Kesari 2 Box Office Day 3 ; ಕಂಗನಾಗೆ ಸೆಡ್ಡು ಹೊಡೆದ ಅಕ್ಷಯ್ ಕುಮಾರ್, 3 ದಿನದಲ್ಲಿ ಕೇಸರಿ 2 ಗಳಿಸಿದ್ದೆಷ್ಟು ?
2019ರಲ್ಲಿ ಅಕ್ಷಯ್ ಕುಮಾರ್ ಅಭಿನಯದ ಕೇಸರಿ ಚಿತ್ರ ಬಂದಿತ್ತು. ಬಾಕ್ಸಾಫೀಸ್‌ನಲ್ಲಿ ಭರ್ಜರಿ ಸದ್ದು ಕೂಡ ಮಾಡಿತ್ತು. ನಿರ್ಮಾಪಕರ ಖಜಾನೆಯನ್ನು ತುಂಬಿಸಿತ್ತು. ಆದರೆ ಆ ನಂತರ ಕೊರೊನಾ ವಕ್ಕರಿಸಿಕೊಂಡಿತು. ಮತ್ತೊಂದು ಕಡೆ ಅಕ್ಷಯ್ ಕುಮಾರ್‌ಗೆ ಅದೃಷ್ಟ ಕೂಡ ಕೈ ಕೊಟ್ಟಿತ್ತು. ಕೊರೊನಾ ನಂತರ ಒಂದಾದ ಮೇಲೊಂದು ಸೋಲುಗಳನ್ನು ಕಂಡು ಕಿಲಾಡಿ ಅಕ್ಷಯ್ ಕುಮಾರ್ ಅಕ್ಷರಶಃ ಕಂಗಾಲಾಗಿದ್ದರು.
ಆದರೆ ಈಗ 6 ವರ್ಷದ ಹಿಂದೆ ಅಕ್ಷಯ್ ಕುಮಾರ್ ಮುಖದಲ್ಲಿ ಮಂದಹಾಸ ಮೂಡಿಸಿದ್ದ ಅದೇ ಕೇಸರಿಯ ಭಾಗ ಎರಡು ಅಕ್ಷಯ್ ಕುಮಾರ್‌ಗೆ ಸಮಾಧಾನವನ್ನು ನೀಡಿದೆ. ಚಿತ್ರದ ಗಳಿಕೆಯಲ್ಲಿ ನಿನ್ನೆ {ಭಾನುವಾರ } ಏರಿಕೆ ಕಂಡು ಬಂದಿದೆ.

ಹೌದು, ಕಳೆದ ಶುಕ್ರವಾರ ತೆರೆಗೆ ಬಂದ ಕೇಸರಿ 2 ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಚಿತ್ರದ ಗಳಿಕೆಯಲ್ಲಿ ಶುಕ್ರವಾರಕ್ಕೆ ಹೋಲಿಸಿದರೆ ಶನಿವಾರದ ಗಳಿಕೆ ಏರಿಕೆಯಾಗಿದೆ. ಶನಿವಾರಕ್ಕೆ ಹೋಲಿಸಿದರೆ ಭಾನುವಾರ ಐಪಿಎಲ್‌ನ ಎರಡು ಪಂದ್ಯಗಳು ಇದ್ದರೂ ಕೂಡ ಚಿತ್ರ ನೋಡಲು ನೂಕು ನುಗ್ಗಲಿನ ವಾತಾವರಣ ಕೂಡ ಕಂಡು ಬಂದಿದೆ.
ಚಿತ್ರಗಳ ಬಾಕ್ಸಾಫೀಸ್ ಗಳಿಕೆಯ ಲೆಕ್ಕಾಚಾರವನ್ನು ನೀಡುವ ಸ್ಯಾಕ್ನಿಲ್ಕ್ ವೆಬ್ ಸೈಟ್ ಪ್ರಕಾರ ಮೊದಲ ದಿನ ಭಾರತದಲ್ಲಿ ₹ 7.75 ಕೋಟಿ ಗಳಿಸಿದ್ದ ಚಿತ್ರ ಶನಿವಾರ ₹ 9.50 ಕೋಟಿಯನ್ನು ಗಳಿಸಿತ್ತು. ಈ ಮೂಲಕ ಎರಡು ದಿನದಲ್ಲಿ ₹ 17.25 ಕೋಟಿ ಹಣವನ್ನು ಕೇಸರಿ 2 ಚಿತ್ರ ಗಳಿಸಿತ್ತು.
ಇನ್ನು ಚಿತ್ರಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಕ್ಷಯ್ ಕುಮಾರ್, ಆರ್ ಮಾಧವನ್ ಮತ್ತು ಅನನ್ಯಾ ಪಾಂಡೆಯ ಅಭಿನಯದ ಬಗ್ಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಚಿತ್ರತಂಡ ಈಗ ಪ್ರಚಾರ ಮಾಡದಿದ್ದರು ಕೂಡ ಪ್ರೇಕ್ಷಕರೇ ಈ ಚಿತ್ರದ ಪ್ರಚಾರವನ್ನು ಮಾಡುತ್ತಿದ್ದಾರೆ.
ಹೀಗಾಗಿಯೇ ಮೊದಲ ಎರಡು ದಿನಗಳಲ್ಲಿ ₹ 17.25 ಕೋಟಿ ಗಳಿಸಿದ್ದ ಕೇಸರಿ 2 ಚಿತ್ರ ನಿನ್ನೆ ₹12.25 ಕೋಟಿಯನ್ನು ಗಳಿಸಿದೆ. ಈ ಮೂಲಕ ಮೂರು ದಿನಗಳಲ್ಲಿ ಎರಡಂಕಿಯ ಗಡಿಯನ್ನು ಮೊದಲ ಬಾರಿ ಕೇಸರಿ 2 ದಾಟಿದ್ದು ಚಿತ್ರದ ಗಳಿಕೆ ₹ 30 ಕೋಟಿಯ ಗಡಿಗೆ ಬಂದು ತಲುಪಿದೆ.
ಹೀಗೆ ಮೂರು ದಿನಗಳಲ್ಲಿ ₹ 29.75 ಕೋಟಿಯನ್ನು ಗಳಿಸಿರುವ ಕೇಸರಿ 2, ಕಂಗನಾ ರಣಾವತ್ ಅಭಿನಯದ ಎಮರ್ಜೆನ್ಸಿ ಚಿತ್ರವನ್ನು ಹಿಂದಿಕ್ಕಿದೆ. ಈ ವರ್ಷದ ಆರಂಭದಲ್ಲಿ ತೆರೆಗೆ ಬಂದಿದ್ದ ಎಮರ್ಜೆನ್ಸಿ ಚಿತ್ರಕ್ಕೆ ಚಿತ್ರಮಂದಿರದಿಂದ ಎತ್ತಂಗಡಿ ಯಾಗುವ ಮೊದಲು ₹ 25 ಕೋಟಿಯ ಗಡಿಯನ್ನು ಕೂಡ ತಲುಪಲು ಸಾಧ್ಯವಾಗರಲಿಲ್ಲ. ಕೇಸರಿ 2 ಈ ಗಡಿಯನ್ನು ದಾಟಿದೆ. ಮೂರು ದಿನದಲ್ಲಿ ₹ 29.75 ಕೋಟಿ ಗಳಿಸಿದೆ. ಈ ಮೂಲಕ ಈ ವರ್ಷ ಅತೀ ಹೆಚ್ಚು ಹಣ ಗಳಿಸಿದ ಸಿನಿಮಾಗಳ ಸಾಲಿನಲ್ಲಿ ಕೇಸರಿ 2 ಏಳನೇ ಸ್ಥಾನದಲ್ಲಿ ಬಂದು ನಿಂತಿದೆ.
ಜಾನ್ ಅಬ್ರಾಹಿಂ ಅಭಿನಯದ ದಿ ಡಿಪ್ಲೋಮ್ಯಾಟ್ ಮತ್ತು ಶಾಹಿದ್ ಕಪೂರ್ ಅಭಿನಯದ ದೇವಾ ಚಿತ್ರಗಳನ್ನು ಇಂದು ಕೇಸರಿ 2 ಹಿಂದಿಕ್ಕುವ ಸಾಧ್ಯತೆ ಇದೆ. ಸಲ್ಮಾನ್ ಖಾನ್ ಅಭಿನಯದ ಸಿಕಂದರ್ ಚಿತ್ರಕ್ಕೂ ಕೇಸರಿ 2 ಬಾಕ್ಸಾಫೀಸ್ ಗಳಿಕೆಯಲ್ಲಿ ಸೆಡ್ಡು ಹೊಡೆಯುತ್ತಾ ಎನ್ನುವುದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆಯಾದರೂ ಸನ್ನಿ ಡಿಯೋಲ್ ಅಭಿನಯದ ಜಾಟ್ ಚಿತ್ರವನ್ನು ಕೇಸರಿ 2 ಅನಾಯಾಸವಾಗಿ ಹಿಂದಿಕ್ಕುತ್ತೆ ಎನ್ನುವ ಮಾತು ಸದ್ಯ ಬಾಲಿವುಡ್‌ನಲ್ಲಿ ಕೇಳಿ ಬರುತ್ತಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ


Click it and Unblock the Notifications











