2026 First Half Mollywood Box Office ; ದೃಶ್ಯಂ 3, ವಾಳಾ 2 ಅಬ್ಬರ, ಹೇಗಿತ್ತು ಮಲಯಾಳಂ ಚಿತ್ರರಂಗಕ್ಕೆ ಈ 6 ತಿಂಗಳು?

ವ್ಯಾಪಾರವಾಗುತ್ತಾ ಇಲ್ವಾ ? ತಮ್ಮ ಚಿತ್ರ ಚಿತ್ರಮಂದಿರಕ್ಕೆ ಬಂದ ಮೇಲೆ ಏನಾಗುತ್ತದೋ ಗೊತ್ತಿರೋದಿಲ್ಲ. ಆದರೂ ಕೋಟಿ ಕೋಟಿ ಹಣ ಸುರಿದು ಸಿನಿಮಾ ಮಾಡುವ ಅನೇಕ ನಿರ್ಮಾಪಕರು ಭಾರತೀಯ ಚಿತ್ರರಂಗದಲ್ಲಿದ್ದಾರೆ. ಇಡೀ ಬದುಕನ್ನೇ ಪಣಕ್ಕಿಟ್ಟು ಚಿತ್ರ ನಿರ್ಮಾಣ ಮಾಡುವ ಇಂಥ ಒಬ್ಬೊಬ್ಬ ನಿರ್ಮಾಪಕರಿಂದ ನೂರಾರು ಜನ ಕಾರ್ಮಿಕರ ಮನೆಯಲ್ಲಿ ಅನ್ನ ಬೇಯುತ್ತದೆ, ದೀಪ ಉರಿಯುತ್ತದೆ.

ನಿಜ. ದುಡ್ಡು ಕೈ ಸೇರುತ್ತದೆ ಅಂತಾ ಕನಸಿಟ್ಟುಕೊಂಡೇ, ಲಾಭದ ಆಸೆಯಲ್ಲಿಯೇ ಬಹುತೇಕ ಕಮರ್ಷಿಯಲ್ ಸಿನಿಮಾದ ನಿರ್ಮಾಪಕರು ಹಣ ಸುರಿಯುಯುತ್ತಾರೆ. ಅದಕ್ಕೆ ಪೂರಕವಾಗಿ ನಿರ್ದೇಶಕರು ತಮ್ಮ ಕಸುಬುದಾರಿಕೆಯ ಪ್ರದರ್ಶನವನ್ನು ಕೂಡ ಮಾಡುತ್ತಾರೆ. ಆದರೆ. ಎಲ್ಲರಿಗೆ ಲಕ್ಷ್ಮಿ ಒಲಿಯುವುದಿಲ್ಲ. ಲಾಭ ಬಿಡಿ ಹಾಕಿದ ಬಂಡವಾಳ ಕೂಡ ಮರಳಿ ಬರುವುದಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಆ ಭಾಷೆ ಈ ಭಾಷೆ ಅಲ್ಲ ಎಲ್ಲ ಭಾಷೆಯಲ್ಲಿಯೂ ಚಿತ್ರ ನಿರ್ಮಾಣ ಮಾಡಿ ಹಲವರು ಕೈ ಸುಟ್ಟುಕೊಂಡಿದ್ದಾರೆ. ಕೆಲವರು ಮಾತ್ರ ಗೆದ್ದಿದ್ದಾರೆ. ಆ ಪೈಕಿ ಇಲ್ಲಿ ಮಲಯಾಳಂ ಚಿತ್ರರಂಗದ ಈ ಆರು ತಿಂಗಳ ಲಾಭ-ನಷ್ಟದ ಲೆಕ್ಕ ಹೇಳುವ ಪ್ರಯತ್ನವನ್ನು ಮಾಡಲಾಗಿದೆ.

Kerala Box Office 2026 From Drishyam 3 to Vaazha II The Ultimate Malayalam Hit and Flop Verdict

100ಕ್ಕೂ ಅಧಿಕ ಸಿನಿಮಾಗಳು

ಈ ವರ್ಷದ ಈ 6 ತಿಂಗಳಿನಲ್ಲಿ ಮಲಯಾಳಂನಲ್ಲಿ 102 ಚಿತ್ರಗಳು ತೆರೆಗೆ ಬಂದಿವೆ. ಆ ಪೈಕಿ 96 ಚಿತ್ರಗಳಿಗೆ ಬಿಡುಗಡೆಯ ಭಾಗ್ಯ ಸಿಕ್ಕರೆ ಇನ್ನು 6 ಸಿನಿಮಾಗಳು ನೇರವಾಗಿ ಓಟಿಟಿಯಲ್ಲಿ ಬಿಡುಗಡೆಯಾಗಿವೆ. ವಿಪರ್ಯಾಸ ಅಂದರೆ ಈ 96 ಚಿತ್ರಗಳಲ್ಲಿ ಗೆದ್ದಿದ್ದು ಕೇವಲ 6 ರಿಂದ 8 ಚಿತ್ರಗಳು ಮಾತ್ರ. ಮಿಕ್ಕಂತೆ ಬಹುತೇಕ ಚಿತ್ರಗಳ ಸಾಧನೆ ತೀರಾ ಸಾಧಾರಣ. ಇನ್ನು ಕೆಲ ಚಿತ್ರಗಳ ಬಜೆಟ್ ಕೂಡ ರಿಕವರ್ ಆಗಲಿಲ್ಲ.

ಮೊದಲ 3 ತಿಂಗಳು ಗೆಲುವಿಗಿಂತ ಸೋತಿದ್ದೇ ಹೆಚ್ಚು

ವರ್ಷದ ಆರಂಭದಲ್ಲಿ ಅದ್ವೈತ್ ನಾಯರ್ ನಿರ್ದೇಶನದ ಡಬ್ಲ್ಯೂಡಬ್ಲ್ಯೂಇ (WWE) ಕಥಾಹಂದರ ಹೊಂದಿರುವ ''ಚಾತ ಪಚಾ'' ಚಿತ್ರದ ಮೇಲೆ ನಿರೀಕ್ಷೆ ಇತ್ತು. ಆದರೆ, ಆ ನಿರೀಕ್ಷೆ ಹುಸಿಯಾಯ್ತು. ಮುಮ್ಮುಟ್ಟಿ ಈ ಚಿತ್ರದಲ್ಲಿ ಗೆಸ್ಟ್ ರೋಲ್ ಮಾಡಿದ್ದರು. ಆದರೂ ಕೂಡ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರಲಿಲ್ಲ. ಇದರಿಂದ 33.48 ಕೋಟಿಗೆ ''ಚಾತ ಪಚಾ'' ಆಟ ಮುಗಿಯಿತು.

ಆ ನಂತರ ನಾದಿರ್ ಶಾ ವರ ''ಮ್ಯಾಜಿಕ್ ಮಶ್ರೂಮ್ಸ್''.. ಅರುಣ್ ವರ್ಮಾ ಅವರ ''ಬೇಬಿ ಗರ್ಲ್‌'' ಸಿನಿಮಾಗಳು ಕೂಡ ನಿರಾಸೆಗೊಳಿಸಿದವು. ಒಂದಾದ ಮೇಲೊಂದು ಗೆಲುವು ಕಾಣ್ತಿದ್ದ ನಿವಿನ್ ಪೌಲಿ ''ಬೇಬಿ ಗರ್ಲ್'' ಮೂಲಕ ಎಡವಿದರು. ಮಲಯಾಳಂನ ಬ್ಲಾಕ್ ಬಸ್ಟರ್ ಡೈರೆಕ್ಟರ್ ಜೀತು ಜೋಸೆಫ್ ನಿರ್ದೇಶನದ ''ವಲತು ವಶತೆ ಕಲ್ಲನ್'' ಕೂಡ ನಿರಾಸೆ ಮೂಡಿಸಿತು.

ಹೀಗೆ ಆರಂಭದಲ್ಲಿ ಸತತ ಸೋಲು ಕಂಡ ಮಲಯಾಳಂ ಚಿತ್ರರಂಗ ಜನವರಿ 30ರಂದು ಸ್ವಲ್ಪ ನಿರಾಳವಾಗಿತ್ತು. ವಿಜೇಶ್ ಪನಾತ್ತೂರು ಅವರ ''ಪ್ರಕಂಪನಂ'' ಹಾರರ್ ಕಾಮಿಡಿ ಚಿತ್ರಕ್ಕೆ ಪ್ರೇಕ್ಷಕರ ಪ್ರೀತಿ ಸಿಕ್ತು. ಸಾಧಾರಣ ಯಶಸ್ಸು ಈ ಚಿತ್ರದ ಪಾಲಾಯ್ತು.

ಫೆಬ್ರವರಿಯಲ್ಲಿ ಸಿಕ್ಕಿದ್ದು ನಿರಾಸೆಯೇ. ಮಾರ್ಚ್‌ನಲ್ಲಿ ಮೊದಲ ಗೆಲುವು ಮಲಯಾಳಂಗೆ ಸಿಕ್ತು. ಮಿಥುನ್ ಮ್ಯಾನುಯೆಲ್ ಥಾಮಸ್ ನಿರ್ದೇಶನದ ''ಆಡು 3'' ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಯ್ತು. ಮಿಶ್ರ ಪ್ರತಿಕ್ರಿಯೆಯ ನಡುವೆಯೂ ಹತ್ತಿರ ಹತ್ತಿರ 130 ರಿಂದ 150 ಕೋಟಿಯ ನಡುವೆ ಚಿತ್ರ ಹಣ ಗಳಿಸಿತು.

ಇದರ ನಡುವೆ ಬಂದ ''ಸಂಭವಂ ಅಧ್ಯಾಯಂ ಒನ್ನು'' ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತಾದರೂ ಕೂಡ ಶಾಲೆಗಳಲ್ಲಿ ಪರೀಕ್ಷಾ ಸಮಯ ಇದ್ದ ಹಿನ್ನೆಲೆ ಬಾಕ್ಸ್ ಆಫೀಸ್‌ನಲ್ಲಿ ಮಂಕಾಯಿತು. ಸಾಧಾರಣ ಯಶಸ್ಸು ಪಡೆಯಿತು.

''ಆಶಾನ್'' ಚಿತ್ರಕ್ಕೆ ಒಳ್ಳೆಯ ವಿಮರ್ಶೆ ಸಿಕ್ಕಿತಾದರೂ ಪ್ರೇಕ್ಷಕರು ಬರಲಿಲ್ಲ. ಝಾಕಿ ಭಾವನಾ ಅಭಿನಯದ ''ಅನೋಮಿ'' ಗೆಲ್ಲಲಿಲ್ಲ. ತಂದೆ ಮಗನ ಕಥೆಯಾಧಾರಿತ ''ಆಶಗಳ್ ಆಯಿರಂ'' ಕೂಡ ಪ್ರೇಕ್ಷಕರನ್ನು ಸೆಳೆಯಲಿಲ್ಲ. ಹೀಗೆ ಒಂದಾದ ಮೇಲೊಂದು ಸೋಲುಗಳಿಂದ ಕಂಗಾಲಾದ ಮಲಯಾಳಂ ಚಿತ್ರಕ್ಕೆ ''ಪೆಟ್ರಿಯಾಟ್'' ಭಾರೀ ಆಘಾತ ನೀಡಿತು.

ಮಕಾಡೆ ಮಲಗಿದ ಮುಮ್ಮಟ್ಟಿ-ಮೋಹನ್ ಲಾಲ್ 'ಪೇಟ್ರಿಯಾಟ್'

ಮಲಯಾಳಂ ಚಿತ್ರರಂಗದ ಇಬ್ಬರು ಸೂಪರ್ ಸ್ಟಾರ್ಸ್ - ಮೋಹನ್ ಲಾಲ್ ಹಾಗೂ ಮಮ್ಮುಟ್ಟಿ ಹಲವು ವರ್ಷಗಳ ನಂತರ ''ಪೇಟ್ರಿಯಾಟ್'' ಚಿತ್ರದ ಮೂಲಕ ಒಂದಾಗಿದ್ದರು. ಈ ಹಿನ್ನೆಲೆ ಚಿತ್ರದ ಮೇಲೆ ವಿಪರೀತ ನಿರೀಕ್ಷೆಗಳಿದ್ದವು. ಆದರೆ. ಅಂದುಕೊಂಡಿದ್ದು ಒಂದು. ಆಗಿದ್ದು ಮತ್ತೊಂದು. ಕೇರಳದಲ್ಲಿಯೇ 30 ಕೋಟಿಯನ್ನು ಈ ಚಿತ್ರ ಗಳಿಸಲಿಲ್ಲ.

ಗೆದ್ದ ಸಿನಿಮಾಗಳು ಯಾವುವು ?

ಆಗಲೇ ಹೇಳಿದಂತೆ ಮಲಯಾಳಂ ಚಿತ್ರರಂಗದಲ್ಲಿ ಈ ವರ್ಷ ಇಲ್ಲಿಯವರೆಗೆ ಗೆದ್ದಿದ್ದು ಕೇವಲ 8 ಚಿತ್ರಗಳು ಮಾತ್ರ. ಆ ಪೈಕಿ skooplay ಪ್ರಕಾರ 4 ಬ್ಲಾಕ್‌ಬಸ್ಟರ್ ಚಿತ್ರಗಳಾದರೆ ಇನ್ನು 4 ಹಿಟ್ ಲಿಸ್ಟ್ ಸೇರಿಕೊಂಡಿವೆ. 3 ಚಿತ್ರಗಳು ಸಾಧಾರಣ ಯಶಸ್ಸನ್ನು ಕಂಡಿವೆ. ಈ ಚಿತ್ರಗಳು ಯಾವುವು..? ಗಳಿಸಿದ್ದೆಷ್ಟು..? ಎನ್ನುವುದರ ವಿವರ ಈ ಕೆಳಗಿನಂತೆ ಇದೆ.

skooplay ಪ್ರಕಾರ ಈ ವರ್ಷ ಈ 6 ತಿಂಗಳಲ್ಲಿ ಗೆದ್ದ ಮಲಯಾಳಂ ಸಿನಿಮಾಗಳು ಇಲ್ಲಿವೆ

ಚಲನಚಿತ್ರದ ಹೆಸರು ಕೇರಳ ಗಳಿಕೆ (ಕೋಟಿಗಳಲ್ಲಿ) ವಿಶ್ವದಾದ್ಯಂತ ಗಳಿಕೆ (ಕೋಟಿಗಳಲ್ಲಿ) ಫಲಿತಾಂಶ (Verdict)
ವಾಳಾ 2: ಬಯೋಪಿಕ್ ಆಫ್ ಎ ಬಿಲಿಯನ್ ಬ್ರೋಸ್ ₹100.2 ₹196 ಬ್ಲಾಕ್‌ಬಸ್ಟರ್
ದೃಶ್ಯಂ 3 ₹90.1 ₹241 ಬ್ಲಾಕ್‌ಬಸ್ಟರ್
ಆಡು 3: ಒನ್ ಲಾಸ್ಟ್ ರೈಡ್ - ಪಾರ್ಟ್ 1 ₹53 ₹145 ಬ್ಲಾಕ್‌ಬಸ್ಟರ್
ಅತಿರಡಿ ₹35 ₹69 ಬ್ಲಾಕ್‌ಬಸ್ಟರ್
ಮಾಲಿವುಡ್ ಟೈಮ್ಸ್ ₹8.8 ₹18 ಹಿಟ್
ಪ್ರಕಂಪನಂ ₹12 ₹23 ಹಿಟ್
ಭರತನಾಟ್ಯಂ 2 ಮೋಹಿನಿಯಾಟ್ಟಂ ₹6.7 ₹12.8 ಹಿಟ್
ಆಶಕಲ್ ಆಯಿರಂ ₹5.9 ₹10.8 ಆವರೇಜ್
ಮಧುವಿಧು ₹5.6 ₹12 ಆವರೇಜ್
ಸಂಭವಂ ಅಧ್ಯಾಯಂ ಒನ್ನು ₹4.7 ₹9.1 ಆವರೇಜ್

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

English summary
Which Mollywood movies ruled the box office in 2026 and which ones tanked? Get the ultimate list of Malayalam hits, flops, and crore-club winners now!
Read more about: mollywood malayalam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X