Kesari 2 Box Office Day 1 ; ಸೋಲಿನ ಸುಳಿಯಿಂದ ಹೊರ ಬಂದ್ರಾ ಅಕ್ಷಯ್ ಕುಮಾರ್ ? ಮೊದಲ ದಿನ ಕೇಸರಿ 2 ಗಳಿಸಿದ್ದೆಷ್ಟು ?
ಹಿಂದೆ ಒಂದಾದ ಮೇಲೊಂದು ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡುತ್ತಾ, ಆಕಾಶಕ್ಕೆ ಏಣಿ ಹಾಕಿ ಕುಂತಿದ್ದರು ಅಕ್ಷಯ್ ಕುಮಾರ್. ಆದರೆ.. ಹಣೆಬರಹಕ್ಕೆ ಹೊಣೆ ಯಾರು ? ಕೆಲ ವರ್ಷಗಳಿಂದ ಅಕ್ಷಯ್ ಕುಮಾರ್ ಗೆ ಅದೃಷ್ಟ ಕೈ ಕೊಟ್ಟಿದೆ. ಒಂದಾದ ಮೇಲೊಂದು ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಸೋಲನ್ನು ಕಂಡಿವೆ. ಎಷ್ಟೇ ಕಷ್ಟಪಟ್ಟು ಚಿತ್ರ ಮಾಡಿದರು ಕೂಡ ಪ್ರೇಕ್ಷಕರು ಕ್ಯಾರೇ ಎನ್ನುತ್ತಿಲ್ಲ.
ಹೀಗಾಗಿಯೇ ಹಿಂದೆಯೆಲ್ಲ ಇವರನ್ನು ಲಕ್ಕಿ ಕುಮಾರ್ ಎಂದು ಕರೆಯುತ್ತಿದ್ದ ಬಾಲಿವುಡ್ ಈಗ ಇವರನ್ನು ಅನ್‌ಲಕ್ಕಿ ಕುಮಾರ್ ಎಂದು ಕರೆಯುತ್ತಿದೆ. ಇವತ್ತು ಅಕ್ಷಯ್ ಕುಮಾರ್ ಅವರ ಸ್ಟಾರ್ ಡಂ ಎಷ್ಟರ ಮಟ್ಟಿಗೆ ಪಾತಾಳಕ್ಕೆ ಕುಸಿದಿದೆ ಅಂದರೆ, ನಿನ್ನೆ.. ಮೊನ್ನೆ .. ಸ್ಟಾರ್ ಆದವರೆಲ್ಲ ಅಕ್ಷಯ್ ಕುಮಾರ್ ಗೆ ಸೆಡ್ಡು ಹೊಡೆದು ಹೋಗುತ್ತಿದ್ದಾರೆ. ಗಳಿಕೆಯ ವಿಚಾರದಲ್ಲಿ ಅಕ್ಷಯ್ ಕುಮಾರ್ ಅವರನ್ನು ಹಿಂದಿಕ್ಕುತ್ತಿದ್ದಾರೆ.

ಸಹಜವಾಗಿ ನಿರಂತರ ಸೋಲುಗಳಿಂದ ಅಕ್ಷಯ್ ಕುಮಾರ್ ಕೂಡ ನೊಂದುಕೊಂಡಿದ್ದರು. ತಮ್ಮ ಬಗ್ಗೆ ಕೇಳಿ ಬಂದ ಮಾತುಗಳಿಂದ ಬೇಸತ್ತು ನಾನೆಲ್ಲಿಯೂ ಓಡಿ ಹೋಗಲ್ಲ. ನಾನು ಇನ್ನೂ ಸತ್ತಿಲ್ಲ ಎಂದು ಹೇಳಿದ್ದರು. ಇಂದಲ್ಲ ನಾಳೆ ಮತ್ತೆ ಗೆಲ್ಲುತ್ತೇನೆ ಎಂದು ಹೇಳಿದ್ದರು. ಹೀಗಿರುವಾಗ ಇದೀಗ ಅಕ್ಷಯ್ ಕುಮಾರ್ ಅಭಿನಯದ ಕೇಸರಿ 2 ಚಿತ್ರ ತೆರೆಗೆ ಬಂದಿದೆ. ಬಾಕ್ಸಾಫೀಸ್‌ನಲ್ಲಿ ಸಾಧಾರಣ ಓಪನಿಂಗ್ ಪಡೆದಿದೆ.
ಹೌದು, ನಿನ್ನೆ ಬಿಡುಗಡೆಯಾದ ಕೇಶರಿ 2 ಮೊದಲ ದಿನ ₹ 7.50 ಕೋಟಿಯನ್ನು ಗಳಿಸಿದೆ ಎಂದು ಸ್ಯಾಕ್ನಿಲ್ಕ್ ವೆಬ್ ಸೈಟ್ ವರದಿ ಮಾಡಿದೆ. ನಿಜಾ. ಅಕ್ಷಯ್ ಕುಮಾರ್ ಅವರ ಸ್ಟಾರ್ ಡಂಗೆ ಈ ಗಳಿಕೆ ತುಂಬಾ ಕಡಿಮೆಯೇ.
ಆದರೆ, ಹಲವು ದಿನಗಳ ನಂತರ ಅಕ್ಷಯ್ ಕುಮಾರ್ ಚಿತ್ರದ ಬಗ್ಗೆ ಒಳ್ಳೆಯ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ ಇಂದು ಮತ್ತು ನಾಳೆ ಕೇಸರಿ 2 ಚಿತ್ರದ ಗಳಿಕೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ಈ ಎರಡು ದಿನಗಳ ಗಳಿಕೆಯ ಮೇಲೆ ಕೇಸರಿ 2 ಚಿತ್ರದ ಮುಂದಿನ ಭವಿಷ್ಯ ಕೂಡ ನಿರ್ಧಾರವಾಗಲಿದೆ.
ಅಂದ್ಹಾಗೇ ಈ ವರ್ಷದ ಆರಂಭದಲ್ಲಿ ತೆರೆಗೆ ಬಂದ ಸ್ಯಾಕ್ನಿಲ್ಕ್ ವೆಬ್ ಸೈಟ್ ವರದಿಯ ಪ್ರಕಾರ ಸ್ಕೈ ಫೋರ್ಸ್ ಮೊದಲ ದಿನ ₹ 11.25 ಕೋಟಿಯನ್ನು ಗಳಿಸಿತ್ತು. ಸ್ಕೈ ಫೋರ್ಸ್ ಚಿತ್ರದ ಈ ಗಳಿಕೆಗೆ ಹೋಲಿಕೆ ಮಾಡಿದರೆ ಕೇಸರಿ 2 ಗಳಿಕೆ ಕಡಿಮೆ ಇದೆ. ಆದರೆ ಇದಕ್ಕೂ ಹಿಂದೆ ತೆರೆಗೆ ಬಂದಿದ್ದ ಖೇಲ್ ಖೇಲ್ ಮೇ ಮೊದಲ ದಿನ ಕೇವಲ ₹5 ಕೋಟಿಯನ್ನು ಮಾತ್ರ ಗಳಿಸಿತ್ತು. ಇನ್ನು ಅದಕ್ಕೂ ಹಿಂದೆ ಬಂದಿದ್ದ ಸರ್ಫಿರಾ ಕೇವಲ ₹2.40 ಕೋಟಿಯನ್ನು ಮಾತ್ರ ಗಳಿಸಿತ್ತು. ಹೀಗಾಗಿ ಕೇಸರಿ 2 ಚಿತ್ರದ ಈ ಗಳಿಕೆಯಿಂದ ಅಕ್ಷಯ್ ಕುಮಾರ್ ನಿರಾಳರಾಗಿದ್ದರು ಆಗಿರಬಹುದು.
ಒಟ್ನಲ್ಲಿ ಸದ್ಯ ಕೇಸರಿ 2 ಚಿತ್ರಕ್ಕೆ ಮೊದಲ ದಿನ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಸಾಧಾರಣ ಗಳಿಕೆಯನ್ನು ಚಿತ್ರ ಕಂಡಿದೆ. ಇಂದು ಮತ್ತು ನಾಳೆ ಈ ಚಿತ್ರ ಎಷ್ಟು ಗಳಿಸಲಿದೆ, ಸೋಲಿನ ಸುಳಿಯಿಂದ ಅಕ್ಷಯ್ ಕುಮಾರ್ ಹೊರ ಬರುತ್ತಾರಾ ಎನ್ನುವುದನ್ನು ಈಗ ಕಾದು ನೋಡಬೇಕಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











