KD The Devil Boxoffice Day 7: ಮೊದಲ ವಾರ 'ಕೆಡಿ' ಚಿತ್ರ ಗಳಿಸಿದ್ದೆಷ್ಟು? ಬಂಡವಾಳ ವಾಪಸ್ ಬರುತ್ತಾ?

By ಫಿಲ್ಮಿಬೀಟ್ ಡೆಸ್ಕ್

ಪ್ರೇಮ್ ನಿರ್ದೇಶನದ 'ಕೆಡಿ' ಸಿನಿಮಾ 2ನೇ ವಾರಕ್ಕೆ ಕಾಲಿಟ್ಟಿದೆ. ಒಳ್ಳೆ ಓಪನಿಂಗ್ ಪಡೆದುಕೊಂಡಿದ್ದ ಸಿನಿಮಾ ಯಶಸ್ವಿಯಾಗಿ ಒಂದು ವಾರ ಪೂರೈಸಿದೆ. ಒಳ್ಳೆ ಗಳಿಕೆ ಕೂಡ ಕಂಡಿದೆ. ಆದರೆ ಭಾರೀ ಬಂಡವಾಳ ಸುರಿದು ಸಿನಿಮಾ ನಿರ್ಮಾಣ ಮಾಡಿರುವುದರಿಂದ ಮುಂದೇನು ಎನ್ನುವ ಚರ್ಚೆ ಶುರುವಾಗಿದೆ. ಸಿನಿಮಾ ಕಲೆಕ್ಷನ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ಸುಳ್ಳು ಸುದ್ದಿ ಕೂಡ ಹರಿದಾಡುತ್ತಿದೆ. ಅಧಿಕೃತವಾಗಿ ಚಿತ್ರತಂಡ ಕಲೆಕ್ಷನ್ ಬಗ್ಗೆ ಮಾಹಿತಿ ನೀಡಿಲ್ಲ.

ಧ್ರುವ ಸರ್ಜಾ ಹಾಗೂ ಸಂಜಯ್ ದತ್ ಅಭಿನಯದ ಸಿನಿಮಾ ಮಾಸ್ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅದ್ಧೂರಿ ಸೆಟ್, ದೊಡ್ಡ ತಾರಾಗಣ ಹಾಗೂ ತಾಂತ್ರಿಕವಾಗಿ ಕೂಡ 'ಕೆಡಿ' ಸಿನಿಮಾ ಶ್ರೀಮಂತವಾಗಿದೆ. ಚಿತ್ರಕ್ಕೆ ಪ್ರೇಕ್ಷಕರಿಂದ ಕೂಡ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಐಪಿಎಲ್ ಅಬ್ಬರದ ನಡುವೆಯೂ ಸಿನಿಮಾ ನೋಡಲು ಮುಂದಾಗಿದ್ದಾರೆ. 7ನೇ ದಿನವೂ ಆನ್ಲೈನ್ ಟಿಕೆಟ್ ಬುಕ್ಕಿಂಗ್ ಜೋರಾಗಿತ್ತು.

KD The Devil Day 7 collection Dhruva sarja s Action film struggles to recover costs

ಏಪ್ರಿಲ್ 30ರಂದು 'ಕೆಡಿ' ಸಿನಿಮಾ ಬಿಡುಗಡೆ ಆಗಿತ್ತು. ಭರ್ಜರಿ ಅಡ್ವಾನ್ಸ್ ಬುಕ್ಕಿಂಗ್ ಜೊತೆಗೆ ಮೊದಲ ದಿನಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಮೊದಲ ಎರಡು ದಿನ 3.50 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದ್ದಾಗಿ sacnilk.com ವರದಿ ಮಾಡಿತ್ತು. ಶನಿವಾರ ಕೊಂಚ ಡಲ್ ಆಗಿದ್ದರೂ ಭಾನುವಾರ ಸಿನಿಮಾ ಗಳಿಕೆ ಚೇತರಿಕೆ ಕಂಡಿತ್ತು. ಸೋಮವಾರದ ಪರೀಕ್ಷೆಯಲ್ಲಿ ಕೂಡ ಧ್ರುವ ಸಿನಿಮಾ ಪಾಸ್ ಆಗಿತ್ತು.

ಫಸ್ಟ್ ವೀಕ್ ಕಲೆಕ್ಷನ್

17 ಕೋಟಿ ರೂ. ಗ್ರಾಸ್ ಕಲೆಕ್ಷನ್ ಜೊತೆಗೆ ಮೊದಲ ವಾರ 'ಕೆಡಿ' ಸಿನಿಮಾ 14.47 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿರುವುದಾಗಿ ವರದಿಯಾಗಿದೆ. ಈ ವರ್ಷ ಅತಿಹೆಚ್ಚು ಗಳಿಕೆ ಕಂಡ ಕನ್ನಡ ಸಿನಿಮಾ ಇದಾಗಿದೆ. ಇದು ಮೊದಲ ವಾರದ ಕಲೆಕ್ಷನ್ ಮಾತ್ರ. ಮುಂದಿನ ದಿನಗಳಲ್ಲಿ ಸಿನಿಮಾ ಭವಿಷ್ಯ ಏನಾಗುತ್ತದೆ ಎಂದು ಕಾದು ನೋಡಬೇಕಿದೆ. ಮಂಗಳವಾರ 1.26 ಕೋಟಿ ರೂ. ಹಾಗೂ ಬುಧವಾರ 84 ಲಕ್ಷ ರೂ. ನೆಟ್ ಕಲೆಕ್ಷನ್ ಮಾಡಿದೆ ಎನ್ನಲಾಗ್ತಿದೆ. ನಿಧಾನವಾಗಿ ಕಲೆಕ್ಷನ್ ಕಮ್ಮಿ ಆಗ್ತಿದೆ.

KD The Devil Day 7 collection Dhruva sarja s Action film struggles to recover costs

ಭಾರೀ ಬಂಡವಾಳ

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪ್ರೇಮ್ 'ಕೆಡಿ' ಸಿನಿಮಾ ತೆರೆಗೆ ತರಲು ಮನಸ್ಸು ಮಾಡಿದ್ದರು. ಹಾಗಾಗಿ ಭಾರೀ ಬಂಡವಾಳ ಸುರಿದಿದ್ದರು. 70-80ರ ದಶಕದ ಬೆಂಗಳೂರು ಕಟ್ಟಿಕೊಡಲು ಕೋಟಿ ಕೋಟಿ ಸುರಿದು ಸೆಟ್ ನಿರ್ಮಿಸಲಾಗುತ್ತು. ಒಮ್ಮೆ ಮಳೆ, ಗಾಳಿಗೆ ಸೆಟ್ ಮುರಿದು ಬಿದ್ದಿತ್ತು. ಮತ್ತೆ ಅದನ್ನು ಮರು ನಿರ್ಮಾಣ ಮಾಡಲು ಚಿತ್ರತಂಡ ಶ್ರಮಿಸಿತ್ತು. 4 ವರ್ಷಗಳ ಹಿಂದೆ ಶುರುವಾಗಿದ್ದ ಸಿನಿಮಾ ಚಿತ್ರೀಕರಣ ಮುಗಿದು ತೆರೆಗೆ ಬರುವುದು ತಡವಾಗಿತ್ತು. ಹಾಗಾಗಿ ಸಹಜವಾಗಿಯೇ ಬಜೆಟ್ ಹೆಚ್ಚುತ್ತಾ ಹೋಗಿತ್ತು. 'ಸರ್ಸೆ ಸರ್ಸೆ' ಸಾಂಗ್‌ಗಾಗಿ ಹೆಚ್ಚು ಕಮ್ಮಿ 4 ಕೋಟಿ ಖರ್ಚಾಗಿದೆ ಎನ್ನುವ ಮಾತುಗಳು ಕೇಳಿ ಬರ್ತಿದೆ. ಸಂಜಯ್ ದತ್, ಪ್ರೇಮ್ ಹಾಗೂ ಧ್ರುವ ಸರ್ಜಾ ಈ ಚಿತ್ರಕ್ಕಾಗಿ ಭಾರೀ ಸಂಭಾವನೆ ಜೇಬಿಗಿಳಿಸಿದ್ದಾರೆ. ಸಾಂಗ್ ರೆಕಾರ್ಡಿಂಗ್‌ಗೆ ಕೂಡ ಭಾರೀ ಖರ್ಚು ಮಾಡಿದ್ದಾರೆ. ಒಂದು ಅಂದಾಜಿನ ಪ್ರಕಾರ ಸಿನಿಮಾ ಬಜೆಟ್ 50 ಕೋಟಿ ರೂ. ದಾಟಿದೆ ಎನ್ನಲಾಗ್ತಿದೆ.

ಓಟಿಟಿ, ಸ್ಯಾಟಲೈಟ್ ರೈಟ್ಸ್

ಇತ್ತೀಚಿನ ವರ್ಷಗಳಲ್ಲಿ ಥ್ರಿಯೇಟ್ರಿಕಲ್ ರೈಟ್ಸ್ ಜೊತೆಗೆ ಓಟಿಟಿ ಹಾಗೂ ಸ್ಯಾಟಲೈಟ್ ರೈಟ್ಸ್ ಕೂಡ ಬಹಳ ಒಳ್ಳೆ ಆದಾಯದ ಮೂಲವಾಗಿದೆ. 'ಕೆಡಿ' ಚಿತ್ರದ ನಾನ್ ಥ್ರಿಯೇಟ್ರಿಕಲ್ ಬ್ಯುಸಿನೆಸ್ ಚೆನ್ನಾಗಿ ಆಗಿಲ್ಲ ಎನ್ನಲಾಗ್ತಿದೆ. ಓಟಿಟಿ ಹಾಗೂ ಟಿವಿ ರೈಟ್ಸ್ ಮಾರಾಟದ ಬಗ್ಗೆ ಮಾಹಿತಿ ಸಿಕ್ಕಿಲ್ಲ. 5 ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗದೇ ಇರುವುದು ದೊಡ್ಡ ಹಿನ್ನಡೆಯಾಗಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಬೇರೆ ಮೂಲಗಳು ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

Read more about: kd prem dhruva sarja
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X