Kesari 2 Box Office Day 25 ;ಬಾಕ್ಸಾಫೀಸ್‌ನಲ್ಲಿ ₹100 ಕೋಟಿಯಲ್ಲ ₹1000 ಕೋಟಿ ಗಳಿಸಿದ ಅಕ್ಷಯ್ ಕುಮಾರ್, ಅದ್ಹೇಗೆ?
ಹಿಂದೆ ಒಂದಾದ ಮೇಲೊಂದು ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡುತ್ತಾ, ಆಕಾಶಕ್ಕೆ ಏಣಿ ಹಾಕಿ ಕುಂತಿದ್ದರು ಅಕ್ಷಯ್ ಕುಮಾರ್. ಆದರೆ.. ಹಣೆಬರಹಕ್ಕೆ ಹೊಣೆ ಯಾರು ? ಕೆಲ ವರ್ಷಗಳಿಂದ ಅಕ್ಷಯ್ ಕುಮಾರ್ ಗೆ ಅದೃಷ್ಟ ಕೈ ಕೊಟ್ಟಿದೆ. ಒಂದಾದ ಮೇಲೊಂದು ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಸೋಲನ್ನು ಕಂಡಿವೆ. ಎಷ್ಟೇ ಕಷ್ಟಪಟ್ಟು ಚಿತ್ರ ಮಾಡಿದರು ಕೂಡ ಪ್ರೇಕ್ಷಕರು ಕ್ಯಾರೇ ಎನ್ನುತ್ತಿಲ್ಲ.
ಹೀಗಾಗಿಯೇ ಹಿಂದೆಯೆಲ್ಲ ಇವರನ್ನು ಲಕ್ಕಿ ಕುಮಾರ್ ಎಂದು ಕರೆಯುತ್ತಿದ್ದ ಬಾಲಿವುಡ್ ಈಗ ಇವರನ್ನು ಅನ್‌ಲಕ್ಕಿ ಕುಮಾರ್ ಎಂದು ಕರೆಯುತ್ತಿದೆ. ಇಂತಹ ಸಂದರ್ಭದಲ್ಲಿ ತೆರೆಗೆ ಬಂದ ಕೇಸರಿ 2 ಚಿತ್ರ ಡ್ಯಾಮೇಜ್ ಆಗಿದ್ದ ಅಕ್ಷಯ್ ಕುಮಾರ್ ಅವರ ಸ್ಟಾರ್ ಇಮೇಜ್‌ನ್ನು ಚೂರು ಪಾರು ಸರಿ ಮಾಡಿದೆ. ಚಿತ್ರಮಂದಿರದಲ್ಲಿ 25 ದಿನಗಳ ಪ್ರದರ್ಶನವನ್ನು ಕಂಡಿದೆ. ಈ 25 ದಿನಗಳಲ್ಲಿ ಬಾಕ್ಸಾಫೀಸ್‌ನಲ್ಲಿ ನೂರು ಕೋಟಿಯ ಗಡಿಯ ಬಳಿ ಬಂದು ನಿಂತುಕೊಂಡಿದೆ.

ಹೌದು, ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ದಿನನಿತ್ಯ ಹಂಚಿಕೊಳ್ಳುವ ಸ್ಯಾಕ್ನಿಲ್ ವೆಬ್ ಸೈಟ್ ಪ್ರಕಾರ ಕೇಸರಿ 2 ಚಿತ್ರ 25 ದಿನಗಳಲ್ಲಿ ₹ 87.16 ಕೋಟಿ ಹಣವನ್ನು ಗಳಿಸಿದೆ. ನಿನ್ನೆ ಅಂದರೆ ಭಾನುವಾರ { ಮೇ 11 } ₹ 1.7 ಕೋಟಿಯನ್ನು ಗಳಿಸಿರುವ ಕೇಸರಿ 2 ಇಂದು { ಮೇ 12 } ಬಾಕ್ಸಾಫೀಸ್‌ನಲ್ಲಿ ₹36 ಲಕ್ಷ ಹಣವನ್ನು ದೋಚಿದೆ.
ಇನ್ನು ಇದೇ ಸ್ಯಾಕ್ನಿಲ್ ವೆಬ್ ಸೈಟ್ ಉಲ್ಲೇಖಿಸಿರುವಂತೆ 25 ದಿನ ಮುಂಬೈನಲ್ಲಿ 15.00% ಆಕ್ಯುಪೆನ್ಸಿ ಕಂಡು ಬಂದಿದೆ. ದೆಹಲಿಯಲ್ಲಿ 13.50%.. ಬೆಂಗಳೂರಿನಲ್ಲಿ 11.50%..ಕೋಲ್ಕತ್ತಾದಲ್ಲಿ 12.50 % ಆಕ್ಯುಪೆನ್ಸಿ ಕಂಡು ಬಂದಿದೆ. ಇನ್ನು ವಿಶೇಷ ಅಂದರೆ ಕೇಸರಿ 2 ತೆರೆಗೆ ಬಂದು 25 ದಿನವಾದರೂ ಕೂಡ ಚೆನ್ನೈ ಪ್ರೇಕ್ಷಕರ ಚಿತ್ರ ನೋಡುವ ಉತ್ಸಾಹ ಕಡಿಮೆಯಾಗಿಲ್ಲ. ಇದಕ್ಕೆ ಕೈಗನ್ನಡಿ ಎನ್ನುವಂತೆ ಚೆನ್ನೈನಲ್ಲಿ ಅತೀ 26.50 % ಆಕ್ಯುಪೆನ್ಸಿ ಕಂಡು ಬಂದಿದೆ.
ಸ್ಯಾಕ್ನಿಲ್ ವೆಬ್ ಸೈಟ್ ಪ್ರಕಾರ ಕೇಸರಿ 2 ಚಿತ್ರದ 25 ದಿನದ ಗಳಿಕೆ ಈ ಕೆಳಗಿನಂತೆ ಇದೆ.
ಮೊದಲ ದಿನ { ಶುಕ್ರವಾರ } - ₹ 7.75 ಕೋಟಿ
ಎರಡನೇ ದಿನ { ಶನಿವಾರ } - ₹ 9.75 ಕೋಟಿ
ಮೂರನೇ ದಿನ { ಭಾನುವಾರ} 12 ಕೋಟಿ
ನಾಲ್ಕನೇ ದಿನ { ಸೋಮವಾರ} ₹4.5 ಕೋಟಿ
ಐದನೇ ದಿನ { ಮಂಗಳವಾರ}- ₹ 5 ಕೋಟಿ
ಆರನೇ ದಿನ { ಬುಧವಾರ } ₹ 3.6 ಕೋಟಿ
ಏಳನೇ ದಿನ { ಗುರುವಾರ} ₹ 3.5 ಕೋಟಿ
ಮೊದಲ ವಾರದ ಒಟ್ಟು ಗಳಿಕೆ ₹46.1 ಕೋಟಿ
ಎಂಟನೇ ದಿನ { ಎರಡನೇ ಶುಕ್ರವಾರ } ₹4.5ಕೋಟಿ
ಒಂಬತ್ತನೇ ದಿನ {ಎರಡನೇ ಶನಿವಾರ} ₹ 7.15 ಕೋಟಿ
ಹತ್ತನೇ ದಿನ { ಎರಡನೇ ಭಾನುವಾರ } ₹ 8.1 ಕೋಟಿ
ಹನ್ನೊಂದನೇ ದಿನ { ಎರಡನೇ ಸೋಮವಾರ } ₹2.75 ಕೋಟಿ
ಹನ್ನೆರಡನೇ ದಿನ { ಎರಡನೇ ಮಂಗಳವಾರ } ₹2.65 ಕೋಟಿ
ಹದಿಮೂರನೇ ದಿನ { ಎರಡನೇ ಬುಧವಾರ } ₹ 2.15 ಕೋಟಿ
ಹದಿನಾಲ್ಕನೇ ದಿನ { ಎರಡನೇ ಗುರುವಾರ } ₹ 1.8 ಕೋಟಿ
ಎರಡನೇ ವಾರದ ಒಟ್ಟು ಗಳಿಕೆ ₹28.65 ಕೋಟಿ
ಹದಿನೈದನೇ ದಿನ { ಮೂರನೇ ಶುಕ್ರವಾರ } ₹1.25 ಕೋಟಿ
ಹದಿನಾರನೇ ದಿನ { ಮೂರನೇ ಶನಿವಾರ } ₹2 ಕೋಟಿ
ಹದಿನೇಳನೇ ದಿನ { ಮೂರನೇ ಭಾನುವಾರ } ₹2.5 ಕೋಟಿ
ಹದಿನೆಂಟನೆ ದಿನ { ಮೂರನೇ ಸೋಮವಾರ } ₹75 ಲಕ್ಷ
ಹತ್ತೊಂಬತ್ತನೇ ದಿನ { ಮೂರನೇ ಮಂಗಳವಾರ } ₹85 ಲಕ್ಷ
ಇಪ್ಪತ್ತನೇ ದಿನ { ಮೂರನೇ ಬುಧವಾರ } ₹60 ಲಕ್ಷ
ಇಪ್ಪತ್ತೊಂದನೇ ದಿನ { ಮೂರನೇ ಗುರುವಾರ } ₹65 ಲಕ್ಷ
ಮೂರನೇ ವಾರದ ಒಟ್ಟು ಗಳಿಕೆ ₹8.6 ಕೋಟಿ
ಇಪ್ಪತ್ತೇರಡನೇ ದಿನ { ನಾಲ್ಕನೇ ಶುಕ್ರವಾರ } ₹60 ಲಕ್ಷ
ಇಪ್ಪತ್ತ್ಮೂರನೇ ದಿನ { ನಾಲ್ಕನೇ ಶನಿವಾರ } ₹ 1.15 ಕೋಟಿ
ಇಪ್ಪತ್ತನಾಲ್ಕನೇ ದಿನ { ನಾಲ್ಕನೇ ಭಾನುವಾರ } ₹1.7 ಕೋಟಿ
ಇಪ್ಪತ್ತೈದನೇ ದಿನ { ನಾಲ್ಕನೇ ಸೋಮವಾರ } ₹36 ಲಕ್ಷ - ಅಂದಾಜು
ಚಿತ್ರದ ಒಟ್ಟಾರೆ ಗಳಿಕೆ - ₹ 87.16 ಕೋಟಿ
ಇನ್ನು ಕೇಸರಿ 2 ಚಿತ್ರದ ಈ ಗಳಿಕೆಯ ಮೂಲಕ ಅಕ್ಷಯ್ ಕುಮಾರ್ ಬಾಕ್ಸಾಫೀಸ್‌ನಲ್ಲಿ ಒಟ್ಟಾರೆಯಾಗಿ ₹ 1000 ಕೋಟಿಯನ್ನು ಕೊಳ್ಳೆ ಹೊಡೆದಿದ್ದಾರೆ. ಈ ಮೂಲಕ ಸಾವಿರ ಕೋಟಿಯ ಒಡೆಯನಾಗಿದ್ಧಾರೆ.
ಹೌದು, ಅಸಲಿಗೆ 2019ರಲ್ಲಿ ಅಕ್ಷಯ್ ಕುಮಾರ್ ಅಭಿನಯದ ಕೇಸರಿ ಚಿತ್ರ ಬಂದಿತ್ತು. ಬಾಕ್ಸಾಫೀಸ್‌ನಲ್ಲಿ ಭರ್ಜರಿ ಸದ್ದು ಕೂಡ ಮಾಡಿತ್ತು. ನಿರ್ಮಾಪಕರ ಖಜಾನೆಯನ್ನು ತುಂಬಿಸಿತ್ತು.
ಆದರೆ ಆ ನಂತರ ಕೊರೊನಾ ವಕ್ಕರಿಸಿಕೊಂಡಿತು. ಮತ್ತೊಂದು ಕಡೆ ಅಕ್ಷಯ್ ಕುಮಾರ್‌ಗೆ ಅದೃಷ್ಟ ಕೂಡ ಕೈ ಕೊಟ್ಟಿತ್ತು.ಇದಕ್ಕೆ ಕೈಗನ್ನಡಿ ಎನ್ನುವಂತೆ ಈ ಅವಧಿಯಲ್ಲಿ ಅಂದರೆ ಕೊರೊನಾದ ನಂತರದ ದಿನಗಳಿಂದ ಇಲ್ಲಿಯವರೆಗೆ ಅಕ್ಷಯ್ ಕುಮಾರ್ ಅಭಿನಯದ 15 ಚಿತ್ರಗಳು ಬಂದಿವೆ.
ಆದರೆ ಈ 15 ಚಿತ್ರಗಳಲ್ಲಿ ಗೆದ್ದಿದ್ದು ಬೆರಳಣಿಕೆಯಷ್ಟು ಚಿತ್ರಗಳು ಮಾತ್ರವಾದರೂ ಕೂಡ ಈ 15 ಚಿತ್ರಗಳ ಒಟ್ಟು ಗಳಿಕೆಯನ್ನು ಕೂಡಿಸಿದರೆ ಒಟ್ಟಾರೆ ಗಳಿಕೆ ಸದ್ಯ ₹1000 ಕೋಟಿಯ ಗಡಿಯನ್ನು ದಾಟಿದೆ.
ಕೊಯಿ ಮೊಯಿ ವರದಿಯ ಪ್ರಕಾರ ಕೋವಿಡ್ ನಂತರದ ಎಲ್ಲಾ ಅಕ್ಷಯ್ ಕುಮಾರ್ ಚಿತ್ರಗಳ ಬಾಕ್ಸ್ ಆಫೀಸ್ ಗಳಿಕೆಯ ವಿವರ ಇಲ್ಲಿದೆ. (ಭಾರತದ ಗಳಿಕೆಯನ್ನು ಮಾತ್ರ ಪರಿಗಣಿಸಲಾಗಿದ್ದು ಅತ್ಯಧಿಕ ಹಣ ಗಳಿಸಿದ ಚಿತ್ರದಿಂದ ಅತೀ ಕಡಿಮೆ ಹಣ ಗಳಿಸಿರುವ ಚಿತ್ರಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ }
1.ಸಿಂಗಂ ಅಗೇನ್ : ₹270.60 ಕೋಟಿ
2.ಸೂರ್ಯವಂಶಿ : ₹195.60 ಕೋಟಿ
3.ಓ ಮೈ ಗಾಡ್ 2: ₹150 ಕೋಟಿ
4.ಸ್ಕೈ ಫೋರ್ಸ್ : ₹134.93 ಕೋಟಿ
5.ಕೇಸರಿ ಚಾಪ್ಟರ್ 2 :₹87.16 ಕೋಟಿ*
6.ಸಾಮ್ರಾಟ್ ಪೃಥ್ವಿರಾಜ್ : ₹68 ಕೋಟಿ
7.ಬಡೇ ಮಿಯಾ ಚೋಟೆ ಮಿಯಾ : ₹66 ಕೋಟಿ
8.ರಾಮ್ ಸೇತು : ₹64 ಕೋಟಿ
9.ಬಚ್ಚನ್ ಪಾಂಡೆ : ₹50.25 ಕೋಟಿ
10. ರಕ್ಷಾ ಬಂಧನ್ : ₹44.37 ಕೋಟಿ
11. ಖೇಲ್ ಖೇಲ್ ಮೇ : ₹40.32 ಕೋಟಿ
12. ಮಿಷನ್ ರಾಣಿಗಂಜ್ : ₹31 ಕೋಟಿ
13. ಸರ್ಫಿರಾ : ₹24.30 ಕೋಟಿ
14. ಬೆಲ್ ಬಾಟಂ : ₹ 26.50 ಕೋಟಿ
15. ಸೆಲ್ಫಿ : ₹16.50 ಕೋಟಿ
ಒಟ್ಟು ಗಳಿಕೆ : ₹1073.92 ಕೋಟಿ
ಹೀಗೆ ಅಕ್ಷಯ್ ಕುಮಾರ್ ಸದ್ಯ ತಮ್ಮ ಈ ಹದಿನೈದು ಚಿತ್ರಗಳ ಮೂಲಕ ₹1073.92 ಕೋಟಿಯನ್ನು ಬಾಕ್ಸಾಫೀಸ್‌ನಲ್ಲಿ ದೋಚಿದ್ದಾರೆ. ಸದ್ಯ ಕೇಸರಿ 2 ಚಿತ್ರ₹100 ಕೋಟಿಯ ಗಡಿಯನ್ನು ದಾಟುವ ಸಾಧ್ಯತೆ ಇದೆ. ಆ ಭರವಸೆ ಕೂಡ ಬಾಲಿವುಡ್‌ಗೆ ಇದೆ. ಇನ್ನು ಹಿಂದಿಯಲ್ಲಿ ಈ ವಾರ ದೊಡ್ಡ ಚಿತ್ರಗಳು ಬಿಡುಗಡೆಯಾಗುತ್ತಿಲ್ಲ. ಹೀಗಾಗಿ ಕೇಸರಿ 2 ₹100 ಕೋಟಿ ಗಡಿಯನ್ನು ದಾಟಬಹುದು.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ಕೊಯಿ ಮೊಹಿ ವೆಬ್ ಸೈಟ್, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications










