಕನ್ನಡದ ಯಾವುದೇ ಸಿನಿಮಾ ಅರ್ಲಿ ಮಾರ್ನಿಂಗ್ ಶೋಗಳಲ್ಲಿ ಪ್ರದರ್ಶನವಾಗಿರಲಿಲ್ಲ. ಏಪ್ರಿಲ್ 30ರಂದು(ಗುರುವಾರ) ಬೆಳಗಿನ ಜಾವ 6 ಗಂಟೆ ಹಾಗೂ 6.30ಕ್ಕೆ ಕೆಲವೆಡೆ 'ಕೆಡಿ' ಸಿನಿಮಾ ಪ್ರದರ್ಶನ ಆರಂಭವಾಗಲಿದೆ. ಅಭಿಮಾನಿಗಳ ಜೊತೆ ಚಿತ್ರತಂಡ ಕೂಡ ಸಿನಿಮಾ ವೀಕ್ಷಿಸಲು ಚಿತ್ರಮಂದಿರಗಳಿಗೆ ಭೇಟಿ ನೀಡಲಿದೆ.

ಪ್ರೇಮ್ ಮೇಲೆ ನಿರೀಕ್ಷೆ

4 ವರ್ಷಗಳ ಹಿಂದೆ 'ಕೆಡಿ' ಸಿನಿಮಾ ಶುರುವಾಗಿತ್ತು. ಕೊನೆಗೂ ಈ ವಾರ ಚಿತ್ರ ಬೆಳ್ಳಿತೆರೆ ಅಲಂಕರಿಸಲಿದೆ. ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್, ರಮೇಶ್ ಅರವಿಂದ್ ಚಿತ್ರದಲ್ಲಿ ನಟಿಸಿರುವುದು ಕುತೂಹಲ ಹೆಚ್ಚಿಸಿದೆ. ಕಿಚ್ಚ ಗೆಸ್ಟ್ ಅಪಿಯರೆನ್ಸ್ ಯಾಕೆ ಎನ್ನುವ ಪ್ರಶ್ನೆ ಕೂಡ ಇದೆ. 70ರ ದಶಕದ ಕಥೆಯನ್ನು ರೆಟ್ರೋ ಶೈಲಿಯಲ್ಲಿ ಹೇಳಲಾಗ್ತಿದೆ. 'ದಿ ವಿಲನ್' ಬಳಿಕ ಪ್ರೇಮ್ ನಿರ್ದೇಶನದ ದೊಡ್ಡ ಸಿನಿಮಾ ಇದು. ಹಾಗಾಗಿ ನಿರೀಕ್ಷೆ ಹೆಚ್ಚಾಗಿದೆ.

Read more about: kd prem dhruva sarja
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X