KD The Devil Day 8 Collection; 'ಕೆಡಿ' ಕಲೆಕ್ಷನ್ ಎಷ್ಟಾಯ್ತು? ಧ್ರುವ ವಿಜಯಯಾತ್ರೆ ಹೇಗಿದೆ?

ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ತೆರೆಗೆ ಬಂದಿರುವ 'ಕೆಡಿ' ಸಿನಿಮಾ 2ನೇ ವಾರ ಒಳ್ಳೆ ಪ್ರದರ್ಶನ ಕಾಣ್ತಿದೆ. ಮಾಸ್ ಪ್ರೇಕ್ಷಕರನ್ನು ಸಿನಿಮಾ ಸೆಳೆಯುತ್ತಿದೆ. ಈಗಾಗಲೇ 8 ದಿನ ಪೂರೈಸಿ ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತಾ ಮುನ್ನುಗುತ್ತಿದೆ. ಮತ್ತೊಂದು ಕಡೆ ಧ್ರುವ ಸರ್ಜಾ 'ಕೆಡಿ' ವಿಜಯಯಾತ್ರೆ ಆರಂಭಿಸಿದ್ದಾರೆ.

ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ 'ಕೆಡಿ' ಸಿನಿಮಾ ಬೆಂಬಲಿಸಿದ ಪ್ರೇಕ್ಷಕರಿಗೆ ಧ್ರುವ ಸರ್ಜಾ ಧನ್ಯವಾದ ತಿಳಿಸುತ್ತಿದ್ದಾರೆ. ಜೋಗಿ ಪ್ರೇಮ್ ನಿರ್ದೇಶನ ಸಿನಿಮಾ ಏಪ್ರಿಲ್ 30ರಂದು ತೆರೆಗೆ ಬಂದಿತ್ತು. ಒಳ್ಳೆ ಓಪನಿಂಗ್ ಪಡೆದು ಸಿನಿಮಾ ಗಮನ ಸೆಳೆದಿತ್ತು. ಐಪಿಎಲ್ ಆರ್ಭಟಕ್ಕೆ ಬೆಚ್ಚಿ ದೊಡ್ಡ ಚಿತ್ರಗಳನ್ನು ಬಿಡುಗಡೆ ಮಾಡಲು ಹಿಂದೇಟು ಹಾಕುವಂತಾಗಿದೆ. ಆದರೆ ಧೈರ್ಯ ಮಾಡಿ 'ಕೆಡಿ' ಸಿನಿಮಾ ತೆರೆಗೆ ತರಲಾಗಿತ್ತು.

KD The Devil Day 8 Boxoffice collection Dhruva sarja started Success Tour

ಸಿನಿಮಾ ಕಲೆಕ್ಷನ್ ಬಗ್ಗೆ ನಾನಾ ರೀತಿಯ ಚರ್ಚೆ ನಡೀತಿದೆ. ಈಗಾಗಲೇ 50 ಕೋಟಿ ರೂ. ಗ್ರಾಸ್ ಕಲೆಕ್ಷನ್ ಆಗಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹರಿದಾಡ್ತಿದೆ. ಚಿತ್ರತಂಡ ಅಧಿಕೃತವಾಗಿ ಕಲೆಕ್ಷನ್ ಬಗ್ಗೆ ಮಾಹಿತಿ ನೀಡಿಲ್ಲ. ಬಾಕ್ಸಾಫೀಸ್ ಪಂಡಿತರ ಪ್ರಕಾರ ಸಿನಿಮಾ 8 ದಿನಕ್ಕೆ 20 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವ ಅಂದಾಜಿದೆ. ಕನ್ನಡದಲ್ಲಿ ಮಾತ್ರ ಸಿನಿಮಾ ಬಿಡುಗಡೆಯಾಗಿದೆ. ಮುಂದೆ ಬೇರೆ ಭಾಷೆಗಳಲ್ಲಿ ರಿಲೀಸ್ ಪ್ಲ್ಯಾನ್ ನಡೀತಿದೆ.

8 ದಿನದ ಕಲೆಕ್ಷನ್

ನಿಧಾನವಾಗಿ 'ಕೆಡಿ' ಸಿನಿಮಾ ಕಲೆಕ್ಷನ್ ಕಮ್ಮಿ ಆಗ್ತಿದೆ. ಅದು ಸಹಜ ಕೂಡ. ಈಗಾಗಲೇ ಅಭಿಮಾನಿಗಳು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಇದೀಗ ಸಾಮಾನ್ಯ ಪ್ರೇಕ್ಷಕರು ಸಿನಿಮಾ ನೋಡಲು ಚಿತ್ರಮಂದಿರಗಳಿಗೆ ಭೇಟಿ ನೀಡುತ್ತಿದ್ದಾರೆ. 8ನೇ ದಿನ(ಗುರುವಾರ) 'ಕೆಡಿ' ಸಿನಿಮಾ 66 ಲಕ್ಷ ರೂ. ನೆಟ್ ಕಲೆಕ್ಷನ್ ಮಾಡಿರುವುದಾಗಿ sacnilk ವರದಿ ಮಾಡಿದೆ. ಒಟ್ಟಾರೆ ಈವರೆಗೆ 17.57 ಕೋಟಿ ರೂ. ಗ್ರಾಸ್ ಕಲೆಕ್ಷನ್ ಜೊತೆಗೆ 15.13 ನೆಟ್ ಕಲೆಕ್ಷನ್ ಆಗಿರುವುದಾಗಿ ಹೇಳಲಾಗ್ತಿದೆ. 5 ಸಾವಿರಕ್ಕೂ ಅಧಿಕ ಶೋಗಳಲ್ಲಿ ಸಿನಿಮಾ ಪ್ರದರ್ಶನ ಕಂಡಿದೆ.

19 ಲಕ್ಷ ಟಿಕೆಟ್ ಮಾರಾಟ?

ಒಂದು ಅಂದಾಜಿನ ಪ್ರಕಾರ ಆನ್ಲೈನ್‌ ಹಾಗೂ ಆಫ್‌ಲೈನ್ ಸೇರಿ 'ಕೆಡಿ' ಚಿತ್ರಕ್ಕೆ 19 ಲಕ್ಷಕ್ಕೂ ಅಧಿಕ ಟಿಕೆಟ್ ಮಾರಾಟವಾಗಿದೆ ಎನ್ನಲಾಗ್ತಿದೆ. 7 ದಿನಕ್ಕೆ ಬರೀ ಬುಕ್‌ಮೈ ಶೋನಲ್ಲಿ ಮಾತ್ರ 3 ಲಕ್ಷಕ್ಕೂ ಅಧಿಕ ಮಂದಿ ಟಿಕೆಟ್ ಬುಕ್ ಮಾಡಿ ಸಿನಿಮಾ ನೋಡಿದ್ದಾರೆ. ಮೇಲ್ನೋಟಕ್ಕೆ ಸಿನಿಮಾ ಕಲೆಕ್ಷನ್ ಚೆನ್ನಾಗಿದೆ ಅನ್ನಿಸಿದರೂ ಬಜೆಟ್ ಜೊತೆ ಹೋಲಿಸಿದರೆ ಕಮ್ಮಿ ಆಯ್ತು.

ಧ್ರುವ 'ವಿಜಯ'ಯಾತ್ರೆ

ರಾಜ್ಯಾದ್ಯಂತ 'ಕೆಡಿ' ಸಿನಿಮಾ ವಿಜಯಯಾತ್ರೆ ಆರಂಭವಾಗಿದೆ. ಇಂದಿನಿಂದ(ಮೇ 8) 3 ದಿನಗಳ ಕಾಲ ಧ್ರುವ ಅಂಡ್ ಟೀಂ ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡುತ್ತಿದೆ. ಮೊದಲ ದಿನ(ಶುಕ್ರವಾರ) ಮದ್ದೂರು, ಮಂಡ್ಯ, ಮೈಸೂರು ಹಾಗೂ ನಂಜನಗೂಡಿಗೆ ಚಿತ್ರತಂಡ ಭೇಟಿ ನೀಡುತ್ತಿದೆ. 2ನೇ ದಿನ(ಶನಿವಾರ) ತುಮಕೂರು, ಚಿತ್ರದುರ್ಗ, ದಾವಣಗೆರೆ ಹಾಊ ಹುಬ್ಬಳ್ಳಿಯಲ್ಲಿ ಧ್ರುವ ವಿಜಯಯಾತ್ರೆ ನಡೆಯಲಿದೆ. ಇನ್ನು ಭಾನುವಾರ ಧಾರವಾಡ, ಗದಗ ಹಾಗೂ ಹೊಸಪೇಟೆಗೆ ತಂಡ ತೆರಳಲಿದೆ. ಆಯಾ ಜಿಲ್ಲೆಯಲ್ಲಿ 'ಕೆಡಿ' ಸಿನಿಮಾ ಪ್ರದರ್ಶನವಾಗುತ್ತಿರುವ ಚಿತ್ರಮಂದಿರಗಳಿಗೆ ಧ್ರುವ ಹೋಗುತ್ತಿದ್ದಾರೆ.

'ಕೆಡಿ' ಓಟಿಟಿ?

ದೊಡ್ಡ ದೊಡ್ಡ ಸಿನಿಮಾಗಳು ತಿಂಗಳಿಗೂ ಮುನ್ನ ಓಟಿಟಿ ಸ್ಟ್ರೀಮಿಂಗ್ ಆರಂಭಿಸುತ್ತಿವೆ. 'ಕೆಡಿ' ಸಿನಿಮಾ ಜೂನ್ 2ನೇ ವಾರದಲ್ಲಿ ಪ್ರೈಂ ವೀಡಿಯೊಗೆ ಬರುವ ನಿರೀಕ್ಷೆಯಿದೆ. ಪರಭಾಷೆಗಳಲ್ಲಿ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತೋ ಅಥವಾ ನೇರವಾಗಿ ಓಟಿಟಿಗೆ ಬರುತ್ತೋ ಕಾದು ನೋಡಬೇಕಿದೆ.

Read more about: dhruva sarja kd prem
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X