KD The Devil Day 5 Boxoffice: ಸೋಮವಾರ ಪರೀಕ್ಷೆ ಗೆದ್ನಾ 'ಕೆಡಿ'? ಧ್ರುವ ದರ್ಬಾರ್ ಹೇಗಿದೆ?
ಜೋಗಿ ಪ್ರೇಮ್ ಹಾಗೂ ಧ್ರುವ ಸರ್ಜಾ ಜೋಡಿಯ 'ಕೆಡಿ' ಸಿನಿಮಾ ಎರಡನೇ ವಾರದತ್ತ ಮುನ್ನುಗ್ಗುತ್ತಿದೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣದ ಬಹುಕೋಟಿ ವೆಚ್ಚದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಒಳ್ಳೆ ಕಲೆಕ್ಷನ್ ಮಾಡ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತಯಾರಾದರೂ ಕರ್ನಾಟಕದಲ್ಲಿ ಮಾತ್ರ ಸದ್ಯ ಸಿನಿಮಾ ಬಿಡುಗಡೆಯಾಗಿದೆ.
ಫಸ್ಟ್ ವೀಕೆಂಡ್ ಉತ್ತಮ ಗಳಿಕೆ ಕಂಡಿದ್ದ 'ಕೆಡಿ' ಸಿನಿಮಾ ಸೋಮವಾರ ಕೂಡ ಪರವಾಗಿಲ್ಲ ಎನಿಸಿಕೊಂಡಿದೆ. ನಿರೀಕ್ಷೆಗೆ ತಕ್ಕಂತೆ ಸಿನಿಮಾ ಸದ್ದು ಮಾಡ್ತಿಲ್ಲ. ಆದರೂ ಓಕೆ ಓಕೆ ಎನಿಸಿಕೊಳ್ತಿದೆ. ಭಾರೀ ಬಂಡವಾಳ ಹಾಕಿರುವುದು ಕೂಡ ಮುಂದೇನು ಎಂದು ಚಿತ್ರತಂಡದ ಆತಂಕಕ್ಕೆ ಕಾರಣವಾಗಿದೆ. ಚಿತ್ರಕ್ಕೆ ಪಾಸಿಟಿವ್ ಟಾಕ್ ಬಂದಿದ್ದೇ ಸಂತಸದ ವಿಚಾರ. ಕೆವಿಎನ್ ಸಂಸ್ಥೆಗೆ ಈ ವಿಚಾರ ನಿರಾಳ ತಂದಿತ್ತು. ಸದ್ಯ ತಮಿಳುನಾಡಿನಲ್ಲಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಗೆದ್ದಿದೆ. ಹಾಗಾಗಿ ಸಂಸ್ಥೆ ನಿರ್ಮಾಣದ 'ಜನನಾಯಗನ್' ಸಿನಿಮಾ ಬಿಡುಗಡೆ ಸುಲಭವಾಗುವ ನಿರೀಕ್ಷೆಯಿದೆ. ಮತ್ತೊಂದು ಕಡೆ ಕರ್ನಾಟಕದಲ್ಲಿ 'ಕೆಡಿ' ಸಿನಿಮಾ ಯಶಸ್ವಿ ಪ್ರದರ್ಶನ ಮುಂದುವರೆದಿದೆ.

ಐಪಿಎಲ್ ಆರ್ಭಟದ ನಡುವೆ ಯಾವುದೇ ದೊಡ್ಡ ಸಿನಿಮಾಗಳು ಬಿಡುಗಡೆ ಆಗ್ತಿಲ್ಲ. ತಮಿಳಿನ 'ಕಾರಾ' ಸಿನಿಮಾ ಕೂಡ ತೆರೆಗೆ ಬಂದಿದೆ. ಆದರೆ 'ಕೆಡಿ' ಚಿತ್ರಕ್ಕೆ ಯಾವುದೇ ಸಮಸ್ಯೆ ಇಲ್ಲ ಎನ್ನುವಂತೆ ಯಶಸ್ವಿ ಪ್ರದರ್ಶನ ಮುಂದುವರೆದಿದೆ. ಅದ್ಧೂರಿತನ, ಸ್ಟಾರ್ ಕಲಾವಿದರ ಅಭಿನಯ ಹಾಗೂ ಮಾಸ್ ಅಂಶಗಳು ಧ್ರುವ ಸರ್ಜಾ ಚಿತ್ರಕ್ಕೆ ಪ್ಲಸ್ ಆಗಿದೆ.
ಸೋಮವಾರ ಕಲೆಕ್ಷನ್
5ನೇ ದಿನವಾದ ಸೋಮವಾರ 'ಕೆಡಿ' ಸಿನಿಮಾ 2.57 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿರುವುದಾಗಿ sacnilk ವರದಿ ಮಾಡಿದೆ. ಒಟ್ಟಾರೆ ಮೊದಲ 5 ದಿನಕ್ಕೆ 13.97 ಕೋಟಿ ರೂ. ಗಳಿಕೆ ಮಾಡಿದಂತಾಗಿದೆ. ಗ್ರಾಸ್ ಕಲೆಕ್ಷನ್ 20 ಕೋಟಿ ರೂ. ಸಮೀಪಿಸುತ್ತಿದೆ. ಈ ಮೂಲಕ 'ಲವ್ ಮಾಕ್ಟೇಲ್- 3 ದಾಖಲೆಯನ್ನು ಧ್ರುವ ಸರ್ಜಾ ಸಿನಿಮಾ ಹಿಂದಿಕ್ಕಿದೆ. ಅಂದಹಾಗೆ 'ಲವ್ ಮಾಕ್ಟೇಲ್- 3 ಚಿತ್ರವನ್ನು ಕೆವಿಎನ್ ಸಂಸ್ಥೆಯೇ ವಿತರಣೆ ಮಾಡಿತ್ತು.
ಆನ್‌ಲೈನ್ ಟಿಕೆಟ್ ಬುಕ್ಕಿಂಗ್
ಸೋಮವಾರ ಕೂಡ 'ಕೆಡಿ' ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಚೆನ್ನಾಗಿತ್ತು. ಆನ್‌ಲೈನ್‌ನಲ್ಲೇ 21 ಸಾವಿರ ಟಿಕೆಟ್ ಸೇಲ್ ಆಗಿತ್ತು. ಆ ಮೂಲಕ 2 ಲಕ್ಷದ 87 ಸಾವಿರ ಮಂದಿ ಬುಕ್‌ಮೈ ಶೋನಲ್ಲಿ ಟಿಕೆಟ್ ಬುಕ್ ಮಾಡಿ 'ಕೆಡಿ' ಸಿನಿಮಾ ವೀಕ್ಷಿಸಿದಂತಾಗಿದೆ. 52 ಸಾವಿರ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಆಗಿತ್ತು. ಬಳಿಕ ಮೊದಲ 4 ದಿನ ಕ್ರಮವಾಗಿ 50 ಸಾವಿರ, 73 ಸಾವಿರ, 39 ಸಾವಿರ ಹಾಗೂ 50 ಟಿಕೆಟ್ ಸೇಲ್ ಆಗಿತ್ತು.
₹45 ಕೋಟಿ ಬ್ರೇಕ್‌ಈವನ್ ಗುರಿ?
ಹೆಚ್ಚು ಕಮ್ಮಿ 70 ಕೋಟಿ ರೂ. ಸುರಿದು 'ಕೆಡಿ' ಸಿನಿಮಾ ನಿರ್ಮಾಣ ಮಾಡಿದ್ದಾರೆ ಎನ್ನಲಾಗ್ತಿದೆ. ನಾನ್ ಥ್ರಿಯೇಟ್ರಿಕಲ್ ಬ್ಯುಸಿನೆಸ್ ಬಿಟ್ಟು 45 ಕೋಟಿ ರೂ. ಕಲೆಕ್ಷನ್ ಮಾಡಿದ್ರೆ ಸಿನಿಮಾ ಗೆದ್ದಂತೆ ಎನ್ನಲಾಗ್ತಿದೆ. ಸದ್ಯ 'ಕೆಡಿ' ಸಿನಿಮಾ ಓಟ ನೋಡಿದ್ರೆ ಅದು ಕಷ್ಟ ಎನ್ನುವಂತಾಗಿದೆ. ಪ್ಯಾನ್ ಇಂಡಿಯಾ ಮಟ್ಟಕ್ಕೆ ಸಿನಿಮಾ ಮಾಡಿದ್ದಕ್ಕಾಗಿ ಭಾರೀ ಖರ್ಚು ಮಾಡಿದ್ದರು. ಆದರೆ ನಿರೀಕ್ಷಿತ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗಲಿಲ್ಲ. ಮುಂದೇನಾಗುತ್ತೋ ಕಾದು ನೋಡಬೇಕಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಬೇರೆ ಮೂಲಗಳು ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications