KD The Devil Collection Day 16: ಎರಡು ವಾರಕ್ಕೆ 'ಕೆಡಿ' ಕಲೆಕ್ಷನ್ ಎಷ್ಟಾಯ್ತು? ತೆಲುಗಿನಲ್ಲಿ ಹೇಗಿದೆ ರೆಸ್ಪಾನ್ಸ್?

ಧ್ರುವ ಸರ್ಜಾ ನಟನೆಯ 'ಕೆಡಿ; ದಿ ಡೆವಿಲ್' ಸಿನಿಮಾ 3ನೇ ವಾರಕ್ಕೆ ಕಾಲಿಟ್ಟಿದೆ. ಒಳ್ಳೆ ಓಪನಿಂಗ್ ಪಡೆದುಕೊಂಡಿದ್ದ ಆಕ್ಷನ್ ಥ್ರಿಲ್ಲರ್ ಸಿನಿಮಾ ನಿಧಾನವಾಗಿ ಡಲ್ ಆಗಿತ್ತು. ವೀಕೆಂಡ್‌ ರಜೆ ಸಮಯದಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕರೂ ದೊಡ್ಡಮಟ್ಟದಲ್ಲಿ ಸಿನಿಮಾ ಸದ್ದು ಮಾಡ್ತಿಲ್ಲ. ಇದೀಗ ಎರಡು ವಾರ ಪೂರೈಸಿ ತೆಲುಗಿನಲ್ಲೂ ಸಿನಿಮಾ ಬಿಡುಗಡೆಯಾಗಿದೆ.

ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ಕೆಡಿ' ಸಿನಿಮಾ ನಿರ್ಮಾಣವಾಗಿತ್ತು. ಬಹುಕೋಟಿ ವೆಚ್ಚದಲ್ಲಿ ಅದ್ಧೂರಿಯಾಗಿ ಸಿನಿಮಾ ತೆರೆಗೆ ತರಲಾಗಿತ್ತು. ಪ್ರೇಮ್ ಹಾಗೂ ಧ್ರುವ ಜೋಡಿ ಒಂದು ಹಂತಕ್ಕೆ ಪ್ರೇಕ್ಷಕರ ಮನಗೆದ್ದಿತ್ತು. ಕನ್ನಡದಲ್ಲಿ ಚಿತ್ರಕ್ಕೆ ಪಾಸಿಟಿವ್ ಟಾಕ್ ಸಿಕ್ಕಿತ್ತು. ಈಗಾಗಲೇ ಸಿನಿಮಾ 20 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ರಾಜ್ಯಾದ್ಯಂತ ವಿಜಯಯಾತ್ರೆ ಮಾಡಿ ಧ್ರುವ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿ ಬಂದಿದ್ದಾರೆ. 3ನೇ ವಾರ ಬೆಂಗಳೂರಿನಲ್ಲಿ 136 ಶೋಗಳಲ್ಲಿ ಸಿನಿಮಾ ಪ್ರದರ್ಶನವಾಗುತ್ತಿದೆ.

KD The Devil Boxoffice Collection Day 16 Earnings Slow Down Amid Drop In Shows

ಅಂದಾಜು 70 ಕೋಟಿ ರೂ. ಬಜೆಟ್‌ನಲ್ಲಿ 'ಕೆಡಿ' ಸಿನಿಮಾ ನಿರ್ಮಾಣ ಮಾಡಿರುವುದಾಗಿ ಹೇಳಲಾಗ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಏಕಕಾಲಕ್ಕೆ ಸಿನಿಮಾ ಬಿಡುಗಡೆ ಆಗಲಿಲ್ಲ. ಇದರಿಂದ ನಷ್ಟ ಎದುರಾಗಿರುವ ಲೆಕ್ಕಾಚಾರ ಶುರುವಾಗಿದೆ. ಅಧಿಕೃತವಾಗಿ ಸಿನಿಮಾ ಕಲೆಕ್ಷನ್ ಲೆಕ್ಕ ಸಿಕ್ಕಿಲ್ಲ. ಕಲೆಕ್ಷನ್ ಬಗ್ಗೆ ಕೆಲ ಫೇಕ್ ಪೋಸ್ಟರ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಬಾಕ್ಸಾಫೀಸ್ ಕಲೆಕ್ಷನ್

'ಕೆಡಿ' ಸಿನಿಮಾ 16 ದಿನ ಪೂರೈಸಿ 17ನೇ ದಿನಕ್ಕೆ ಕಾಲಿಟ್ಟಿದೆ. ಎರಡನೇ ಶುಕ್ರವಾರ(ಮೇ 15) ಸಿನಿಮಾ 25 ಗ್ರಾಸ್ ಲಕ್ಷ ರೂ. ಕಲೆಕ್ಷನ್ ಮಾಡಿದ್ದಾಗಿ sacnilk ವರದಿ ಮಾಡಿದೆ. ಒಟ್ಟಾರೆ ಈವರೆಗೆ ಸಿನಿಮಾ 19.30 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದ್ದು ಗ್ರಾಸ್ ಕಲೆಕ್ಷನ್ 23 ಕೋಟಿ ರೂ. ಆಗಿರುವುದಾಗಿ ಅಂದಾಜಿಸಲಾಗುತ್ತಿದೆ. ಶೀಘ್ರದಲ್ಲೇ ಸಿನಿಮಾ ಪ್ರದರ್ಶನ ಮುಗಿಸಲು ಸುಳಿವು ಸಿಕ್ಕಿದೆ.

KD The Devil Boxoffice Collection Day 16 Earnings Slow Down Amid Drop In Shows

ತೆಲುಗು ರಿಲೀಸ್

ನಿನ್ನೆ(ಮೇ 15) ಆಂಧ್ರ, ತೆಲಂಗಾಣದಲ್ಲಿ 'ಕೆಡಿ' ಸಿನಿಮಾ ಬಿಡುಗಡೆಯಾಗಿದೆ. ಸಂಜಯ್ ದತ್, ಶಿಲ್ಪಾ ಶೆಟ್ಟಿ ಇರುವುದರಿಂದ ಒಳ್ಳೆ ಶೋಗಳು ಸಿಕ್ಕಿವೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ರೆಸ್ಪಾನ್ಸ್ ಸಿಗುತ್ತಿಲ್ಲ. ಯಾವುದೇ ಪ್ರಚಾರ ಇಲ್ಲದೇ ತೆಲುಗು ರಾಜ್ಯಗಳಲ್ಲಿ ಸಿನಿಮಾ ರಿಲೀಸ್ ಮಾಡಿದ್ದಾರೆ. ಸಾಮಾನ್ಯವಾಗಿ ಮಾಸ್ ಸಿನಿಮಾಗಳನ್ನು ತೆಲುಗು ಪ್ರೇಕ್ಷಕರು ಅಪ್ಪಿಕೊಳ್ಳುತ್ತಾರೆ. ಆದರೆ 'ಕೆಡಿ' ಚಿತ್ರಕ್ಕೆ ಅಂತಹ ಆರ್ಭಟ ಕಂಡು ಬಂದಿಲ್ಲ. ಈ ಹಿಂದೆ ಪ್ಯಾನ್ ಇಂಡಿಯಾ ಟೂರ್ ಮಾಡಿ ಪ್ರೇಮ್ ಟೀಸರ್ ರಿಲೀಸ್ ಮಾಡಿದ್ದರು. ಬಳಿಕ ಅಲ್ಲಿ ಯಾವುದೇ ಪ್ರಚಾರ ಮಾಡಲಿಲ್ಲ. ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಸಿನಿಮಾ ಅಲ್ಲಿ ತೆರೆಗೆ ತಂದಿದೆ. ಮೊದಲ ದಿನ 30 ಲಕ್ಷ ಕಲೆಕ್ಷನ್ ಆಗಿದೆ ಎನ್ನಲಾಗ್ತಿದೆ.

ಡಲ್ಲಾದ 'ಕೆಡಿ' ಆರ್ಭಟ?

'ಲವ್ ಮಾಕ್ಟೇಲ್'-3 ಸಿನಿಮಾ ಕಡಿಮೆ ಶೋಗಳಲ್ಲಿ ಬಿಡುಗಡೆಯಾದರೂ ಬಳಿಕ ಒಳ್ಳೆ ಪ್ರದರ್ಶನ ಕಂಡು ಶೋಗಳ ಸಂಖ್ಯೆ ಹೆಚ್ಚಿಕೊಂಡಿತ್ತು. ಆದರೆ 'ಕೆಡಿ' ಸಿನಿಮಾ ದೊಡ್ಡಮಟ್ಟದಲ್ಲಿ ತೆರೆಕಂಡು 2 ವಾರಕ್ಕೆ ಶೋಗಳ ಸಂಖ್ಯೆ ಇಳಿಸಿಕೊಂಡಿದೆ. ಡಾರ್ಲಿಂಗ್ ಕೃಷ್ಣ ನಟನೆಯ ಸಿನಿಮಾ 3ನೇ ವಾರ ಬೆಂಗಳೂರಿನಲ್ಲಿ 143 ಶೋಗಳಲ್ಲಿ ಪ್ರದರ್ಶನ ಕಂಡಿತ್ತು. ಆದರೆ 'ಕೆಡಿ' ಚಿತ್ರಕ್ಕೆ 136 ಶೋಗಳು ಸಿಕ್ಕಿವೆ.

ಓಟಿಟಿ ಸ್ಟ್ರೀಮಿಂಗ್

'ಕೆಡಿ' ಚಿತ್ರದ ಓಟಿಟಿ ಹಾಗೂ ಸ್ಯಾಟಲೈಟ್ ಹಕ್ಕುಗಳಿಗೂ ಬೇಡಿಕೆ ಇರಲಿಲ್ಲ ಎನ್ನಲಾಗ್ತಿದೆ. ಟಿವಿ ಹಕ್ಕು ಇನ್ನು ಮಾರಾಟ ಆಗಿಲ್ಲ ಎನ್ನುವ ಊಹಾಪೋಹ ಶುರುವಾಗಿದೆ. ಪ್ರೈಂ ವೀಡಿಯೋ ಸಂಸ್ಥೆ ಪೇ ಫಾರ್ ವೀವ್ ಲೆಕ್ಕದಲ್ಲಿ ಸಿನಿಮಾ ಸ್ಟ್ರೀಮಿಂಗ್ ಮಾಡಲು ಮುಂದಾಗಿದೆ ಎನ್ನಲಾಗ್ತಿದೆ. ಮೇ 28ಕ್ಕೆ ಸಿನಿಮಾ ಓಟಿಟಿಗೆ ಬರುವ ಅಂದಾಜಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಬೇರೆ ಮೂಲಗಳು ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

Read more about: kd dhruva sarja prem
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X